ಇಂಧನ ಸಚಿವಾಲಯ

ಕೋವಿಡ್-19 ಸಾಂಕ್ರಾಮಿಕ ನಿಯಂತ್ರಣಕ್ಕೆ ಲಾಕ್ ಡೌನ್ ನಡುವೆಯೂ ಪರಿಹಾರ ಕಾರ್ಯಕ್ಕೆ ಮುಂದಾದ ಇಂಧನ ಸಚಿವಾಲಯದ ಸಾರ್ವಜನಿಕ ವಲಯದ ಉದ್ದಿಮೆ ಆರ್ ಇಸಿ

Posted On: 21 APR 2020 11:18AM by PIB Bengaluru

ಕೋವಿಡ್-19 ಸಾಂಕ್ರಾಮಿಕ ನಿಯಂತ್ರಣಕ್ಕೆ ಲಾಕ್ ಡೌನ್ ನಡುವೆಯೂ ಪರಿಹಾರ ಕಾರ್ಯಕ್ಕೆ ಮುಂದಾದ ಇಂಧನ ಸಚಿವಾಲಯದ ಸಾರ್ವಜನಿಕ ವಲಯದ ಉದ್ದಿಮೆ ಆರ್ ಇಸಿ

ಅಗತ್ಯವಿರುವ 76,000 ಮಂದಿಗೆ ಆಹಾರ ಮತ್ತು ಪಡಿತರ ತಲುಪಿಸಿದ ಪಿಎಸ್ ಯು

ನವರತ್ನ ಎನ್ ಬಿಎಫ್ ಸಿ, ದೆಹಲಿ ಪೊಲೀಸರ ನೆರವಿನಿಂದ ಪ್ರತಿ ದಿನ 500 ಮಂದಿಗೆ ಊಟದ ಪ್ಯಾಕೆಟ್ ವಿತರಣೆ

ಮೊದಲು ಪಿಎಂ ಕೇರ್ಸ್ ನಿಧಿಗೆ 150 ಕೋಟಿ ರೂ. ಕೊಡುಗೆ

 

 

ಶ್ರೀನಗರದಿಂದ ಕನ್ಯಾಕುಮಾರಿವರಗೆ, ಜಾಮ್ ನಗರದಿಂದ ಶಿಲ್ಲಾಂಗ್ ವರೆಗೆ, ಕೋವಿಡ್ ಗಿಂತ ಹೆಚ್ಚು ಅಪಾಯಕಾರಿಯಾಗಿ ಹಸಿವು ದಿನಗೂಲಿ ನೌಕರರು ಹಾಗೂ ವಲಸಿಗರನ್ನು ದೇಶದ ಹಲವೆಡೆ ಬಾಧಿಸುತ್ತಿದೆ. ಅವರ ಭವಿಷ್ಯದ ಬಗ್ಗೆ ಕಾಳಜಿ ಹೊಂದಿರುವ ಆರ್ ಇಸಿ ಲಿಮಿಟೆಡ್ ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆ ನಿರ್ವಹಿಸುವ ಒಂದು ವಿಭಾಗ ಆರ್ ಇಸಿ ಫೌಂಡೇಶನ್ ಮತ್ತು ನವರತ್ನ ಸಿಪಿಎಸ್ಇ ಇಂಧನ ಯೋಜನೆಗಳಿಗೆ ಹಣಕಾಸಿನ ನೆರವು ನೀಡುವ ದೇಶದ ಅಗ್ರ ಕಂಪನಿ ವಿದ್ಯುತ್ ಸಚಿವಾಲಯದಡಿ ಕಾರ್ಯ ನಿರ್ವಹಿಸುತ್ತಿದೆ. ಇವು ಈವರೆಗೆ ಸುಮಾರು 76,000 ದಿನಗೂಲಿ ನೌಕರರಿಗೆ ಮತ್ತು ಕುಟುಂಬದವರಿಗೆ ಲಾಕ್ ಡೌನ್ ಸಮಯದಲ್ಲಿ ಬೇಯಿಸಿದ ಆಹಾರ, ಪಡಿತರ, ಅಗತ್ಯ ವಸ್ತುಗಳ ಕಿಟ್, ಮಾಸ್ಕ್ ಮತ್ತು ಸ್ಯಾನಿಟೈಸರ್ ಹಾಗೂ ವಸತಿಯನ್ನು ಕಲ್ಪಿಸಿದೆ. ಆರ್ ಇಸಿ ಫೌಂಡೇಶನ್ ಈಗಾಗಲೇ ತನ್ನ ಚಟುವಟಿಕೆಗಳಿಗೆ ಒಟ್ಟು 7 ಕೋಟಿ ರೂ. ಹಣವನ್ನು ಬಿಡುಗಡೆ ಮಾಡಿದೆ ಮತ್ತು ಇನ್ನು ಹೆಚ್ಚಿನ ಹಣ ಬಿಡುಗಡೆಗೆ ಸಿದ್ಧವಾಗಿದೆ.

Description: C:\Users\hp\Desktop\WhatsApp Image 2020-04-21 at 8.52.42 AM.jpeg

ಕೇಂದ್ರ ಇಂಧನ ಮತ್ತು ಹೊಸ ಹಾಗೂ ನವೀಕರಿಸಬಹುದಾದ ಇಂಧನ ಸಚಿವ ಶ್ರೀ ಆರ್.ಕೆ ಸಿಂಗ್ ಅವರು ನೀಡಿದ್ದ ಕರೆಯಂತೆ ಆರ್ ಇಸಿ ಈಗಾಗಲೇ, ಕೊರೊನಾ ಸೋಂಕಿನ ವಿರುದ್ಧ ಭಾರತ ನಡೆಸುತ್ತಿರುವ ಹೋರಾಟಕ್ಕೆ ಬೆಂಬಲವಾಗಿ ಪ್ರಧಾನಮಂತ್ರಿಗಳ ನಾಗರಿಕರ ಸಹಾಯ ಮತ್ತು ತುರ್ತು ಸಂದರ್ಭಗಳಲ್ಲಿ ಪರಿಹಾರ(ಪಿಎಂ ಕೇರ್ಸ್) ನಿಧಿಗೆ 150 ಕೋಟಿ ರೂ.ಗಳನ್ನು ದೇಣಿಗೆ ನೀಡಿದೆ. ಇದಲ್ಲದೆ ಎಲ್ಲ ಆರ್ ಇಸಿ ಸಿಬ್ಬಂದಿ ಸ್ವಯಂ ಪ್ರೇರಿತವಾಗಿ ಒಂದು ದಿನದ ವೇತನವನ್ನು ಪ್ರಧಾನಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಗೆ ನೀಡಲು ನಿರ್ಧರಿಸಿದ್ದಾರೆ.

ಆರ್ ಇಸಿ ಫೌಂಡೇಶನ್ ಸಂಬಂಧಿಸಿದ ರಾಜ್ಯ ಸರ್ಕಾರಿ ಒಡೆತನದ ವಿದ್ಯುತ್ ವಿತರಣಾ ಕಂಪನಿಯ ಸಹಯೋಗದಲ್ಲಿ ಅಗತ್ಯವಿರುವವರಿಗೆ ಆಹಾರಧಾನ್ಯಗಳ ಪ್ಯಾಕೆಟ್ ಮತ್ತು ಮಾಸ್ಕ್, ಸ್ಯಾನಿಟೈಸರ್ ಹಾಗೂ ಇನ್ನಿತರ ಅಗತ್ಯ ವಸ್ತುಗಳ ಕಿಟ್ ಗಳನ್ನು ವಿತರಿಸುತ್ತಿದೆ. ಅಲ್ಲದೆ ಆರ್ ಇಸಿ ದೆಹಲಿ ಪೊಲೀಸರ ನೆರವಿನೊಂದಿಗೆ ದಿನಕ್ಕೆ 4 ಬಾರಿ ಪ್ರತಿ ದಿನ 500 ಆಹಾರ ಪ್ಯಾಕೇಟ್ ಗಳನ್ನು ವಿತರಿಸುತ್ತಿದೆ. ಆರ್ ಇಸಿ ಫೌಂಡೇಶನ್ ಈಗಾಗಲೇ ವಿದ್ಯುತ್ ವಿತರಣಾ ಕಂಪನಿ ಕಚೇರಿಗಳಿಗೆ, ಕಲೆಕ್ಟರ್ ಅಥವಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಗಳಿಗೆ ದೇಶದ ನಾನಾ ಜಿಲ್ಲೆಗಳಲ್ಲಿ ಪ್ರತಿ ದಿನ 10 ರಿಂದ 30 ದಿನಗಳ ಕಾಲ ಬೇಯಿಸಿದ ಆಹಾರವನ್ನು ನೀಡಲು ಅಗತ್ಯ ಹಣವನ್ನು ಬಿಡುಗಡೆ ಮಾಡಿದೆ. ಇನ್ನೂ ಹಲವು ಜಿಲ್ಲೆಗಳ ಅಧಿಕಾರಿಗಳೊಂದಿಗೆ ಮಾತುಕತೆ ಪ್ರಗತಿಯಲ್ಲಿದೆ. ಇದಲ್ಲದೆ ಮನೆಗಳಲ್ಲಿ ಆಹಾರ ಸಿದ್ಧಪಡಿಸಿಕೊಳ್ಳಲು ಅನುಕೂಲ ಇರುವಂತಹವರಿಗೆ ಆಹಾರ ಕಿಟ್ ಗಳನ್ನು ವಿತರಿಸಲಾಗುತ್ತಿದೆ.

ಗುರುಗ್ರಾಮದಲ್ಲಿ ಆರ್ ಇಸಿಯ ಜಾಗತಿಕ ಕೇಂದ್ರ ಕಚೇರಿ ನಿರ್ಮಾಣದಲ್ಲಿ ಸುಮಾರು 300ಕ್ಕೂ ಅಧಿಕ ಕಾರ್ಮಿಕರು ಹಾಗೂ ದಿನಗೂಲಿ ನೌಕರರು ತೊಡಗಿದ್ದು, ಅವರೆಲ್ಲಾ ಬಿಹಾರ, ಪಶ್ಚಿಮ ಬಂಗಾಳ, ಒಡಿಶಾ, ಗುಜರಾತ್ ಮತ್ತಿತರ ರಾಜ್ಯಗಳವರು. ಅವರಿಗಲ್ಲದೆ ಸುತ್ತಮುತ್ತಲು ವಾಸಿಸುತ್ತಿರುವ ಅಗತ್ಯವಿರುವ ಜನಗಳಿಗೂ ಗೋಧಿ ಹಿಟ್ಟು, ಅಕ್ಕಿ, ಬೇಳೆ, ಎಣ್ಣೆ, ಸೋಪು, ಸ್ಯಾನಿಟೈಸರ್ ಇತ್ಯಾದಿಗಳನ್ನು ಎರಡು ವಾರಕ್ಕೊಮ್ಮೆ ವಿತರಿಸಲಾಗುತ್ತಿದೆ.

***



(Release ID: 1616837) Visitor Counter : 267