ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ
ಎಫ್ ಸಿ ಐ ಬಳಿ ಲಭ್ಯವಿರುವ ಹೆಚ್ಚುವರಿ ಅಕ್ಕಿಯನ್ನು ಆಲ್ಕೊಹಾಲ್ ಆಧಾರಿತ ಹ್ಯಾಂಡ್-ಸ್ಯಾನಿಟೈಜರ್ ತಯಾರಿಸಲು ಮತ್ತು ಪೆಟ್ರೋಲ್ ನಲ್ಲಿ ಮಿಶ್ರಣ ಮಾಡುವ ಎಥನಾಲ್ ಆಗಿ ಪರಿವರ್ತಿಸಲು ಅನುಮತಿ
Posted On:
20 APR 2020 6:09PM by PIB Bengaluru
ಎಫ್ ಸಿ ಐ ಬಳಿ ಲಭ್ಯವಿರುವ ಹೆಚ್ಚುವರಿ ಅಕ್ಕಿಯನ್ನು ಆಲ್ಕೊಹಾಲ್ ಆಧಾರಿತ ಹ್ಯಾಂಡ್-ಸ್ಯಾನಿಟೈಜರ್ ತಯಾರಿಸಲು ಮತ್ತು ಪೆಟ್ರೋಲ್ ನಲ್ಲಿ ಮಿಶ್ರಣ ಮಾಡುವ ಎಥನಾಲ್ ಆಗಿ ಪರಿವರ್ತಿಸಲು ಅನುಮತಿ
ಜೈವಿಕ ಇಂಧನಗಳ ರಾಷ್ಟ್ರೀಯ ನೀತಿ 2018 ರ ಪ್ಯಾರ 5.3 ರ ಅಡಿಯಲ್ಲಿ ಉಲ್ಲೇಖಿಸಿದಂತೆ, ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯವು, ಕೃಷಿ ಬೆಳೆ ವರ್ಷದಲ್ಲಿ ನಿರೀಕ್ಷಿಸಿದಕ್ಕಿಂತಾ ಹೆಚ್ಚು ಆಹಾರ ಧಾನ್ಯಗಳ ಪೂರೈಕೆಯಾದಾಗ, ಈ ನೀತಿಯು, ಆ ಹೆಚ್ಚುವರಿ ಪ್ರಮಾಣದ ಆಹಾರ ಧಾನ್ಯಗಳನ್ನು ರಾಷ್ಟ್ರೀಯ ಜೈವಿಕ ಇಂಧನ ಸಮನ್ವಯ ಸಮಿತಿ (ಎನ್ ಬಿ ಬಿ ಸಿ) ಅನುಮೋದನೆಯಂತೆ ಎಥನಾಲ್ ಆಗಿ ಪರಿವರ್ತಿಸಲು ಅನುಮತಿಸುತ್ತದೆ.
ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವರಾದ ಶ್ರೀ ಧರ್ಮೇಂದ್ರ ಪ್ರಧಾನ್ ಅವರ ಅಧ್ಯಕ್ಷತೆಯಲ್ಲಿ ಇಂದು ಎನ್ ಬಿ ಬಿ ಸಿ ಸಭೆ ನಡೆಯಿತು. ಸಭೆಯಲ್ಲಿ ಭಾರತೀಯ ಆಹಾರ ನಿಗಮ (ಎಫ್ ಸಿ ಐ) ಬಳಿ ಇರುವ ಹೆಚ್ಚುವರಿ ಅಕ್ಕೆಯನ್ನು ಎಥನಾಲ್ ಆಗಿ ಪರಿವರ್ತಿಸಬಹುದಾಗಿದೆ ಎಂದು ಅನುಮೋದಿಸಲಾಯಿತು. ಇದನ್ನು ಆಲ್ಕೊಹಾಲ್ ಆಧಾರಿತ ಹ್ಯಾಂಡ್-ಸ್ಯಾನಿಟೈಜರ್ ತಯಾರಿಸಲು ಮತ್ತು ಎಥನಾಲ್ ಬ್ಲೆಂಡೆಡ್ ಪೆಟ್ರೋಲ್ (ಇಬಿಪಿ) ಕಾರ್ಯಕ್ರಮದಲ್ಲಿ ಮಿಶ್ರಣಕ್ಕಾಗಿ ಬಳಸಲಾಗುವುದು
***
(Release ID: 1616497)
Visitor Counter : 259
Read this release in:
Gujarati
,
English
,
Urdu
,
Hindi
,
Marathi
,
Manipuri
,
Assamese
,
Bengali
,
Punjabi
,
Tamil
,
Telugu