ಗೃಹ ವ್ಯವಹಾರಗಳ ಸಚಿವಾಲಯ
ಕೋವಿಡ್-19 ಹಿನ್ನೆಲೆಯಲ್ಲಿ ಪ್ರಯಾಣ ನಿರ್ಬಂಧಗಳಿಂದಾಗಿ ಸದ್ಯ ಭಾರತದಲ್ಲಿರುವ ವಿದೇಶಿ ಪ್ರಜೆಗಳಿಗೆ ಮೇ 3 ರವರೆಗೆ ಕಾನ್ಸುಲರ್ ಸೇವೆಗಳ ವಿಸ್ತರಣೆ
Posted On:
17 APR 2020 8:58PM by PIB Bengaluru
ಕೋವಿಡ್-19 ಹಿನ್ನೆಲೆಯಲ್ಲಿ ಪ್ರಯಾಣ ನಿರ್ಬಂಧಗಳಿಂದಾಗಿ ಸದ್ಯ ಭಾರತದಲ್ಲಿರುವ ವಿದೇಶಿ ಪ್ರಜೆಗಳಿಗೆ ಮೇ 3 ರವರೆಗೆ ಕಾನ್ಸುಲರ್ ಸೇವೆಗಳ ವಿಸ್ತರಣೆ
ಕೋವಿಡ್-19 ಸಾಂಕ್ರಾಮಿಕದ ಕಾರಣ ಹೇರಿರುವ ಪ್ರಯಾಣದ ನಿರ್ಬಂಧದಿಂದಾಗಿ ಪ್ರಸ್ತುತ ಭಾರತದಲ್ಲಿ ವಾಸಿಸುತ್ತಿರುವ ವಿದೇಶಿ ಪ್ರಜೆಗಳಿಗೆ 2020 ರ ಏಪ್ರಿಲ್ 30 ರವರೆಗೆ ಉಚಿತ ಆಧಾರದ ಮೇಲೆ ಕಾನ್ಸುಲರ್ ಸೇವೆಗಳನ್ನು ಕೇಂದ್ರ ಗೃಹ ಸಚಿವಾಲಯವು 28.03.2020 ರಂದು ಒದಗಿಸಿತ್ತು.
(Https: //pib.gov.in/PressReleaseIframePage.aspx? PRID = 1613895)
ಈ ವಿಷಯವನ್ನು ಪರಿಗಣಿಸಿದ ನಂತರ, ಪ್ರಸ್ತುತ ಭಾರತದಲ್ಲಿ ಸಿಲುಕಿರುವ ವಿದೇಶಿ ಪ್ರಜೆಗಳಿಗೆ ವಿದೇಶಿ ಪ್ರಾದೇಶಿಕ ನೋಂದಣಿ ಅಧಿಕಾರಿಗಳು/ ವಿದೇಶಿಯರ ನೋಂದಣಿ ಅಧಿಕಾರಿಗಳ ಕಚೇರಿ ಈ ಕೆಳಗಿನ ಕಾನ್ಸುಲರ್ ಸೇವೆಗಳನ್ನು ಒದಗಿಸುವ ಅವಧಿಯನ್ನು ವಿಸ್ತರಿಸಲು ನಿರ್ಧರಿಸಲಾಗಿದೆ.
ವಿಶ್ವದ ಅನೇಕ ಭಾಗಗಳಲ್ಲಿ ಕೋವಿಡ್-19 ಸೋಂಕಿನನಿಂದಾಗಿ ಭಾರತೀಯ ಅಧಿಕಾರಿಗಳು ವಿಧಿಸಿರುವ ಪ್ರಯಾಣ ನಿರ್ಬಂಧಗಳಿಂದ ಮತ್ತು ಅವರ ವೀಸಾಗಳ ಅವಧಿ ಮುಗಿದ ಕಾರಣ ಭಾರತದಲ್ಲಿ ಸಿಕ್ಕಿಹಾಕಿಕೊಂಡಿರುವ ವಿದೇಶಿ ಪ್ರಜೆಗಳ ನಿಯಮಿತ ವೀಸಾ, ಇ-ವೀಸಾ ಅಥವಾ ಷರತ್ತಿನ ವಾಸ್ತವ್ಯಗಳ ಅವಧಿಯು 01.02.2020 (ಮಧ್ಯರಾತ್ರಿ) ಯಿಂದ 03.05.2020 (ಮಧ್ಯರಾತ್ರಿ) ಯವರೆಗೆ ಮುಕ್ತಾಯವಾಗಲಿದ್ದರೆ, ಅಂತಹ ವಿದೇಶಿಯರು ಆನ್‌ಲೈನ್ ಅರ್ಜಿ ಸಲ್ಲಿಸಿದ ನಂತರ 'ಗ್ರ್ಯಾಟಿಸ್' ಆಧಾರದ ಮೇಲೆ 03.05.2020 ಮಧ್ಯರಾತ್ರಿಯವರೆಗೆ ಅವುಗಳನ್ನು ವಿಸ್ತರಿಸಲಾಗುವುದು. ಅಂತಹ ವಿದೇಶಿ ಪ್ರಜೆಗಳು 03.05.2020 ನಂತರವೂ 14 ದಿನಗಳವರೆಗೆ ಅಂದರೆ 17.05.2020 ದೇಶದಿಂದ ನಿರ್ಗಮಿಸಲು ಕಾಲಾವಕಾಶ ಕೇಳಿದರೆ, ಈ ಅವಧಿಯಲ್ಲಿ ಓವರ್‌ಸ್ಟೇ ದಂಡವನ್ನು ವಿಧಿಸದೆ ಅವರಿಗೆ ಅವಕಾಶ ನೀಡಲಾಗುತ್ತದೆ.
***
(Release ID: 1615698)
Visitor Counter : 161
Read this release in:
Punjabi
,
English
,
Urdu
,
Hindi
,
Marathi
,
Assamese
,
Bengali
,
Gujarati
,
Tamil
,
Telugu
,
Malayalam