ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ

ಚಿತ್ರಾ ಜೀನ್ ಲ್ಯಾಂಪ್-ಎನ್ ಕೋವಿಡ್ 19 ದೃಢೀಕರಣ ಪರೀಕ್ಷೆಯ ಫಲಿತಾಂಶಗಳನ್ನು 2 ಗಂಟೆಗಳಲ್ಲಿ ಸಿದ್ಧಪಡಿಸುತ್ತದೆ

Posted On: 16 APR 2020 6:51PM by PIB Bengaluru

ಚಿತ್ರಾ ಜೀನ್ ಲ್ಯಾಂಪ್-ಎನ್ ಕೋವಿಡ್ 19 ದೃಢೀಕರಣ ಪರೀಕ್ಷೆಯ ಫಲಿತಾಂಶಗಳನ್ನು 2 ಗಂಟೆಗಳಲ್ಲಿ ಸಿದ್ಧಪಡಿಸುತ್ತದೆ

ಚಿತ್ರಾ ಜೀನ್ ಲ್ಯಾಂಪ್- ಎನ್ 100% ನಿಖರತೆಯನ್ನು ಹೊಂದಿದೆ ಮತ್ತು ಆರ್‌ ಟಿ-ಪಿಸಿಆರ್ ಬಳಸಿದ ಪರೀಕ್ಷಾ ಫಲಿತಾಂಶಗಳೊಂದಿಗೆ ಹೊಂದಿಕೆಯಾಗುತ್ತದೆ

ಒಂದೇ ಯಂತ್ರದಲ್ಲಿ ಒಂದೇ ಬ್ಯಾಚ್‌ನಲ್ಲಿ ಒಟ್ಟು 30 ಮಾದರಿಗಳನ್ನು ಪರೀಕ್ಷಿಸಬಹುದು

 

ಶ್ರೀ ಚಿತ್ರ ತಿರುಣಾಲ್ ಇನ್ಸ್ಟಿಟ್ಯೂಟ್ ಫಾರ್ ಮೆಡಿಕಲ್ ಸೈನ್ಸಸ್ ಅಂಡ್ ಟೆಕ್ನಾಲಜಿ, ತಿರುವನಂತಪುರ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ (ಡಿಎಸ್ ಟಿ) ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆ, ಕಡಿಮೆ ವೆಚ್ಚದಲ್ಲಿ 2 ಗಂಟೆಗಳಲ್ಲಿ ಕೋವಿಡ್-19 ಅನ್ನು ಖಚಿತಪಡಿಸುವಂತಹ ರೋಗನಿರ್ಣಯ ಪರೀಕ್ಷಾ ಕಿಟ್ ಅನ್ನು ಅಭಿವೃದ್ಧಿಪಡಿಸಿದೆ.

ವೈರಲ್ ನ್ಯೂಕ್ಲಿಯಿಕ್ ಆಮ್ಲದ ರಿವರ್ಸ್ ಟ್ರಾನ್ಸ್‌ಸ್ಕ್ರಿಪ್ಟೇಸ್ ಲೂಪ್-ಮಧ್ಯಸ್ಥ ವರ್ಧನೆ (ಆರ್ ಟಿ-ಲ್ಯಾಂಪ್) ಯನ್ನು ಬಳಸಿಕೊಂಡು ಎಸ್‌ಎಆರ್ ಎಸ್- ಸಿಒವಿ 2 ರ ಎನ್ ಜೀನ್ ಅನ್ನು ಪತ್ತೆಹಚ್ಚುವ ದೃಢೀರಣ ರೋಗನಿರ್ಣಯ ಪರೀಕ್ಷೆಯು ವಿಶ್ವದಲ್ಲೇ ಮೊದಲನೆಯದಾಗದಿದ್ದರೂ ವಿಶ್ವದ ಮೊದಲ ವಿಧಗಳಲ್ಲಿ ಒಂದಾಗಿದೆ.

ಚಿತ್ರಾ ಜೀನ್ ಲ್ಯಾಂಪ್-ಎನ್ ಎಂದು ಕರೆಯಲ್ಪಡುವ ಡಿಎಸ್‌ಟಿಯಿಂದ ಧನಸಹಾಯ ಪಡೆದ ಟೆಸ್ಟ್ ಕಿಟ್, ಎಸ್‌ಎಆರ್ ಎಸ್- ಸಿಒವಿ 2 ಎನ್ ಜೀನ್‌ಗೆ ಹೆಚ್ಚು ನಿರ್ದಿಷ್ಟವಾಗಿದೆ ಮತ್ತು ಜೀನ್‌ನ ಎರಡು ಪ್ರದೇಶಗಳನ್ನು ಪತ್ತೆ ಮಾಡುತ್ತದೆ, ಇದು ಒಂದು ಪ್ರದೇಶದ ಹೊರತಾಗಿಯೂ ಮತ್ತು ವೈರಲ್ ಜೀನ್ ಅದರ ಪ್ರಸ್ತುತ ಹರಡುವಿಕೆಯ ಸಮಯದಲ್ಲಿ ಮಾರ್ಪಾಡಿಗೆ ಒಳಗಾದರೂ ಕೂಡ ಪರೀಕ್ಷೆಯು ವಿಫಲವಾಗದಂತೆ ನೋಡಿಕೊಳ್ಳುತ್ತದೆ

ಎನ್‌ಐವಿ ಅಲಪ್ಪುಳದಲ್ಲಿ (ಐಸಿಎಂಆರ್ ಅಧಿಕೃತ) ನಡೆಸಿದ ಪರೀಕ್ಷೆಗಳು ಚಿತ್ರಾ ಜೀನ್‌ಲ್ಯಾಂಪ್- ಎನ್ 100% ನಿಖರತೆಯನ್ನು ಹೊಂದಿದೆ ಮತ್ತು ಆರ್‌ಟಿ-ಪಿಸಿಆರ್ ಬಳಸಿ ಪರೀಕ್ಷಾ ಫಲಿತಾಂಶಗಳೊಂದಿಗೆ ಹೊಂದಿಕೆಯಾಗುತ್ತದೆ ಎಂದು ತೋರಿಸುತ್ತದೆ. ಭಾರತದಲ್ಲಿ ಕೋವಿಡ್-19 ಪರೀಕ್ಷೆಗಾಗಿ ಇದನ್ನು ಅನುಮೋದಿಸುವ ಪ್ರಾಧಿಕಾರವಾದ ಐಸಿಎಮ್ಆರ್ ಗೆ ತಿಳಿಸಲಾಗಿದೆ, ಅದರ ನಂತರ ಉತ್ಪಾದನೆಗಾಗಿ ಸಿಡಿಎಸ್ ಸಿ ಒನಿಂದ ಪರವಾನಗಿ ಪಡೆಯಬೇಕಾಗಿದೆ.

ಭಾರತದಲ್ಲಿನ ಪ್ರಸ್ತುತ ಪಿಸಿಆರ್ ಕಿಟ್‌ಗಳು ಸ್ಕ್ರೀನಿಂಗ್‌ಗಾಗಿ ಇ ಜೀನ್ ಮತ್ತು ದೃಢೀರಣಕ್ಕಾಗಿ ಆರ್‌ಡಿಆರ್ ಪಿ ಜೀನ್ ಅನ್ನು ಪತ್ತೆಹಚ್ಚಲು ಅನುವು ಮಾಡಿಕೊಡುತ್ತದೆ. ಚಿತ್ರಾ ಜೀನ್‌ಲ್ಯಾಂಪ್-ಎನ್ ಜೀನ್ ಪರೀಕ್ಷೆಯು ಸ್ಕ್ರೀನಿಂಗ್ ಪರೀಕ್ಷೆಯ ಅಗತ್ಯವಿಲ್ಲದೆ ಮತ್ತು ಕಡಿಮೆ ವೆಚ್ಚದಲ್ಲಿ ಒಂದು ಪರೀಕ್ಷೆಯಲ್ಲಿ ಯೇ ದೃಢೀಕರಣವನ್ನು ಅನುಮತಿಸುತ್ತದೆ.

ಪತ್ತೆ ಮಾಡುವ ಸಮಯ 10 ನಿಮಿಷಗಳು, ಮತ್ತು ಮಾದರಿಯ ಫಲಿತಾಂಶದ ಸಮಯ (ಸ್ವ್ಯಾಬ್‌ನಲ್ಲಿ ಆರ್‌ಎನ್‌ಎ ಹೊರತೆಗೆಯುವಿಕೆಯಿಂದ ಆರ್‌ಟಿ-ಲ್ಯಾಂಪ್ ಪತ್ತೆ ಸಮಯದವರೆಗೆ) 2 ಗಂಟೆಗಳಿಗಿಂತ ಕಡಿಮೆ ಇರುತ್ತದೆ. ಒಂದೇ ಯಂತ್ರದಲ್ಲಿ ಒಂದೇ ಬ್ಯಾಚ್‌ನಲ್ಲಿ ಒಟ್ಟು 30 ಮಾದರಿಗಳನ್ನು ಪರೀಕ್ಷಿಸಬಹುದು, ಪ್ರತಿದಿನ ಹೆಚ್ಚಿನ ಸಂಖ್ಯೆಯ ಮಾದರಿಗಳನ್ನು ಪರೀಕ್ಷಿಸಲು ಅನುವು ಮಾಡಿಕೊಡುತ್ತದೆ.

"ದಾಖಲೆಯ ಸಮಯದಲ್ಲಿ ಶ್ರೀ ಚಿತ್ರಾ ಅವರ ಅಗ್ಗದ, ಕ್ಷಿಪ್ರ ದೃಢೀಕರಣದ, ಹೊಸ ಮಾದರಿಯ, ಅಭಿವೃದ್ಧಿ ಪಡಿಸಿದ ಕೋವಿಡ್-19 ರೋಗನಿರ್ಣಯಕಕ್ಕೆ, ವೈದ್ಯರು ಮತ್ತು ವಿಜ್ಞಾನಿಗಳ ಸೃಜನಶೀಲ ತಂಡವು ದಣಿವರಿಯದೆ ಒಟ್ಟಾಗಿ ಕೆಲಸ ಮಾಡುವುದರಿಂದ ಸಂಬಂಧಿತ ಪ್ರಗತಿಯನ್ನು ಸಾಧಿಸಲು ಜ್ಞಾನ ಮತ್ತು ಮೂಲಸೌಕರ್ಯವನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದಕ್ಕೆ ಒಂದು ಬಲವಾದ ಉದಾಹರಣೆಯಾಗಿದೆ. ಎಸ್‌ಸಿಟಿಐಎಂಎಸ್‌ಟಿಯಲ್ಲಿ ತಂತ್ರಜ್ಞಾನ ಸಂಶೋಧನಾ ಕೇಂದ್ರ ಮತ್ತು ಇತರ ನಾಲ್ಕು ಡಿಎಸ್‌ಟಿ ಸಂಸ್ಥೆಗಳ ಸ್ಥಾಪನೆಯು ಮೂಲಭೂತ ಸಂಶೋಧನೆಗಳನ್ನು ಪ್ರಮುಖ ತಂತ್ರಜ್ಞಾನಗಳಾಗಿ ಪರಿವರ್ತಿಸುವ ಮೂಲಕ ಸಮೃದ್ಧ ಲಾಭವನ್ನು ತಂದಿದೆ "ಎಂದು ಡಿಎಸ್‌ಟಿಯ ಕಾರ್ಯದರ್ಶಿ ಪ್ರೊ.ಅಶುತೋಷ್ ಶರ್ಮಾ ಹೇಳಿದರು.

ಸೀಮಿತ ಸೌಲಭ್ಯಗಳು ಮತ್ತು ತರಬೇತಿ ಪಡೆದ ಪ್ರಯೋಗಾಲಯ ತಂತ್ರಜ್ಞರನ್ನು ಹೊಂದಿರುವ ಜಿಲ್ಲಾ ಆಸ್ಪತ್ರೆಗಳ ಪ್ರಯೋಗಾಲಯಗಳಲ್ಲಿ ಸಹ ಈ ಪರೀಕ್ಷಾ ಸೌಲಭ್ಯವನ್ನು ಸುಲಭವಾಗಿ ಸ್ಥಾಪಿಸಬಹುದು. ಪ್ರತಿದೀಪಕ (ಫ್ಳೋರಸೆನ್ಸ್) ಬದಲಾವಣೆಯಿಂದ ಯಂತ್ರದಿಂದ ಫಲಿತಾಂಶಗಳನ್ನು ಓದಬಹುದು. ಲ್ಯಾಂಪ್ ಪರೀಕ್ಷೆಗಾಗಿ ಹೊಸ ಸಾಧನದೊಂದಿಗೆ ಪರೀಕ್ಷೆಯ ವೆಚ್ಚ ಮತ್ತು ಎನ್ ಜೀನ್‌ನ 2 ಪ್ರದೇಶಗಳಿಗೆ (ಆರ್‌ಎನ್‌ಎ ಹೊರತೆಗೆಯುವಿಕೆ ಸೇರಿದಂತೆ) ಪರೀಕ್ಷಾ ಕಿಟ್ ಪ್ರಯೋಗಾಲಯಕ್ಕೆ ಪ್ರತಿ ಪರೀಕ್ಷೆಗೆ 1000 ರೂಪಾಯಿಗಳಿಗಿಂತ ಕಡಿಮೆಯಿರುತ್ತದೆ.

ಶ್ರೀ ಚಿತ್ರಾ ಹೆಚ್ಚುವರಿಯಾಗಿ ನಿರ್ದಿಷ್ಟ ಆರ್‌ಎನ್‌ಎ ಹೊರತೆಗೆಯುವ ಕಿಟ್‌ಗಳ ಜೊತೆಗೆ ಜೀನ್‌ಲ್ಯಾಂಪ್-ಎನ್ ಪರೀಕ್ಷಾ ಕಿಟ್‌ಗಳು ಮತ್ತು ಪರೀಕ್ಷಾ ಸಾಧನಗಳನ್ನು ಅಭಿವೃದ್ಧಿಪಡಿಸಿದ್ದಾರೆ. ತಂತ್ರಜ್ಞಾನವನ್ನು ಉತ್ಪಾದನೆಗಾಗಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕಾರ್ಯಾಚರಣೆಗಳೊಂದಿಗೆ ಇನ್-ವಿಟ್ರೊ ಡಯಾಗ್ನೋಸ್ಟಿಕ್ಸ್‌ನ ಪ್ರಮುಖ ಕಂಪನಿಯಾದ ಎರ್ನಾಕುಲಂನ ಅಗಪ್ಪೆ ಡಯಾಗ್ನೋಸ್ಟಿಕ್ಸ್ ಲಿಮಿಟೆಡ್‌ಗೆ ವರ್ಗಾಯಿಸಲಾಯಿತು.

ಇನ್ಸ್ಟಿಟ್ಯೂಟ್ ನ ಬಯೋಮೆಡಿಕಲ್ ಟೆಕ್ನಾಲಜಿ ವಿಂಗ್ಸ್ ಹಿರಿಯ ವಿಜ್ಞಾನಿ ಮತ್ತು ಅಪ್ಲೈಡ್ ಬಯಾಲಜಿ ವಿಭಾಗದ ಅಡಿಯಲ್ಲಿ ಆಣ್ವಿಕ ಔಷಧ ವಿಭಾಗದ ವಿಜ್ಞಾನಿ ಡಾ. ಅನೂಪ್ ತೆಕ್ಕುವೆಟ್ಟಿಲ್ ಮತ್ತು ಅವರ ತಂಡ ತಂಡವು ಕಳೆದ 3 ವಾರಗಳಲ್ಲಿ ಕಿಟ್ ಅನ್ನು ಅಭಿವೃದ್ಧಿಪಡಿಸಿದೆ.

[ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ಸಂಪರ್ಕಿಸಿ: ಸ್ವಪ್ನಾ ವಾಮದೇವನ್, ಪಿ.ಆರ್.ಒ, ಎಸ್ ಸಿ ಟಿ ಐ ಎಮ್ ಎಸ್ ಟಿ, ಮೊಬೈಲ್: 9656815943, ಇಮೇಲ್: pro@sctimst.ac.in ]

SCTIMST

***(Release ID: 1615394) Visitor Counter : 124