ವಾರ್ತಾ ಮತ್ತು ಪ್ರಸಾರ ಸಚಿವಾಲಯ

ದೂರದರ್ಶನ ಮತ್ತು ಆಕಾಶವಾಣಿಯಿಂದ ಶೈಕ್ಷಣಿಕ ವಿಷಯ/ ವರ್ಚುವಲ್ ತರಗತಿಗಳ ಪ್ರಸಾರ

Posted On: 16 APR 2020 10:02PM by PIB Bengaluru

ದೂರದರ್ಶನ ಮತ್ತು ಆಕಾಶವಾಣಿಯಿಂದ ಶೈಕ್ಷಣಿಕ ವಿಷಯ/ ವರ್ಚುವಲ್ ತರಗತಿಗಳ ಪ್ರಸಾರ

 

ಭಾರತದ ಸಾರ್ವಜನಿಕ ಪ್ರಸಾರ ಸಂಸ್ಥೆಯು ಲಾಕ್ಡೌನ್ ಸಂದರ್ಭದಲ್ಲಿ ವಿದ್ಯಾರ್ಥಿಗಳ ತಮ್ಮ ಅಧ್ಯಯನಕ್ಕೆ ಸಹಾಯ ಮಾಡುತ್ತಿದೆ. ವಿವಿಧ ರಾಜ್ಯ ಸರ್ಕಾರಿ ಸಂಸ್ಥೆಗಳ ಸಹಯೋಗದೊಂದಿಗೆ, ದೂರದರ್ಶನ ಮತ್ತು ಆಕಾಶವಾಣಿಯು ತಮ್ಮ ಪ್ರಾದೇಶಿಕ ಚಾನೆಲ್ಗಳ ಮೂಲಕ ಟಿವಿ, ರೇಡಿಯೋ ಮತ್ತು ಯೂಟ್ಯೂಬ್ನಲ್ಲಿ ವರ್ಚುವಲ್ ತರಗತಿಗಳು ಮತ್ತು ಇತರ ಶೈಕ್ಷಣಿಕ ವಿಷಯಗಳನ್ನು ಪ್ರಸಾರ ಮಾಡುತ್ತಿವೆ.

ಶಾಲಾ ತರಗತಿಗಳ ಅನುಪಸ್ಥಿತಿಯಲ್ಲಿ, ವರ್ಚುವಲ್ ತರಗತಿಗಳು ಲಕ್ಷಾಂತರ ವಿದ್ಯಾರ್ಥಿಗಳಿಗೆ, ವಿಶೇಷವಾಗಿ 10 ಮತ್ತು 12 ನೇ ತರಗತಿ ವಿದ್ಯಾರ್ಥಿಗಳಿಗೆ ಅವರ ಮಂಡಳಿಯ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಯಲ್ಲಿ ಸಹಾಯ ಮಾಡುತ್ತಿವೆ.

ವಿಷಯ

ದೂರದರ್ಶನ ಮತ್ತು ಆಕಾಶವಾಣಿ ಮೂಲಕ ವರ್ಚುವಲ್ ಕಲಿಕೆಯು ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢಶಾಲಾ ಮಟ್ಟದ ಪಠ್ಯಕ್ರಮ ಆಧಾರಿತ ತರಗತಿಗಳನ್ನು ಒಳಗೊಂಡಿದೆ. ಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ ವಿಷಯಗಳು ಮತ್ತು 10 ನೇ ತರಗತಿ ವಿದ್ಯಾರ್ಥಿಗಳಿಗೆ ಮಾದರಿ ಪ್ರಶ್ನೆ ಪತ್ರಿಕೆಗಳು ಕೆಲವು ರಾಜ್ಯಗಳಲ್ಲಿ ಲಭ್ಯವಾಗುತ್ತಿವೆ. ತರಗತಿಗಳು ಅನೇಕ ವಿದ್ಯಾರ್ಥಿಗಳು ತಮ್ಮ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಪ್ರವೇಶ ಪರೀಕ್ಷೆಗಳಿಗೆ ತಯಾರಾಗಲು ಸಹಾಯ ಮಾಡುತ್ತವೆ.

ಪಠ್ಯಕ್ರಮದ ವಿಷಯವನ್ನು ಹೊರತುಪಡಿಸಿ, ಕಲಿಕೆಯನ್ನು ಆಸಕ್ತಿದಾಯಕವಾಗಿಡಲು, ಕೆಲವು ರಾಜ್ಯಗಳಲ್ಲಿನ ವರ್ಚುವಲ್ ತರಗತಿಗಳು ಶ್ರೇಷ್ಠ ವ್ಯಕ್ತಿಗಳು ಕಥಾ ವಾಚನ ಮತ್ತು ರಸಪ್ರಶ್ನೆ ಕಾರ್ಯಕ್ರಮಗಳನ್ನೂ  ಒಳಗೊಂಡಿವೆ.

ಮನೆಯಲ್ಲಿರುವ ವಿದ್ಯಾರ್ಥಿಗಳಲ್ಲಿ ಶಿಸ್ತು ಬೆಳೆಸುವ ಉದ್ದೇಶದಿಂದ, ತರಗತಿಗಳಲ್ಲಿ ಬಹುಪಾಲು ಮುಂಜಾನೆ ಪ್ರಾರಂಭವಾಗುತ್ತವೆ ಮತ್ತು ಕೆಲವು ತರಗತಿಗಳನ್ನು ಮಧ್ಯಾಹ್ನ ಪುನರಾವರ್ತಿಸಲಾಗುತ್ತದೆ.

ದೂರದರ್ಶನ

ಈಗಾಗಲೇ ವರ್ಚುವಲ್ ತರಗತಿಗಳನ್ನು ಪ್ರಸಾರ ಮಾಡುತ್ತಿರುವ ಕೇಂದ್ರಗಳು ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಗುಜರಾತ್, ಜಮ್ಮು ಮತ್ತು ಕಾಶ್ಮೀರ .

ಆಕಾಶವಾಣಿ

ವರ್ಚುವಲ್ ತರಗತಿಗಳನ್ನು ಪ್ರಸಾರ ಮಾಡುತ್ತಿರುವ ಕೇಂದ್ರಗಳು ವಿಜಯವಾಡ, ಹೈದರಾಬಾದ್, ಬೆಂಗಳೂರು, ತಿರುಚಿರಾಪಳ್ಳಿ, ಕೊಯಮತ್ತೂರ್, ಪುದುಚೇರಿ, ಮಧುರೈ, ತ್ರಿವೇಂಡ್ರಮ್, ತಿರುನೆಲ್ವೇಲಿ, ಪಣಜಿ, ಜಲ್ಗಾಂವ್, ರತ್ನಗಿರಿ, ಸಾಂಗ್ಲಿ, ಪರ್ಭಾನಿ, ಔರಂಗಾಬಾದ್, ಪುಣೆ, ನಾಗ್ಪುರ , ಮುಂಬೈ, ಗ್ಯಾಂಗಟಕ್, ಗುವಾಹಟಿ, ಬಿಕಾನೇರ್, ಉದಯಪುರ, ಜೋಧಪುರ, ಜೈಪುರ.

ಶೈಕ್ಷಣಿಕ ವಿಷಯವನ್ನು ಪ್ರಸಾರ ಮಾಡುವ ಕೇಂದ್ರಗಳು ಭೋಪಾಲ್, ಚೆನ್ನೈ, ಕೋಳಿಕ್ಕೋಡ್, ತ್ರಿಶೂರ್.

ಸರಾಸರಿ, ಪ್ರತೀ ಡಿಡಿ ಚಾನೆಲ್ ಪ್ರತಿದಿನ 2.5 ಗಂಟೆಗಳ ಶೈಕ್ಷಣಿಕ ವಿಷಯವನ್ನು ಪ್ರಸಾರ ಮಾಡುತ್ತಿದೆ ಮತ್ತು ಪ್ರತೀ ಆಕಾಶವಾಣಿ ಚಾನೆಲ್ ಪ್ರತಿದಿನ 30 ನಿಮಿಷಗಳ ಶೈಕ್ಷಣಿಕ ವಿಷಯವನ್ನು ಪ್ರಸಾರ ಮಾಡುತ್ತಿದೆ.

ಅಲ್ಲದೆ, ಡಿಡಿ ನೆಟ್ವರ್ಕ್ನಾದ್ಯಂತ ದೈನಂದಿನ ವಿಷಯದ ಒಟ್ಟು ಗಂಟೆಗಳ ಸಂಖ್ಯೆ 17 ಗಂಟೆ ಮತ್ತ ಆಕಾಶವಾಣಿ ನೆಟ್ವರ್ಕ್ನಲ್ಲಿ ಪ್ರತಿದಿನ 11 ಗಂಟೆಗಳು.

 

ಶೈಕ್ಷಣಿಕ ಕಾರ್ಯಕ್ರಮಗಳ ವಿವರವಾದ ಪಟ್ಟಿ ಕೆಳಗಿನಂತಿದೆ:

ದೂರದರ್ಶನ ಕೇಂದ್ರಗಳು ಪ್ರಸಾರ ಮಾಡುತ್ತಿರುವ ಶೈಕ್ಷಣಿಕ ಕಾರ್ಯಕ್ರಮಗಳ ವಿವರಗಳು

ಕ್ರ.ಸಂ.

ಕೇಂದ್ರದ ಹೆಸರು

ಕಾರ್ಯಕ್ರಮದ ವಿವರ

ಆವರ್ತನ

ಅವಧಿ

ಸಂಯೋಜಿತ ಶಿಕ್ಷಣ ಸಂಸ್ಥೆ

1.

ಬೆಂಗಳೂರು

12 ನೇ ತರಗತಿ ವಿದ್ಯಾರ್ಥಿಗಳಿಗೆ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತ ತರಗತಿಗಳು ಮತ್ತು ಸಾಮಾನ್ಯ ಎಂಜಿನಿಯರಿಂಗ್ ಪರೀಕ್ಷೆಗಳು

ಪ್ರತಿ ದಿನ

3 ಗಂಟೆ

 

2.

ವಿಜಯವಾಡ

10 ಮತ್ತು 12 ನೇ ತರಗತಿ ವಿದ್ಯಾರ್ಥಿಗಳಿಗೆ ಪಠ್ಯಕ್ರಮ ತರಗತಿಗಳು

ಪ್ರತಿದಿನ

2 ಗಂಟೆ

ರಾಜ್ಯ ಪ್ರೌಢ ಶಿಕ್ಷಣ ಇಲಾಖೆ

3.

ಜಮ್ಮು ಮತ್ತು ಕಾಶ್ಮೀರ

10 ಮತ್ತು 12 ನೇ ತರಗತಿ ವಿದ್ಯಾರ್ಥಿಗಳಿಗೆ ಪಠ್ಯಕ್ರಮ ತರಗತಿಗಳು

ಪ್ರತಿದಿನ

1 ಗಂಟೆ

ಶಾಲಾ ಶಿಕ್ಷಣ ನಿರ್ದೇಶನಾಲಯ

4

ಹೈದರಾಬಾದ್

10 ಮತ್ತು 12 ನೇ ತರಗತಿ ವಿದ್ಯಾರ್ಥಿಗಳಿಗೆ ಪಠ್ಯಕ್ರಮ ತರಗತಿಗಳು

ಪ್ರತಿದಿನ

2 ಗಂಟೆ

ರಾಜ್ಯ ಪ್ರೌಢ ಶಿಕ್ಷಣ ಇಲಾಖೆ

.5.

ಅಹಮದಾಬಾದ್

ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢ ಶಾಲಾ ಹಂತದ ವಿದ್ಯಾರ್ಥಿಗಳಿಗೆ ಪಠ್ಯಕ್ರಮ ಆಧಾರಿತ ತರಗತಿಗಳು

ಪ್ರತಿದಿನ

2 ಗಂಟೆ

ಗುಜರಾತ್ ತಾಂತ್ರಿಕ ಶಿಕ್ಷಣ ಸಂಸ್ಥೆ, ಗುಜರಾತ್ ಸರ್ಕಾರ

6.

ಚೆನ್ನೈ

ಮಾದರಿ ಪ್ರಶ್ನೆ ಪತ್ರಿಕೆಗಳು

ಪ್ರತಿದಿನ

1 ಗಂಟೆ

ತಮಿಳುನಾಡು ಶಿಕ್ಷಣ ಇಲಾಖೆ

7.

ತ್ರಿವೇಂಡ್ರಂ

12 ನೇ ತರಗತಿ ವಿದ್ಯಾರ್ಥಿಗಳಿಗೆ ಎಸ್ ಎಲ್ ಸಿ ವಿಷಯಗಳು. ರಸಪ್ರಶ್ನೆ

ಪ್ರತಿದಿನ

 

 

 

ವಾರಾಂತ್ಯ

3 ಗಂಟೆ

ರಾಜ್ಯ ತಾಂತ್ರಿಕ ಶಿಕ್ಷಣ ಸಂಸ್ಥೆ

8.

ಪಣಜಿ

ರಸಪ್ರಶ್ನೆ

ವಾರಕ್ಕೊಮ್ಮೆ

30 ನಿಮಿಷ

ಸ್ವಂತ ನಿರ್ಮಾಣ

9.

ಜಲಂಧರ್

 

 

 

ಸದ್ಯದಲ್ಲೇ ಆರಂಭವಾಗಲಿದೆ

10

ಲಕ್ನೋ

 

 

 

ಸದ್ಯದಲ್ಲೇ ಆರಂಭವಾಗಲಿದೆ

11.

ವಾರಣಾಸಿ

 

 

 

ಪ್ರಸಾರಕ್ಕಾಗಿ ಶಿಕ್ಷಣಾದಿಕಾರಿಗಳಿಂದ ಮನವಿ. ಅವರ ಪ್ರಸ್ತಾವನೆಗೆ ಕಾಯಲಾಗಿದೆ.

 

12.

ಶಿಮ್ಲಾ

 

 

 

ಶಿಕ್ಷಣ ನಿರ್ದೇಶನಾಲಯದಿಂದ ಪ್ರಸ್ತಾವನೆ ಸ್ವೀಕರಿಸಲಾಗಿದೆ. ಸದ್ಯದಲ್ಲೇ ಆರಂಭ

13.

ಪಾಟ್ನಾ

 

 

 

ಡಿಡಿ ಬಿಹಾರ್ ಕುರಿತು ರಾಜ್ಯ ಶಿಕ್ಷಣ ಇಲಾಖೆಗೆ ಮನವಿ ಮಾಡಿದೆ.

 

ಆಕಾಶವಾಣಿ ಕೇಂದ್ರಗಳು ಪ್ರಸಾರ ಮಾಡುತ್ತಿರುವ ಶೈಕ್ಷಣಿಕ ಕಾರ್ಯಕ್ರಮಗಳ ವಿವರಗಳು

ಕ್ರ.ಸಂ.

ಕೇಂದ್ರದ ಹೆಸರು

ಕಾರ್ಯಕ್ರಮದ ವಿವರ

ಆವರ್ತನ

ಅವಧಿ

ಸಂಯೋಜಿತ ಶಿಕ್ಷಣ ಸಂಸ್ಥೆ

1.

ಆಕಾಶವಾಣಿ ಭೋಪಾಲ್

ರೇಡಿಯೋ ಸ್ಕೂಲ್ (ಗಣ್ಯ ವ್ಯಕ್ತಿಗಳಿಂದ ಕಥಾ ವಾಚನ)

ವಾರದಲ್ಲಿ 6 ದಿನ

60 ನಿಮಿಷ

ರಾಜ್ಯ ಶಿಕ್ಷಾ ಕೇಂದ್ರ ಭೋಪಾಲ್

2.

ಆಕಾಶವಾಣಿ ಹೈದರಾಬಾದ್

ಡಾ.ಬಿ.ಆರ್. ಅಂಬೇಡ್ಕರ್ ಮುಕ್ತ ವಿವಿ ಶೈಕ್ಷಣಿಕ

ಕಾರ್ಯಕ್ರಮ

ಪ್ರತಿದಿನ

15 ನಿಮಿಷ

ಡಾ.ಬಿ.ಆರ್. ಅಂಬೇಡ್ಕರ್ ಮುಕ್ತ ವಿವಿ, ಹೈದರಾಬಾದ್

3.

ಆಕಾಶವಾಣಿ ವಿಜಯವಾಡ

ವಿಂದಂ ನೆರ್ಚುಕುಂದಂ

ಸೋಮವಾರದಿಂದ ಶುಕ್ರವಾರ

30 ನಿಮಿಷ

ಸಮಗ್ರ ಶಿಕ್ಷಾ ಅಭಿಯಾನ, ಆಂಧ್ರಪ್ರದೇಶ ಸರ್ಕಾರ

4.

ಆಕಾಶವಾಣಿ ಚೆನ್ನೈ

10ನೇ ತರಗತಿ

ತಮಿಳುನಾಡು ಮತ್ತು ಪುದುಚೆರಿ ವಲಯದ ಎಲ್ಲಾ ಕೇಂದ್ರಗಳಿಗೆ  ಆಕಾಶವಾಣಿ ಚೆನ್ನೈ ಕಾರ್ಯಕ್ರಮಗಳನ್ನುರೂಪಿಸುತ್ತದೆ.

ಎಲ್ಲ ಭಾನುವಾರಗಳು ಮಧ್ಯಾಹ್ನ 2.30ಕ್ಕೆ

15 ನಿಮಿಷ

 

5.

ಆಕಾಶವಾಣಿ ತಿರುವನಂತಪುರಂ

 

ಬುಧವಾರ, ಗುರುವಾರ, ಶುಕ್ರವಾರ

14 ನಿಮಿಷ

 

6.

ಆಕಾಶವಾಣಿ ಕೋಳಿಕೋಡ್

 

ಸೋಮವಾರ

14 ನಿಮಿಷ

 

7.

ಆಕಾಶವಾಣಿ ತ್ರಿಶೂರ್

 

ಮಂಗಳವಾರ

14 ನಿಮಿಷ

 

8.

ಆಕಾಶವಾಣಿ ಜೈಪುರ, ಆಕಾಶವಾಣಿ ಜೋಧಪುರ, ಆಕಾಶವಾಣಿ ಬಿಕಾನೇರ್, ಆಕಾಶವಾಣಿ ಉದಯಪುರ

ವಿದ್ಯಾಲಯ ಪ್ರಸಾರ, 80 ಪುಸ್ತಕಗಳ ಪಾಠಗಳು, 28 ಪರೀಕ್ಷಾ ಪಾಠಗಳು, 60 ಗೈರ್ ಪಠ್ಯಕ್ರಮ ಪಾಠಗಳು

ಪ್ರತಿ ಶಾಲಾ ಕೆಲಸದ ದಿನ (ಜುಲೈನಿಂದ ಮಾರ್ಚ್)

20 ನಿಮಿಷ

ರಾಜಸ್ತಾನ ಶಿಕ್ಷಣ ಅನುಸಂಧಾನ ಮತ್ತು ಪ್ರಶಿಕ್ಷಣ ಪರಿಷತ್ ಉದಯಪುರ, ರಾಜಸ್ತಾನ

9.

ಆಕಾಶವಾಣಿ ಗುವಾಹಟಿ

ವಿಶ್ವ-ವಿದ್ಯಾ

ಪ್ರತೀ ಸೋಮವಾರ, ಬುದವಾರ, ಶುಕ್ರವಾರ

15 ನಿಮಿಷ

ರಾಜ್ಯ ಶಿಕ್ಷನ ಮಂಡಳಿ ಮತ್ತು ತರಬೇತಿ ಮತ್ತು ಎಸ್ ಎಸ್   ಜೊತೆಗೆ ಸಹಯೋಗ

10.

ಆಕಾಶವಾಣಿ ಲೇಹ್

 

 

ಮುಂಜಾನೆ 60 ನಿಮಿಷ

 ಮುಖ್ಯ ಶಿಕ್ಷಣಾಧಿಕಾರಿಯವರ ಕಚೇರಿ, ಲೇಹ್

13.

ಆಕಾಶವಾಣಿ ಶ್ರೀನಗರ

ದಿನಕ್ಕೆ ನಾಲ್ಕು ತರಗತಿ

 

30 ನಿಮಿಷ

ಶಾಲಾ ಶಿಕ್ಷಣ ನಿರ್ದೇಶನಾಲಯ

14.

ಆಕಾಶವಾಣಿ ಗ್ಯಾಂಗಟಕ್

 

ತರಗತಿಗಳು ಏಪ್ರಿಲ್ 16, 2020ರಿಂದ ಆರಂಭ 

(ಸೋಮವಾರದಿಂದ ಶನಿವಾರ)

60 ನಿಮಿಷ

ಶಿಕ್ಷಣ ಇಲಾಖೆ, ಸಿಕ್ಕಿಂ

16.

ಆಕಾಶವಾಣಿ ಮುಂಬೈ

ಖುಲಾ ಆಕಾಶ್

ಶಾಲಾ ದಿನಗಳಂದು

25 ನಿಮಿಷ

 

17.

ಆಕಾಶವಾಣಿ ಪುಣೆ

ಖುಲಾ ಆಕಾಶ್

ಶಾಲಾ ದಿನಗಳಂದು

25 ನಿಮಿಷ

 

18

ಆಕಾಶವಾಣಿ ನಾಗಪುರ

ಖುಲಾ ಆಕಾಶ್

ಶಾಲಾ ದಿನಗಳಂದು

25 ನಿಮಿಷ

 

 

19

ಆಕಾಶವಾಣಿ ಔರಂಗಾಬಾದ್

ಖುಲಾ ಆಕಾಶ್

ಶಾಲಾ ದಿನಗಳಂದು

25 ನಿಮಿಷ

 

20.

ಆಕಾಶವಾಣಿ ಪರ್ಭಾನಿ

ಖುಲಾ ಆಕಾಶ್

ಶಾಲಾ ದಿನಗಳಂದು

25 ನಿಮಿಷ

 

21

ಆಕಾಶವಾಣಿ ಸಾಂಗ್ಲಿ

ಖುಲಾ ಆಕಾಶ್

ಶಾಲಾ ದಿನಗಳಂದು

25 ನಿಮಿಷ

 

22

ಆಕಾಶವಾಣಿ ರತ್ನಗಿರಿ

ಖುಲಾ ಆಕಾಶ್

ಶಾಲಾ ದಿನಗಳಂದು

25 ನಿಮಿಷ

 

23

ಆಕಾಶವಾಣಿ ಜಲಗಾಂವ್

ಖುಲಾ ಆಕಾಶ್

ಶಾಲಾ ದಿನಗಳಂದು

25 ನಿಮಿಷ

 

24

ಆಕಾಶವಾಣಿ ಪಣಜಿ

ಖುಲಾ ಆಕಾಶ್

ಶಾಲಾ ದಿನಗಳಂದು

25 ನಿಮಿಷ

 

27

ಆಕಾಶವಾಣಿ ತಿರುಚಿರಾಪಳ್ಳಿ

12ನೇ ತರಗತಿ

(ಚೆನ್ನೈ ಹೊರತುಪಡಿಸಿ ತಮಿಳುನಾಡು ಮತ್ತು ಪುದುಚೆರಿ ಪ್ರದೇಶದಲ್ಲಿ ಆವರ್ತಕ ಆಧಾರದ ಮೇಲೆ ಇತರ ಆಕಾಶವಾಣಿ ಕೇಂದ್ರಗಳ ಕಾರ್ಯಕ್ರಮಗಳು)

ಎಲ್ಲ ಶನಿವಾರ, ಬೆಳಿಗ್ಗೆ 11.40 ಕ್ಕೆ

 

 

28

ಆಕಾಶವಾಣಿ ಕೊಯಂಬತ್ತೂರ್

12ನೇ ತರಗತಿ

(ಚೆನ್ನೈ ಹೊರತುಪಡಿಸಿ ತಮಿಳುನಾಡು ಮತ್ತು ಪುದುಚೆರಿ ಪ್ರದೇಶದಲ್ಲಿ ಆವರ್ತಕ ಆಧಾರದ ಮೇಲೆ ಇತರ ಆಕಾಶವಾಣಿ ಕೇಂದ್ರಗಳ ಕಾರ್ಯಕ್ರಮಗಳು)

ಎಲ್ಲ ಶನಿವಾರ, ಬೆಳಿಗ್ಗೆ 11.40 ಕ್ಕೆ

 

 

29

ಆಕಾಶವಾಣಿ ಮದುರೈ

12ನೇ ತರಗತಿ

(ಚೆನ್ನೈ ಹೊರತುಪಡಿಸಿ ತಮಿಳುನಾಡು ಮತ್ತು ಪುದುಚೆರಿ ಪ್ರದೇಶದಲ್ಲಿ ಆವರ್ತಕ ಆಧಾರದ ಮೇಲೆ ಇತರ ಆಕಾಶವಾಣಿ ಕೇಂದ್ರಗಳ ಕಾರ್ಯಕ್ರಮಗಳು)

ಎಲ್ಲ ಶನಿವಾರ, ಬೆಳಿಗ್ಗೆ 11.40 ಕ್ಕೆ

 

 

30

ಆಕಾಶವಾಣಿ ತಿರುನಲ್ವೇಲಿ

12ನೇ ತರಗತಿ

(ಚೆನ್ನೈ ಹೊರತುಪಡಿಸಿ ತಮಿಳುನಾಡು ಮತ್ತು ಪುದುಚೆರಿ ಪ್ರದೇಶದಲ್ಲಿ ಆವರ್ತಕ ಆಧಾರದ ಮೇಲೆ ಇತರ ಆಕಾಶವಾಣಿ ಕೇಂದ್ರಗಳ ಕಾರ್ಯಕ್ರಮಗಳು)

ಎಲ್ಲ ಶನಿವಾರ, ಬೆಳಿಗ್ಗೆ 11.40 ಕ್ಕೆ

 

 

 

***


(Release ID: 1615319) Visitor Counter : 1397