ಗ್ರಾಮೀಣಾಭಿವೃದ್ಧಿ ಸಚಿವಾಲಯ
ಗ್ರಾಮೀಣಾಭಿವೃದ್ದಿ, ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶ್ರೀ ನರೇಂದ್ರ ಸಿಂಗ್ ತೋಮರ್ ಅವರಿಂದ ಗ್ರಾಮೀಣಾಭಿವೃದ್ದಿ ಸಚಿವಾಲಯದ ಎಲ್ಲ ಪ್ರಮುಖ ಯೋಜನೆಗಳ ವಿವರವಾದ ಪ್ರಗತಿ ಪರಿಶೀಲನೆ
Posted On:
16 APR 2020 6:58PM by PIB Bengaluru
ಗ್ರಾಮೀಣಾಭಿವೃದ್ದಿ, ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶ್ರೀ ನರೇಂದ್ರ ಸಿಂಗ್ ತೋಮರ್ ಅವರಿಂದ ಗ್ರಾಮೀಣಾಭಿವೃದ್ದಿ ಸಚಿವಾಲಯದ ಎಲ್ಲ ಪ್ರಮುಖ ಯೋಜನೆಗಳ ವಿವರವಾದ ಪ್ರಗತಿ ಪರಿಶೀಲನೆ
ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಎಂ.ಜಿ. ನರೇಗಾ ಅಡಿಯಲ್ಲಿ ಹಣಕಾಸು ವರ್ಷ 2019-2020 ರ ಬಾಕಿ ಇರುವ ಪಾವತಿಗೆ ಮತ್ತು 2020-2021ರ ಮೊದಲ ಪಾಕ್ಷಿಕದ ಕೂಲಿ ಬಾಕಿ ಪಾವತಿಗೆ 7300 ಕೋ.ರೂ. ಬಿಡುಗಡೆ
ಪಿ.ಎಂ.ಎ.ವೈ (ಜಿ) ಅಡಿಯಲ್ಲಿ ಎರಡನೆ ಮತ್ತು ಮೂರನೆ ಕಂತಿನ ನಿಧಿಯನ್ನು ಪಡೆದ ಸುಮಾರು 40 ಲಕ್ಷ ಫಲಾನುಭವಿಗಳಿಗೆ ಅವರ ಮನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಸಹಾಯ ಮಾಡಲು ಶ್ರೀ ತೋಮರ್ ಸಲಹೆ
ಗ್ರಾಮೀಣಾಭಿವೃದ್ದಿ , ಕೃಷಿ ಮತ್ತು ರೈತರ ಕಲ್ಯಾಣ ಸಚಿವರಾದ ಶ್ರೀ ನರೇಂದ್ರ ಸಿಂಗ್ ತೋಮರ್ ಇಂದು ಗ್ರಾಮೀಣಾಭಿವೃದ್ದಿ ಸಚಿವಾಲಯದ ಎಲ್ಲಾ ಪ್ರಮುಖ ಯೋಜನೆಗಳನ್ನು ವಿವರವಾಗಿ ಪರಾಮರ್ಶೆ ನಡೆಸಿದರು. ಗ್ರಾಮೀಣಾಭಿವೃದ್ದಿ ಸಹಾಯಕ ಸಚಿವರಾದ ಸಾಧ್ವಿ ನಿರಂಜನ ಜ್ಯೋತಿ , ಗ್ರಾಮೀಣಾಭಿವೃದ್ದಿ ಕಾರ್ಯದರ್ಶಿ ಶ್ರೀ ರಾಜೇಶ್ ಭೂಷಣ್ ಮತ್ತು ಸಚಿವಾಲಯದ ಎಲ್ಲಾ ಹಿರಿಯ ಅಧಿಕಾರಿಗಳು ಈ ಪ್ರಗತಿ ಪರಿಶೀಲನಾ ಸಭ್ಗೆ ಹಾಜರಾಗಿದ್ದರು.
ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಭದ್ರತಾ ಯೋಜನೆ (ಎಂ.ಜಿ. ನರೇಗಾ) ಅಡಿಯಲ್ಲಿ ಬಾಕಿ ಇರುವ ವೇತನ /ಕೂಲಿ ಪಾವತಿಗಾಗಿ ಮತ್ತು ಸಾಮಗ್ರಿಗಳಿಗಾಗಿ ಹಣಕಾಸು ವರ್ಷ 2019-2020 ರ ಅವಧಿಗೆ ಮತ್ತು ಹಾಲಿ ಹಣಕಾಸು ವರ್ಷದ ಹದಿನೈದು ದಿನಗಳ ವೇತನ/ಕೂಲಿ ವಿತರಣೆಗೆ 7300 ಕೋ.ರೂ.ಗಳನ್ನು ರಾಜ್ಯಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಬಿಡುಗಡೆ ಮಾಡಿರುವುದಕ್ಕೆ ಶ್ರೀ ನರೇಂದ್ರ ಸಿಂಗ್ ತೋಮರ್ ಮೆಚ್ಚುಗೆ ವ್ಯಕ್ತಪಡಿಸಿದರು. ಕೋವಿಡ್-19 ನಿಯಂತ್ರಣ ಇರದ ಪ್ರದೇಶಗಳಲ್ಲಿ ಎಂ.ಜಿ.ನರೇಗಾದ ಕಾಮಗಾರಿಗಳು ಸಾಮಾಜಿಕ ಅಂತರದ ಮೇಲೆ ಆದ್ಯ ಗಮನವಿಟ್ಟು ಮತ್ತು ರಕ್ಷಣಾ ಮುಖಗವಸುಗಳನ್ನು ಬಳಸಿಕೊಂಡು ದಕ್ಷ ರೀತಿಯಲ್ಲಿ ಮುಂದುವರೆಸಬೇಕು ಎಂಬ ಆಶಯವನ್ನೂ ಸಚಿವರು ವ್ಯಕ್ತಪಡಿಸಿದರು. ನೀರಾವರಿ, ಜಲ ಸಂರಕ್ಷಣೆ ಮತ್ತು ಹರಿದು ಹೋಗುವ ನೀರನ್ನು ತಡೆಯುವ, ಮಣ್ಣು ರಕ್ಷಣೆಯಂತಹ ಧೀರ್ಘಕಾಲ ಬಾಳಿಕೆ ಬರುವ ಸಂಪತ್ತು ನಿರ್ಮಾಣಕ್ಕೆ ಆದ್ಯತೆ ನೀಡಬೇಕು ಎಂದವರು ಹೇಳಿದರು.
ಗ್ರಾಮೀಣ ಜನಸಮುದಾಯದ ದುರ್ಬಲ ವರ್ಗದವರಿಗೆ ನೆರವಾಗಲು ದೇಶಾದ್ಯಂತ 93,000 ಕ್ಕೂ ಅಧಿಕ ಎಸ್.ಎಚ್.ಜಿ. ಸದಸ್ಯರು ಹತ್ತಿ ಬಟ್ಟೆಯ ಮುಖಗವಸುಗಳನ್ನು ಜೊತೆಗೆ ಸ್ಯಾನಿಟೈಸರುಗಳನ್ನು ತಯಾರಿಸುವಲ್ಲಿ ನಿರತರಾಗಿರುವುದನ್ನು ,ಸಮುದಾಯ ಅಡುಗೆ ಮನೆಗಳನ್ನು ನಿರ್ವಹಿಸುತ್ತಿರುವುದನ್ನು ಗಮನಿಸಿದ ಸಚಿವರು ಇದಕ್ಕೆ ತೃಪ್ತಿ ವ್ಯಕ್ತಪಡಿಸಿದರು. ಗ್ರಾಮೀಣ ಆರ್ಥಿಕತೆಯಲ್ಲಿ ನಗದು ಹರಿವು ಮತ್ತು ಗ್ರಾಮೀಣ ಜೀವನೋಪಾಯಗಳನ್ನು ಬಲಪಡಿಸುವ ಆಶಯ ವ್ಯಕ್ತಪಡಿಸಿದ ಅವರು ದೀನದಯಾಳ ಅಂತ್ಯೋದಯ ಯೋಜನಾ-ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ (ಡಿ.ಎ.ವೈ-ಎನ್.ಆರ್.ಎಲ್.ಎಂ.) ಬ್ಯಾಂಕ್ ಸಖಿ ಮತ್ತು ಪಶು ಸಖಿ ಸಂಖ್ಯೆಯನ್ನು ವಿಸ್ತರಿಸುವ ಅಗತ್ಯವನ್ನು ಪ್ರತಿಪಾದಿಸಿದರು. ಇಂತಹ ಪ್ರಯತ್ನ ಬ್ಯಾಂಕ್ ಮುಂಗಡ ಮತ್ತು ಪಶು ಸಂಗೋಪನೆ ಸೇವೆಗಳನ್ನು ಗ್ರಾಮೀಣ ಮಹಿಳೆಯರ ಮನೆ ಬಾಗಿಲಿಗೆ ತರುತ್ತದೆ ಎಂದರು.
ದೀನದಯಾಳ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನಾ (ಡಿ.ಡಿ.ಯು.ಜಿ.ಕೆ.ವೈ.) ಗಾಗಿ ಇ-ವಿಷಯ ಸಾಮಗ್ರಿಯನ್ನು ಅಭಿವೃದ್ದಿ ಮಾಡಬೇಕಾದ ಅಗತ್ಯವನ್ನು ಸಚಿವರು ಒತ್ತಿ ಹೇಳಿದರು.
ಪ್ರಧಾನ ಮಂತ್ರಿ ಆವಾಸ್ ಯೋಜನಾ (ಗ್ರಾಮೀಣ) ಅಡಿಯಲ್ಲಿ ಒಟ್ಟು ಬಜೆಟ್ 19,500 ಕೋ.ರೂ.ಗಳಲ್ಲಿ ರೂ. 800.63 ಕೋ.ರೂ.ಗಳನ್ನು ರಾಜ್ಯಗಳಿಗೆ ಬಿಡುಗಡೆ ಮಾಡಲಾಗಿದೆ ಎಂಬುದನ್ನು ಶ್ರೀ ತೋಮರ್ ಗಮನಿಸಿದರು. ಪಿ.ಎಂ.ಎ.ವೈ. (ಜಿ) ಯಡಿ ಎರಡನೆ ಮತ್ತು ಮೂರನೆ ಕಂತಿನ ಹಣವನ್ನು ಪಡೆದಿರುವ 40 ಲಕ್ಷ ಫಲಾನುಭವಿಗಳಿಗೆ ಅವರ ಮನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಸಕ್ರಿಯವಾಗಿ ನೆರವಾಗಬೇಕು ಅವರು ಸಲಹೆ ಮಾಡಿದರು.
ಲಾಕ್ ಡೌನ್ ಅವಧಿಯನ್ನು ಜಿಲ್ಲಾ ಮತ್ತು ರಾಜ್ಯ ಮಟ್ಟದ ದಿಶಾ ಸಮಿತಿಗಳ ಸಭೆಯ ನಿರ್ವಹಣೆಯನ್ನು ಸಮರ್ಪಕಗೊಳಿಸಲು ದಕ್ಷತೆಯಿಂದ ಬಳಸಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸಲಹೆ ಮಾಡಿದರು. ದಿಶಾ ಸಭೆಗಳಲ್ಲಿ ಕೈಗೊಂಡ ನಿರ್ಧಾರಗಳನ್ನು ಅನುಷ್ಟಾನ ಮಾಡುವಲ್ಲಿ ದಕ್ಷ ನಿಗಾ ಇಡಬೇಕಾದ ಆವಶ್ಯಕತೆಯನ್ನು ಪ್ರತಿಪಾದಿಸಿದ ಅವರು ಇದರಿಂದ ದಿಶಾ ವೇದಿಕೆಯು ಹೆಚ್ಚು ಅರ್ಥಪೂರ್ಣವಾಗಬಲ್ಲದು ಎಂದರು.
***
(Release ID: 1615313)
Visitor Counter : 220