ಪ್ರವಾಸೋದ್ಯಮ ಸಚಿವಾಲಯ
ಪ್ರವಾಸೋದ್ಯಮ ಸಚಿವಾಲಯದ ಎರಡನೇ “ದೆಖೊ ಅಪನಾ ದೇಶ್” ವೆಬಿನಾರ್ ಸರಣಿ ಇಂದು
Posted On:
16 APR 2020 4:43PM by PIB Bengaluru
ಪ್ರವಾಸೋದ್ಯಮ ಸಚಿವಾಲಯದ ಎರಡನೇ “ದೆಖೊ ಅಪನಾ ದೇಶ್” ವೆಬಿನಾರ್ ಸರಣಿ ಇಂದು
ವೆಬಿನಾರ್ ಗೆ ಕಲ್ಕತ್ತಾ – ಒಂದು ಸಂಸ್ಕೃತಿಗಳ ಸಂಗಮ ಎಂಬ ಶೀರ್ಷಿಕೆ ನೀಡಲಾಗಿತ್ತು
ತಮ್ಮ ದೇಶವನ್ನು ಅನ್ವೇಷಿಸಲು ಭಾರತೀಯರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಮತ್ತು ಪ್ರವಾಸೋದ್ಯಮ ಕ್ಷೇತ್ರದ ವಿವಿಧ ಅಂಶಗಳ ಬಗ್ಗೆ ಪ್ರವಾಸೋದ್ಯಮ ಇಲಾಖೆಯ ಪೂರಕ ಉದ್ಯಮದವರು, ವಿದ್ಯಾರ್ಥಿಗಳು, ಸಾರ್ವಜನಿಕರು ಇತ್ಯಾದಿಗಳಿಗೆ ಜ್ಞಾನವನ್ನು ಹೆಚ್ಚಿಸಿಕೊಳ್ಳಲು, ಭಾರತ ಸರ್ಕಾರದ ಪ್ರವಾಸೋದ್ಯಮ ಇಲಾಖೆ ‘ದೆಖೊ ಅಪನಾ ದೇಶ್’ ಎಂಬ ವಿಷಯ ವಸ್ತುವಿನ ಅಡಿಯಲ್ಲಿ ಪ್ರಸ್ತುತ, ವೆಬಿನಾರ್ ಗಳ ಸರಣಿಯನ್ನು ಆಯೋಜಿಸುತ್ತಿದೆ.
ಆಯೋಜಿಸಲಾದ ಎರಡನೇ ವೆಬಿನಾರ್ ಸರಣಿಯಾದ ‘ಕಲ್ಕತ್ತಾ – ಒಂದು ಸಂಸ್ಕೃತಿಗಳ ಸಂಗಮ’ ವನ್ನು, ಕಲ್ಕತ್ತಾ ವಾಕ್ಸ್ ಟುಡೆ ಯ ಶ್ರೀ. ಇಫ್ತೆಖರ್ ಎಹಸಾನ್, ಶ್ರೀ. ರಿತ್ವಿಕ್ ಘೋಷ್ ಮತ್ತು ಶ್ರೀ. ಅನಿರ್ಬನ್ ದತ್ತಾ ಅವರು ಪ್ರಸ್ತುತಪಡಿಸಿದರು. ಕೊಲ್ಕತಾದ ಅಭಿವೃದ್ಧಿಗಾಗಿ ವಿವಿಧ ಸಮುದಾಯಗಳು ನೀಡಿದ ಕೊಡುಗೆಯ ಕುರಿತಾದ ಆಸಕ್ತಿಕರ ಒಳನೋಟವನ್ನು ಈ ವೆಬಿನಾರ್ ನೀಡಿತು.
2700 ಕ್ಕೂ ಹೆಚ್ಚು ನೋಂದಣಿಗಳು ಮತ್ತು ಅಂತಿಮವಾಗಿ 1800ಕ್ಕೂ ಹೆಚ್ಚು ಭಾಗವಹಿಸಿದವರ ಉತ್ತಮ ಪ್ರತಿಕ್ರಿಯೆಯನ್ನು ವೆಬಿನಾರ್ ಪಡೆಯಿತು.
ಏಪ್ರಿಲ್ 18, 2020 ರಂದು ನಡೆಯಲಿರುವ ವಿಶ್ವ ಪರಂಪರೆಯ ದಿನದ ಪ್ರಯುಕ್ತ, ಎರಡು ವೆಬಿನಾರ್ ಗಳನ್ನು ಖಚಿತಪಡಿಸಲಾಗಿದೆ. ಮೊದಲನೆಯ ಸಭೆ ಬೆಳಗ್ಗೆ 1100 ರಿಂದ ಮಧ್ಯಾಹ್ನ 1200 ರ ವರೆಗೆ ಸ್ಟೋರಿಟ್ರೇಲ್ಸ್ ನ ‘’ಮಮಲ್ಲಾಪುರಂ ನ ಸ್ಮಾರಕಗಳು – ಕಲ್ಲಿನಲ್ಲಿ ಕೆತ್ತಲಾದ ಕಥೆಗಳು’ ಕುರಿತದ್ದಾಗಿದೆ ಮತ್ತು ಎರಡನೆಯ ಸಭೆ ಮಧ್ಯಾಹ್ನ 1200 ರಿಂದ 0100 ಗಂಟೆವರೆಗೆ ನಡೆಯಲಿದ್ದು ಅಗಾ ಖಾನ್ ಟ್ರಸ್ಟ್ ಫಾರ್ ಕಲ್ಚರ್ ಸಂಸ್ಥೆಯ ಸಿಇಒ, ಶ್ರೀ ರತೀಶ್ ನಂದ ಅವರು ‘ಹುಮಾಯೂನ್ ಸಮಾಧಿಯಲ್ಲಿ ವಿಶ್ವ ಪರಂಪರೆ ಮತ್ತು ಸುಸ್ಥಿರ ಪ್ರವಾಸೋದ್ಯಮ’ ವನ್ನು ಪ್ರಸ್ತುತ ಪಡಿಸಲಿದ್ದಾರೆ.
ಈ ವೆಬಿನಾರ್ ಸರಣಿಗಳು ಹಲವಾರು ಪ್ರೇಕ್ಷಣೀಯ ಸ್ಥಳಗಳು ಮತ್ತು ಭಾರತೀಯ ಸಂಸ್ಕೃತಿ ಮತ್ತು ಪರಂಪರೆ ಬಗ್ಗೆ ಸಂಪೂರ್ಣ ಹಾಗೂ ಆಳವಾದ ಮಾಹಿತಿ ಒದಗಿಸುತ್ತದೆ. ಈ ಸರಣಿಯ ಪ್ರಥಮ ವೆಬಿನಾರ್ ಅನ್ನು 14 ಏಪ್ರಿಲ್ 2020 ರಂದು ಆಯೋಜಿಸಲಾಗಿತ್ತು ಹಾಗೂ ಈ ವೆಬಿನಾರ್ ಗೆ “ಸಿಟಿ ಆಫ್ ಸಿಟೀಸ್ – ಡೆಲ್ಹಿಸ್ ಪರ್ಸನಲ್ ಡೈರಿ” ಎಂಬ ಶಿರ್ಷಿಕೆ ನೀಡಲಾಗಿತ್ತು. ಈ ಸಭೆಯ ಮುಖ್ಯ ಉದ್ದೇಶ ಪ್ರವಾಸೋದ್ಯಮ ಜಾಗೃತಿ ಮತ್ತು ಸಾಮಾಜಿಕ ಇತಿಹಾಸವನ್ನು ಆಧರಿಸಿದ್ದಾಗಿದೆ.
ದೆಖೊ ಅಪನಾ ದೇಶ್ ವೆಬಿನಾರ್ ಸರಣಿಗಳ ಕುರಿತಾದ ಮಾಹಿತಿಯನ್ನು, ಭಾರತ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ಇನ್ಕ್ರೆಡಿಬಲ್ ಇಂಡಿಯಾದ ಸಾಮಾಜಿಕ ಮಾಧ್ಯಮದ ಪುಟಗಳಲ್ಲಿ ನಿಯಮಿತವಾಗಿ ಪೋಸ್ಟ್ ಮಾಡಲಾಗುತ್ತಿದೆ.
***
(Release ID: 1615247)
Visitor Counter : 256