ಕೃಷಿ ಸಚಿವಾಲಯ
ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವರಾದ ಶ್ರೀ ಕೈಲಾಶ್ ಚೌಧರಿ ಅವರು ಪೂಸಾ ಶುದ್ಧಗೊಳಿಸುವ ಮತ್ತು ಸೋಂಕುನಿವಾರಕ ಸುರಂಗವನ್ನು ಉದ್ಘಾಟಿಸಿದರು
Posted On:
16 APR 2020 4:14PM by PIB Bengaluru
ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವರಾದ ಶ್ರೀ ಕೈಲಾಶ್ ಚೌಧರಿ ಅವರು ಪೂಸಾ ಶುದ್ಧಗೊಳಿಸುವ ಮತ್ತು ಸೋಂಕುನಿವಾರಕ ಸುರಂಗವನ್ನು ಉದ್ಘಾಟಿಸಿದರು
ನವದೆಹಲಿಯ ಐಸಿಎಆರ್- ಇಂಡಿಯನ್ ಅಗ್ರಿಕಲ್ಚರಲ್ ರಿಸರ್ಚ್ ಇನ್ಸ್ಟಿಟ್ಯೂಟ್ನ ಅಗ್ರಿಕಲ್ಚರಲ್ ಎಂಜಿನಿಯರಿಂಗ್ ವಿಭಾಗವು ಅಭಿವೃದ್ಧಿಪಡಿಸಿದ ಪೂಸಾ ಶುದ್ಧಗೊಳಿಸುವ ಮತ್ತು ಸೋಂಕುನಿವಾರಕ ಸುರಂಗವನ್ನು ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವರಾದ ಶ್ರೀ ಕೈಲಾಶ್ ಚೌಧರಿಯವರು ಇಂದು ಡೈರೆಕ್ಟರ್ ಜೆನರಲ್, ಐ ಸಿ ಎ ಆರ್, ಡಿ ಎ ಆರ್ ಇ ಕಾರ್ಯದರ್ಶಿಯಾದ ಡಾ. ತ್ರಿಲೋಚನ್ ಮೊಹಾಪಾತ್ರ, ಐ ಸಿ ಎ ಆರ್-ಐ ಎ ಆರ್ ಐ ನಿರ್ದೇಶಕರಾದ ಎ.ಕೆ. ಸಿಂಗ್ ಸಮ್ಮುಖದಲ್ಲಿ ಉದ್ಘಾಟಿಸಿದರು.
ನೈರ್ಮಲ್ಯೀಕರಣದ ನಿಯಮಾವಳಿಯಂತೆ ಕಾಲು-ಚಾಲಿತ ಸೋಪ್ ಮತ್ತು ನೀರಿನ ವಿತರಕದಿಂದ ಕೈ ತೊಳೆಯುವುದು ಮತ್ತು 20 ಸೆಕೆಂಡುಗಳ ಕಾಲ ನೈರ್ಮಲ್ಯಗೊಳಿಸುವ ಸುರಂಗದಲ್ಲಿ ಫಾಗಿಂಗಿಗೆ ಒಳಪಡುವುದನ್ನು ಒಳಗೊಂಡಿದೆ. ಈ ಸುರಂಗದಲ್ಲಿ, ಕ್ವಾಟರ್ನರಿ ಅಮೋನಿಯಂ ಕಾಂಪೌಂಡ್ಸ್ (ಕ್ಯೂಎಸಿ) ಅನ್ನು 0.045% ಸಾಂದ್ರತೆಯಲ್ಲಿ ಬಳಸಲಾಗುತ್ತದೆ, ಇದನ್ನು ಆರೋಗ್ಯ ಇಲಾಖೆ ಶಿಫಾರಸು ಮಾಡಿದೆ.
***
(Release ID: 1615240)
Visitor Counter : 244