ರಕ್ಷಣಾ ಸಚಿವಾಲಯ

ಡಿಆರ್‌ಡಿಒ, ಪಿಪಿಇ ಪರೀಕ್ಷಾ ಸೌಲಭ್ಯವನ್ನು ಡಿಆರ್‌ಡಿಇ ಗ್ವಾಲಿಯರ್‌ನಿಂದ ಐಎನ್‌ಎಂಎಎಸ್ ದೆಹಲಿಗೆ ವರ್ಗಾಯಿಸಿತು

Posted On: 16 APR 2020 4:58PM by PIB Bengaluru

ಡಿಆರ್‌ಡಿಒ, ಪಿಪಿಇ ಪರೀಕ್ಷಾ ಸೌಲಭ್ಯವನ್ನು ಡಿಆರ್‌ಡಿಇ ಗ್ವಾಲಿಯರ್‌ನಿಂದ ಐಎನ್‌ಎಂಎಎಸ್ ದೆಹಲಿಗೆ ವರ್ಗಾಯಿಸಿತು

 

ವೈಯಕ್ತಿಕ ರಕ್ಷಣಾ ಸಾಧನ ಗಳು (ಪಿಪಿಇ) ಮತ್ತು ಮುಖಗವಸುಗಳ ವಿಳಂಬವಾಗುವುದನ್ನು ನಿವಾರಿಸಲು ಮತ್ತು ತ್ವರಿತ ವಿತರಣೆಗಾಗಿ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ರಕ್ಷಣಾ ಸಂಶೋಧನಾ ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಇ), ಗ್ವಾಲಿಯರ್ನಿಂದ ಇನ್ಸ್ಟಿಟ್ಯೂಟ್ ಆಫ್ ನ್ಯೂಕ್ಲಿಯರ್ ಮೆಡಿಸಿನ್ ಮತ್ತು ಅಲೈಡ್ ಸೈನ್ಸಸ್ (ಐಎನ್ಎಂಎಎಸ್) ದೆಹಲಿಗೆ ಪರೀಕ್ಷಾ ಸೌಲಭ್ಯವನ್ನು ಸ್ಥಳಾಂತರಿಸಿದೆ.  ಐಎನ್ಎಂಎಎಸ್ ಸಂಸ್ಥೆಯು ಡಿಆರ್‌ಡಿಒ ದ ಮತ್ತೊಂದು ಪ್ರಧಾನ ಜೀವ ವಿಜ್ಞಾನ ಪ್ರಯೋಗಾಲಯವಾಗಿದೆ.  ದೇಹದ ರಕ್ಷಣಾಸೂಟುಗಳು ಮತ್ತು ಮುಖಗವಸುಗಳ ಪರೀಕ್ಷೆ ಮತ್ತು ಮೌಲ್ಯಮಾಪನಕ್ಕಾಗಿ  ಇಲ್ಲಿನ ಸೌಲಭ್ಯ ಸೌಕರ್ಯವು ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತದೆ.  ಈ ವಸ್ತುಗಳ 50 ಕ್ಕೂ ಹೆಚ್ಚು ಬ್ಯಾಚ್ಗಳನ್ನು ಈಗಾಗಲೇ ಪ್ರಯೋಗಾಲಯದಲ್ಲಿ ಪರೀಕ್ಷಿಸಲಾಗಿದೆ.

ಕೋವಿಡ್-19 ವಿರುದ್ಧ ಹೋರಾಡುವಲ್ಲಿ ಮುಂಚೂಣಿಯಲ್ಲಿರುವ ಡಿಆರ್‌ಡಿಇ, ಗ್ವಾಲಿಯರ್, ಈಗ ವಿದೇಶಗಳಿಂದ ಎಚ್‌ಎಲ್‌ಎಲ್ ಲೈಫ್‌ಕೇರ್ ಲಿಮಿಟೆಡ್‌ನಿಂದ ಪಡೆದ ಮುಖಗವಸುಗಳನ್ನು ವಿವಿಧ ಏಜೆನ್ಸಿಗಳಿಗೆ ವಿತರಿಸುವ ಮೊದಲು ಅದನ್ನು ಪರೀಕ್ಷಿಸುವ ಕಾರ್ಯವನ್ನು ಮಾಡಲು ನಿಯೋಜಿಸಲಾಗಿದೆ.

***


(Release ID: 1615239) Visitor Counter : 215