ಗೃಹ ವ್ಯವಹಾರಗಳ ಸಚಿವಾಲಯ

ದೇಶದಲ್ಲಿ ಕೋವಿಡ್ -19 ಸಾಂಕ್ರಾಮಿಕ ನಿಯಂತ್ರಣಕ್ಕೆ ಸಮಗ್ರ ಪರಿಷ್ಕೃತ ಮಾರ್ಗಸೂಚಿ ಹೊರಡಿಸಿದ ಎಂಎಚ್ಎ

Posted On: 15 APR 2020 11:18AM by PIB Bengaluru

ದೇಶದಲ್ಲಿ ಕೋವಿಡ್ -19 ಸಾಂಕ್ರಾಮಿಕ ನಿಯಂತ್ರಣಕ್ಕೆ ಸಮಗ್ರ ಪರಿಷ್ಕೃತ ಮಾರ್ಗಸೂಚಿ ಹೊರಡಿಸಿದ ಎಂಎಚ್ಎ

2020ರ ಏಪ್ರಿಲ್ 20ರಿಂದ ಜಾರಿಗೆ ಬರಲಿರುವ ಪರಿಷ್ಕೃತ ಮಾರ್ಗಸೂಚಿ ಅನ್ವಯ ಲಾಕ್ ಡೌನ್ ನಿಂದ ವಿನಾಯಿತಿ ನೀಡಲಾಗಿರುವ ಹೆಚ್ಚುವರಿ ಚಟುವಟಿಕೆಗಳು

 

ದೇಶದಲ್ಲಿ ಕೋವಿಡ್-19 ನಿಯಂತ್ರಣಕ್ಕೆ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ (ಎಂಎಚ್ಎ) ಹೊರಡಿಸಿರುವ ಮಾರ್ಗಸೂಚಿಯ ಅನುಸಾರ ಲಾಕ್ ಡೌನ್ ಕ್ರಮಗಳನ್ನು 2020ರ ಮೇ 30ರ ವರೆಗೆ ಮುಂದುವರಿಸುವ ಕುರಿತು ಭಾರತ ಸರ್ಕಾರ 2020ರ ಏಪ್ರಿಲ್ 14ರಂದು ಆದೇಶ ಹೊರಡಿಸಿದೆ.

ಭಾರತ ಸರ್ಕಾರದ ಆ ಆದೇಶದಂತೆ ಎಂಎಚ್ಎ ಕೂಡ ಲಾಕ್ ಡೌನ್ ಕ್ರಮಗಳ ಕುರಿತು ಭಾರತ ಸರ್ಕಾರದ ಎಲ್ಲ ಸಚಿವಾಲಯಗಳು/ಇಲಾಖೆಗಳು, ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ದೇಶದಲ್ಲಿ ಕೋವಿಡ್-19 ನಿಯಂತ್ರಣಕ್ಕೆ ಲಾಕ್ ಡೌನ್ ಕ್ರಮಗಳ ಪರಿಷ್ಕೃತ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಈ ಮಾರ್ಗಸೂಚಿಯಲ್ಲಿ ಕೋವಿಡ್-19 ನಿರ್ವಹಣೆಗೆ ರಾಷ್ಟ್ರೀಯ ನಿರ್ದೇಶನಗಳನ್ನು ನಿಗದಿಪಡಿಸಲಾಗಿದೆ; ಕಚೇರಿಗಳಲ್ಲಿ ದುಡಿಯುವ ಜಾಗದಲ್ಲಿ, ಕಾರ್ಖಾನೆಗಳಲ್ಲಿ ಮತ್ತು ಉದ್ದಿಮೆಗಳಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಕುರಿತು ನಿರ್ದಿಷ್ಟ ಕಾರ್ಯತಂತ್ರ ಶಿಷ್ಟಾಚಾರ (ಎಸ್ಒಪಿ) ಪಾಲನೆ ಮತ್ತು ಲಾಕ್ ಡೌನ್ ಕ್ರಮಗಳನ್ನು ಉಲ್ಲಂಘಿಸಿದವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ 2005 ಮತ್ತು ಐಪಿಸಿ 1850ರ ಅಡಿಯಲ್ಲಿ ಸೂಕ್ತ ಸಕ್ಷನ್ ಗಳಡಿ ದಂಡನಾ ಕ್ರಮಗಳನ್ನು ಜರುಗಿಸುವ ಕುರಿತು ಸೂಚಿಸಲಾಗಿದೆ.

ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳನ್ನು ತಗ್ಗಿಸುವ ಸಲುವಾಗಿ 2020ರ ಏಪ್ರಿಲ್ 20ರಿಂದ ಜಾರಿಗೆ ಬರಲಿರುವ ಪರಿಷ್ಕೃತ ಮಾರ್ಗಸೂಚಿ ಅನ್ವಯ ಆಯ್ದ ಹೆಚ್ಚುವರಿ ಚಟುವಟಿಕೆಗಳಿಗೆ ವಿನಾಯಿತಿ ನೀಡಲಾಗಿದೆ. ಆದರೆ ಈ ಹೆಚ್ಚುವರಿ ಚಟುವಟಿಕೆಗಳು ಹಾಲಿ ಇರುವ ಲಾಕ್ ಡೌನ್ ಮಾರ್ಗೂಸಿಗಳನ್ನು ಕಡ್ಡಾಯವಾಗಿ ಪಾಲನೆ ಆಧಾರದಲ್ಲಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು(ಯುಟಿ)/ಜಿಲ್ಲಾಡಳಿತಗಳಿಗೆ ಹೆಚ್ಚುವರಿ ಚಟುವಟಿಕೆಗಳಿಗೆ ವಿನಾಯಿತಿ ನೀಡಲು ಅವಕಾಶ ಮಾಡಿಕೊಡಲಾಗುವುದು. ಈ ವಿನಾಯಿತಿಗಳನ್ನು ಜಾರಿಗೊಳಿಸುವ ಮುನ್ನ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು/ ಜಿಲ್ಲಾಡಳಿತಗಳು/ಕಚೇರಿಗಳು, ದುಡಿಯುವ ಜಾಗಗಳು, ಕಾರ್ಖಾನೆಗಳು ಮತ್ತು ಉದ್ದಿಮೆಗಳು ಹಾಗೂ ಇತರೆ ವಲಯಗಳ ಅಗತ್ಯ ಜಾಗಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಕುರಿತಂತೆ ಪೂರ್ವಭಾವಿ ವ್ಯವಸ್ಥೆಗಳನ್ನು ಮಾಡಿಕೊಂಡಿರುವುದನ್ನು ಖಾತ್ರಿಪಡಿಸಬೇಕು.

ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ಮತ್ತು ಜಿಲ್ಲಾಡಳಿತಗಳು ಗುರುತಿಸಿರುವ ಸೋಂಕಿತ ವಲಯಗಳಲ್ಲಿ ಈ ಸಮಗ್ರ ಪರಿಷ್ಕೃತ ಮಾರ್ಗಸೂಚಿಗಳು ಅನ್ವಯವಾಗುವುದಿಲ್ಲ. ಯಾವುದಾದರೂ ಹೊಸ ಪ್ರದೇಶ ಈ ಸೋಂಕಿತ ವಲಯದ ವರ್ಗಕ್ಕೆ ಸೇರ್ಪಡೆಯಾದರೆ, ಆ ಸೋಂಕಿತ ವಲಯ ವರ್ಗಕ್ಕೆ ಸೇರ್ಪಡೆಯಾಗುವವರೆಗೆ ಭಾರತ ಸರ್ಕಾರದ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ (ಎಂಒಎಚ್ಎಫ್ಎ) ಮಾರ್ಗಸೂಚಿಯಲ್ಲಿ ವಿಶೇಷವಾಗಿ ಅನುಮತಿಸಲಾದ ಚಟುವಟಿಕೆಗಳನ್ನು ಹೊರತುಪಡಿಸಿ, ಉಳಿದೆಲ್ಲಾ ಚಟುವಟಿಕೆಗಳನ್ನು ನಿರ್ಬಂಧಿಸಲಾಗುವುದು.

ಎಂಎಚ್ಎ ಭಾರತ ಸರ್ಕಾರದ ಎಲ್ಲ ಸಚಿವಾಲಯಗಳು/ ಇಲಾಖೆಗಳು/ ರಾಜ್ಯ ಸರ್ಕಾರಗಳು/ ಕೇಂದ್ರಾಡಳಿತ ಪ್ರದೇಶದ ಆಡಳಿತಗಳಿಗೆ ಈ ಪರಿಷ್ಕೃತ ಸಮಗ್ರ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಮತ್ತು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವಂತೆ ನಿರ್ದೇಶನ ನೀಡಿದೆ.

ಸಮಗ್ರ ಪರಿಷ್ಕೃತ ಮಾರ್ಗಸೂಚಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

*****

 (Release ID: 1614706) Visitor Counter : 288