ಸಿಬ್ಬಂದಿ, ಸಾರ್ವಜನಿಕ ಅಹವಾಲು ಮತ್ತು ಪಿಂಚಣಿ ಸಚಿವಾಲಯ
ಜಮ್ಮು ಮತ್ತು ಕಾಶ್ಮೀರದ ಕೊರೊನಾ ಪರೀಕ್ಷಾ ಸಾಮರ್ಥ್ಯ ದಿನಕ್ಕೆ 350 ಕ್ಕೂ ಹೆಚ್ಚು ಮಾದರಿಗಳಿಗೆ ಏರಿಕೆ: ಡಾ.ಜಿತೇಂದ್ರ ಸಿಂಗ್
Posted On:
14 APR 2020 8:19PM by PIB Bengaluru
ಜಮ್ಮು ಮತ್ತು ಕಾಶ್ಮೀರದ ಕೊರೊನಾ ಪರೀಕ್ಷಾ ಸಾಮರ್ಥ್ಯ ದಿನಕ್ಕೆ 350 ಕ್ಕೂ ಹೆಚ್ಚು ಮಾದರಿಗಳಿಗೆ ಏರಿಕೆ: ಡಾ.ಜಿತೇಂದ್ರ ಸಿಂಗ್
ಕ್ವಾರಂಟೈನ್ ಹಾಸಿಗೆಗಳ ಸಂಖ್ಯೆ 7,909 ರಿಂದ 26,943 ಕ್ಕೆ ಸುಮಾರು ನಾಲ್ಕು ಪಟ್ಟು ಹೆಚ್ಚಳ
ಜಮ್ಮು ಮತ್ತು ಕಾಶ್ಮೀರದ ಕೊರೊನಾ ಪರೀಕ್ಷಾ ಸಾಮರ್ಥ್ಯವು ದಿನಕ್ಕೆ 350 ಕ್ಕೂ ಹೆಚ್ಚು ಮಾದರಿಗಳಿಗೆ ಏರಿದೆ ಎಂದು ಕೇಂದ್ರ ಸಚಿವ ಡಾ.ಜಿತೇಂದ್ರ ಸಿಂಗ್ ಹೇಳಿದ್ದಾರೆ. ಇದೊಂದು ದೊಡ್ಡ ಸಾಧನೆಯಾಗಿದೆ, ಏಕೆಂದರೆ ಸುಮಾರು ಎರಡು ಮೂರು ವಾರಗಳ ಹಿಂದೆ, ದಿನಕ್ಕೆ 50 ಮಾದರಿಗಳನ್ನು ಪರೀಕ್ಷಿಸುವ ಸೌಲಭ್ಯವೂ ಇರಲಿಲ್ಲ ಎಂದು ಅವರು ತಿಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿನ ಕೊರೊನಾ ಆರೋಗ್ಯ ಸೌಲಭ್ಯಗಳ ಬಗ್ಗೆ ವಿವರವಾದ ಆಡಿಯೋ-ಸಂವಾದದ ನಂತರ, ಡಾ. ಜಿತೇಂದ್ರ ಸಿಂಗ್ ಅವರು ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿ ಪ್ರದೇಶ ಸರ್ಕಾರವನ್ನು, ವಿಶೇಷವಾಗಿ ಲಾಕ್ ಡೌನ್ ಅವಧಿಯಲ್ಲಿ ತಮ್ಮ ಕೊರೊನಾ ಆರೈಕೆ ಮತ್ತು ತಡೆಗಟ್ಟುವ ಸಾಮರ್ಥ್ಯದಲ್ಲಿ ಪ್ರಮುಖ ಏರಿಕೆ ತಂದ ಆರೋಗ್ಯ ಅಧಿಕಾರಿಗಳನ್ನು ಶ್ಲಾಘಿಸಿದರು, ಆರೋಗ್ಯ ಆಡಳಿತ ಮತ್ತು ಕೇಂದ್ರಾಡಳಿತ ಪ್ರದೇಶದ ವೈದ್ಯಕೀಯ ವೃತ್ತಿಪರರ ಸಮರ್ಪಿತ ತಂಡವನ್ನು ಸಚಿವರು ಅಭಿನಂದಿಸಿದರು. ಜಮ್ಮು ಮತ್ತು ಕಾಶ್ಮೀರದ ಆರೋಗ್ಯ ಇಲಾಖೆಯ ಹಣಕಾಸು ಆಯುಕ್ತ ಅಟಲ್ ಡಲ್ಲೂ ಅವರ ಶ್ರದ್ಧೆ ಮತ್ತು ಕೇಂದ್ರ ಸರ್ಕಾರದ ಅಧಿಕಾರಿಗಳೊಂದಿಗೆ ನಿಕಟ ಹೊಂದಾಣಿಕೆಗಾಗಿ ಅವರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಮೊದಲು ದಿನಕ್ಕೆ ಕೇವಲ 50 ಕೊರೊನಾ ಮಾದರಿಗಳನ್ನು ಕಳುಹಿಸಲು ಮಾತ್ರ ಸಾಧ್ಯವಾಗುತ್ತಿತ್ತು, ಅದು ಈಗ ಕೆಲವೇ ದಿನಗಳಲ್ಲಿ ಏಳರಿಂದ ಎಂಟು ಪಟ್ಟು ಹೆಚ್ಚಾಗಿದೆ. ಇದು ದೊಡ್ಡ ಸಂಖ್ಯೆಯಲ್ಲಿ ವೇಗವಾಗಿ ರೋಗ ಪತ್ತೆಹಚ್ಚಲು ಪ್ರಮುಖ ಕಾರಣವಾಗಿದೆ ಎಂದು ಡಾ.ಜಿತೇಂದ್ರ ಸಿಂಗ್ ವಿವರಿಸಿದರು.

ಇತರ ಹಲವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹೋಲಿಸಿದರೆ, ಕೊರೊನಾ ಸಾಂಕ್ರಾಮಿಕದ ಸವಾಲನ್ನು ಎದುರಿಸಲು ಜಮ್ಮು ಮತ್ತು ಕಾಶ್ಮೀರ ತನ್ನ ಆರೋಗ್ಯ ಮೂಲಸೌಕರ್ಯಗಳನ್ನು ಮೇಲ್ದರ್ಜೆಗೇರಿಸುವಲ್ಲಿ ಮುಂದಿದೆ ಎಂದು ಡಾ.ಜಿತೇಂದ್ರ ಸಿಂಗ್ ಹೇಳಿದರು. ಉದಾಹರಣೆಗೆ, ಪ್ರತ್ಯೇಕ ಹಾಸಿಗೆಗಳ ಸಂಖ್ಯೆ 1533 ರಿಂದ 2372 ಹಾಸಿಗೆಗಳಿಗೆ ಏರಿದೆ ಮತ್ತು ಇನ್ನೂ 1689 ಹೆಚ್ಚುವರಿ ಹಾಸಿಗೆಗಳು ಸಿದ್ಧವಾಗುತ್ತಿವೆ ಎಂದು ಅವರು ಹೇಳಿದರು.
ಕೋವಿಡ್ ಮೀಸಲು ಆಸ್ಪತ್ರೆಗಳನ್ನು ಸ್ಥಾಪಿಸಿದವರಲ್ಲಿ ಜಮ್ಮು ಮತ್ತು ಕಾಶ್ಮೀರ ಮೊದಲ ಸ್ಥಾನದಲ್ಲಿದೆ. ಈಗ ಅವುಗಳ ಸಂಖ್ಯೆ 17 ಕ್ಕೆ ಏರಿದೆ ಎಂದು ಡಾ.ಜಿತೇಂದ್ರ ಸಿಂಗ್ ಹೇಳಿದರು, ಅಗತ್ಯವಿರುವ ಕೋವಿಡ್ ರೋಗಿಗಳಿಗೆ ಗೊತ್ತುಪಡಿಸಿದ ಐಸಿಯು ಹಾಸಿಗೆಗಳ ಸಂಖ್ಯೆಯನ್ನು ಸಹ 25 ರಿಂದ 209 ಕ್ಕೆ ಹೆಚ್ಚಿಸಲಾಗಿದೆ ಎಂದರು.
ವೆಂಟಿಲೇಟರ್ಗಳ ಲಭ್ಯತೆಯ ಬಗೆಗಿನ ಾತಂಕಗಳನ್ನು ನಿವಾರಿಸಿದ ಡಾ.ಜಿತೇಂದ್ರ ಸಿಂಗ್, ಸಂಭವನೀಯ ಕೊರೊನಾ ರೋಗಿಗಳಿಗೆ ಗೊತ್ತುಪಡಿಸಿದ ವೆಂಟಿಲೇಟರ್ಗಳು, ಕೆಲವು ದಿನಗಳ ಹಿಂದೆ 46 ಇದ್ದವು, ಈಗ ಅವು 209 ಆಗಿವೆ. ಅಂತೆಯೇ, ಕ್ವಾರಂಟೈನ್ ಹಾಸಿಗೆಗಳ ಸಂಖ್ಯೆ ಸುಮಾರು 7,909 ರಿಂದ 26,943 ಕ್ಕೆ ನಾಲ್ಕು ಪಟ್ಟು ಹೆಚ್ಚಾಗಿದೆ ಎಂದರು.
ಸೋಂಕುನಿವಾರಕ ಸುರಂಗಗಳ ಸ್ಥಾಪನೆ ಅಥವಾ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಆಯುಷ್ ಔಷಧಿಗಳ ವಿತರಣೆಯಂತಹ ಕೇಂದ್ರ ಸರ್ಕಾರದ ವಿವಿಧ ಮಾರ್ಗಸೂಚಿಗಳನ್ನು ಪ್ರಾಮಾಣಿಕವಾಗಿ ಪಾಲಿಸುತ್ತಿರುವುದಕ್ಕಾಗಿ ಕೇಂದ್ರಾಡಳಿತ ಪ್ರದೇಶ ಸರ್ಕಾರಕ್ಕೆ ಡಾ.ಜಿತೇಂದ್ರ ಸಿಂಗ್ ಮೆಚ್ಚುಗೆ ವ್ಯಕ್ತಪಡಿಸಿದರು.
***
(Release ID: 1614687)