ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ

ರಾಷ್ಟ್ರೀಯ ಮಟ್ಟದ ಕೋವಿಡ್–19 ಲಾಕ್ ಡೌನ್ ಹೊರತಾಗಿಯೂ ಶೇ 100ಕ್ಕಿಂತ ಹೆಚ್ಚು ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ರೈತ ಸಮುದಾಯಕ್ಕೆ ಸಮರ್ಪಕ ರಸಗೊಬ್ಬರದ ಪೂರೈಕೆಯನ್ನು ಖಚಿತಪಡಿಸುತ್ತಿರುವ ರಾಷ್ಟ್ರೀಯ ರಸಗೊಬ್ಬರ ನಿಯಮಿತ (ಎನ್ ಎಫ್ ಎಲ್)

Posted On: 14 APR 2020 3:31PM by PIB Bengaluru

ರಾಷ್ಟ್ರೀಯ ಮಟ್ಟದ ಕೋವಿಡ್–19 ಲಾಕ್ ಡೌನ್ ಹೊರತಾಗಿಯೂ ಶೇ 100ಕ್ಕಿಂತ ಹೆಚ್ಚು ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ರೈತ ಸಮುದಾಯಕ್ಕೆ ಸಮರ್ಪಕ ರಸಗೊಬ್ಬರದ ಪೂರೈಕೆಯನ್ನು ಖಚಿತಪಡಿಸುತ್ತಿರುವ ರಾಷ್ಟ್ರೀಯ ರಸಗೊಬ್ಬರ ನಿಯಮಿತ (ಎನ್ ಎಫ್ ಎಲ್)

ಅಡೆತಡೆಯಿಲ್ಲದೆ ರೈತರಿಗೆ ಯೂರಿಯಾ ರಸಗೊಬ್ಬರಗಳು ಲಭ್ಯ
 

ಪ್ರಮುಖ ರಸಗೊಬ್ಬರ ಕಂಪನಿಗಳಲ್ಲಿ ಒಂದಾದ ರಾಷ್ಟ್ರೀಯ ರಸಗೊಬ್ಬರ ನಿಯಮಿತ, ರಸಗೊಬ್ಬರ ಇಲಾಖೆ, ಭಾರತ ಸರ್ಕಾರದ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದಡಿಯಲ್ಲಿ ದೇಶದಲ್ಲಿ ಕೋವಿಡ್ – 19 ರಿಂದಾಗಿರುವ ಲಾಕ್ ಡೌನ್ ಸಂದರ್ಭದಲ್ಲಿ ರೈತಸಮುದಾಯಕ್ಕೆ ರಸಗೊಬ್ಬರದ ಸಮರ್ಪಕ ಪೂರೈಕೆಯನ್ನು ಖಚಿತಪಡಿಸುತ್ತಿದೆ.

ನಂಗಲ್, ಭಟಿಂಡಾ, ಪಾಣಿಪತ್ ಮತ್ತು ವಿಜೈಪುರದ 2 ಘಟಕಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ಎನ್ ಎಫ್ ಎಲ್ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಮನೋಜ್ ಮಿಶ್ರಾ ತಿಳಿಸಿದ್ದಾರೆ. 5 ಘಟಕಗಳು ಪ್ರತಿದಿನ 11 ಸಾವಿರ ಮೆಟ್ರಿಕ್ ಟನ್ ಗಿಂತ ಹೆಚ್ಚು ರಸಗೊಬ್ಬರ ಉತ್ಪಾದನೆ ಮಾಡುತ್ತಿವೆ ಮತ್ತು ಮಾರುಕಟ್ಟೆಗೆ ನಿತ್ಯವೂ ರವಾನಿಸಲಾಗುತ್ತಿದೆ.   

ವಿಶೇಷವಾಗಿ ದೇಶದ ಕೃಷಿಕ ಸಮುದಾಯಕ್ಕೆ ಸರ್ಕಾರದ ಬದ್ಧತೆಯನ್ನು ಪೂರೈಸುವಲ್ಲಿ ಸಂದಿಗ್ಧ ಪರಿಸ್ಥಿತಿಯಲ್ಲೂ ಎನ್ ಎಲ್ ಎಫ್ ಈ ಘಟಕಗಳ ಗರಿಷ್ಠ ಕಾರ್ಯಾಚರಣೆಯನ್ನು ನಿರ್ವಹಿಸುತ್ತಿರುವುದು ಒಂದು ಯಶೋಗಾಥೆಯೇ ಆಗಿದೆ

ಭಾರತ ಸರ್ಕಾರ ಅವಶ್ಯಕ ವಸ್ತುಗಳ ಕಾಯ್ದೆಯಡಿ ದೇಶದಲ್ಲಿ ರಸಗೊಬ್ಬರ ಕಾರ್ಖಾನೆಗಳ ಕಾರ್ಯಾಚರಣೆಗೆ ಅನುಮತಿ ನೀಡಿದೆ. ಇದರಿಂದ ಕೃಷಿ ಕ್ಷೇತ್ರ ಲಾಕ್ ಡೌನ್ ಅಡೆತಡೆಯನ್ನು ಎದುರಿಸುವುದಿಲ್ಲ ಮತ್ತು ಮುಂಬರುವ ಮುಂಗಾರು ಹಂಗಾಮಿನಲ್ಲಿ ಸಾಕಷ್ಟು ರಸಗೊಬ್ಬರಗಳನ್ನು ಪಡೆಯಬಹುದಾಗಿದೆ.

ಲೋಡಿಂಗ್ ಮತ್ತ ಅನ್ ಲೋಡಿಂಗ್, ರವಾನೆ ಮತ್ತು ವಿತರಣೆ ಚಟುವಟಿಕೆಗಳು ಈ ಘಟಕಗಳಲ್ಲಿ ಭರದಿಂದ ಸಾಗಿರುವುದರಿಂದ ಕೋವಿಡ್ – 19 ಹರಡುವಿಕೆಯನ್ನು ತಪ್ಪಿಸಲು ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕೋವಿಡ್ – 19 ಹರಡುವಿಕೆ ವಿರುದ್ಧ ಸಾಕಷ್ಟು ತಡೆಗಟ್ಟುವ ಕ್ರಮಗಳನ್ನು ಖಚಿತಪಡಿಸಿಕೊಳ್ಲಲು ಎಲ್ಲ ಘಟಕಗಳಿಗೆ ವಿಶೇಷ ಕಾರ್ಯಪಡೆಯನ್ನು ನಿಯೋಜಿಸಲಾಗಿದೆ. ಈ ಘಟಕಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ ಮತ್ತು ಎಲ್ಲ ಕಾರ್ಮಿಕರಿಗೆ ಮಾಸ್ಕ್ ಗಳನ್ನು ಒದಗಿಸಲಾಗುತ್ತಿದೆ. ಆಗಾಗ್ಗೆ ಕೈತೊಳೆಯುವುದನ್ನು ಖಚಿತಪಡಿಸಲಾಗುತ್ತಿದೆ.

ಅಗತ್ಯವಿರುವವರಿಗೆ ಆಹಾರ ಮತ್ತು ಔಷಧಿಗಳು ಮುಂತಾದ ಅಗತ್ಯ ವಸ್ತುಗಳನ್ನು ವಿತರಿಸುವಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುವ ಮೂಲಕ ಕೊರೊನಾ ವೈರಾಣು ಹರಡುವುದನ್ನು ತಡೆಯುವ ಪ್ರಯತ್ನದಲ್ಲಿ ಎನ್ ಎಫ್ ಎಲ್ ಮತ್ತು ಅದರ ಸಿಬ್ಬಂದಿ ಸರ್ಕಾರಕ್ಕೆ ಸಹಾಯ ಮಾಡುತ್ತಿದೆ. ಅವರು ತಮ್ಮ ಒಂದು ತಿಂಗಳ ಸಂಬಳವನ್ನು ಸಹ ಪಿ ಎಂ ಕೇರ್ಸ್ ನಿಧಿಗೆ ನೀಡಿದ್ದಾರೆ.

***



(Release ID: 1614573) Visitor Counter : 135