ಸಿಬ್ಬಂದಿ, ಸಾರ್ವಜನಿಕ ಅಹವಾಲು ಮತ್ತು ಪಿಂಚಣಿ ಸಚಿವಾಲಯ

ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿಯ ಮಾಧ್ಯಮ ಪ್ರಕಟಣೆ

Posted On: 14 APR 2020 3:51PM by PIB Bengaluru

ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿಯ ಮಾಧ್ಯಮ ಪ್ರಕಟಣೆ

 

ಕೊರೊನಾ ವೈರಾಣು ಪ್ರಸರಣದ ತಡೆಗಾಗಿ ದೇಶದಾದ್ಯಂತ ಲಾಕ್ ಡೌನ್ ಜಾರಿ ಮಾಡಿರುವ ಹಿನ್ನೆಲೆಯಲ್ಲಿ ದೆಹಲಿಯ ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿಗೆ ಮತ್ತು ಅದರ ಶಾಖೆಗಳಿಗೆ 20.03.2020ರಿಂದ ಕಲಾಪ ನಡೆಸಲು ಸಾಧ್ಯವಾಗಿಲ್ಲ. ನ್ಯಾಯಾಧಿಕರಣದ ಕಾರ್ಯಚಟುವಟಿಕೆಗಳನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕವೂ ಸೌಲಭ್ಯದ ಅನುಪಸ್ಥಿತಿಯಿಂದ ಮತ್ತು ಅದನ್ನು ದಾಸ್ತಾನಿನ ಅಡಚಣೆಗಳಿಂದಾಗಿ ನಿರ್ವಹಿಸಲು ಸಾಧ್ಯವಾಗಿಲ್ಲ. ಭಾರತ ಸರ್ಕಾರವು ತೆಗೆದುಕೊಳ್ಳಬಹುದಾದ ನಿರ್ಧಾರವನ್ನು ಅವಲಂಬಿಸಿ 14.04.2020 ರ ನಂತರ ಪರಿಸ್ಥಿತಿಯನ್ನು ಪರಿಶೀಲಿಸಲು ಪ್ರಸ್ತಾಪಿಸಲಾಗಿತ್ತು.

ಇಂದು ಗೌರವಾನ್ವಿತ ಪ್ರಧಾನಮಂತ್ರಿಯವರು ದೇಶವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ, ಹಾಟ್ ಸ್ಪಾಟ್ ಹೊರತುಪಡಿಸಿ ಕೆಲವು ನಿರ್ದಿಷ್ಟ ಸ್ಥಳಗಳಲ್ಲಿ 20.04.2020ರಂದು ಪರಿಶೀಲನೆಗೆ ಒಳಪಟ್ಟು, 2020ರ ಮೇ 3ರವರೆಗೆ ಲಾಕ್ ಡೌನ್ ವಿಸ್ತರಿಸುವುದಾಗಿ ಪ್ರಕಟಿಸಿದ್ದಾರೆ. ಹೀಗಾಗಿ ಪ್ರಸಕ್ತ ಸನ್ನಿವೇಶವು 20.04.2020ರವರೆಗೆ ಹಾಗೆಯೇ ಮುಂದುವರಿಯಲಿದೆ ಮತ್ತು 20.04.2020ರಂದು ಹೊರಬೀಳುವ ಪ್ರಕಟಣೆಗೆ ಅನುಗುಣವಾಗಿ ನ್ಯಾಯಾಧಿಕರಣದ ಪೀಠಗಳ ಕಾರ್ಯನಿರ್ವಹಣೆಯ ಸಾಧ್ಯತೆಗಳನ್ನು ಪರಿಗಣಿಸಲಾಗುತ್ತದೆ.

ನ್ಯಾಯಾಧಿಕರಣದ ವಿವಿಧ ಶಾಖೆಗಳಿಗೆ ರಜೆಯ ಅವಧಿ ವಿಭಿನ್ನ ಕಾಲದಲ್ಲಿರುತ್ತದೆ. ಎರ್ನಾಕುಲಂ ಶಾಖೆಗೆ ಏಪ್ರಿಲ್ ಮಧ್ಯ ಭಾಗದಲ್ಲಿ ಆರಂಭವಾದರೆ, ಅದಾದ ಕೆಲವು ವಾರಗಳ ಬಳಿಕ ಬೆಂಗಳೂರು ಪೀಠ ರಜಾಕಾಲ ಆರಂಭಗೊಳ್ಳುತ್ತದೆ. ಇದೇ ರೀತಿಯ ಪ್ರಗತಿಯು ಉತ್ತರದ ಕಡೆಗೆ ನಡೆಯುತ್ತದೆ ಮತ್ತು ಪ್ರಧಾನ ಪೀಠಕ್ಕೆ ರಜೆ ಜೂನ್ 2020 ರಲ್ಲಿರುತ್ತದೆ.

ಕರೋನಾ ವೈರಾಣುವಿನ ಕಾರಣದಿಂದಾಗಿ ನ್ಯಾಯಪೀಠಗಳು ಕಾರ್ಯನಿರ್ವಹಿಸದ ಕೆಲಸದ ದಿನಗಳ ನಷ್ಟವನ್ನು ಸರಿದೂಗಿಸಬಹುದಾಗಿದ್ದು, ನ್ಯಾಯಪೀಠಗಳ ಕಾರ್ಯ ಪ್ರಾರಂಭವಾದ ನಂತರ ಆಯಾ ಬಾರ್ ಅಸೋಸಿಯೇಷನ್‌ಗಳೊಂದಿಗೆ ಸಮಾಲೋಚಿಸಿ ಇದನ್ನು ನಿರ್ಧರಿಸಲಾಗುತ್ತದೆ.

ವಕೀಲರುಗಳಿಂದ ಯಾವುದೇ ಪ್ರಕರಣದ ತುರ್ತು ವಿಚಾರಣೆಗೆ ಮನವಿಗಳು ಬಂದಲ್ಲಿ, ಅದನ್ನು ಪ್ರಧಾನ ರಿಜಿಸ್ಟ್ರಾರ್ ಗೆ ತಿಳಿಸಬೇಕು, ಅದಕ್ಕೆ ಪ್ರತಿಯಾಗಿ ಅವರು ಪ್ರಕರಣದಲ್ಲಿರುವ ತುರ್ತಿಗೆ ಅನುಗುಣವಾಗಿ ಸೂಕ್ತ ಸೂಚನೆ ನೀಡುತ್ತಾರೆ ಮತ್ತು ಅಗತ್ಯ ಕ್ರಮ ಕೈಗೊಳ್ಳುತ್ತಾರೆ.

ಸಿಬ್ಬಂದಿ ಯಾವುದೇ ಅಪಾಯಕಾರಿ ಸನ್ನಿವೇಶಕ್ಕೆ ಒಳಗಾಗದ ರೀತಿಯಲ್ಲಿ ಪ್ರಧಾನ ಪೀಠ ಮತ್ತು ಇತರ ಪೀಠಗಳು ಕಡಿಮೆ ಸಿಬ್ಬಂದಿಯೊಂದಿಗೆ ಕಾರ್ಯ ನಿರ್ವಹಿಸಬಹುದು. ಈ ಪೀಠಗಳ ರಿಜಿಸ್ಟ್ರಾರ್ ಗಳು ನೌಕರರನ್ನು ಗುರುತಿಸಿ ಅವರಿಗೆ ಪಾಳಿಯ ರೀತ್ಯ ಕರ್ತವ್ಯಕ್ಕೆ ನಿಯೋಜಿಸಬಹುದು.ಆಡಳಿತದ ಕಡೆಯ ತುರ್ತು ವಿಚಾರಗಳನ್ನು ಆನ್ ಲೈನ್ ಅಥವಾ ದೂರವಾಣಿಯ ಮೂಲಕ ಸಂಬಂಧಿತರೊಂದಿಗೆ ನಿರ್ವಹಿಸಬಹುದು.

 

***



(Release ID: 1614494) Visitor Counter : 159