ಕೃಷಿ ಸಚಿವಾಲಯ

ರಾಷ್ಟ್ರೀಯ ಕೃಷಿ ಮಾರುಕಟ್ಟೆ ಪೋರ್ಟಲ್‌ ಇ–ನ್ಯಾಮ್‌ 2020ರ ಏಪ್ರಿಲ್‌ 14ರಂದು ನಾಲ್ಕು ವರ್ಷ ಪೂರೈಸಲಿದೆ

Posted On: 13 APR 2020 8:56PM by PIB Bengaluru

ರಾಷ್ಟ್ರೀಯ ಕೃಷಿ ಮಾರುಕಟ್ಟೆ ಪೋರ್ಟಲ್ನ್ಯಾಮ್‌ 2020 ಏಪ್ರಿಲ್‌ 14ರಂದು ನಾಲ್ಕು ವರ್ಷ ಪೂರೈಸಲಿದೆ

ಕೃಷಿ ಉತ್ಪನ್ನಗಳಿಗೆ ಒಂದು ರಾಷ್ಟ್ರ, ಒಂದು ಮಾರುಕಟ್ಟೆಎನ್ನುವ ಪರಿಕಲ್ಪನೆಯನ್ನು ಸಾಕಾರಗೊಳಿಸಲು ಇದು ನೆರವಾಗಿದೆ

ಹೆಚ್ಚುವರಿಯಾಗಿ 415 ಮಂಡಿಗಳು ನ್ಯಾಮ್ಗೆ ಸೇರಲಿದ್ದು ಒಟ್ಟು ಮಂಡಿಗಳ ಸಂಖ್ಯೆ ಶೀಘ್ರ 1000ಕ್ಕೆ ತಲುಪಲಿದೆ

ಅಂದಾಜು 1.66 ಕೋಟಿ ರೈತರು ಮತ್ತು 1.28 ಲಕ್ಷ ವರ್ತಕರು ನ್ಯಾಮ್ವೇದಿಕೆಯಲ್ಲಿ ನೋಂದಣಿ

ನ್ಯಾಮ್ಆನ್ಲೈನ್ವೇದಿಕೆಯು ಭಾರತದ ಕೃಷಿ ಮಾರುಕಟ್ಟೆಯಲ್ಲಿ ಸುಧಾರಣೆ ತರುವಲ್ಲಿ ಮಹತ್ವದ ಪಾತ್ರ ವಹಿಸಿದೆ: ಶ್ರೀ ನರೇಂದ್ರ ಸಿಂಗ್ತೋಮರ್

ಪ್ರಸ್ತುತ ಕೋವಿಡ್‌–19 ಲಾಕ್ಡೌನ್ಸಂದರ್ಭದಲ್ಲಿ ಸಗಟು ಮಾರುಕಟ್ಟೆ ಮತ್ತು ವಿತರಣೆಯನ್ನು ಸಮರ್ಪಕವಾಗಿ ಕೈಗೊಳ್ಳಲು ನ್ಯಾಮ್ಅಡಿಯಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ

 

ರಾಷ್ಟ್ರೀಯ ಕೃಷಿ ಮಾರುಕಟ್ಟೆ ಪೋರ್ಟಲ್ನ್ಯಾಮ್‌ 2020 ಏಪ್ರಿಲ್‌ 14ರಂದು ನಾಲ್ಕು ವರ್ಷ ಪೂರೈಸಲಿದೆ. ಸಂದರ್ಭದಲ್ಲಿ ಮಾತನಾಡಿರುವ ಕೇಂದ್ರದ ಕೃಷಿ, ಸಹಕಾರ ಮತ್ತು ರೈತರ ಕಲ್ಯಾಣ ಸಚಿವ ಶ್ರೀ ನರೇಂದ್ರ ತೋಮರ್ಅವರುನ್ಯಾಮ್‌’ ಕೃಷಿ ಮಾರುಕಟ್ಟೆಯಲ್ಲಿ ಮಹತ್ವದ ಕ್ರಾಂತಿ ಮಾಡಿದ್ದು, ಸೃಜನಶೀಲ ಪರಿಕಲ್ಪನೆಯನ್ನು ರೂಪಿಸಿದೆ. ಇದರಿಂದ, ರೈತರಿಗೆ ಡಿಜಿಟಲ್ವಹಿವಾಟು ನಡೆಸಲು ಅವಕಾಶ ದೊರೆತಿದ್ದು, ಹಲವು ಮಾರುಕಟ್ಟೆಗಳು ಮತ್ತು ಖರೀದಿರಾರರ ಜತೆ ವಹಿವಾಟು ನಡೆಸಲು ಸಂಪರ್ಕ ಸಾಧಿಸಲು ಸಾಧ್ಯವಾಗುತ್ತಿದೆ. ಜತೆಗೆ ಪಾರದರ್ಶಕ ವಹಿವಾಟು ನಡೆಯುತ್ತಿದೆ. ಕೃಷಿ ಉತ್ಪನ್ನಗಳಿಗೆ ಉತ್ತಮ ದರ ದೊರೆಯುತ್ತಿದ್ದು, ರೈತರ ದುಡಿಮೆಗೆ ತಕ್ಕ ಫಲ ಲಭಿಸುತ್ತಿದೆ. ವ್ಯವಸ್ಥೆಯಿಂದ ಕೃಷಿ ಉತ್ಪನ್ನಗಳಿಗೆಒಂದು ರಾಷ್ಟ್ರ ಒಂದು ಮಾರುಕಟ್ಟೆಎನ್ನುವ ಕಲ್ಪನೆ ಸಾಕಾರಗೊಂಡಿದೆ. ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು 2016 ಏಪ್ರಿಲ್‌ 14ರಂದು 21 ಮಂಡಿಗಳಲ್ಲಿ ಪ್ರಧಾನಿ ಅವರು ನ್ಯಾಮ್ಗೆ ಚಾಲನೆ ನೀಡಿದ್ದರು. ಸದ್ಯ ವ್ಯವಸ್ಥೆಯು 16 ರಾಜ್ಯಗಳಲ್ಲಿ ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳ 585 ಮಂಡಿಗಳ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ವಿವರಿಸಿದರು.

ಹೆಚ್ಚುವರಿಯಾಗಿ 415 ಮಂಡಿಗಳು ನ್ಯಾಮ್ಗೆ ಸೇರಲಿವೆ. ಇದರಿಂದ ಒಟ್ಟು ಮಂಡಿಗಳ ಸಂಖ್ಯೆ ಶೀಘ್ರ 1000ಕ್ಕೆ ತಲುಪಲಿದೆ. ಆನ್ಲೈನ್ವೇದಿಕೆಯು ಭಾರತದಲ್ಲಿ ಕೃಷಿ ಮಾರುಕಟ್ಟೆಯ ಸುಧಾರಣೆಯಲ್ಲಿ ಅತಿ ದೊಡ್ಡ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಸಚಿವರು ತಿಳಿಸಿದರು.

ನ್ಯಾಮ್ಆನ್ಲೈನ್ವೇದಿಕೆ ಅಡಿಯಲ್ಲಿ 1.66 ಕೋಟಿ ರೈತರು ಮತ್ತು 1.28 ಲಕ್ಷಕ್ಕೂ ಹೆಚ್ಚು ವರ್ತಕರು ನೋಂದಣಿ ಮಾಡಿಸಿಕೊಂಡಿದ್ದಾರೆ. ನ್ಯಾಮ್ಪೋರ್ಟಲ್ನಲ್ಲಿ ಯಾವುದೇ ಸಮಯದಲ್ಲಿ ನೋಂದಣಿ ಮಾಡಿಸಿಕೊಳ್ಳಲು ರೈತರಿಗೆ ಮುಕ್ತ ಅವಕಾಶವಿದೆ. ತಮ್ಮ ಕೃಷಿ ಉತ್ಪನ್ನಗಳನ್ನು ಆನ್ಲೈನ್ನಲ್ಲಿ ವರ್ತಕರಿಗೆ ಮಾರಾಟ ಮಾಡಲು ಎಲ್ಲ ನ್ಯಾಮ್ಮಂಡಿಗಳ ಮೂಲಕ ಮಾರಾಟ ಮಾಡಬಹುದು. ವರ್ತಕರು ಸಹ ಯಾವುದೇ ಸ್ಥಳದಿಂದ ನ್ಯಾಮ್ಮೂಲಕ ಮಾರಾಟ ಮಾಡಲು ಬಿಡ್ಮಾಡಬಹುದು.

ಲಾಕ್ಡೌನ್ಸಮಯದಲ್ಲಿ ಕೃಷಿ ಉತ್ಪನ್ನಗಳ ಸಾಗಾಣಿಕೆಯಲ್ಲಿ ತೊಂದರೆಗಳನ್ನು ನಿವಾರಿಸಲು ಕ್ರಮಕೈಗೊಳ್ಳಲಾಗಿದೆ. ಸಕಾಲಕ್ಕೆ ಕೃಷಿ ಉತ್ಪನ್ನಗಳನ್ನು ಸಾಗಿಸಲು ನ್ಯಾಮ್ಆನ್ಲೈನ್ವೇದಿಕೆಯು ನೆರವಾಗಿದೆ. ಬ್ಲ್ಯಾಕ್ಬಕ್‌, ರಿವಿಗೊ, ಮಾ್ನಿ, ಟ್ರಕ್ಸುವಿಧಾ, ಟ್ರಕ್ಗುರು, ಟ್ರಾನ್ಸಿನ್ ಲಾಜಿಸ್ಟಿಕ್ಸ್‌, ಎಲೆಸ್ಟಿಕ್ರನ್ಮುಂತಾದ ಸಾರಿಗೆ ಕಂಪನಿಗಳ ಜತೆ ಸಂಪರ್ಕ ಸಾಧಿಸಿ ಕೃಷಿ ಉತ್ಪನ್ನಗಳನ್ನು ಸಾಗಿಸಲಾಗುತ್ತಿದೆ. ಇದರಿಂದ, ಮಂಡಿಯಿಂದ ವಿವಿಧ ಸ್ಥಳಗಳಿಗೆ ಕೃಷಿ ಉತ್ಪನ್ನಗಳನ್ನು ಸಾಗಿಸಲು ವರ್ತಕರಿಗೆ ಅನುಕೂಲವಾಗಿದೆ. ಆನ್ಲೈನ್ವ್ಯವಸ್ಥೆಯಿಂದ ವರ್ತಕರು 7.76 ಲಕ್ಷಕ್ಕೂ ಹೆಚ್ಚು ಟ್ರಕ್ಗಳ ಸೌಲಭ್ಯ ಪಡೆಯಲು ಸಾಧ್ಯವಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಕೋವಿಡ್‌–19 ಲಾಕ್ಡೌನ್ಸಂದರ್ಭದಲ್ಲಿ ಸಗಟ್ಟು ಮಾರುಕಟ್ಟೆಮತ್ತು ವಿತರಣೆಯ ಸರಪಳಿಯನ್ನು ಸಾಧ್ಯವಾದಷ್ಟು ವಿಕೇಂದ್ರೀಕರಣಗೊಳಿಸಲು ನ್ಯಾಮ್ಅಡಿಯಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ.

ಕೃಷಿ ಉತ್ಪನ್ನಗಳನ್ನು ಉಗ್ರಾಣಗಳ ಆಧಾರಿತ ವ್ಯಾಪಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಡಬ್ಲ್ಯೂಡಿಆರ್ಎನಲ್ಲಿ ನೋಂದಣಿಯಾದ ಉಗ್ರಾಣಗಳಿಂದ ಮಾರಾಟ ಮಾಡಬಹುದಾಗಿದೆ. ಇವುಗಳನ್ನು ಮಾರುಕಟ್ಟೆ ಎಂದು ಪರಿಭಾವಿಸಬಹುದಾಗಿದೆ. ಜೊತೆಗೆ ಎಫ್ಪಿಒ ವ್ಯಾಪಾರಕ್ಕೆ ಅವಕಾಶ ನೀಡಲಾಗಿದೆ. ಇದರಿಂದ, ಕೃಷಿ ಉತ್ಪನ್ನಗಳನ್ನು ಸುಲಭವಾಗಿ ಸಾಗಾಣಿಕೆಯ ತೊಂದರೆ ಇಲ್ಲದೆಯೇ ಮಾರಾಟ ಮಾಡಲು ಸಾಧ್ಯವಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ರೀತಿಯ ವಿವಿಧ ಪ್ರಯತ್ನಗಳಿಂದ ಕೋವಿಡ್‌–19 ಲಾಕ್ಡೌನ್ಸಂದರ್ಭದಲ್ಲಿ ರೈತರಿಗೆ, ಎಫ್ಪಿಒಗಳಿಗೆ, ಸಹಕಾರಿ ಸಂಸ್ಥೆಗಳಿಗೆ ಅನುಕೂಲವಾಗಿದೆ ಎಂದು ಸಚಿವ ಶ್ರೀ ತೋಮಾರ್ತಿಳಿಸಿದ್ದಾರೆ.

ಸಂದರ್ಭದಲ್ಲಿ ವಿವರ ನೀಡಿರುವ ಕೃಷಿ ಸಹಕಾರ ಮತ್ತು ರೈತರ ಕಲ್ಯಾಣ ಕಾರ್ಯದರ್ಶಿ ಶ್ರೀ ಸಂಜಯ್ಅಗರವಾಲ್ಅವರು, ನ್ಯಾಮ್ಕೇವಲ ಯೋಜನೆ ಅಲ್ಲ. ಕೊನೆಯ ಹಂತದಲ್ಲಿರುವ ರೈತರಿಗೂ ಅನುಕೂಲ ಕಲ್ಪಿಸುವ ವೇದಿಕೆಯಾಗಿದ್ದು, ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡುವ ವ್ಯವಸ್ಥೆಯನ್ನೇ ಬದಲಾಯಿಸುವುದಾಗಿದೆ ಎಂದು ತಿಳಿಸಿದ್ದಾರೆ. ವ್ಯವಸ್ಥೆಯಿಂದ ರೈತರಿಗೆ ಅಪಾರ ಲಾಭವಾಗಲಿದ್ದು, ಆದಾಯ ಹೆಚ್ಚಳವಾಗಲಿದೆ. ಕೃಷಿ ಉತ್ಪನ್ನಗಳಿಗೆ ಸ್ಪರ್ಧಾತ್ಮಕ ಮತ್ತು ಸಮರ್ಪಕ ದರ ಪಾರದರ್ಶಕವಾಗಿ ದೊರೆಯಲಿದೆ. ಜತೆಗೆ ಯಾವುದೇ ರೀತಿಯ ಹೆಚ್ಚುವರಿ ವೆಚ್ಚವೂ ಆಗುವುದಿಲ್ಲ ಎಂದು ವಿವರಿಸಿದ್ದಾರೆ.

ಆನ್ಲೈನ್ಮತ್ತು ಪಾರದರ್ಶಕ ಬಿಡ್ಡಿಂಗ್ವ್ಯವಸ್ಥೆಯು ನ್ಯಾಮ್ಪೋರ್ಟಲ್ಮೂಲಕ ವ್ಯಾಪಾರ ನಡೆಸುವಂತೆ ರೈತರನ್ನು ಪ್ರೋತ್ಸಾಹಿಸುತ್ತಿದೆ. ನ್ಯಾಮ್ಪೋರ್ಟಲ್ನಲ್ಲಿ ₹1 ಲಕ್ಷ ಕೋಟಿ ಮೊತ್ತದ 3.39 ಕೋಟಿ ಮೆಟ್ರಿಕ್ಟನ್ವಸ್ತುಗಳು ಮತ್ತು 37 ಲಕ್ಷ ಬಿದಿರುವ ಮತ್ತು ತೆಂಗಿನಕಾಯಿ ವಹಿವಾಟು ನಡೆಸಲಾಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಸಹಜ ಬೆಳವಣಿಗೆ ದರ (ಸಿಎಜಿಆರ್‌) ಶೇಕಡ 28 ಮತ್ತು ಶೇಕಡ 18ರಷ್ಟು ಮೌಲ್ಯದಷ್ಟು ಸಾಧಿಸಲಾಗಿತ್ತು.

ಇಡೀ ದೇಶದಾದ್ಯಂತ 2016–17ರಲ್ಲಿ ಪ್ರತಿ ಲಾಟ್ಗೆ ಎರಡು ಬಿಡ್ಮಾಡುತ್ತಿದ್ದರೆ 2019–20ರಲ್ಲಿ ನಾಲ್ಕು ಬಿಡ್ಗಳನ್ನು ಮಾಡಲಾಗುತ್ತಿದೆ. ಕೊಯ್ಲು ಮಾಡುವ ಸಮಯದಲ್ಲಿ ಆಂಧ್ರಪ್ರದೇಶದ ಅದೋನಿಯಂತಹ ಮಂಡಿಗಳಲ್ಲಿ ಪ್ರಮುಖವಾಗಿ ಹತ್ತಿ ಮಾರುಕಟ್ಟೆಗಳಲ್ಲಿ ಪ್ರತಿ ಲಾಟ್ಗೆ 15 ಬಿಡ್ಗಳನ್ನು ಮಾಡಲಾಗಿದೆ. ಇದರಿಂದ ಪಾರದರ್ಶಕವಾಗಿ ಮತ್ತು ಸ್ಪರ್ಧಾತ್ಮಕವಾಗಿ ರೈತರಿಗೆ ಉತ್ತಮ ದರ ದೊರೆಯಲು ಪೂರಕವಾಗಿದೆ.

ಆರಂಭದಲ್ಲಿ 25 ವಸ್ತುಗಳ ವಹಿವಾಟಿಗೆ ಚಾಲನೆ ನೀಡಲಾಗಿತ್ತು. ವ್ಯಾಪಾರ ಈಗ 150 ವಸ್ತುಗಳನ್ನು ಮಾರಾಟ ಮಾಡಲಾಗುತ್ತಿದೆ. ಇದಕ್ಕೆ ನ್ಯಾಮ್ವೇದಿಕೆಯಾಗಿದೆ. ನ್ಯಾಮ್ಮಂಡಿಗಳಲ್ಲಿ ಗುಣಮಟ್ಟದ ಪರೀಕ್ಷೆ ಸೌಲಭ್ಯವನ್ನು ಸಹ ಕಲ್ಪಿಸಲಾಗಿದೆ. ಇದರಿಂದ, ರೈತರಿಗೆ ಕೃಷಿ ಉತ್ಪನ್ನಗಳ ಗುಣಮಟ್ಟಕ್ಕೆ ತಕ್ಕಂತೆ ಬೆಲೆ ದೊರೆಯುತ್ತದೆ. 2016–17ರಲ್ಲಿ ಲಾಟ್ಗಳ ಗುಣಮಟ್ಟವನ್ನು ಪರಿಶೀಲಿಸುವ ಸಂಖ್ಯೆ 1ಲಕ್ಷ ಇದ್ದರೆ, 2019–20ರಲ್ಲಿ 37 ಲಕ್ಷ ಲಾಟ್ಗಳಿಗೆ ಏರಿದೆ.

ನ್ಯಾಮ್ಪೋರ್ಟಲ್ಅಥವಾ ಮೊಬೈಲ್ಆ್ಯಪ್ಅನ್ನು ರೈತ ಸ್ನೇಹಿಯನ್ನಾಗಿ ಮಾಡಲಾಗಿದೆ. ಮುಂಚಿತವಾಗಿಯೇ ಲಾಟ್ಅನ್ನು ನೋಂದಣಿ ಮಾಡುವ ವ್ಯವಸ್ಥೆ ರೂಪಿಸಲಾಗಿದೆ. ಇದರಿಂದ ರೈತರು ಮಂಡಿಯ ಗೇಟುಗಳಲ್ಲಿ ಹೆಚ್ಚುವ ಹೊತ್ತು ಕಾಯಬೇಕಾಗಿಲ್ಲ. ಜತೆಗೆ, ಸುಗಮವಾಗಿ ಗೇಟ್ಗಳಲ್ಲಿ ದಾಖಲೆಯಾಗಲಿದೆ. ರೈತರು ಈಗ ಲಾಟ್ಗಳ ಪರಿಶೀಲನೆ ಮಾಡಬಹುದು. ರೈತರು ಲಾಟ್ಗಳನ್ನು ಬಿಡ್ಮಾಡುವುದನ್ನು ಸಹ ಮೊಬೈಲ್ಮೂಲಕ ನೋಡಬಹುದು. ರೈತರು ಸಮೀಪದ ಮಂಡಿಗಳಲ್ಲಿನ ನೈಜ ಮಾಹಿತಿಯನ್ನು ಸಹ ವೀಕ್ಷಿಸಬಹುದಾಗಿದೆ. ಎಲೆಕ್ಟ್ರಾನಿಕ್ತೂಕದ ಯಂತ್ರಗಳ ಮೂಲಕ ವಸ್ತುಗಳನ್ನು ಸರಿಯಾಗಿ ತೂಕ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ. ನ್ಯಾಮ್ಪೋರ್ಟಲ್ನಲ್ಲಿ ಬಿಡ್ಡಿಂಗ್ಮಾಡಿದ ಮೇಲೆ ತೂಕ ಮಾಡಬಹುದಾಗಿದೆ. ಇದರಿಂದ ತೂಕದಲ್ಲಿಯೂ ಪಾರದರ್ಶಕತೆ ತರಲಾಗಿದೆ. ‘ಭೀಮ್‌’ ಪೇಮೆಂಟ್ಸೌಲಭ್ಯ ಬಳಸಿಕೊಂಡು ವರ್ತಕರು ರೈತರಿಗೆ ನೇರವಾಗಿ ಹಣ ಪಾವತಿಸಬಹುದಾಗಿದೆ.

ವರ್ತಕರಿಗೆ ಹೆಚ್ಚುವರಿಯಾಗಿಆನ್ದಿ ಗೋ’ (ಒಟಿಜಿ) ಸೌಲಭ್ಯ ಕಲ್ಪಿಸಲಾಗಿದೆ. ಖರೀದಿದಾರರು ಮಂಡಿಗಳಲ್ಲಿ ಭೌತಿಕವಾಗಿ ಇಲ್ಲದಿದ್ದರೂ ಯಾವುದೇ ಸ್ಥಳದಿಂದ ಬಿಡ್ಮಾಡುವ ಅವಕಾಶವಿದೆ. ನ್ಯಾಮ್ಶಾಪಿಂಗ್ಕಾರ್ಟ್ಸೌಲಭ್ಯವನ್ನು ವರ್ತಕರ ಲಾಗಿನ್ನಲ್ಲಿ ಪಡೆಯಬಹುದಾಗಿದೆ. ವಿವಿಧ ಇನ್ವಾಯ್ಸ್ಗಳಿಗೆ ಒಂದೇ ಪೆಮೇಂಟ್ವಹಿವಾಟು, ಏಕೀಕೃತ ವ್ಯಾಪಾರ ಲೈಸನ್ಸ್ಗೆ ಆನ್ಲೈನ್ನೋಂದಣಿ ವ್ಯವಸ್ಥೆಯನ್ನು ಸಹ ರೂಪಿಸಲಾಗಿದೆ. ವರ್ತಕರಲ್ಲಿಯೂ ಹೆಚ್ಚು ವಿಶ್ವಾಸ ಮೂಡಿಸಲು ವಿವಿಧ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇವು ಕೆಳಗಿನಂತಿವೆ.

* ನ್ಯಾಮ್ಮೊಬೈಲ್ಆ್ಯಪ್ಮೂಲಕ ವಸ್ತುಗಳನ್ನು 360 ಡಿಗ್ರಿಯಲ್ಲಿ ಚಿತ್ರಗಳನ್ನು ಸೆರೆ ಹಿಡಿಯುವುದು.

* ಪರಿಶೀಲನೆ ನಡೆಸುವವರು ಪ್ರಯೋಗಾಲಯದ 2/3 2ಡಿ ಚಿತ್ರಗಳನ್ನು ಅಪ್ಲೋಡ್ಮಾಡಲಾಗುತ್ತಿದೆ.

* ವರ್ತಕರಿಗೆ ವಸ್ತುಗಳ ಬಗ್ಗೆ ವಿಶ್ವಾಸ ಮೂಡಲು ಮಾದರಿ ಪ್ರಕ್ರಿಯೆಗಳ 2ಡಿ ಚಿತ್ರಗಳನ್ನು ಅಪ್ಲೌಡ್ಮಾಡಲಾಗುವುದು.

 

ನ್ಯಾಮ್ವ್ಯವಸ್ಥೆಗೆ ಮತ್ತಷ್ಟು ಉತ್ತೇಜನ ನೀಡಲು ಹಾಗೂ ರೈತರು ಮತ್ತು ವರ್ತಕರ ನಡುವೆ ನೇರ ಸಂಪರ್ಕ ಸಾಧಿಸಲು ನ್ಯಾಮ್ವೇದಿಕೆ ಅಡಿಯಲ್ಲಿ 16 ರಾಜ್ಯಗಳ 977 ರೈತರ ಉತ್ಪನ್ನ ಸಂಘಟನೆಗಳನ್ನು ಒಗ್ಗೂಡಿಸಲಾಗಿದೆ.

ಜಾರ್ಖಂಡ್ನಂತಹ ರಾಜ್ಯಗಳಲ್ಲಿ ರಾಷ್ಟ್ರೀಯ ಕೃಷಿ ಮಾರುಕಟ್ಟೆ (ನ್ಯಾಮ್‌) ಮೂಲಕಫಾರ್ಮ್ಗೇಟ್‌’ ವ್ಯಾಪಾರವನ್ನು ಆರಂಭಿಸಿವೆ. ವ್ಯವಸ್ಥೆಯಲ್ಲಿ ರೈತರು ಎಪಿಎಂಸಿಗೆ ತೆರಳದೆಯೇ ತಮ್ಮ ಕೃಷಿ ಉತ್ಪನ್ನಗಳ ವಿವರಗಳನ್ನು ಚಿತ್ರಗಳ ಸಮೇತ ನ್ಯಾಮ್ಪೋರ್ಟ್ನಲ್ಲಿ ಅಪ್ಲೋಡ್ಮಾಡುತ್ತಿದ್ದಾರೆ. ಇದೇ ರೀತಿ ಎಫ್ಪಿಒಗಳು ಸಹ ತಮ್ಮ ಉತ್ಪನ್ನಗಳ ವ್ಯಾಪಾರಕ್ಕೆ ನ್ಯಾಮ್ಬಳಸಿಕೊಳ್ಳುತ್ತಿದ್ದಾರೆ.

ನ್ಯಾಮ್ಪೋರ್ಟಲ್ವೇದಿಕೆಯು ಮಂಡಿಗಳ ನಡುವೆ ಸಂಪರ್ಕ ಸಾಧಿಸುವ ಜತೆಗೆ ಈಗ ಅಂತರರಾಜ್ಯ ಮಂಡಿಗಳ ಜತೆಯೂ ಸಂಪರ್ಕ ಸಾಧಿಸುತ್ತಿವೆ. ಇದುವರೆಗೆ 13 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಅಂತರರಾಜ್ಯ ವ್ಯಾಪಾರದಲ್ಲಿ ಪಾಲ್ಗೊಂಡಿವೆ. ಉತ್ತರ ಪ್ರದೇಶ, ಉತ್ತರಾಖಂಡ, ಆಂಧ್ರಪ್ರದೇಶ, ತೆಲಂಗಾಣ, ರಾಜಸ್ಥಾನ, ಗುಜರಾತ್‌, ಮಹಾರಾಷ್ಟ್ರ, ಮಧ್ಯಪ್ರದೇಶ, ಚಂಡೀಗಡ, ಹಿಮಾಚಲ ಪ್ರದೇಶ, ಹರಿಯಾಣ, ಜಾರ್ಖಂಡ್ಮತ್ತು ತಮಿಳುನಾಡು ರಾಜ್ಯಗಳು ವಹಿವಾಟಿನಲ್ಲಿ ತೊಡಗಿಸಿಕೊಂಡಿವೆ. ತರಕಾರಿ, ಬೇಳೆಗಳು, ಮಸಾಲಾ ಪದಾರ್ಥಗಳು ಸೇರಿದಂತೆ 20 ಉತ್ಪನ್ನಗಳ ಅಂತರರಾಜ್ಯ ವಹಿವಾಟು ನಡೆಯಿತು.

***


(Release ID: 1614316) Visitor Counter : 487