ವಸತಿ ಮತ್ತು ನಗರ ಬಡತನ ನಿರ್ಮೂಲನೆ ಸಚಿವಾಲಯ
ಎಸ್ ಬಿ ಎಂ-ಅರ್ಬನ್ ಅಡಿ ಕ್ಷಿಪ್ರ ಬಿಕ್ಕಟ್ಟು ನಿರ್ವಹಣಾ ಕಾರ್ಯಾಚರಣೆ ಯೋಜನೆ ರೂಪಿಸಿದ ಸೂರತ್
Posted On:
13 APR 2020 3:34PM by PIB Bengaluru
ಎಸ್ ಬಿ ಎಂ-ಅರ್ಬನ್ ಅಡಿ ಕ್ಷಿಪ್ರ ಬಿಕ್ಕಟ್ಟು ನಿರ್ವಹಣಾ ಕಾರ್ಯಾಚರಣೆ ಯೋಜನೆ ರೂಪಿಸಿದ ಸೂರತ್
ಡೈಮಂಡ್ ಸಿಟಿ ಎಂದು ಪ್ರಸಿದ್ಧವಾದ ಸೂರತ್, ಗುಜರಾತ್ ನ ವಿವಿಧ ಭಾಗಗಳಿಂದ ಮತ್ತು ಇತರ ರಾಜ್ಯಗಳಿಂದ ಜನರು ವಲಸೆ ಬರುವುದರಿಂದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಭಾರತದ ಕ್ರಿಯಾಶೀಲ ನಗರಗಳಲ್ಲಿ ಒಂದಾಗಿದೆ. ಒಡಿಎಫ್++ ಸ್ಥಾನಮಾನ ಹೊಂದಿದ ಕೆಲವು ಪ್ರಮುಖ ನಗರಗಳಲ್ಲಿ ಒಂದಾದ ಸೂರತ್ ಸ್ವಚ್ಛತಾ ಅಭಿಯಾನದ ಪಯಣದಲ್ಲಿ ಅತ್ಯಂತ ಪ್ರೇರಣಾದಾಯಕ ಕೆಲಸ ಮಾಡಿದೆ. ಕೋವಿಡ್ – 19 ಸೋಂಕು ಹರಡುವಿಕೆ ಜಾಗತಿಕ ಬಿಕ್ಕಟ್ಟಾಗಿ ಪರಿಣಮಿಸಿ, ಭಾರತ ಮತ್ತು ಅದರ ನಗರಗಳನ್ನು ಬಾಧಿಸಿದಾಗ ಕ್ಷಿಪ್ರ ಬಿಕ್ಕಟ್ಟು ನಿರ್ವಹಣಾ ಕಾರ್ಯಾಚರಣೆ ಯೋಜನೆಯನ್ನು ಅಭಿವೃದ್ಧಿಪಡಿಸಿ ಜಾರಿಗೆ ತರುವ ಮೂಲಕ ತನ್ನ ನಾಗರಿಕರಿಗೆ ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸಲು ಮತ್ತು ಅವರನ್ನು ಕಾಪಾಡುವಲ್ಲಿ ಸೂರತ್ ಇಂಥದೇ ಉತ್ಸಾಹ ತೋರಿದೆ ಮತ್ತು ಇದು ಗುಜರಾತ್ ಸರ್ಕಾರಕ್ಕೆ ಅನುಸರಿಸಬಹುದಾದ ನೀಲನಕ್ಷೆಯಾಗಿ ಹೊರಹೊಮ್ಮಿದೆ.
ಸಾಂಕ್ರಾಮಿಕ ರೋಗ ಹರಡುವಿಕೆ ತ್ರಿಕೋಣ (ಪ್ರಸರಕ/ವಾಹಕ – ಧಾರಕ – ಪರಿಸರದ ಅಂಶಗಳು), ಶಂಕಿತ ಪ್ರಕರಣಗಳನ್ನು ಮುಂಚಿತವಾಗಿಯೇ ಪತ್ತೆ ಹಚ್ಚುವುದು ಮತ್ತು ಕೋವಿಡ್ – 19 ಧೃಡಪಡಿಸಲಾದ ಪ್ರಕರಣಗಳಿಗೆ ಸೂಕ್ತ ಚಿಕಿತ್ಸೆ ಒದಗಿಸುವುದರ ಮೂಲಕ ಪ್ರಸರಣ ಸರಪಳಿಯನ್ನು ತುಂಡರಿಸುವ ಮೂಲಕ ಮಾನವನಿಂದ ಮಾನವನಿಗೆ ಹರಡುವುದನ್ನು ಕಡಿಮೆಗೊಳಿಸುವ ಸ್ಪಷ್ಟ ಉದ್ದೇಶಗಳೊಂದಿಗೆ “3 – ಟಿ ಸೂತ್ರ” - ಕೋವಿಡ್ – 19 ರ ವಿರುದ್ಧ ಹೋರಾಡಲು ಪತ್ತೆಹಚ್ಚು, ಪರೀಕ್ಷಿಸು ಮತ್ತು ಚಿಕಿತ್ಸೆ ನೀಡು ಎಂಬ ತ್ರಿವಿಧ ವಿಧಾನಗಳನ್ನು ಎಸ್ ಎಂಸಿ ಅಳವಡಿಸಿಕೊಂಡಿದೆ,
ಸೂರತ್ ನಲ್ಲಿ ಗೃಹ ಕ್ವಾರಂಟೈನ್ ನಲ್ಲಿ ಇರುವವರ ನಕ್ಷಾ ಚಿತ್ರ
ಸೂರತ್ ನಲ್ಲಿ ಗೃಹ ಕ್ವಾರಂಟೈನ್ ನಲ್ಲಿ ಇರುವವರನ್ನು ಪತ್ತೆ ಹಚ್ಚುವುದು
ಎಲ್ಲ ಶಂಕಿತರನ್ನು ಗುರುತಿಸಲು ಮತ್ತು ಪರೀಕ್ಷಿಸಲು ಐದೇ ದಿನಗಳ ಅವಧಿಯಲ್ಲಿ “ಎಸ್ ಎಂ ಸಿ ಕೋವಿಡ್ -19 ಟ್ರ್ಯಾಕರ್ ಸಿಸ್ಟೆಂ ಅನ್ನು ಎಸ್ ಎಂ ಸಿ ಅಭಿವೃದ್ಧಪಡಿಸಿದೆ. ಇದು ವಿದೇಶಿ ಅಥವಾ ಅಂತರ್ ರಾಜ್ಯ ಪ್ರವಾಸ ಕೈಗೊಂಡ ಜನರ ಇತಿಹಾಸ ಮತ್ತು ಕೋವಿಡ್ -19 ಪಾಸಿಟಿವ್ ವ್ಯಕ್ತಿಯೊಂದಿಗೆ ನೇರ ಸಂಪರ್ಕಕ್ಕೆ ಬಂದ ವ್ಯಕ್ತಿಗಳನ್ನು ಪತ್ತೆಹಚ್ಚಲು “ಎಸ್ ಎಂ ಸಿ ಕೋವಿಡ್ -19 ಟ್ರ್ಯಾಕರ್” ಹೆಸರಿನ ವೆಬ್ ಸೈಟ್ ಮತ್ತು ಮೊಬೈಲ್ ಆಪ್ ನ್ನು ಒಳಗೊಂಡಿದೆ. ಅಲ್ಲದೆ ಆರೋಗ್ಯ ಅಧಿಕಾರಿಗಳು ಸೇರಿದಂತೆ ಎಸ್ ಎಂ ಸಿ ತಂಡದಿಂದ ಪರಿಶೀಲಿಸಲಾದ ಅಲ್ಲಿಯ ನಾಗರಿಕರು, ಪ್ರಯಾಣಿಕರು ಅಥವಾ ಶಂಕಿತರ ಬಗ್ಗೆ ವಿವರಗಳನ್ನು ಹಂಚಿಕೊಳ್ಳಲು ಸಹಾಯವಾಣಿ ಸಂಖ್ಯೆ 1800-123-800 ಅನ್ನು ಸಹ ಎಸ್ ಎಂ ಸಿ ಪ್ರಾರಂಭಿಸಿದೆ. ಕ್ವಾರೆಂಟೈನ್ ಗೆ ಒಳಗಾದ ವ್ಯಕ್ತಿಗಳನ್ನು ಗಮನಿಸಲು ಮತ್ತು ಅವರಲ್ಲಿ ಯಾವುದೇ ರೋಗಲಕ್ಷಣಗಳು ಕಂಡುಬಂದಲ್ಲಿ ಅವರನ್ನು ಸಂಪರ್ಕಿಸಲು ಸಹ ಇದೇ ಆಪ್ ನ್ನು ಬಳಸಬಹುದಾಗಿದೆ.
ತಂತ್ರಜ್ಞಾನದ ಹೊರತಾಗಿ ಎಸ್ ಎಂ ಸಿ ತ್ಯಾಜ್ಯ ನಿರ್ವಹಣೆ ಸಮಸ್ಯೆಯನ್ನು ಬಹಳ ತೀವ್ರವಾಗಿ ಪರಿಗಣಿಸಿದೆ. ಎಂಒಹೆಚ್ ಯು ಎ ಬಿಡುಗಡೆ ಮಾಡಿದ ವಿಶೇಷ ತ್ಯಾಜ್ಯ ನಿರ್ವಹಣೆ ಸಲಹೆಯನ್ನು ಅನುಸರಿಸಿ ಎಸ್ ಎಂ ಸಿ ಗೃಹ ಕ್ವಾರೆಂಟೈನ್ ಆದ ಮನೆಗಳಿಂದ ಪ್ರತ್ಯೇಕವಾಗಿ ಘನತ್ಯಾಜ್ಯವನ್ನು ಸಂಗ್ರಹಿಸುತ್ತಿದೆ. ಇದಕ್ಕಾಗಿ ಮನೆ ಮನೆಗೆ ಸಂಗ್ರಹ ವಾಹನಗಳನ್ನು ನಿಯೋಜಿಸಲಾಗಿದೆ ಮತ್ತು ಬಯೋಮೆಡಿಕಲ್ ತ್ಯಾಜ್ಯ ನಿರ್ವಹಣೆಯ ಮಾರ್ಗಸೂಚಿಗಳ ಪ್ರಕಾರ ತ್ಯಾಜ್ಯ ಸಂಸ್ಕರಣೆ ಮಾಡಲಾಗುತ್ತದೆ. ನಗರವನ್ನು ಸ್ವಚ್ಛವಾಗಿಡಲು ದೈನಂದಿನ ಘನ ತ್ಯಾಜ್ಯ ಸಂಗ್ರಹ, ಸಾರಿಗೆ ಮತ್ತು ವಿಲೇವಾರಿ ಚಟುವಟಿಕೆಗಳ ಜೊತೆ ಸ್ವಚ್ಛಗೊಳಿಸುವುದು ಮತ್ತು ಮಿಕ್ಕವನ್ನು ತೆಗೆದುಹಾಕುವುದನ್ನು ಪರಿಣಾಮಕಾರಿಯಾಗಿ ನಡೆಸುವುದರತ್ತ ಅವರು ವಿಶೇಷ ಗಮನಹರಿಸುತ್ತಿದ್ದಾರೆ.
ಸೂರತ್ ನಲ್ಲಿ ಸಾರ್ವಜನಿಕ ಪ್ರದೇಶಗಳ ಸ್ವಚ್ಛತೆ (ಹೊರಾಂಗಣ, ಕಟ್ಟಡಗಳು, ರಸ್ತೆ ಯ ಚಿತ್ರ)
ಸಾರ್ವಜನಿಕ ಸ್ಥಳಗಳ ಸೋಂಕು ನಿವಾರಣೆ ವಿಷಯ ಬಂದಾಗ ಎಸ್ ಎಂ ಸಿ ಯ ಪ್ರಯತ್ನಗಳು ಸಹ ಗೋಚರವಾಗುತ್ತವೆ. ಸೋಂಕು ನಿವಾರಣೆಗಾಗಿ ಕೋವಿಡ್ – 19 ಹರಡುವಿಕೆಯನ್ನು ಪರೀಕ್ಷಿಸಲು ನಗರದ ಎಲ್ಲ ಪ್ರದೇಶಗಳನ್ನು ಸ್ವಚ್ಛಗೊಳಿಸಲಾಗಿದೆ ಮತ್ತು ಸೋಂಕುರಹಿತಗೊಳಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳುವ ಮೂಲಕ ಎಸ್ ಎಂ ಸಿ ವಿಶಿಷ್ಟವಾದ 3 ಹಂತದ ಸೂತ್ರವನ್ನು ಅಳವಡಿಸಿಕೊಂಡಿದೆ. ಎಸ್ ಎಂ ಸಿ ತಮ್ಮ ವಿಬಿಡಿಸಿ ಮತ್ತು ಅಗ್ನಿ ಶಾಮಕ ತಂಡಗಳ ಮೂಲಕ ತಮ್ಮ ಚಟುವಟಿಕೆಗಳನ್ನು 3 ಪ್ರದೇಶಗಳಲ್ಲಿ ಈ ಕೆಳಗಿನಂತೆ ವಿಂಗಡಿಸಿದೆ:
- ಪ್ರತಿದಿನ ಸಾರ್ಜನಿಕ ಸ್ಥಳಗಳನ್ನು ಸ್ವಚ್ಛಗೊಳಿಸುವುದು ಮತ್ತು ಸೋಂಕುರಹಿತಗೊಳಿಸುವುದು : ಮಾರ್ಗಸೂಚಿಗಳನ್ನು ಆಧರಿಸಿ ಪ್ರಮುಖ ಸ್ಥಳಗಳಲ್ಲಿ ಸಿಂಪಡಿಸುವ ವಾಹನಗಳನ್ನು ಬಳಸಿ ಸೋಂಕುನಿವಾರಕಗಳನ್ನು ಸಿಂಪಡಿಸುವುದು.
ಶಂಕಿತ ವ್ಯಕ್ತಿಗಳನ್ನು ಕರೆದೊಯ್ದ ಆಂಬುಲೆನ್ಸ್ ಸ್ವಚ್ಛತೆ (ಹೊರಾಂಗಣ, ಕಟ್ಟಡಗಳು, ರಸ್ತೆ, ಟ್ರಕ್ ಗಳ ಚಿತ್ರ)
- ಪಾಸಿಟಿವ್ ಪ್ರಕರಣಗಳಿರುವ ಪ್ರದೇಶಗಳನ್ನು ಸೋಂಕುರಹಿತವಾಗಿಸುವುದು: ಪ್ರಕರಣವನ್ನು ಗುರುತಿಸಿದ ತಕ್ಷಣವೇ ಖಚಿತಪಟ್ಟ ಪ್ರಕರಣಗಳ ವಸತಿ ಪ್ರದೇಶಗಳಿಗೆ ತ್ವರಿತ ಕ್ರಮ ಕೈಗೊಳ್ಳುವುದು. ಆ ಪ್ರದೇಶವನ್ನು ಕೇಂದ್ರಬಿಂದುವಾಗಿ ಪರಿಗಣಿಸಿ ಅದನ್ನು ಸೋಂಕಿನ ವಲಯವೆಂದು (3 ಕಿ ಮೀ ವೃತ್ತ ಅಥವಾ ಪ್ರಾಧಿಕಾರದ ನಿರ್ದೇಶನದಂತೆ) ಮತ್ತು ಬಫರ್ ವಲಯವೆಂದು ನಕ್ಷೆ ಹಾಕಲಾಗುತ್ತದೆ.
ಕೊವಿಡ್ – 19 ಹರಡುವಿಕೆ ಕುರಿತು ಜಾಗೃತಿಯನ್ನು ಮೂಡಿಸುತ್ತಿರುವ ಆರೋಗ್ಯ ಕಾರ್ಯಕರ್ತರು ಮತ್ತು ಸ್ವಯಂ ಸೇವಕರು (ಕಟ್ಟಡದ ಮುಂದೆ ನಿಂತಿರುವ ಗುಂಪು)
ತತ್ ಕ್ಷಣದ ಐಇಸಿ ಕಾರ್ಯಚಟುವಟಿಕೆಗಳನ್ನು ಹೊರತುಪಡಿಸಿ ಸೂರತ್ ತನ್ನ ನಾಗರಿಕರಿಗೆ ಮಾಹಿತಿ ನೀಡುತ್ತಾ ಮತ್ತು ವೈರಾಣು ಹರಡುವಿಕೆ ತಡೆಗಟ್ಟಲು ತೆಗೆದುಕೊಳ್ಳಬೇಕಾದ ಬಗ್ಗೆ ಅರಿವು ಮೂಡಿಸಲು ಕ್ರಮಕೈಗೊಳ್ಳುತ್ತಿರುತ್ತದೆ. ಜಾಗೃತಿ ಮೂಡಿಸಲು ಮನೆ ಮನೆಗೆ ತಮ್ಮ ವಾಹನಗಳನ್ನು ಕಳುಹಿಸುವುದನ್ನು ವಿಶಿಷ್ಟ ರೀತಿಯಲ್ಲಿ ಬಳಸಿಕೊಳ್ಳುತ್ತಿರುವುದನ್ನು ಇಲ್ಲಿ ಪ್ರಸ್ತಾಪಿಸಲೇಬೇಕು. ಮನೆ ಮನೆಗೆ ಸಂಗ್ರಹಣೆಗೆ ತೆರಳುವ ವಾಹನಗಳಿಗೆ ಸಾರ್ವಜನಿಕ ಜಾಗೃತಿ ವ್ಯವಸ್ಥೆಯನ್ನು ಅಳವಡಿಸಲಾಗಿದ್ದು ಅವುಗಳನ್ನು ದೈನಂದಿನ ಸಂಗ್ರಹ ಪ್ರದೇಶಗಳಲ್ಲಿ ಹೆಚ್ಚೆಚ್ಚು ಜನರಿಗೆ ಮಾಹಿತಿ ತಲುಪಿಸುವಂತೆ ಖಚಿತಪಡಿಸಿಕೊಳ್ಳಲು ಬಳಸಲಾಗುತ್ತಿದೆ. ಅಭಿವೃದ್ಧಿ ಕುರಿತು ನಾಗರಿಕರಿಗೆ ನಿತ್ಯದ ಮಾಹಿತಿ ಒದಗಿಸಲು ಎಸ್ ಎಂ ಸಿ ದಿನಕ್ಕೆ 2 ಬಾರಿ ಮಾಧ್ಯಮ ಪ್ರಕಟಣೆ ಅಥವಾ ಪತ್ರಿಕಾ ಪ್ರಕಟಣೆಗಳನ್ನು ಬಿಡುಗಡೆ ಮಾಡುತ್ತಿದೆ.
ನಾಗರಿಕರ ಮಧ್ಯೆ ಸಾಮಾಜಿಕ ಅಂತರ ನಿಯಮವನ್ನು ವಿವರಿಸುವ ಚಿತ್ರ (ಜನರ ಗುಂಪೊಂದು ಬೀದಿಯಲ್ಲಿ ಸಾಗುತ್ತಿರುವುದು)
ತುರ್ತು ನಿರ್ವಹಣೆಗೆ ವಿವಿಧ ಚಟುವಟಿಕೆಗಳಲ್ಲಿ ತೊಡಗಿರುವ ಸಿಬ್ಬಂದಿಯ ಸಾಮರ್ಥ್ಯಾಭಿವೃದ್ಧಿಗೆ ನಿರ್ಣಾಯಕ ಅಗತ್ಯವನ್ನು ಗುರುತಿಸಲು ಎಸ್ ಎಂ ಸಿ ಒಂದು ಟಾಸ್ಕ ಫೋರ್ಸ್ ತಂಡವನ್ನು ರಚಿಸಿದೆ ಮತ್ತು ಸಾಂಕ್ರಾಮಿಕ ಪರಿಸ್ಥಿತಿ ವಿರುದ್ಧ ಹೋರಾಡಲು ನೋಡಲ್ ಅಧಿಕಾರಿಗಳೊಂದಿಗೆ ತರಬೇತಿ ಸೇರಿದಂತೆ ನಿರ್ದಿಷ್ಟ ಕಾರ್ಯಗಳನ್ನು ನಿಯೋಜಿಸಲಾಗಿದೆ. ಜೊತೆಗೆ ಪ್ರಸ್ತುತ ಪರಿಸ್ಥಿತಿಯಲ್ಲಿ ತ್ವರಿತ ಪ್ರತಿಕ್ರಿಯೆಗಾಗಿ ಎಸ್ ಎಂ ಸಿ ಕುಂದು ಕೊರತೆ ನಿವಾರಣೆ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಸ್ವಚ್ಛತಾ ಕರ್ಮಚಾರಿಗಳ ಆರೋಗ್ಯ ಮತ್ತು ಕಲ್ಯಾಣವನ್ನು ಗಮನದಲ್ಲಿಟ್ಟುಕೊಂಡು, ಈ ಕಾರ್ಯದಲ್ಲಿ ಭಾಗಿಯಾಗಿರುವ ಎಲ್ಲ ಸಿಬ್ಬಂದಿಗೆ ಉಚಿತ ವೈಯಕ್ತಿಕ ರಕ್ಷಣಾ ಸಾಧನ (ಪಿಪಿಇ) ಲಭಿಸುವಂತೆ ಎಸ್ ಎಂ ಸಿ ಕ್ರಮ ಕೈಗೊಂಡಿದೆ. ಹಾಗಾಗಿ ಕೊರೊನಾ ವೈರಾಣು ವಿರುದ್ಧ ಹೋರಾಡಲು ಮುಂಚೂಣಿಯಲ್ಲಿರುವ ತಮ್ಮ ಸ್ವಚ್ಛತಾ ಹೋರಾಟಗಾರರನ್ನು ರಕ್ಷಿಸುವ ಸಂಕಲ್ಪವನ್ನು ಇದು ಪ್ರದರ್ಶಿಸುತ್ತದೆ.
ಇಂಥ ಪ್ರಯತ್ನಗಳ ಸಮಯ ನಾಯಕರು ಮತ್ತು ಪ್ರಮುಖ ಸಂಸ್ಥೆಗಳ ನಿಜವಾದ ಸಾಮರ್ಥ್ಯವನ್ನು ಪರೀಕ್ಷಿಸುತ್ತವೆ. ಇಡೀ ವಿಶ್ವವನ್ನೇ ಪೀಡಿಸುತ್ತಿರುವ ಇಂಥ ಬಿಕ್ಕಟ್ಟಿನ ಸ್ಥಿತಿಯಲ್ಲೂ ಎದೆಗುಂದದೆ ಎಸ್ ಎಂ ಸಿ ಯ ಆಡಳಿತ ಮಂಡಳಿ ತಾವು ಉತ್ತಮ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವ ಮೂಲಕ ಮತ್ತು ತ್ವರಿತ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ದೇಶದ ಇತರ ಭಾಗಗಳಿಗೆ ಮಾದರಿಯಾಗಿ ಹೊರ ಹೊಮ್ಮಿದ್ದೇವೆ ಮತ್ತು ಮುಂಚೂಣಿಯಲ್ಲಿಯೇ ಮುಂದುವರಿಯುತ್ತೇವೆ ಎಂಬುದನ್ನು ಸಾಬೀತುಪಡಿಸಿದೆ.
***
(Release ID: 1614247)
Visitor Counter : 247