ಗ್ರಾಮೀಣಾಭಿವೃದ್ಧಿ ಸಚಿವಾಲಯ

ದೇಶದಲ್ಲಿ ಕೋವಿಡ್-19 ಸ್ಥಿತಿಯ ಸವಾಲು ಎದುರಿಸಲು ಸಜ್ಜಾದ ಎನ್ಆರ್ ಎಲ್ ಎಂ ಸ್ವಸಹಾಯ ಗುಂಪುಗಳ ಜಾಲ

Posted On: 12 APR 2020 4:15PM by PIB Bengaluru

ದೇಶದಲ್ಲಿ ಕೋವಿಡ್-19 ಸ್ಥಿತಿಯ ಸವಾಲು ಎದುರಿಸಲು ಸಜ್ಜಾದ ಎನ್ಆರ್ ಎಲ್ ಎಂ ಸ್ವಸಹಾಯ ಗುಂಪುಗಳ ಜಾಲ

ಕೋವಿಡ್-19 ಸೋಂಕು ನಿಯಂತ್ರಣಕ್ಕೆ ಸಹಾಯ ಮತ್ತು ಜಾಗೃತಿ ಮೂಡಿಸಲು ಸ್ವಸಹಾಯ ಗುಂಪುಗಳ ಮಹಿಳೆಯರಿಂದ ವಿನೂತನ ಸಂವಹನ ಮತ್ತು ನಡವಳಿಕೆ ಬದಲಾವಣೆ ತಂತ್ರಗಳು

 

ಕೋವಿಡ್-19 ಸೋಂಕು ವಿಶ್ವವ್ಯಾಪಿ ಅನಿರೀಕ್ಷಿತ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಸೃಷ್ಟಿಸಿದೆ. ಭಾರತದಲ್ಲಿ ಅತಿ ಹೆಚ್ಚಿನ ಸಂಖ್ಯೆಯ ಪ್ರಕರಣಗಳ ಪರೀಕ್ಷೆ ನಡೆಯುತ್ತಿದ್ದು, ಪ್ರಕರಣಗಳಿಗೆ ತಕ್ಕಂತೆ ಕ್ವಾರಂಟೈನ್ ಅಥವಾ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕು ಹರಡುವುದನ್ನು ತಡೆಯಲು ಹಾಗೂ ಸೋಂಕಿನ ಗುಣಲಕ್ಷಣಗಳನ್ನು ಅರ್ಥ ಮಾಡಿಕೊಳ್ಳುವುದು ಮತ್ತು ಕೋವಿಡ್-19 ಸೋಂಕಿಗೆ ಕಾರಣಗಳನ್ನು ಪತ್ತೆಹಚ್ಚುವುದು ಹಾಗೂ ದೈಹಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಸೂಕ್ತ ವೈಯಕ್ತಿಕ ಶುಚಿತ್ವ ಕಾಯ್ದುಕೊಳ್ಳುವ ಕೆಲಸಗಳನ್ನು ಕೈಗೊಳ್ಳಲು ಇದು ಸಕಾಲ.

ಗ್ರಾಮೀಣಾಭಿವೃದ್ಧಿ ಸಚಿವಾಲಯದ ಅಡಿ ಬರುವ ದೀನ್ ದಯಾಳ್ ಅಂತ್ಯೋದಯ ಯೋಜನಾ – ರಾಷ್ಟ್ರೀಯ ನಗರ ಜೀವನೋಪಾಯ ಮಿಷನ್(ಡಿಎವೈ-ಎನ್ಆರ್ ಎಲ್ಎಂ)ಅಡಿ ದೇಶಾದ್ಯಂತ ಸ್ಥಾಪನೆಯಾಗಿರುವ ಸುಮಾರು 63 ಲಕ್ಷ ಸ್ವಸಹಾಯ ಗುಂಪುಗಳ(ಎಸ್ಎಚ್ ಜಿ)ಗಳ ಅಂದಾಜು 690 ಲಕ್ಷ ಮಹಿಳಾ ಸದಸ್ಯರು ಅತ್ಯಂತ ಉತ್ಸಾಹ ಸ್ಫೂರ್ತಿ ಮತ್ತು ಬದ್ಧತೆಯಿಂದ ಸುಮುದಾಯದ ಮಟ್ಟದಲ್ಲಿ ಸದಾ ಆರ್ಥಿಕ ಮತ್ತು ಸಾಮಾಜಿಕ ಅಗತ್ಯತೆಗಳಿಗೆ ತಮ್ಮದೇ ಆದ ಕೊಡುಗೆಯನ್ನು ನೀಡುತ್ತಿದ್ದಾರೆ. ಈ ಮಹಿಳೆಯರು ಜೀವನೋಪಾಯ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದು, ಅವರು ಜಾಗೃತಿ ಕಾರ್ಯಕ್ರಮಗಳ ಮೂಲಕ ಸಮಾಜದಲ್ಲಿ ಬದಲಾವಣೆಗಳನ್ನು ತರುತ್ತಿದ್ದಾರೆ ಮತ್ತು ಚಳವಳಿಗಳನ್ನು ಮುನ್ನಡೆಸುತ್ತಿದ್ದಾರೆ ಹಾಗೂ ನೈಸರ್ಗಿಕ ವಿಪತ್ತುಗಳ ಸಂದರ್ಭದಲ್ಲಿ ಕ್ರಿಯಾಶೀಲವಾಗಿ ಸ್ಪಂದಿಸುತ್ತಿದ್ದಾರೆ. ಪ್ರಸಕ್ತ ಬಿಕ್ಕಟ್ಟಿನ ಸಂದರ್ಭದಲ್ಲಿ ಎಸ್ಎಚ್ ಜಿ ಸದಸ್ಯರು ಕೋವಿಡ್-19 ಹರಡುವುದನ್ನು ನಿಯಂತ್ರಿಸಲು ಸಾಧ್ಯವಾದ ಎಲ್ಲ ಕ್ರಮಗಳ ಮೂಲಕ ಕೊಡುಗೆ ನೀಡಿ, ಸಮುದಾಯದ ಯೋಧರಾಗಿ ರೂಪುಗೊಂಡಿದ್ದಾರೆ.

https://ci4.googleusercontent.com/proxy/U1CEh6H_mUuWgdLaBL4n25PFytRWbsB7i5ekEUPRbvq3n3qMt10VEP_nVWoP9i4z0QqwlFQ53vF68ua2IFElBmHMmKgkL-0dcGHA9NGHI-7g7Y4FTeQ5=s0-d-e1-ft#https://static.pib.gov.in/WriteReadData/userfiles/image/image001R953.jpg

ವೈಯಕ್ತಿಕ ಶುಚಿತ್ವ ಕಾಪಾಡಿಕೊಳ್ಳುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಇತ್ಯಾದಿ ರೋಗಕ್ಕೆ ಸಂಬಂಧಿಸಿದ ನಾನಾ ಆಯಾಮಗಳ ಬಗ್ಗೆ ಈ ಸ್ವಸಹಾಯ ಗುಂಪುಗಳು ದೇಶಾದ್ಯಂತ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿವೆ. ಅವು ಆರೋಗ್ಯ ಸಚಿವಾಲಯ ಅಭಿವೃದ್ಧಿಪಡಿಸಿರುವ ಮತ್ತು ಎಲ್ಲ ರಾಜ್ಯಗಳ ಗ್ರಾಮೀಣ ಜೀವನೋಪಾಯ ಮಿಷನ್ ಗಳಿಗೆ(ಎಸ್ಆರ್ ಎಲ್ ಎಂ)ಗೆ ಕಳುಹಿಸಿಕೊಟ್ಟಿರುವ ಶ್ರವಣ ಮತ್ತು ದೃಶ್ಯ(ಎವಿ), ಐಇಸಿ ಸಾಮಗ್ರಿ ಮತ್ತು ಸಲಹೆಗಳನ್ನು ಬಳಸಿ, ಜಾಗೃತಿ ಕಾರ್ಯದಲ್ಲಿ ತೊಡಗಿವೆ. ಆ ಸಾಮಗ್ರಿ ಮಾಹಿತಿಗಳ ಜೊತೆಗೆ ರಾಜ್ಯ ಸರ್ಕಾರಗಳು ಅಭಿವೃದ್ಧಿಪಡಿಸಿರುವ ಸಾಮಗ್ರಿಗಳನ್ನೂ ಸಹ ಎಸ್ಆರ್ ಎಲ್ ಎಂಗಳು ಬಳಕೆ ಮಾಡಿಕೊಂಡು ಅಗತ್ಯ ಮುಂಜಾಗ್ರತಾ ಕ್ರಮಗಳ ಬಗ್ಗೆ ಸಮುದಾಯಕ್ಕೆ ಕರಾರುವಕ್ಕಾದ ಸಂದೇಶದ ಸಂವಹನ ಮಾಡುತ್ತಿವೆ. ಎಸ್ಆರ್ ಎಲ್ ಎಂ ಸಿಬ್ಬಂದಿ ಮತ್ತು ಎಸ್ಎಚ್ ಜಿ ಸದಸ್ಯರುಗಳು ಸ್ಥಳೀಯ ಸಮುದಾಯಗಳಲ್ಲಿ ದೂರವಾಣಿ ಕರೆ ಮಾಡುವುದು, ಗೋಡೆ ಮೇಲಿನ ಬರಹ, ಕರಪತ್ರ ವಿತರಣೆ ಇತ್ಯಾದಿ ವಿಧಾನಗಳ ಮೂಲಕ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಸಾಮಾಜಿಕ ಮಾಧ್ಯಮವನ್ನೂ ಸಹ ವ್ಯಾಪಕವಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ.

ಅಲ್ಲದೆ ಎಸ್ಎಚ್ ಜಿ ಸ್ವಯಂ ಸೇವಕರು ಮಾರುಕಟ್ಟೆಗಳಲ್ಲಿ, ಪಡಿತರ ವಿತರಣಾ ಕೇಂದ್ರಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯದಲ್ಲೂ ಸಹ ತಮ್ಮ ಪಾತ್ರ ವಹಿಸುತ್ತಿದ್ದಾರೆ. ತಮಿಳುನಾಡಿನಲ್ಲಿ ಪ್ರತಿ ಪಡಿತರ ವಿತರಣಾ ಕೇಂದ್ರಕ್ಕೆ ಸ್ವಸಹಾಯ ಗುಂಪುಗಳ ಇಬ್ಬರು ಸ್ವಯಂ ಸೇವಕರನ್ನು ನಿಯೋಜಿಸಲಾಗಿದೆ. ಅವರಿಗೆ ಗ್ಲೌಸ್, ಮಾಸ್ಕ್ ಮತ್ತು ಸ್ಯಾನಿಟೈಸರ್ ಒದಗಿಸಲಾಗಿದ್ದು, ಅವರು ಪಡಿತರಕ್ಕಾಗಿ ಸರದಿಯಲ್ಲಿ ನಿಲ್ಲುವ ಜನರು ಅಂತರವನ್ನು ಕಾಯ್ದುಕೊಳ್ಳುವಂತೆ ನೋಡಿಕೊಳ್ಳಲಿದ್ದಾರೆ.

ಎಸ್ಆರ್ ಎಲ್ ಎಂಗಳು ಕೈಗೊಂಡಿರುವ ಕೆಲವು ಪ್ರಮುಖ ಕಾರ್ಯಕ್ರಮಗಳ ವಿವರಗಳು ಈ ಕೆಳಗಿನಂತಿವೆ:

https://ci4.googleusercontent.com/proxy/chOEcdQg94VrBaaBlMLWVKGQYDuCD59iezEGQCNoUD9o5huLjB2yLY5u1mLhxN3YrMH56D3bbTwm9rP9MMjLQp98cTrF8MON9FCK4XbImbVLup6Jhbrv=s0-d-e1-ft#https://static.pib.gov.in/WriteReadData/userfiles/image/image002HBK8.jpg

· ಕೋವಿಡ್-19 ಅನ್ನು ಜಾಗತಿಕ ಸಾಂಕ್ರಾಮಿಕ ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ ಬಿಹಾರದ ಜೀವಿಕಾ ಐಇಸಿ ಸಾಮಗ್ರಿಗಳನ್ನು ಸಿದ್ಧಪಡಿಸುವ ಕಾರ್ಯದಲ್ಲಿ ತೊಡಗಿದ್ದು, ಅವುಗಳ ಮೂಲಕ ಸೋಂಕು ಎದುರಿಸಲು ಕೈಗೊಂಡಿರುವ ಸಿದ್ಧತೆಗಳು ಹಾಗೂ ಜಾಗೃತಿಯನ್ನು ಮೂಡಿಸಲಾಗುತ್ತಿದೆ. ಜೀವಿಕಾ ತನ್ನ 1.4 ಲಕ್ಷ ಸ್ವಸಹಾಯ ಗುಂಪುಗಳ ಮೂಲಕ ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ಗರಿಷ್ಠ ಸಂಖ್ಯೆಯ ಮನೆಗಳನ್ನು ಮುಟ್ಟಲು ಮತ್ತು ಕೈತೊಳೆದು ಕೊಳ್ಳುವುದು, ನೈರ್ಮಲೀಕರಣ, ಕ್ವಾರಂಟೈನ್, ಐಸೋಲೇಶನ್ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತಿತರ ವಿಚಾರಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಜೀವಿಕಾ ಈವರೆಗೆ 1,00,000ಕ್ಕೂ ಅಧಿಕ ಸಮುದಾಯದ ಸದಸ್ಯರ ದೂರವಾಣಿ ಸಂಖ್ಯೆಗಳನ್ನು ಸಂಗ್ರಹಿಸಿದೆ ಮತ್ತು ತಮ್ಮ ಮೊಬೈಲ್ ವಾಹಿನಿ ವೇದಿಕೆಯನ್ನು ಬಳಸಿ ಕೋವಿಡ್-19 ಕುರಿತ ಧ್ವನಿ ಸಂದೇಶಗಳನ್ನು ಬಿಡುಗಡೆ ಮಾಡುತ್ತಿದೆ ಹಾಗೂ ಅದೇ ವೇದಿಕೆಯ ಮೂಲಕ ಸಮುದಾಯದ ಪ್ರಶ್ನೆಗಳಿಗೆ ಉತ್ತರಿಸುವ ಕೆಲಸ ಮಾಡುತ್ತಿದೆ.

· ಜಾಗೃತಿಗಾಗಿ ರಂಗೋಲಿ : ಉತ್ತರ ಪ್ರದೇಶದಲ್ಲಿ ಎಸ್ಆರ್ ಎಲ್ ಎಂ ಸ್ವಸಹಾಯ ಗುಂಪುಗಳ ಮಹಿಳೆಯರು ‘ಪ್ರೇರಣ’ ಅತ್ಯಂತ ಆಕರ್ಷಕ ರಂಗೋಲಿಯನ್ನು ಬಿಡಿಸುವುದು ಮತ್ತು ‘ಸಾಮಾಜಿಕ ಅಂತರದ ಅಗತ್ಯತೆಯನ್ನು ಒತ್ತಿ ಹೇಳಲು ವೃತ್ತಗಳು ಮತ್ತು ಗೆರೆಗಳನ್ನು ಎಳೆಯಲಾಗಿದೆ. ಕೋವಿಡ್ ನಿಯಂತ್ರಣ ಕುರಿತು ಸಮುದಾಯಕ್ಕೆ ಪ್ರಮುಖ ಸಂದೇಶಗಳನ್ನು ತಲುಪಿಸಲು ಗೋಡೆಗಳ ಮೇಲೆ ಚಿತ್ರ ಕಲೆಯನ್ನೂ ಸಹ ಬಿಡಿಸಲಾಗಿದೆ.

https://ci3.googleusercontent.com/proxy/Q_SutVh7NgqRl_r3LypASebR5Du8Q8bixE46cl04FEFZ1XDEEqX_NNU5-9oEzzcFEFPgL_XOW29K104ey4E2lbVBHZ2SEwxldzNzlF_Klf4717ByBuR8=s0-d-e1-ft#https://static.pib.gov.in/WriteReadData/userfiles/image/image003CXW9.jpg

· ದೀದಿ ಸಹಾಯವಾಣಿ : ಜಾರ್ಖಂಡ್ ನ ಎಸ್ಆರ್ ಎಲ್ ಎಂ ಆರಂಭಿಸಿರುವ ದೀದಿ ಸಹಾಯವಾಣಿ ದಿನದ 24 ಗಂಟೆಯೂ ವಲಸೆ ಕಾರ್ಮಿಕರಿಗೆ ಖಚಿತ ಮಾಹಿತಿಯನ್ನು ಒದಗಿಸುವ ಮೂಲಕ ನೆರವಾಗುತ್ತಿದೆ. ಇದು ನಾನಾ ರಾಜ್ಯಗಳಲ್ಲಿರುವ ಜಾರ್ಖಂಡ್ ವಾಸಿಗಳು ತಮ್ಮ ಮಾಹಿತಿಯನ್ನು ಹಂಚಿಕೊಂಡು ಸಂಬಂಧಿಸಿದ ಪ್ರಾಧಿಕಾರಗಳ ಸಹಾಯದಿಂದ ವಾಪಸ್ ಜಾರ್ಖಂಡ್ ಗೆ ತೆರಳಲು ಸಹಾಯ ಮಾಡುತ್ತಿದೆ.

· ಸುಳ್ಳು ಸುದ್ದಿ ಕಲ್ಪನೆ ಹೋಗಲಾಡಿಸಲು ಪ್ರಯತ್ನ : ಕೇರಳದ ಕುಡುಂಬಶ್ರೀ ಮಹಿಳೆಯರು ಗಣನೀಯ ಪ್ರಯತ್ನಗಳನ್ನು ನಡೆಸಿ, ವ್ಯಾಪಕವಾಗಿ ಹರಡಿ, ಆತಂಕ ಉಂಟುಮಾಡಿದ್ದ ಸುಳ್ಳು ಸುದ್ದಿಯನ್ನು ಹೋಗಲಾಡಿಸಲು ಸಹಕರಿಸಿದ್ದಾರೆ. ಅದು ತನ್ನ 1,16,396 ಮಹಿಳಾ ಸದಸ್ಯರನ್ನು ಹೊಂದಿರುವ ಗುಂಪು, ತನ್ನ ವಾಟ್ಸ್ ಅಪ್ ಗ್ರೂಪ್ ನ ಜಾಲದಿಂದ ಕುಡುಂಬಶ್ರೀ ಸಮುದಾಯಕ್ಕೆ ಕೇವಲ ಖಚಿತ ಮಾಹಿತಿಯನ್ನು ಒದಗಿಸಲು ಪ್ರಯತ್ನಿಸುತ್ತಿದೆ. ಈ ವೇದಿಕೆಗಳನ್ನು ತಕ್ಷಣ ಅಧಿಕೃತ ಮಾಹಿತಿ ಮತ್ತು ಸೋಂಕಿನ ಬಗ್ಗೆ ಅಪ್ ಡೇಟ್ ಹಾಗೂ ಮುಂಜಾಗ್ರತಾ ಕ್ರಮಗಳನ್ನು ತಿಳಿಸಲು ಬಳಸಿಕೊಳ್ಳಲಾಗುತ್ತಿದೆ.

· ತಮ್ಮ ನಿರ್ದಿಷ್ಟ ಸಮುದಾಯಗಳಲ್ಲಿ ಸುರಕ್ಷಿತ, ಸ್ವಚ್ಛತಾ ಪದ್ಧತಿಗಳ ಉತ್ತೇಜನಕ್ಕೆ ಸಾಮಾಜಿಕವಾಗಿ ಕೊಡುಗೆ ನೀಡುತ್ತಾ ತಮ್ಮ ಸುಸ್ಥಿರ ಜೀವನೋಪಾಯಗಳನ್ನು ನಡೆಸಿಕೊಂಡು ಬರುತ್ತಿರುವ ಈ ಸ್ವಸಹಾಯ ಗುಂಪುಗಳ ಮಹಿಳೆಯರು ಕೋವಿಡ್-19 ವಿರುದ್ಧ ಅತಿ ಹೆಚ್ಚಿನ ಬದ್ಧತೆ ಮತ್ತು ಏಕಾಗ್ರತೆಯಿಂದ ಹೋರಾಟ ನಡೆಸುತ್ತಿದ್ದಾರೆ. ರಾಷ್ಟ್ರಾದ್ಯಂತ ಅದೇ ರೀತಿ ಸಾಮೂಹಿಕ ಕ್ರಮಗಳ ಮೂಲಕ ದುರ್ಬಲ ಮತ್ತು ನಿರ್ಲಕ್ಷಕ್ಕೊಳಗಾದ ಸಮುದಾಯಗಳ ಮಹಿಳೆಯರು ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದಾರೆ ಮತ್ತು ಅವರು ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಸಬಲಗೊಳ್ಳುತ್ತಿದ್ದಾರೆ.

***

 



(Release ID: 1613788) Visitor Counter : 421