ಕಾನೂನು ಮತ್ತು ನ್ಯಾಯ ಸಚಿವಾಲಯ

ಕೋವಿಡ್-19 ಲಾಕ್ ಡೌನ್ ನಡುವೆಯೂ ತೆರಿಗೆ ಮೇಲ್ಮನವಿ ನ್ಯಾಯಮಂಡಳಿಯಿಂದ ಪ್ರಖ್ಯಾತ ಪ್ರವಚನಕಾರ ಶ್ರೀ ಶ್ರೀ ರವಿಶಂಕರ್ ಜೊತೆ ಕೋವಿಡ್-19 ಕುರಿತು ಸಂವಾದ

Posted On: 11 APR 2020 3:30PM by PIB Bengaluru

ಕೋವಿಡ್-19 ಲಾಕ್ ಡೌನ್ ನಡುವೆಯೂ ತೆರಿಗೆ ಮೇಲ್ಮನವಿ ನ್ಯಾಯಮಂಡಳಿಯಿಂದ ಪ್ರಖ್ಯಾತ ಪ್ರವಚನಕಾರ ಶ್ರೀ ಶ್ರೀ ರವಿಶಂಕರ್ ಜೊತೆ ಕೋವಿಡ್-19 ಕುರಿತು ಸಂವಾದ

ಜಗತ್ತು ಹಲವು ಜಾಗತಿಕ ಸಾಂಕ್ರಾಮಿಕಗಳನ್ನು ನೋಡಿದೆ; ಮನು ಕುಲ ಅದನ್ನು ದಾಟಿ ಮುನ್ನಡೆದಿದೆ”, ಎಂದಿದ್ದಾರೆ ಶ್ರೀ ಶ್ರೀ

 

ಇಡೀ ವಿಶ್ವ ತನ್ನ ಆವರ್ತನೆಯಲ್ಲಿ ಅತ್ಯಂತ ಕಠಿಣ ಪರಿಸ್ಥಿಯನ್ನು ಎದುರಿಸುತ್ತಿದ್ದು, ಮತ್ತು ಭವಿಷ್ಯದ ಬಗೆಗೆ ಚಿಂತೆ ಮನುಕುಲವನ್ನು ಬಾಧಿಸುತ್ತಿರುವಾಗ ಆದಾಯ ತೆರಿಗೆ ನ್ಯಾಯಮಂಡಳಿಯು (ಐ.ಟಿ.ಎ.ಟಿ.) ಆತಂಕ ನಿವಾರಣಾ ಕ್ರಮವಾಗಿ ನಿನ್ನೆ ವೀಡಿಯೋ ಕಾನ್ಫರೆನ್ಸ್ ಮೂಲಕ ರಾಷ್ಟ್ರವ್ಯಾಪ್ತಿಯಲ್ಲಿ ಸಮ್ಮೇಳನವನ್ನು ಎಲ್ಲಾ ಭಾಗೀದಾರರು, ಅವರ ಕುಟುಂಬದವರು, ಸ್ನೇಹಿತರು ಮತ್ತು ಸಮಾಜದ ಆಧ್ಯಾತ್ಮಿಕ ಆಶಯದ ಎಲ್ಲರಿಗೂ ದೈಹಿಕ, ಭಾವನಾತ್ಮಕ ಮತ್ತು ಮಾನಸಿಕ ಕ್ಷೇಮಕ್ಕಾಗಿ ಆಯೋಜಿಸಿತ್ತು. ಪ್ರಖ್ಯಾತ ಆಧ್ಯಾತ್ಮಿಕ ಗುರು ಮತ್ತು ಬೋಧಕರಾಗಿರುವ ಶ್ರೀ ಶ್ರೀ ರವಿಶಂಕರ ಜೀ ಆಶೀರ್ವಚನ ನೀಡಿದರು ಮತ್ತು “ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿರುವಾಗ ಕುಟುಂಬ ಮತ್ತು ಸಮಾಜದ ಜೊತೆಗೆ ಸಂತೋಷದಿಂದಿರುವುದು ಹೇಗೆ “ ಎಂಬ ಬಗ್ಗೆ ಅವರು ಆಧ್ಯಾತ್ಮಿಕ ಉಪನ್ಯಾಸ ನೀಡಿದರು. ಐ.ಟಿ.ಎ.ಟಿ. ಅಧ್ಯಕ್ಷರಾದ ನ್ಯಾಯಮೂರ್ತಿ ಪಿ.ಪಿ. ಭಟ್ಟ ಅವರು ಅಧ್ಯಕ್ಷತೆ ವಹಿಸಿದ್ದರು. ಎಲ್ಲಾ ಉಪಾಧ್ಯಕ್ಷರು, ನ್ಯಾಯಮಂಡಳಿಯ ಸದಸ್ಯರು , ಮತ್ತು ರಿಜಿಸ್ಟ್ರಾರ್ ಸಿಬ್ಬಂದಿಗಳು ಅವರ ಕುಟುಂಬದವರ ಜೊತೆ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಆದಾಯ ತೆರಿಗೆ ಬಾರ್ ಅಸೋಸಿಯೇಶನ್ ಗಳ ಸದಸ್ಯರಿಗೆ, ಆದಾಯ ತೆರಿಗೆ ಇಲಾಖೆಯ ಮತ್ತು ದೇಶದ ಇತರ ಎಲ್ಲರಿಗೂ ಅಹ್ವಾನ ನೀಡುವ ಮೂಲಕ ನ್ಯಾಯ ಮೂರ್ತಿ ಭಟ್ಟ ಅವರು ಇದರ ಪ್ರಯೋಜನ ಸಮಾಜದ ವಿಸ್ತಾರ ವ್ಯಾಪ್ತಿಗೆ ಲಭ್ಯವಾಗುವಂತೆ ಮಾಡಿದ್ದರು. ವಿವಿಧ ಹೈಕೋರ್ಟುಗಳ ಹಾಲಿ ನ್ಯಾಯಮೂರ್ತಿಗಳು, ನಿವೃತ್ತ ನ್ಯಾಯಮೂರ್ತಿಗಳು, ಕೇಂದ್ರ ಕಾನೂನು ಕಾರ್ಯದರ್ಶಿ ಮತ್ತು ವಿವಿಧ ವಯೋಮಾನದ ಪ್ರಮುಖ ವ್ಯಕ್ತಿಗಳು ಇದರಲ್ಲಿ ಪಾಲ್ಗೊಂಡಿದ್ದರು.

ತಮ್ಮ ಸ್ವಾಗತ ಭಾಷಣದಲ್ಲಿ ನ್ಯಾಯಮೂರ್ತಿ ಪಿ.ಪಿ. ಭಟ್ಟ ಅವರು ಗುರೂಜಿಯವರ ಬಗ್ಗೆ ಯಾವುದೇ ಪರಿಚಯ ಅಗತ್ಯವಿಲ್ಲ, ಅವರು ತಮ್ಮ ಬದುಕು, ಚಿಂತನೆ, ದಾನ-ಧರ್ಮ ಮತ್ತು ಆಧ್ಯಾತ್ಮಿಕತೆಯಿಂದ ಚಿರಪರಿಚಿತರು . ಅವರ ಆಧ್ಯಾತ್ಮಿಕತೆ ದೇಶದ ಮಿಲಿಯಾಂತರ ಜನತೆಗೆ ಮತ್ತು ವಿದೇಶೀಯರಿಗೆ ಪ್ರೇರಣೆ ನೀಡಿದೆ ಮತ್ತು ಮಾರ್ಗದರ್ಶನ ಮಾಡಿದೆ ಎಂದರು. ನ್ಯಾಯಮೂರ್ತಿ ಭಟ್ಟ ಅವರು ಪ್ರಸ್ತುತ ಇರುವ ಜಾಗತಿಕ ಸಾಂಕ್ರಾಮಿಕದ ಸಮಯದಲ್ಲಿ ಶ್ರೀ ಗುರೂಜಿ ಅವರ ಧಾರ್ಮಿಕ ಮತ್ತು ಪ್ರೇರಣಾದಾಯಕ ಮಾರ್ಗದರ್ಶನ ಅವಶ್ಯ ಎಂದೂ ಅಭಿಪ್ರಾಯಪಟ್ಟರು. ಶ್ರೀ ಗುರೂಜಿ ಅವರು ಮಾಡಿರುವ ಶ್ರೇಷ್ಟ ಮಾನವೀಯ ಮತ್ತು ಧಾರ್ಮಿಕ ಕಾರ್ಯಗಳ ಹಿನ್ನೆಲೆಯಲ್ಲಿ ಅವರಿಗೆ ಭಾರತ ಸರಕಾರ ಅವರಿಗೆ ಪದ್ಮ ವಿಭೂಷಣ ನೀಡಿ ಗೌರವಿಸಿದೆ. ಉಪಾಧ್ಯಕ್ಷರು, ನ್ಯಾಯಮಂಡಳಿಯ ಸದಸ್ಯರು, ಬಾರ್ ಅಸೋಸಿಯೇಶನ್ನುಗಳು ಮತ್ತು ಅವರ ಕುಟುಂಬದವರನ್ನು ಸ್ವಾಗತಿಸಿದ ಅವರು ಗುರೂಜಿಯವರಲ್ಲಿ ಕೇಳುಗರಿಗೆ ಆಶೀರ್ವಚನ, ಸಂದೇಶ ನೀಡುವಂತೆ ಕೋರಿಕೊಂಡರು.

ತಮ್ಮ ಪ್ರವಚನದಲ್ಲಿ ಗುರುದೇವ ಶ್ರೀ ಶ್ರೀ ರವಿಶಂಕರ ಜೀ ಅವರು ಹತಾಶೆಯಲ್ಲಿ ಮುಳುಗದೆ , ಈ ವಿಕೋಪದ ಉಜ್ವಲ ಭಾಗದತ್ತ ನೋಡುವಂತೆ ಜನತೆಗೆ ಕರೆ ನೀಡಿದರು. ಲಾಕ್ ಡೌನ್ ನಿಂದ ಪರೋಕ್ಷವಾಗಿ ಆಗಿರುವ ಪ್ರಯೋಜನಗಳನ್ನು ಅನುಭವಿಸಲು ಸಲಹೆ ಮಾಡಿದ ಅವರು ಈ ಜಾಗತಿಕ ಸಾಂಕ್ರಾಮಿಕ ಭೌಗೋಳಿಕ ಗಡಿಗಳನ್ನು ಮೀರಿ, ಸಂಸ್ಕೃತಿಗಳು, ನಾಗರಿಕತೆಗಳನ್ನು , ವ್ಯಕ್ತಿತ್ವಗಳನ್ನು ದಾಟಿ, ಮಾನವ ಜೀವನದಲ್ಲಿ ಎಲ್ಲರೂ ಒಂದೇ ಎಂಬ ಅರಿವನ್ನು ಇದ್ದಕ್ಕಿದ್ದಂತೆ ಮೂಡಿಸಿದೆ ಎಂದರು. ಇದು ಪರಸ್ಪರ ಸಹಾಯ ಮಾಡಬೇಕಾದ ಆವಶ್ಯಕತೆಯನ್ನು ನಮ್ಮ ಮನಸ್ಸಿನೆದುರು ತಂದಿದೆ ಮತ್ತು ಮಾನವ ಬದುಕಿನ ನವಿರುತನದ ಬಗ್ಗೆಯೂ ಅರಿವು ಮೂಡಿಸಿದೆ ಎಂದವರು ಹೇಳಿದರು. ಈ ಜಾಗತಿಕ ಸಾಂಕ್ರಾಮಿಕ ಬದುಕಿನ ಆದ್ಯತೆಗಳನ್ನು , ಜೀವನಕ್ಕೆ ಸಂಬಂಧಿಸಿದ ಆವಶ್ಯಕತೆಗಳನ್ನು ಬದಲಾಯಿಸಿದೆ ಎಂದವರು ಹೇಳಿದರಲ್ಲದೆ ಇದು ನಮಗೆ ನಾವು ಯಾರು , ನಾವು ಏನು ಮತ್ತು ಜೀವನದ ಶಕ್ತಿಯ ವೈದೃಶ್ಯ ಏನು ಎಂಬುದರ ಬಗ್ಗೆ ಆತ್ಮ ಚಿಂತನೆ ಮಾಡಲು ಅವಕಾಶ ಒದಗಿಸಿದೆ ಎಂದರು. ಜಾಗೃತಿ, ನಿದ್ದೆ, ಮತ್ತು ಕನಸಿನ ಸ್ಥಿತಿಯಲ್ಲದೆ ಭಿನ್ನ ಸ್ಥಿತಿಯಾದ -ಧ್ಯಾನ ಸ್ಥಿತಿಯೆಂಬ ನಾಲ್ಕನೇ ಸ್ಥಿತಿಯನ್ನು ಅನುಭವಿಸಲು ನಮ್ಮ ಶಕ್ತಿಯ ಮೂಲವನ್ನು ಸಮಗ್ರೀಕರಣ ಮಾಡಬೇಕಾದ ಅಗತ್ಯವನ್ನು ಅವರು ಪ್ರತಿಪಾದಿಸಿದರು. ದೈಹಿಕ ಮತ್ತು ಮಾನಸಿಕ ವೈಕಲ್ಯಗಳಿಗೆ ಕಾರಣವಾಗಬಹುದಾದ ಯಾವುದೇ ಅಸ್ವಸ್ಥತೆಯನ್ನು ಸರಿಯಾದ ಆಹಾರ, ನಿದ್ದೆ, ಉಸಿರಾಟ ಮತ್ತು ಧ್ಯಾನದ ಮೂಲಕ ಸಮತೋಲನ ಮಾಡಬೇಕಾದ ಅಗತ್ಯವನ್ನೂ ಅವರು ಒತ್ತಿ ಹೇಳಿದರು.

ಈ ಪ್ರವಚನವನ್ನು ಅನುಸರಿಸಿ ಪ್ರಶ್ನೋತ್ತರ ಕಾರ್ಯಕ್ರಮ ನಡೆಯಿತು. ಕೊರೊನಾ ಜಾಗತಿಕ ಸಾಂಕ್ರಾಮಿಕ ವಿರುದ್ದ ಹೋರಾಡುತ್ತಿರುವ ವೈದ್ಯಕೀಯ, ಅರೆವೈದ್ಯಕೀಯ ಮತ್ತು ಪೊಲೀಸ್ ಪಡೆಗಳಿಗೆ ಶಕ್ತಿ ಮತ್ತು ಭರವಸೆ ನೀಡುವ ಹಾದಿಯನ್ನು ತೋರಿಸುವಂತೆ ನ್ಯಾಯಮೂರ್ತಿ ಭಟ್ಟ ಅವರು ಮಾಡಿದ ಕೋರಿಕೆಗೆ ಉತ್ತರಿಸಿದ ಗುರೂಜಿ ಅವರು ಜಾಗತಿಕ ಸಾಂಕ್ರಾಮಿಕದ ವಿರುದ್ದ ಹೋರಾಡುತ್ತಿರುವ ಪಡೆಗಳು ಇಂದಿನ ಪರಿಸ್ಥಿತಿಯಲ್ಲಿ ಕೆಲಸದ ಒತ್ತಡ ಮತ್ತು ವೈಯಕ್ತಿಕ ಆವಶ್ಯಕತೆಗಳ ನಡುವೆ ಸಮತೋಲನ ಸಾಧಿಸಬೇಕು ಮತ್ತು ಖಿನ್ನತೆಗಾಗಲೀ, ಚಿಂತೆಗಾಗಲೀ ಒಳಗಾಗಬಾರದು ಎಂದರಲ್ಲದೆ ಧ್ಯಾನ ಮತ್ತು ಯೋಗದಲ್ಲಿ ತೊಡಗುವಂತೆ ಸಲಹೆ ಮಾಡಿದರು. ಇದು ಬಹಳ ಸಮಾಧಾನವನ್ನು ನೀಡುತ್ತದೆ, ಧ್ಯಾನವು ಔಷಧಿಯಂತೆ ಕೆಲಸ ಮಾಡುತ್ತದೆ, ಇದು ಬೆಂಗಳೂರಿನ ನಿಮ್ಹಾನ್ಸ್ ನಿಂದಲೂ ಸಾಬೀತಾಗಿದೆ ಎಂಬುದನ್ನು ನೆನಪಿಸಿದರು.

ಕೇಂದ್ರ ಕಾನೂನು ಕಾರ್ಯದರ್ಶಿ ಶ್ರೀ ಅನೂಪ್ ಕುಮಾರ್ ಮೆಂಡ್ರಿಟ್ಟಾ ಅವರು ಜಾಗತಿಕ ಸಾಂಕ್ರಾಮಿಕದ ಈ ಕಾಲದಲ್ಲಿ ಜೀವನ ಮತ್ತು ಉದ್ಯೋಗದ ಅನಿಶ್ಚಿತತೆಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಗುರೂಜಿ ಅವರು ಜಗತ್ತು ಈ ಹಿಂದೆ ಹಲವಾರು ಜಾಗತಿಕ ಸಾಂಕ್ರಾಮಿಕಗಳನ್ನು ನೋಡಿದೆ, ಅದನ್ನು ಮಾನವಕುಲ ಯಶಸ್ವಿಯಾಗಿ ಎದುರಿಸಿ ಮುನ್ನಡೆದಿದೆ ಎಂದರಲ್ಲದೆ ಭರವಸೆಯನ್ನು ಇಡಿ, ಸುತ್ತಲಿನವರಿಗೆ ಸಹಾಯ ಮಾಡುತ್ತಿರಿ ಎಂದರು.

ಐ.ಟಿ.ಎ.ಐ.ಯ ಉಪಾಧ್ಯಕ್ಷ ಶ್ರೀ ಪ್ರಮೋದ್ ಜಗತಾಪ್ ಅವರು ದೈನಂದಿನ ಕೆಲಸಗಳಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಅಂತಃಸತ್ವಗೊಳಿಸುವ ಬಗ್ಗೆ ಗುರೂಜಿ ಅವರ ಮಾರ್ಗದರ್ಶನ ಕೋರಿದರು . 6 ರಿಂದ 8 ಗಂಟೆ ಕಾಲ ಸರಿಯಾದ ಪ್ರಮಾಣದಲ್ಲಿ ನಿದ್ದೆ, ಮನುಷ್ಯ ದೇಹದ ಏಳು ವ್ಯವಸ್ಥೆಗಳನ್ನು ಉದ್ದೀಪನಗೊಳಿಸಲು 15 ನಿಮಿಷ ಕಾಲ ಯೋಗದ ಮಹತ್ವವನ್ನು ಇದಕ್ಕೆ ಗುರೂಜಿ ಪ್ರಸ್ತಾಪಿಸಿದರು.

 

ಐ.ಟಿ.ಎ.ಟಿ. ಉಪಾಧ್ಯಕ್ಷ ಶ್ರೀ ಎನ್.ವಿ. ವಾಸುದೇವನ್ ಅವರು ಐಹಿಕ ವಸ್ತುಗಳಿಂದ ದೂರವಾಗಿ ಮಾನಸಿಕ ಸ್ಥಿರತೆ ಕಾಪಾಡಿಕೊಳ್ಳುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಗುರೂಜಿ ಅವರು ನಮ್ಮ ಹಿಂದಿನ , ಈಗಿನ ಮತ್ತು ಭವಿಷ್ಯದ ಅಸ್ಥಿರತೆ ಕುರಿತು ವಿವರಿಸಿದರು. ಈ ವಿಶ್ವದಲ್ಲಿ ನಮ್ಮ ವಾಸ ಕಾಲಮಿತಿಯಲ್ಲಿದೆ ಮತ್ತು ಪ್ರತಿಯೊಬ್ಬರೂ ಆಶಾವಾದಿಗಳಾಗಿರಬೇಕು ಮತ್ತು ಮಾನಸಿಕ ಸಮತೋಲನವನ್ನು ಕಾಯ್ದುಕೊಳ್ಳಬೇಕು ಎಂದವರು ಹೇಳಿದರು.

  • ಯ ಉಪಾಧ್ಯಕ್ಷರಾದ ಶ್ರೀಮತಿ ಸುಷ್ಮಾ ಚಾವ್ಲಾ ಅವರು ನಮ್ಮ ಅಸ್ತಿತ್ವಕ್ಕಾಗಿನ ಹೋರಾಟ ಮತ್ತು ಮನಃಶಾಂತಿಯಿಂದ ಬದುಕುವ ಬಗ್ಗೆ ಪ್ರಶ್ನೆ ಕೇಳಿದರು. ಇದಕ್ಕುತ್ತರಿಸಿದ ಗುರೂಜಿ ಅವರು ಯಾವುದೇ ಪರಿಸ್ಥಿತಿಯನ್ನು ನಮ್ಮ ಅಪರಿಮಿತ ಶಕ್ತಿಗಿಂತ ದೊಡ್ಡದು ಎಂದು ಭಾವಿಸಬಾರದು ಎಂದರು. ಜಗತ್ತು ಅನಾದಿ ಕಾಲದಿಂದಲೂ ಸುಲಲಿತವಾಗಿ ಮುನ್ನಡೆಯುತ್ತಿದೆ ಮತ್ತು ಅದು ಹಾಗೆ ಮುಂದುವರೆಯುತ್ತದೆ. ಮನಃಶಾಂತಿಯ ಕೀಲಿಕೈ ಇರುವುದು ಇಂದು ನಮಗೆ ಅನುಕೂಲಕರವಾದ ರೀತಿಯಲ್ಲಿ ಘಟನೆಗಳು ನಡೆಯುತ್ತಿಲ್ಲವಾದರೂ ನಾಳೆ ಅವು ನಮ್ಮ ಪರವಾಗಿರುತ್ತವೆ ಎಂಬಾ ಆಶಾವಾದದಲ್ಲಿ ಎಂದರು. ಅವರು ಮನಸ್ಸಿನ ಸ್ವಚ್ಚತೆಗೆ ಧ್ಯಾನವನ್ನು ಮಾಡುವಂತೆ ಸಲಹೆ ಮಾಡಿದರಲ್ಲದೆ, ಮೋಕ್ಷದ ಹಾದಿಗಾಗಿ ಮಾನಸಿಕ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುವಂತೆಯೂ ಸಲಹೆ ಮಾಡಿದರು.

ಬಾರ್ ನ ತೆರಿಗೆ ವೃತ್ತಿಪರರಾದ ಶ್ರೀ ತುಷಾರ್ ಹೆಮಾನಿ ಅವರು ನಮ್ಮ ಕಾರ್ಯ ವೇಳಾಪಟ್ಟಿಯಲ್ಲಿ ಅಧ್ಯಾತ್ಮಿಕತೆಯನ್ನು ಹೇಗೆ ಸಮ್ಮಿಳಿತಗೊಳಿಸಿಕೊಳ್ಳಬಹುದು ಎಂದು ಕೇಳಿದ ಪ್ರಶ್ನೆಗೆ ಧ್ಯಾನಕ್ಕೆ ಕೆಲವು ಸಮಯ ಮೀಸಲಿಡುವುದು ಅಸಾಧ್ಯವಾದ ಕೆಲಸ ಏನಲ್ಲ, ನಮಗೆ ಹಲ್ಲುಜ್ಜಲು ಸಾಕಷ್ಟು ಸಮಯ ಸಿಗುತ್ತಿರುವಾಗ , ಪ್ರತೀ ದಿನ ಸ್ನಾನ ಮಾಡಲು ಸಾಕಷ್ಟು ಕಾಲಾವಕಾಶ ಸಿಗುತ್ತಿರುವಾಗ ಮತ್ತು ನಮ್ಮ ದೈನಂದಿನ ಕೆಲಸ ಕಾರ್ಯಗಳಿಗೆ ಸಮಯ ಸಿಗುತ್ತಿರುವಾಗ ಜೀವನದ ಆಧ್ಯಾತ್ಮಿಕ ಸಂಗತಿಗಳಿಗೆ ಸಮಯ ಹೊಂದಿಸುವುದು ಕಷ್ಟವೇನಲ್ಲ ಎಂದವರು ಉತ್ತರಿಸಿದರು. ಪ್ರತಿಭಾ ಶಕ್ತಿಯನ್ನು ಹರಿತಗೊಳಿಸುವ ಹೂಡಿಕೆ ಇದಾಗಲಿದೆ ಎಂದು ಮತ್ತು ಆಧ್ಯಾತ್ಮಿಕ ಶ್ರೀಮಂತಿಕೆಯೊಂದಿಗೆ ಜೀವನ ನಡೆಸುವುದು ಮಾನವತೆಯ ಸೇವೆಯಲ್ಲೊಂದು ಹೂಡಿಕೆ ಎಂದೂ ವಿವರಿಸಿದರು.

ಕೊನೆಯಲ್ಲಿ ಐ.ಟಿ.ಎ.ಟಿ.ಯ ಉಪಾಧ್ಯಕ್ಷ ಶ್ರೀ ಪ್ರಮೋದ್ ಕುಮಾರ ಅವರು ಹುಟ್ಟಿನಲ್ಲಿ ಯಾವುದಾದರೂ ಉದ್ದೇಶ ಅಥವಾ ಕಾರಣಗಳಿವೆಯೇ , ಒಂದು ವೇಳೆ ಅವು ಇರುವುದೇ ಆದಲ್ಲಿ ಅವುಗಳನ್ನು ಈಡೇರಿಸುವುದು, ಕಂಡುಕೊಳ್ಳುವುದು ಹೇಗೆ ಎಂದು ಪ್ರಶ್ನೆ ಹಾಕಿದರು. ಇದರ ಬಗ್ಗೆ ಬೇರೊಬ್ಬರನ್ನು ಕೇಳುವ ಪ್ರಶ್ನೆ ಇಲ್ಲ. ಇದನ್ನು ಪದೇ ಪದೇ ಅವರೇ ಪ್ರಶ್ನೆ ಹಾಕಿಕೊಂಡು ತಮಗೆ ತಾವೇ ತೀರ್ಮಾನಕ್ಕೆ ಬರಬೇಕು ಎಂದರು. ಗುರಿಯನ್ನು ಸಾಧಿಸಲು ಅಥವಾ ತಲುಪಲು ಇದು ಒಂದು ಸಾಧನ ಅಥವಾ ವಾಹನ ಇದ್ದಂತೆ ಎಂದ ಅವರು ಜೀವನದ ಉದ್ದೇಶ ನಮಗಾಗಲೀ, ಇತರರಿಗಾಗಲೀ ದಾರುಣತೆಯನ್ನಾಗಲೀ , ಹೀನಾಯ ಸ್ಥಿತಿಯನ್ನಾಗಲೀ ತರುವುದಲ್ಲ, ಮತ್ತು ಅದನ್ನು ಐಹಿಕ ಸವಲತ್ತು, ಅನುಕೂಲತೆಗಳನ್ನು ಗಳಿಸುವುದಕ್ಕೆ ವಿನಿಯೋಗಿಸುವುದರಲ್ಲಾಗಲೀ ಅದು ಅಡಗಿಲ್ಲ ಎಂದವರು ವಿವರಿಸಿದರು.

ಕೇಳುಗರ ಉತ್ಸಾಹದ ಪಾಲ್ಗೊಳ್ಳುವಿಕೆ ಅವರ ವೈವಿಧ್ಯಮಯ ಪ್ರಶ್ನೆಗಳಲ್ಲಿ ಪ್ರತಿಧ್ವನಿಸಿತು. ಭಾರತೀಯರಲ್ಲಿ ಮನುಷ್ಯತ್ವದ ನೈತಿಕತೆಯನ್ನು ಎತ್ತರಿಸುವಿಕೆಯಿಂದ ಹಿಡಿದು ಪ್ರಾಪಂಚಿಕ ಕರ್ತವ್ಯವನ್ನು ನಿರ್ವಹಿಸುವಲ್ಲಿ ವೈಯಕ್ತಿಕ ಮಾರ್ಗದರ್ಶನ ಕೋರುವವರೆಗೆ ಪ್ರಶ್ನೆಗಳು ಕೇಳಲ್ಪಟ್ಟವು. ಮನಃಶಾಂತಿಯನ್ನು ಹೇಗೆ ಕಾಪಾಡಿಕೊಳ್ಳುವುದು ಮತ್ತು ದೈನಂದಿನ ಹೊಯ್ದಾಟಗಳಲ್ಲಿ ಆಧ್ಯಾತ್ಮಿಕತೆಯನ್ನು ಹೇಗೆ ಸಮ್ಮಿಳಿತಗೊಳಿಸಿಕೊಳ್ಳಬಹುದು ಎಂಬ ಬಗ್ಗೆಯೂ ಪ್ರಶ್ನೆಗೆ ಉತ್ತರಗಳನ್ನು ಕೇಳಲಾಯಿತು.

  • ಬಳಿಕ ಧ್ಯಾನ ಕೂಟ , ಸುಮಾರು 20 ನಿಮಿಷ ಕಾಲ ನಡೆಯಿತು. ಓರ್ವರ ಆಂತರಿಕ ವ್ಯಕ್ತಿತ್ವದ ಜೊತೆ ಮರುಸಂಪರ್ಕ ಬೆಳೆಸುವ, ಮನಸ್ಸಿನಲ್ಲಿ ಉದ್ದೀಪಿಸಲ್ಪಡುವ ಭಾವನೆಗಳು ಮತ್ತು ಈ ಐಹಿಕ ಜಗತ್ತಿನಿಂದ ಸಂಪರ್ಕ ವಿರಹಿತಗೊಂಡು ಪೂರ್ಣಪ್ರಜ್ಞೆಯಲ್ಲಿ ವಿಹರಿಸುವ ಪ್ರಕ್ರಿಯೆಯನ್ನು ಇದು ಒಳಗೊಂಡಿತ್ತು. ಗುರೂಜಿಯವರ ಧ್ವನಿ ಈ ಸ್ಥಿತಿಯುದ್ದಕ್ಕೂ ಮಾರ್ಗದರ್ಶನ ಮಾಡುತ್ತಿತ್ತು ಮತ್ತು ಪ್ರತಿಯೊಬ್ಬರೂ ತಮ್ಮ ಕಣ್ಣುಗಳನ್ನು ತೆರೆದಾಗ ಎಲ್ಲಾ ನಕಾರಾತ್ಮಕ ಚಿಂತನೆಗಳೂ ದೂರವಾಗಿದ್ದವು.

ಕಾರ್ಯಕ್ರಮ ಮುಕ್ತಾಯದ ಹಂತ ತಲುಪುತ್ತಿದ್ದಂತೆ ಐ.ಟಿ.ಎ.ಟಿ.ಯ ದಿಲ್ಲಿ ವಲಯದ ಉಪಾಧ್ಯಕ್ಷ ಜಿ.ಎಸ್. ಪನ್ನು ಅವರು ಗುರೂಜಿಯವರು ಅವರ ಅಮೂಲ್ಯ ಸಮಯ ಮತ್ತು ಜ್ಞಾನದ ಸಂಪತ್ತನ್ನು ಹಂಚಿಕೊಂಡದ್ದಕ್ಕಾಗಿ ಕೃತಜ್ಞತೆ ಸಲ್ಲಿಸಿದರು. ಧ್ಯಾನ ಕೂಟದಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡ ಪನ್ನು ಅವರು ಹೇಗೆ ಮನಸ್ಸಿನ ಮತ್ತು ದೇಹದ ಭಾವನೆಗಳು ಏಕೀಭವಿಸಿ ಮುಕ್ತವಾಗಿ ತೇಲುವಂತಾಗುವ ಅನುಭವವನ್ನು ವಿವರಿಸಿದರು. ಅರ್ಥ ಪೂರ್ಣ ಮತ್ತು ಉದ್ದೇಶಪೂರ್ವಕ ಜೀವನಕ್ಕಾಗಿ ಗುರೂಜಿ ಅವರ ಸಂದೇಶವನ್ನು ಮನೆಗೆ ಕೊಂಡೊಯ್ಯುವಂತೆ ಕೇಳುಗರನ್ನು ಕೋರಿದ ಶ್ರೀ ಪನ್ನು ಅವರು ದೇವರಲ್ಲಿ, ನಮ್ಮಲ್ಲಿ ಮತ್ತು ವಿಶಾಲ ವ್ಯಾಪ್ತಿಯಲ್ಲಿ ಸಮಾಜದ ಒಳಿತಿನಲ್ಲಿ ನಮ್ಮ ನಂಬಿಕೆಯನ್ನು ಮರುನವೀಕರಿಸಿದ ಸಲಹೆಗಳಿಗಾಗಿ ಇಡೀ ’ಸಂಗತ್” ಪರವಾಗಿ ಗುರೂಜಿಯವರಿಗೆ ಮತ್ತೊಮ್ಮೆ ವಂದನೆಗಳನ್ನು ಸಲ್ಲಿಸಿದರು.

 

*******

 



(Release ID: 1613724) Visitor Counter : 169