ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ

ಎಚ್ ಆರ್ ಡಿ ಸಚಿವಾಲಯದ ಸಲಹೆಯಂತೆ ಕೇಂದ್ರೀಯ ವಿದ್ಯಾಲಯದ ಸಂಘಟನೆಯಿಂದ ದೆಹಲಿ ಪ್ರದೇಶದಲ್ಲಿ ಕೋವಿಡ್-19 ಸಂಕಷ್ಟ ಸ್ಥಿತಿಯಲ್ಲಿ ವಿದ್ಯಾರ್ಥಿಗಳ ಬೋಧನೆಗೆ ಹಲವು ಕ್ರಮ

Posted On: 11 APR 2020 6:35PM by PIB Bengaluru

ಎಚ್ ಆರ್ ಡಿ ಸಚಿವಾಲಯದ ಸಲಹೆಯಂತೆ ಕೇಂದ್ರೀಯ ವಿದ್ಯಾಲಯದ ಸಂಘಟನೆಯಿಂದ ದೆಹಲಿ ಪ್ರದೇಶದಲ್ಲಿ ಕೋವಿಡ್-19 ಸಂಕಷ್ಟ ಸ್ಥಿತಿಯಲ್ಲಿ ವಿದ್ಯಾರ್ಥಿಗಳ ಬೋಧನೆಗೆ ಹಲವು ಕ್ರಮ

ದೇಶಾದ್ಯಂತ ವಿದ್ಯಾರ್ಥಿಗಳ ಶೈಕ್ಷಣಿಕ ಹಿತ ಮತ್ತು ಸುರಕ್ಷತೆ ಖಾತ್ರಿಪಡಿಸಲು ನಾವು ಬದ್ಧ – ಕೇಂದ್ರ ಎಚ್ ಆರ್ ಡಿ ಸಚಿವಾಲಯ
ದೆಹಲಿ ಪ್ರದೇಶದ ಕೆವಿಎಸ್ ಗಳಲ್ಲಿ ಸೋಮವಾರದಿಂದ VI ರಿಂದ VIII ತರಗತಿಗಳಿಗೆ ಆನ್ ಲೈನ್ ನೇರ ತರಗತಿಗಳು ಆರಂಭ

ಈಗಾಗಲೇ IX ರಿಂದ XIIರ ವರೆಗಿನ ತರಗತಿಗಳಿಗೆ ಆನ್ ಲೈನ್ ಬೋಧನೆ ಪ್ರಗತಿಯಲ್ಲಿ

 

ಇಡೀ ವಿಶ್ವ ಕೋವಿಡ್-19 ಸಾಂಕ್ರಾಮಿಕದ ವಿರುದ್ಧ ಹೋರಾಡುತ್ತಿದೆ ಮತ್ತು ಈ ಲಾಕ್ ಡೌನ್ ಅವಧಿ ಎಲ್ಲ ಪೋಷಕರು, ವಿದ್ಯಾರ್ಥಿಗಳು ಮತ್ತು ಅವರ ಶಿಕ್ಷಕರಿಗೆ ಪರೀಕ್ಷೆಯ ಸಮಯವಾಗಿದೆ. ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಶ್ರೀ ರಮೇಶ್ ಪೋಖ್ರಿಯಾಲ್ ನಿಶಾಂಕ್, ದೇಶಾದ್ಯಂತ ಎಲ್ಲ ಶೈಕ್ಷಣಿಕ ಸಂಸ್ಥೆಗಳ ಮುಖ್ಯಸ್ಥರಿಗೆ ಶೈಕ್ಷಣಿಕ ಕ್ಯಾಲೆಂಡರ್ ಅನ್ನು ಗಮನದಲ್ಲಿರಿಸಿಕೊಂಡು ಮಕ್ಕಳ ಸಮಯವನ್ನು ಅರ್ಥಪೂರ್ಣವಾಗಿ ಕಳೆಯುವಂತೆ ಮಾಡಲು ಡಿಜಿಟಲ್ ವೇದಿಕೆಗಳನ್ನು ಗರಿಷ್ಠ ರೀತಿಯಲ್ಲಿ ಬಳಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದ್ದರು. ಅವರು ದೇಶಾದ್ಯಂತ ಮಕ್ಕಳ ಶೈಕ್ಷಣಿಕ ಕಲ್ಯಾಣ ಮತ್ತು ಸುರಕ್ಷತೆ ಕಾಯ್ದುಕೊಳ್ಳಲು ಎಚ್ ಆರ್ ಡಿ ಸಚಿವಾಲಯ ಬದ್ಧವಾಗಿದೆ ಎಂದು ಹೇಳಿದ್ದರು. ಎಚ್ ಆರ್ ಡಿ ಸಚಿವಾಲಯದ ಸಲಹೆಯನ್ನು ಗಮನದಲ್ಲಿರಿಸಿಕೊಂಡು ಕೇಂದ್ರೀಯ ವಿದ್ಯಾಲಯ ಸಂಘಟನೆಯ ದೆಹಲಿ ಪ್ರಾಂತ್ಯದ ಪ್ರಾದೇಶಿಕ ಕಚೇರಿ VI ರಿಂದ XII ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಎಲ್ಲ ವಿಷಯಗಳಲ್ಲಿ ಆನ್ ಲೈನ್ ತರಗತಿಗಳನ್ನು ಆರಂಭಿಸಲು ಫೇಸ್ ಬುಕ್ ಮತ್ತು ಯೂಟ್ಯೂಬ್ ಗಳಲ್ಲಿ ಐಡಿಗಳನ್ನು ಸೃಷ್ಟಿಸುವ ಕಾರ್ಯವನ್ನು ಕೈಗೊಂಡಿದೆ.

VI ರಿಂದ VIIIರ ವರೆಗಿನ ತರಗತಿಗಳಿಗೆ ಸೋಮವಾರದಿಂದ ಆನ್ ಲೈನ್ ನೇರ ತರಗತಿಗಳು ಆರಂಭವಾಗಲಿದ್ದು, ಕೆವಿಎಸ್ ದೆಹಲಿ ಪ್ರದೇಶದಲ್ಲಿ ಈಗಾಗಲೇ IX ರಿಂದ XIIನೇ ತರಗತಿ ವರೆಗೆ ಫೇಸ್ ಬುಕ್ ಮತ್ತು ಯೂಟ್ಯೂಬ್ ಗಳಲ್ಲಿ ಆನ್ ಲೈನ್ ನೇರ ತರಗತಿಗಳು ಆರಂಭವಾಗಿದೆ. ಇದಕ್ಕೆ ವಿದ್ಯಾರ್ಥಿಗಳು ಮತ್ತು ಪೋಷಕರಿಂದ ಭಾರೀ ಸ್ಪಂದನೆ ವ್ಯಕ್ತವಾಗಿದ್ದು, ಎರಡು ದಿನಗಳು ತರಗತಿ ನಡೆದಿರುವುದಕ್ಕೆ ಸುಮಾರು 90,000 ಮಂದಿ ವೀಕ್ಷಿಸಿದ್ದಾರೆ ಹಾಗೂ 40,000 ಮಂದಿ ಕಾಮೆಂಟ್ ಮಾಡಿದ್ದಾರೆ. ದೆಹಲಿ ಪ್ರಾಂತ್ಯದಲ್ಲಿ ಯೂಟ್ಯೂಬ್ ಚಾನಲ್ ಗೆ ಸುಮಾರು 13343 ಸಬ್ ಸ್ಕ್ರೈಬರ್ ಗಳಿದ್ದಾರೆ. ಎಲ್ಲಾ ವಿಷಯಗಳ, ಎಲ್ಲ ತರಗತಿಗಳ ಶಿಕ್ಷಕರ ತಂಡ ನೇರ ಸಂವಾದದ ತರಗತಿಗಳಲ್ಲಿ ಭಾಗವಹಿಸುತ್ತಿದ್ದಾರೆ. ಎಲ್ಲ ವಿಷಯಗಳ ವೇಳಾಪಟ್ಟಿಯನ್ನು ಸಿದ್ಧಪಡಿಸಲಾಗಿದ್ದು, ಅವುಗಳನ್ನು ಶಾಲಾ ವಾಟ್ಸ್ ಅಪ್ ಗ್ರೂಪ್ ಮತ್ತು ಯೂಟ್ಯೂಬ್ ಗಳಲ್ಲಿ ವಿದ್ಯಾರ್ಥಿಗಳಿಗೆ ಶೇರ್ ಮಾಡಲಾಗಿದೆ. ದೆಹಲಿ ಪ್ರಾಂತ್ಯದ ಕೆವಿಎಸ್ ಶಾಲೆಗಳ ಪ್ರಾಂಶುಪಾಲರಿಗೆ ಈ ನೇರ ತರಗತಿಗಳ ಕುರಿತು ವಿಶೇಷ ನಿರ್ದೇಶನಗಳನ್ನು ನೀಡಲಾಗಿದೆ. ನಂತರ ಅವರು ಅದನ್ನು ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಬಳಿ ಹಂಚಿಕೊಂಡಿದ್ದಾರೆ. ಮಕ್ಕಳು ಈ ಪಾಠಗಳು, ತರಗತಿ ಮತ್ತು ವಿಷಯವಾರು ತಿಳಿದುಕೊಳ್ಳಲು ಯೂಟ್ಯೂಬ್ ನಲ್ಲಿ ಪ್ಲೇಲಿಸ್ಟ್ ಅನ್ನು ಸೃಷ್ಟಿಸಲಾಗಿದೆ.

ಪ್ರಸ್ತುತ ಶಿಕ್ಷಕರು ಪಾಠಗಳನ್ನು ನಾನಾ ಬಗೆಯ ಸಾಫ್ಟ್ ವೇರ್ ಗಳನ್ನು ಅಂದರೆ ಪವರ್ ಪಾಯಿಂಟ್ ವಿಂಡೋಸ್, ಮೂವಿ ಮೇಕರ್ಸ್ ಮತ್ತು ಸ್ಕ್ರೀನ್ ರೆಕಾರ್ಡರ್ ಮತ್ತಿತರವುಗಳನ್ನು ಬಳಸಿ, ಶೈಕ್ಷಣಿಕ ವಿಡಿಯೋಗಳನ್ನು ನಿರ್ಮಿಸುತ್ತಿದ್ದಾರೆ. ಈ ಪವರ್ ಪಾಯಿಂಟ್ ಪ್ರೆಸೆಂಟೇಶನ್ ಗಳನ್ನು ಆಡಿಯೋ ರೂಪದಲ್ಲಿ ವಿವರಿಸಲಾಗಿದೆ ಮತ್ತು ಅವುಗಳನ್ನು ವಿಡಿಯೋ ರೂಪದಲ್ಲೂ ಮಾರ್ಪಡಿಸಲಾಗಿದೆ. ನಂತರ ಈ ಉಪನ್ಯಾಸಗಳನ್ನು ನಿಗದಿತ ಯೂಟ್ಯೂಬ್ ಚಾನಲ್ ನಲ್ಲಿ ಅಪ್ ಲೋಡ್ ಮಾಡಲಾಗುವುದು, ಅಲ್ಲದೆ ಶಿಕ್ಷಕರು ಮನೆ ಪಾಠಕ್ಕೆ ಪ್ರಶ್ನೆಗಳನ್ನು ಕೇಳುತ್ತಾರೆ, ಜೊತೆಗೆ ಅಸೈನ್ ಮೆಂಟ್ ಗಳನ್ನು ಕೊಡುತ್ತಾರೆ. ಅವುಗಳನ್ನು ಗೂಗಲ್ ಫಾರ್ಮ್, ಕಾಹೂಟ್.ಕಾಮ್(ಫಾರ್ ಎಂಸಿಕ್ಯೂ)( Kahoot.com) ಹಾಟ್ ಪೊಟ್ಯಾಟೋಸ್ ಮತ್ತು ಕ್ವಿಜ್ಜಸ್.ಕಾಮ್(Quizzes.com)ನಲ್ಲಿ ನಾನಾ ಆಪ್ ಗಳು ಮತ್ತು ಸಾಫ್ಟವೇರ್ ಗಳನ್ನು ಬಳಸಿ ವಿದ್ಯಾರ್ಥಿಗಳಿಗೆ ಕಳುಹಿಸಲಾಗುವುದು. ಇಂತಹ ಬಗೆಯ ಅಸೈನ್ ಮೆಂಟ್ ಗಳು, ಮಾಮೂಲಿ ಮನೆ ಪಾಠಗಳಿಗಿಂತ ಭಿನ್ನವಾಗಿರುತ್ತವೆ ಮತ್ತು ಅತಿ ಕಡಿಮೆ ಅವಧಿ ತೆಗೆದು ಕೊಳ್ಳುತ್ತದೆ ಹಾಗೂ ಸವಾಲಿನದ್ದಾಗಿರುತ್ತದೆ ಎಂಬ ಕಾರಣಕ್ಕೆ ವಿದ್ಯಾರ್ಥಿಗಳು ಅವುಗಳನ್ನು ತುಂಬಾ ಇಷ್ಟಪಡುತ್ತಿದ್ದಾರೆ.

A close up of a logoDescription automatically generated

 

A screenshot of a cell phoneDescription automatically generated

 

A screenshot of a cell phoneDescription automatically generatedA close up of a mans faceDescription automatically generated

A screenshot of a cell phoneDescription automatically generated

 

ಪ್ರಾಥಮಿಕ ತರಗತಿಗಳ ಚಿಕ್ಕ ಮಕ್ಕಳಿಗೆ ಶಿಕ್ಷಕರು ವಿಡಿಯೋಗಳನ್ನು ರೆಕಾರ್ಡ್ ಮಾಡಿ, ನಂತರ ಅವುಗಳನ್ನು ವಾಟ್ಸ್ ಅಪ್ ಮೂಲಕ ಶೇರ್ ಮಾಡಲಾಗುವುದು ಮತ್ತು ವಿದ್ಯಾರ್ಥಿಗಳು ಹಾಗೂ ಅವರ ಪೋಷಕರಿಗೆ ನೆರವಾಗುವಂತೆ ಯೂಟ್ಯೂಬ್ ನಲ್ಲಿ ಅಪ್ ಲೋಡ್ ಮಾಡಲಾಗುವುದು. ಕಾಮೆಂಟ್ ವಿಭಾಗದಲ್ಲಿ ಅಥವಾ ವಾಟ್ಸ್ ಅಪ್ ಚಾರ್ಟ್ ಗಳಲ್ಲಿ ಪೋಷಕರ ಪ್ರಶ್ನೆಗಳಿಗೆ ಉತ್ತರಿಸಲಾಗುವುದು. ಪ್ರತಿಯೊಂದು ವಿಷಯಕ್ಕೂ ಪ್ರತ್ಯೇಕ ನೋಟ್ ಪುಸ್ತಕಗಳನ್ನು ಇಟ್ಟುಕೊಳ್ಳುವಂತೆ ಎಲ್ಲ ವಿದ್ಯಾರ್ಥಿಗಳಿಗೆ ಸೂಚಿಸಲಾಗಿದೆ.

ಸಾಮಾಜಿಕ ಅಂತರದ ಭಾಗ ಮತ್ತು ಮನೆಯಲ್ಲೇ ಅಥವಾ ಹಾಸ್ಟೆಲ್ ನಲ್ಲೇ ಇರಬೇಕು ಎಂಬ ಉದ್ದೇಶಕ್ಕೆ ಎಂಎಚ್ಆರ್ ಡಿ/ಎನ್ ಸಿಇಆರ್ ಟಿ/ಸಿಬಿಎಸ್ಇ ಗಳು ಸ್ವಯಂ, ದೀಕ್ಷಾ, ಇ-ಪಾಠಾಶಾಲಾ ಪೋರ್ಟಲ್ ಗಳ ಮೂಲಕ ಮುಕ್ತ ಸಂಪನ್ಮೂಲಗಳನ್ನು ಒದಗಿಸಲಾಗುತ್ತಿದೆ. ಇವುಗಳ ಲಭ್ಯತೆ ಪಡೆದಿರುವ ವಿದ್ಯಾರ್ಥಿಗಳು ಭಾರತ ಮತ್ತು ವಿದೇಶಗಳಲ್ಲಿನ ಲಿಂಕ್ ಗಳ ಮೂಲಕ ಐಸಿಟಿ ಉಪಕ್ರಮದಡಿ ಕಲಿಕೆ ಮಾಡಿ, ತಮ್ಮ ಜ್ಞಾನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಲು ಸಾಧ್ಯವಾಗಿದೆ.

ಅಸೈನ್ ಮೆಂಟ್ ಗಳು, ಬೋಧನಾ ಕಲಿಕೆಯ ಭಾಗವಾಗಿದ್ದು, ಅವುಗಳನ್ನು ಸಂಬಂಧಿಸಿದ ವಿಷಯಗಳ ಶಿಕ್ಷಕರು ಮೇಲ್ವಿಚಾರಣೆ ನಡೆಸುವರು. ಪ್ರತಿಯೊಂದು ವಿಷಯದ ಶಿಕ್ಷಕರು ಕನಿಷ್ಠ ಪ್ರತಿ ದಿನ ಐವರು ಮಕ್ಕಳಿಗೆ ಕರೆ ಮಾಡಿ ಅವರ ಕಲಿಕೆಯ ಬಗ್ಗೆ ನಿಗಾವಹಿಸಬೇಕು.

ಶಿಕ್ಷಣ ತಜ್ಞರ ಈ ಉಪಕ್ರಮಗಳು ಮತ್ತು ಸಮಗ್ರ ಪ್ರಯತ್ನಗಳಿಂದಾಗಿ ವಿದ್ಯಾರ್ಥಿಗಳಿಗೆ ಸ್ವಯಂ ಆಧಾರದಲ್ಲಿ ಕಲಿಕೆ ಮಾಡಲು ಮತ್ತು ಅವರಿಗೆ ತಮ್ಮದೇ ಆದ ಕಲಿಕಾ ಮಾರ್ಗ ಕಂಡುಕೊಳ್ಳಲು ಸಹಾಯಕವಾಗುತ್ತದೆ. ಏಕೆಂದರೆ ಅವರು ತಮ್ಮ ಮನೆಯಲ್ಲೇ ಅತ್ಯಂತ ಸುರಕ್ಷಿತವಾಗಿ ಇರುತ್ತಾರೆ. ಆದರೂ ಅವರು ತಮ್ಮ ಪಠ್ಯದ ಜೊತೆ ಸಂವಹನ ಹೊಂದಿರುತ್ತಾರೆ.

*****

 



(Release ID: 1613554) Visitor Counter : 218