ಕೃಷಿ ಸಚಿವಾಲಯ

ಲಾಕ್ ಡೌನ್ ನಿಯಮದಿಂದ ಹೊರಬಂದು ಯಾವುದೇ ಅಡೆತಡೆ ಇಲ್ಲದೆ, ನಿರಂತರವಾಗಿ ಮುಂದುವರಿದಿರುವ ಬೇಸಿಗೆ ಬೆಳೆ ಬಿತ್ತನೆ ಕಾರ್ಯ

Posted On: 11 APR 2020 5:37PM by PIB Bengaluru

ಲಾಕ್ ಡೌನ್ ನಿಯಮದಿಂದ ಹೊರಬಂದು ಯಾವುದೇ ಅಡೆತಡೆ ಇಲ್ಲದೆ, ನಿರಂತರವಾಗಿ ಮುಂದುವರಿದಿರುವ ಬೇಸಿಗೆ ಬೆಳೆ ಬಿತ್ತನೆ ಕಾರ್ಯ

ಬೇಸಿಗೆ ಬೆಳೆಯ ಬಿತ್ತನೆ ಪ್ರದೇಶ ಗಣನೀಯವಾಗಿ ಏರಿಕೆ; ಭತ್ತದ ಬೆಳೆಗೆ ಹೆಚ್ಚಿನ ಒತ್ತು

 

ಕೋವಿಡ್-19 ರೋಗದ ವಿರುದ್ಧ ಹೋರಾಡಲು ಮಾರ್ಚ್ 24 ರಿಂದೀಚೆಗೆ ಪರಿಣಾಮಕಾರಿ 21 ದಿನಗಳ ಲಾಕ್ ಡೌನ್ ಮತ್ತು ಸಾಂಕ್ರಾಮಿಕ ಕೊರೊನಾ ವ್ಯಾಪಿಸುವ ಭೀತಿಯ ಕಷ್ಟಗಳ ಅನುಭವಗಳ ನಡುವೆಯೂ ಬೇಸಿಗೆ ಬೆಳೆ ಬಿತ್ತನೆ ಕಾರ್ಯ ತೃಪ್ತಿಕರವಾಗಿ ಪ್ರಗತಿಯಲ್ಲಿದೆ. ಕೃಷಿ, ಸಹಕಾರ ಮತ್ತು ರೈತರ ಕಲ್ಯಾಣ ಇಲಾಖೆ 2020ರ ಏಪ್ರಿಲ್ 10ರ ವರೆಗೆ ಕಲೆಹಾಕಿರುವ ಅಂಕಿ-ಅಂಶಗಳ ಪ್ರಕಾರ ಒಟ್ಟಾರೆ ಬೇಸಿಗೆ ಬೆಳೆ ಬಿತ್ತನೆ ಪ್ರದೇಶ (ಭತ್ತ, ಬೇಳೆ-ಕಾಳು, ದ್ವಿದಳ ಧಾನ್ಯಗಳು ಮತ್ತು ಎಣ್ಣೆಬೀಜ ಸೇರಿ) ಗಣನೀಯವಾಗಿ ಏರಿಕೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ 11.64 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಹೆಚ್ಚುವರಿಯಾಗಿ ಬಿತ್ತನೆ ಕಾರ್ಯ ನಡೆದಿದೆ. ಕಳೆದ ಒಂದು ತಿಂಗಳಿನಿಂದ ವಿಶೇಷವಾಗಿ ಲಾಕ್ ಡೌನ್ ನಂತರ ಅಂದರೆ 2020ರ ಮಾರ್ಚ್ 25ರಿಂದೀಚೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಯಮ ಮತ್ತು ಹಲವು ನಿರ್ಬಂಧಗಳ ನಡುವೆಯೇ ಈ ಸಾಧನೆಯಾಗಿದೆ. 2018-19ನೇ ಸಾಲಿನಲ್ಲಿ ಒಟ್ಟು 37.12 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ನಡೆದಿತ್ತು. ಈ ವರ್ಷ 2019-20ನೇ ಸಾಲಿನಲ್ಲಿ ಬೇಸಿಗೆ ಬೆಳೆ ಬಿತ್ತನೆ ಕಾರ್ಯ 48.76 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ನಡೆದಿದೆ. ಕಳೆದ ವರ್ಷ ಏಪ್ರಿಲ್ 10ಕ್ಕೆ ಕೊನೆಗೊಂಡ ವಾರದಲ್ಲಿ 41.81 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿತ್ತು.

ಬೇಸಿಗೆ ಬೆಳೆಗಳಲ್ಲಿ ಅತ್ಯಂತ ಪ್ರಮುಖವಾಗಿ ಬಿತ್ತನೆಯಾಗಿರುವ ಪ್ರದೇಶ ಎಂದರೆ ಭತ್ತ, ಇದು 8.77 ಲಕ್ಷ ಹೆಕ್ಟೇರ್ ನಲ್ಲಿ ಬಿತ್ತನೆ ಕಾರ್ಯ ನಡೆದು, ಭಾರೀ ಏರಿಕೆ ಕಂಡಿದೆ. ರಾಗಿ ಹೊರತುಪಡಿಸಿದರೆ ಉಳಿದೆಲ್ಲಾ ಬೇಸಿಗೆ ಬೆಳೆಗಳ ಬಿತ್ತನೆ ಕಾರ್ಯ ಸುಮಾರು ಒಂದು ಲಕ್ಷಕ್ಕಿಂತಲೂ ಕಡಿಮೆ ಹೆಕ್ಟೇರ್ ನಷ್ಟು ಏರಿಕೆಯಾಗಿದೆ. ರಾಗಿ ಮಾತ್ರ ಕಳೆದ ವರ್ಷಕ್ಕೆ ಹೋಲಿಸಿದರೆ 0.06 ಲಕ್ಷ ಹೆಕ್ಟೇರ್ ಕಡಿಮೆಯಾಗಿದೆ. ಈ ವರ್ಷ ಬೇಸಿಗೆಯಲ್ಲಿ ಭತ್ತದ ಬಿತ್ತನೆ ಕಾರ್ಯ 32.58 ಲಕ್ಷ ಹೆಕ್ಟೇರ್ ವ್ಯಾಪ್ತಿಯಲ್ಲಿ ನಡೆದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಭತ್ತದ ಬಿತ್ತನೆ ಕಾರ್ಯ 23.81 ಲಕ್ಷ ಹೆಕ್ಟೇರ್ ನಲ್ಲಿ ಆಗಿತ್ತು. ಈ ಭತ್ತದ ಬಿತ್ತನೆ ಕಾರ್ಯ ಬಹುತೇಕ ರಾಜ್ಯಗಳಲ್ಲಿ ಆಗಿದ್ದು, ಅವುಗಳೆಂದರೆ ಪಶ್ಚಿಮ ಬಂಗಳಾ (11.25 l ಲಕ್ಷ ಹೆಕ್ಟೇರ್), ತೆಲಂಗಾಣ (7.45 ಲಕ್ಷ ಹೆಕ್ಟೇರ್), ಒಡಿಶಾ (3.13 ಲಕ್ಷ ಹೆಕ್ಟೇರ್), ಅಸ್ಸಾಂ (2.73 ಲಕ್ಷ ಹೆಕ್ಟೇರ್), ಕರ್ನಾಟಕ (1.64 ಲಕ್ಷ ಹೆಕ್ಟೇರ್), ಛತ್ತೀಸ್ ಗಢ (1.50 ಲಕ್ಷ ಹೆಕ್ಟೇರ್), ತಮಿಳುನಾಡು (1.30 ಲಕ್ಷ ಹೆಕ್ಟೇರ್), ಬಿಹಾರ (1.22 ಲಕ್ಷ ಹೆಕ್ಟೇರ್), ಮಹಾರಾಷ್ಟ್ರ (0.65 ಲಕ್ಷ ಹೆಕ್ಟೇರ್), ಮಧ್ಯಪ್ರದೇಶ (0.59ಲಕ್ಷ ಹೆಕ್ಟೇರ್), ಗುಜರಾತ್ (0.54 ಲಕ್ಷ ಹೆಕ್ಟೇರ್) ಮತ್ತು ಕೇರಳ (0.46 ಲಕ್ಷ ಹೆಕ್ಟೇರ್).

ಬೇಳೆಕಾಳುಗಳ ಬಿತ್ತನೆ ಕಾರ್ಯ 3.97 ಲಕ್ಷ ಹೆಕ್ಟೇರ್ ನಲ್ಲಿ ನಡೆದಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 3.01 ಲಕ್ಷ ಹೆಕ್ಟೇರ್ ನಲ್ಲಿ ಬಿತ್ತನೆ ಕಾರ್ಯ ಆಗಿತ್ತು. ಇದರಲ್ಲಿ ಪ್ರಮುಖವಾಗಿ ಬಿತ್ತನೆ ಮಾಡಲಾದ ರಾಜ್ಯಗಳೆಂದರೆ ತಮಿಳುನಾಡು (1.46 ಲಕ್ಷ ಹೆಕ್ಟೇರ್), ಉತ್ತರ ಪ್ರದೇಶ (0.73 ಲಕ್ಷ ಹೆಕ್ಟೇರ್), ಪಶ್ಚಿಮ ಬಂಗಾಳ(0.59 ಲಕ್ಷ ಹೆಕ್ಟೇರ್), ಗುಜರಾತ್ (0.51 ಲಕ್ಷ ಹೆಕ್ಟೇರ್), ಛತ್ತೀಸ್ ಗಢ(0.24 ಲಕ್ಷ ಹೆಕ್ಟೇರ್), ಬಿಹಾರ (0.18 ಲಕ್ಷ ಹೆಕ್ಟೇರ್), ಕರ್ನಾಟಕ (0.08 ಲಕ್ಷ ಹೆಕ್ಟೇರ್), ಪಂಜಾಬ್(0.05 ಲಕ್ಷ ಹೆಕ್ಟೇರ್), ಮಹಾರಾಷ್ಟ್ರ (0.04 ಲಕ್ಷ ಹೆಕ್ಟೇರ್), ಮಧ್ಯಪ್ರದೇಶ (0.03 ಲಕ್ಷ ಹೆಕ್ಟೇರ್), ಜಾರ್ಖಂಡ್ (0.03 ಲಕ್ಷ ಹೆಕ್ಟೇರ್), ತೆಲಂಗಾಣ (0.02 ಲಕ್ಷ ಹೆಕ್ಟೇರ್) ಮತ್ತು ಉತ್ತರಾಖಂಡ (0.01 ಲಕ್ಷ ಹೆಕ್ಟೇರ್).

ದ್ವಿದಳ ಧಾನ್ಯಗಳ ಬಿತ್ತನೆ ಕಾರ್ಯ ಸುಮಾರು 5.54 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಆಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ 4.33 ಲಕ್ಷ ಹೆಕ್ಟೇರ್ ಮಾತ್ರ ಬಿತ್ತನೆಯಾಗಿತ್ತು. ಪ್ರಮುಖವಾಗಿ ಬಿತ್ತನೆಯಾಗಿರುವ ರಾಜ್ಯಗಳೆಂದರೆ ಗುಜರಾತ್ (2.27 ಲಕ್ಷ ಹೆಕ್ಟೇರ್), ಪಶ್ಚಿಮ ಬಂಗಾಳ (1.21 ಲಕ್ಷ ಹೆಕ್ಟೇರ್), ಮಹಾರಾಷ್ಟ್ರ (0.63 ಲಕ್ಷ ಹೆಕ್ಟೇರ್), ಬಿಹಾರ (0.41 ಲಕ್ಷ ಹೆಕ್ಟೇರ್), ಕರ್ನಾಟಕ (0.39 ಲಕ್ಷ ಹೆಕ್ಟೇರ್), ಛತ್ತೀಸ್ ಗಢ (0.29 ಲಕ್ಷ ಹೆಕ್ಟೇರ್), ತಮಿಳುನಾಡು (0.26 ಲಕ್ಷ ಹೆಕ್ಟೇರ್), ಮಧ್ಯಪ್ರದೇಶ (0.08 ಲಕ್ಷ ಹೆಕ್ಟೇರ್) ಮತ್ತು ಜಾರ್ಖಂಡ್ (0.01 ಲಕ್ಷ ಹೆಕ್ಟೇರ್).

ಇತರೆ ಎಣ್ಣೆ ಬೀಜಗಳು ಸುಮಾರು 6.66 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿವೆ. ಕಳೆದ ವರ್ಷ ಇದೇ ಅವಧಿಯಲ್ಲಿ 5.97 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿತ್ತು. ಪ್ರಮುಖವಾಗಿ ಬಿತ್ತನೆ ಮಾಡಿರುವ ರಾಜ್ಯಗಳ ವರದಿ ಹೀಗಿದೆ, ಪಶ್ಚಿಮ ಬಂಗಾಳ (1.33 ಲಕ್ಷ ಹೆಕ್ಟೇರ್), ಕರ್ನಾಟಕ (1.30 ಲಕ್ಷ ಹೆಕ್ಟೇರ್), ಗುಜರಾತ್ (1.09 ಲಕ್ಷ ಹೆಕ್ಟೇರ್), ಒಡಿಶಾ (0.62 ಲಕ್ಷ ಹೆಕ್ಟೇರ್), ಮಹಾರಾಷ್ಟ್ರ (0.58 ಲಕ್ಷ ಹೆಕ್ಟೇರ್), ತಮಿಳುನಾಡು (0.53 ಲಕ್ಷ ಹೆಕ್ಟೇರ್), ಆಂಧ್ರಪ್ರದೇಶ (0.41 ಲಕ್ಷ ಹೆಕ್ಟೇರ್), ಉತ್ತರ ಪ್ರದೇಶ (0.28 ಲಕ್ಷ ಹೆಕ್ಟೇರ್), ತೆಲಂಗಾಣ (0.21 ಲಕ್ಷ ಹೆಕ್ಟೇರ್), ಛತ್ತೀಸ್ ಗಢ (0.18 ಲಕ್ಷ ಹೆಕ್ಟೇರ್), ಹರಿಯಾಣ (0.06 ಲಕ್ಷ ಹೆಕ್ಟೇರ್), ಪಂಜಾಬ್ (0.04 ಲಕ್ಷ ಹೆಕ್ಟೇರ್), ಬಿಹಾರ (0.03 ಲಕ್ಷ ಹೆಕ್ಟೇರ್) ಮತ್ತು ಮಧ್ಯಪ್ರದೇಶ (0.02 ಲಕ್ಷ ಹೆಕ್ಟೇರ್).

ಬೇಸಿಗೆ ಬೆಳೆ ಬಿತ್ತನೆ ಕಾರ್ಯದ ಪ್ರಗತಿ ವಿವರ’ದ ಅಂಕಿ ಅಂಶಗಳಿಗೆ ಇಲ್ಲಿ ಕ್ಲಿಕ್ ಮಾಡಿ

*****

 



(Release ID: 1613497) Visitor Counter : 149