ರಕ್ಷಣಾ ಸಚಿವಾಲಯ
ಕೋವಿಡ್ – 19 ವಿರುದ್ಧದ ಹೋರಾಟಕ್ಕೆ ಸುಮಾರು 2,000 ಎನ್ ಸಿಸಿ ಕೆಡೆಟ್ ಗಳ ನೇಮಕ ಮತ್ತು 50,000 ಕ್ಕೂ ಹೆಚ್ಚು ಸ್ವಯಂ ಸೇವಕರ ಸೇವೆ
Posted On:
11 APR 2020 4:20PM by PIB Bengaluru
ಕೋವಿಡ್ – 19 ವಿರುದ್ಧದ ಹೋರಾಟಕ್ಕೆ ಸುಮಾರು 2,000 ಎನ್ ಸಿಸಿ ಕೆಡೆಟ್ ಗಳ ನೇಮಕ ಮತ್ತು 50,000 ಕ್ಕೂ ಹೆಚ್ಚು ಸ್ವಯಂ ಸೇವಕರ ಸೇವೆ
01 ಏಪ್ರಿಲ್ 2020 ರಿಂದ ಕೊರೊನಾ ವೈರಸ್ (ಕೋವಿಡ್ – 19) ಸಾಂಕ್ರಾಮಿಕ ರೋಗ ಹರಡುವಿಕೆ ವಿರುದ್ಧದ ಹೋರಾಟದಲ್ಲಿ ‘ಎಕ್ಸರ್ಸೈಸ್ ಎನ್ ಸಿ ಸಿ ಯೋಗ್ದಾನ್’ ಎಂಬ ಕಾರ್ಯಕ್ರಮದಡಿ ಪೋಲಿಸ್ ಸಿಬ್ಬಂದಿ, ನಾಗರಿಕ ಮತ್ತು ರಕ್ಷಣಾ ಸಿಬ್ಬಂದಿಯೊಂದಿಗೆ ಹೆಗಲುಗೊಟ್ಟು ಕೆಲಸ ಮಾಡುವ ಮೂಲಕ ನಾಗರಿಕ ಆಡಳಿತಕ್ಕೆ ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ (ಎನ್ ಸಿಸಿ) ಸ್ವಯಂ ಸೇವಕರು ಸಹಾಯ ಮಾಡುತ್ತಿದ್ದಾರೆ. ಈಗಾಗಲೇ 12 ರಾಜ್ಯಗಳಲ್ಲಿ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 2,000 ಕೆಡೆಟ್ ಗಳನ್ನು ನಿಯೋಜಿಸಲಾಗಿದೆ. ತಮಿಳುನಾಡಿನಲ್ಲಿ ಅತಿ ಹೆಚ್ಚು ಅಂದರೆ 306 ಕೆಡೆಟ್ ಗಳು ವಿವಿಧ ಕೆಲಸಗಳಲ್ಲಿ ನಿರತರಾಗಿದ್ದಾರೆ. ದಿನಗಳೆದಂತೆ ಈ ಸಂಖ್ಯೆ ಹೆಚ್ಚುತ್ತಿದೆ.
ಲಾಕ್ ಡೌನ್ ಮುಂದುವರಿದಂತೆ ಹೆಚ್ಚೆಚ್ಚು ರಾಜ್ಯಗಳು ವಿವಿಧ ಕಾರ್ಯಗಳಿಗಾಗಿ ಎನ್ ಸಿಸಿ ಕೆಡೆಟ್ ಗಳಿಗಾಗಿ ಮನವಿ ಸಲ್ಲಿಸುತ್ತಿದ್ದಾರೆ. ಈ ಕೆಲಸಗಳಿಗೆ ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸುತ್ತಿರುವ ಎನ್ ಸಿಸಿ ಕೆಡೆಟ್ ಗಳ ಸಂಖ್ಯೆಯ ಕುರಿತು ಮುಖ್ಯ ಕಛೇರಿಯ ಎನ್ ಸಿಸಿ ಮಹಾ ನಿರ್ದೇಶಕರು ಮೇಲ್ವಿಚಾರಣೆಯನ್ನು ನೋಡಿಕೊಳ್ಳುತ್ತಿದ್ದಾರೆ. ‘ಎಕ್ಸರ್ಸೈಸ್ ಎನ್ ಸಿ ಸಿ ಯೋಗ್ದಾನ್’ ಎಂಬ ಕಾರ್ಯಕ್ರಮದಡಿ ಇಲ್ಲಿವರೆಗೆ ಸುಮಾರು ಸುಮಾರು 50,000 ಕೆಡೆಟ್ ಗಳು ಸೇವೆ ಸಲ್ಲಿಸುತ್ತಿದ್ದಾರೆ.
18 ವರ್ಷಗಳ ಮೇಲ್ಪಟ್ಟ ಸ್ವಯಂ ಸೇವಕ ಎನ್ ಸಿಸಿ ಕೆಡೆಟ್ ಗಳು ಮತ್ತು ಹಿರಿಯ ವಿಭಾಗದವರು (ಬಾಲಕ ಕೆಡೆಟ್ ಗಳಿಗೆ) ಮತ್ತು ಸೀನಿಯರ್ ವಿಂಗ್ (ಬಾಲಕಿಯರ ಕೆಡೆಟ್ ಗಳಿಗೆ) ದವರನ್ನು ಈ ಕಾರ್ಯಗಳಿಗೆ ನೇಮಿಸಲಾಗುತ್ತಿದೆ. ಈ ಕೆಡೆಟ್ ಗಳು ಸ್ವಯಂಪ್ರೇರಿತರಾಗಿ ಕೆಲಸ ಮಾಡುತ್ತಿದ್ದಾರೆ. ನೇಮಕ ಮಾಡುವ ಮೊದಲು ಕೆಡೆಟ್ ಗಳಿಗೆ ಕೆಲಸದ ಕುರಿತು ಸೂಕ್ತ ರೀತಿಯಲ್ಲಿ ವಿವರಿಸುವುದು ಮತ್ತು ಸೂಕ್ತ ತರಬೇತಿ ನೀಡುವುದನ್ನು ಖಚಿತಪಡಿಸಲಾಗುವುದು.
ಕೆಡೆಟ್ ಗಳನ್ನು ನೇಮಿಸುವಾಗ ಅವರಿಗೆ ಮಾಸ್ಕ್ ಗಳು, ಕೈಗವಸುಗಳು ಮುಂತಾದ ಸುರಕ್ಷತಾ ಪರಿಕರಗಳನ್ನು ನೀಡುವ ಕುರಿತು ರಾಜ್ಯ ಕಾರ್ಯ ನಿರ್ವಾಹಕ ಪಡೆ ಖಚಿತಪಡಿಸುತ್ತದೆ. ಅಧಿಕಾರಿಗಳು, ಕಿರಿಯ ಕಮಿಶನ್ಡ್ ಅಧಿಕಾರಿಗಳು, ಪಿ ಐ ಸಿಬ್ಬಂದಿ ಮತ್ತು ಎನ್ ಸಿಸಿಯ ಎ ಎನ್ ಒ ಗಳ ಸುಪರ್ದಿಯಲ್ಲಿ ಕೆಡೆಟ್ ಗಳನ್ನು ನೇಮಿಸಲಾಗುತ್ತದೆ. ಸಂಬಂಧಿತ ರಾಜ್ಯ ಸರ್ಕಾರಗಳು ಅಪಾಯಕಾರಿ ಪ್ರದೇಶ ಎಂದು ಗುರುತಿಸಿದ ಅಥವಾ ನಿರ್ಭಂಧಿಸಿದ ಪ್ರದೇಶಗಳಲ್ಲಿ ಕೆಡೆಟ್ ಗಳನ್ನು ನೇಮಿಸಲಾಗುವುದಿಲ್ಲ.
ಸಂಚಾರ ನಿರ್ವಹಣೆ, ಸರಬರಾಜು ಸರಪಳಿ ನಿರ್ವಹಣೆ, ಆಹಾರ ಪದಾರ್ಥಗಳ ತಯಾರಿಕೆ ಮತ್ತು ಪ್ಯಾಕ್ ಮಾಡುವ ಕೆಲಸ, ಅವಶ್ಯಕ ವಸ್ತುಗಳು ಮತ್ತು ಆಹಾರ ವಿತರಣೆ, ಸರದಿ ನಿರ್ವಹಣೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಸಿಸಿಟಿವಿ ನಿಯಂತ್ರಣ ಕೊಠಡಿಗಳು ಮತ್ತು ನಿಯಂತ್ರಣ ಕೇಂದ್ರಗಳಲ್ಲಿ ಸಹಾಯ ಮಾಡುವುದು ಮುಂತಾದ ಕೆಲಸಗಳಿಗೆ ಕೆಡೆಟ್ ಗಳನ್ನು ನೇಮಿಸಲಾಗುತ್ತಿದೆ. ಇದಲ್ಲದೆ ಟ್ವಿಟ್ಟರ್, ಇನ್ ಸ್ಟಾಗ್ರಾಂ ಮತ್ತು ವಾಟ್ಸ್ ಆಪ್ ಗಳಂತಹ ಸಾಮಾಜಿಕ ಜಾಲತಾಣಗಳ ಮೂಲಕ ಸಂದೇಶಗಳನ್ನು ರವಾನಿಸಿ ಕೋವಿಡ್ – 19 ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನೂ ಎನ್ ಸಿಸಿ ಕೆಡೆಟ್ ಗಳು ಮಾಡುತ್ತಿದ್ದಾರೆ.
ಅತ್ಯಂತ ಅವಶ್ಯಕತೆ ಇರುವ ಸಮಯದಲ್ಲಿ ರಾಷ್ಟ್ರಕ್ಕೆ ತನ್ನ ನಿರಂತರ ಸಹಕಾರದೊಂದಿಗೆ ಎನ್ ಸಿಸಿ ಮತ್ತೊಮ್ಮೆ ಮುಂಚೂಣಿಯಲ್ಲಿದೆ. ಸುಮಾರು 14 ಲಕ್ಷ ಪ್ರಬಲ ಸಂಖ್ಯೆ ಹೊಂದಿದ ಎನ್ ಸಿಸಿ ದೇಶಾದ್ಯಂತ ಪಸರಿಸಿದೆ. ಇವರ 17 ನಿರ್ದೇಶನಾಲಗಳು, 29 ರಾಜ್ಯಗಳು ಮತ್ತು 9 ಕೇಂದ್ರಾಡಳಿತ ಪ್ರದೇಶಗಳನ್ನು ವ್ಯಾಪಿಸಿವೆ. ಈ ನಿರ್ದೇಶನಾಲಗಳು 99 ಗುಂಪುಗಳು ಮತ್ತು 826 ಘಟಕಗಳಾಗಿ ವಿಂಗಡಿಸಲ್ಪಟ್ಟಿವೆ. ಹಾಗಾಗಿ ಎಲ್ಲ ರಾಜ್ಯಗಳ ಜಿಲ್ಲಾಡಳಿತಕ್ಕೆ ಕೆಡೆಟ್ ಗಳ ಲಭ್ಯತೆಯನ್ನು ಖಚಿತಪಡಿಸುತ್ತದೆ. ಕೆಡೆಟ್ ಗಳನ್ನು ಲಾಜಿಸ್ಟಿಕ್ಸ್ ಮತ್ತು ಸರಬರಾಜು ಸರಪಳಿ ನಿರ್ವಹಣೆಯಲ್ಲಿ ಬಳಸಿಕೊಳ್ಳಲು ವಿವಿಧ ಜಿಲ್ಲಾ ಪ್ರಧಾನ ಕಚೇರಿಗಳಿಗೆ ನಿರ್ದೇಶನ ನೀಡಲಾಗಿದೆ. ಎನ್ ಸಿಸಿ ನಿರ್ದೇಶನಾಲಗಳಿಗೆ ಮನವಿ ಸಲ್ಲಿಸುವ ಮೂಲಕ ಜಿಲ್ಲಾಡಳಿತ ಅವರ ಸಹಾಯವನ್ನು ಪಡೆಯುತ್ತಿದೆ.
***
(Release ID: 1613478)
Visitor Counter : 293
Read this release in:
English
,
Urdu
,
Hindi
,
Marathi
,
Assamese
,
Bengali
,
Punjabi
,
Gujarati
,
Odia
,
Tamil
,
Telugu
,
Malayalam