ರೈಲ್ವೇ ಸಚಿವಾಲಯ
ಲಾಕ್‌ಡೌನ್ ಮಾಡಿದ ಮೊದಲ ಎರಡು ವಾರಗಳಲ್ಲಿ ರೈಲ್ವೆ ಸಿಬ್ಬಂದಿ ಹೆಲ್ಪ್ಲೈನ್‌ಗಳು (138 ಮತ್ತು 139), ಸಾಮಾಜಿಕ ಜಾಲತಾಣ ಮತ್ತು ಇಮೇಲ್ ಮೂಲಕ ಸ್ವೀಕರಿಸಲಾದ 2,05,000 ಸಂದೇಹ ಮತ್ತು ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ್ದಾರೆ
Posted On:
11 APR 2020 2:54PM by PIB Bengaluru
ಲಾಕ್‌ಡೌನ್ ಮಾಡಿದ ಮೊದಲ ಎರಡು ವಾರಗಳಲ್ಲಿ ರೈಲ್ವೆ ಸಿಬ್ಬಂದಿ ಹೆಲ್ಪ್ಲೈನ್‌ಗಳು (138 ಮತ್ತು 139), ಸಾಮಾಜಿಕ ಜಾಲತಾಣ ಮತ್ತು ಇಮೇಲ್ ಮೂಲಕ ಸ್ವೀಕರಿಸಲಾದ 2,05,000 ಸಂದೇಹ ಮತ್ತು ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ್ದಾರೆ
ಅವುಗಳಲ್ಲಿ 1,85,000 ಕ್ಕಿಂತ ಹೆಚ್ಚು ನೇರವಾಗಿ ಸಿಬ್ಬಂದಿಯ ಸಂವಹನದ ಮೂಲಕ ನಿರ್ವಹಿಸಲ್ಪಟ್ಟವು
24x7 ಸಹಾಯವಾಣಿಗಳಲ್ಲಿ ನೈಜ ಸಮಯದ ಪ್ರತಿಕ್ರಿಯೆ - 139, 138, ಸಾಮಾಜಿಕ ಮಾಧ್ಯಮ ಮತ್ತು ಇಮೇಲ್
ನ್ಯಾಷನಲ್ ರೈಲ್ ಮದದ್ ಹೆಲ್ಪ್ಲೈನ್ 139 ಫಲಪ್ರದವಾದ ಕಾರ್ಯವನ್ನು ಮುಂದುವರೆಸಿದೆ, ಜಿಯೋ-ಫೆನ್ಸ್ಡ್ ಡಿಸ್ಟ್ರಿಬ್ಯೂಟೆಡ್ ಹೆಲ್ಪ್ಲೈನ್ 138 ಸ್ಥಳೀಯ ಸಮಸ್ಯೆಗಳ ಪರಿಹಾರಕ್ಕಾಗಿ ಸ್ಥಳೀಯ ಭಾಷೆಗಳಲ್ಲಿ ಸಾರ್ವಜನಿಕರನ್ನು ತಲುಪುತ್ತದೆ
ರೈಲ್ವೆ ಪ್ರಯಾಣಿಕರು, ಇತರ ನಾಗರಿಕರಿಗೆ ಸಹಾಯ ಮಾಡಲು ಮತ್ತು ಸರಕು ಸಾಗಣೆ ಕಾರ್ಯಾಚರಣೆಯಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡಲು, ಲಾಕ್‌ಡೌನ್ ಘೋಷಣೆಯ ನಂತರ ಭಾರತೀಯ ರೈಲ್ವೆ ಸಹಾಯವಾಣಿ ಸೌಲಭ್ಯಗಳನ್ನು ಹೆಚ್ಚಿಸಿದೆ. ಕೆಲವು ದಿನಗಳ ಹಿಂದೆ ಪ್ರಾರಂಭವಾದಾಗಿನಿಂದ, ಈ ಸೌಲಭ್ಯವು ಒಂದು ದೊಡ್ಡ ನಿರ್ವಹಣಾ ಯಶಸ್ಸನ್ನು ಗಳಿಸಿದೆ, ಇದರಿಂದಾಗಿ ರೈಲ್ವೆ ಸಿಬ್ಬಂದಿ ಗೊತ್ತುಪಡಿಸಿದ ಸಂವಹನ ವೇದಿಕೆಗಳಲ್ಲಿ ಲಾಕ್‌ಡೌನ್ ಮಾಡಿದ ಮೊದಲ ಎರಡು ವಾರಗಳಲ್ಲಿ 2,05,000 ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ್ದಾರೆ, 90% (1,85,000 ಕ್ಕಿಂತ ಹೆಚ್ಚು) ಫೋನ್‌ನಲ್ಲಿ ಸಿಬ್ಬಂದಿಗಳು ನೇರವಾಗಿ ಮಾತನಾಡುವ ಮೂಲಕ ಅವುಗಳನ್ನು ನಿರ್ವಹಿಸಲಾಗಿದೆ.
ರೈಲ್ವೆ ನಿಯಂತ್ರಣ ಕಚೇರಿಯು ಈ ನಾಲ್ಕು ಸಂವಹನ ಮತ್ತು ಪ್ರತಿಕ್ರಿಯೆ ವೇದಿಕೆಗಳ 24x7 ಮೇಲ್ವಿಚಾರಣೆಯನ್ನು ಮಾಡುತ್ತಿದೆ- ಹೆಲ್ಪ್‌ಲೈನ್ಸ್ -139, 138, ಸಾಮಾಜಿಕ ಜಾಲತಾಣ (ಟ್ವಿಟರ್) ಮತ್ತು ಇಮೇಲ್ (railmadad@rb.railnet.gov.in). ಇದು ಲಾಕ್ ಡೌನ್ ಸಮಯದಲ್ಲಿ ರೈಲ್ವೆ ಆಡಳಿತ ಮತ್ತು ಸಾರ್ವಜನಿಕರ ನಡುವೆ ಮಾಹಿತಿ ಮತ್ತು ಸಲಹೆಗಳ ತಡೆರಹಿತ ಹರಿವನ್ನು ಖಚಿತಪಡಿಸುವುದು.
ಸಹಾಯವಾಣಿ ಕಾರ್ಯಾಚರಣೆಯನ್ನು ನಿರ್ದೇಶಕ-ಮಟ್ಟದ ಅಧಿಕಾರಿಗಳು ನಿರ್ವಹಿಸುತ್ತಿದ್ದಾರೆ. ಈ ಅಧಿಕಾರಿಗಳು ನಾಗರಿಕರ ಪ್ರತಿಕ್ರಿಯೆ ಮತ್ತು ಸಾಮಾಜಿಕ ಮಾಧ್ಯಮ ಮತ್ತು ಇಮೇಲ್‌ನಲ್ಲಿ ಸ್ವೀಕರಿಸಿದ ಅವರ ಸಲಹೆಗಳನ್ನು ಮೇಲ್ವಿಚಾರಣೆ ಮಾಡುತ್ತಾರೆ ಮತ್ತು ಲಾಕ್‌ಡೌನ್ ಅವಧಿಯಲ್ಲಿ ರೈಲ್ವೆ ಗ್ರಾಹಕರು (ವಿಶೇಷವಾಗಿ ಸರಕು ಸಾಗಣೆಯಲ್ಲಿ) ಎದುರಿಸುತ್ತಿರುವ ಯಾವುದೇ ತೊಂದರೆಗಳನ್ನು ನಿವಾರಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಖಚಿತಪಡಿಸಿಕೊಳ್ಳುತ್ತಾರೆ. ಎಡಿಆರ್ ಎಂ ಗಳ ಮಟ್ಟದಲ್ಲಿ ಕ್ಷೇತ್ರ ಅಧಿಕಾರಿಗಳು ಈ ತಂಡದ ಭಾಗವಾಗಿ ತಮ್ಮ ವಿಭಾಗೀಯ ಮಟ್ಟದಲ್ಲಿ ಮೇಲ್ವಿಚಾರಣೆ ಮಾಡುತ್ತಾರೆ.
ಲಾಕ್ ಡೌನ್‌ನ ಮೊದಲ ಎರಡು ವಾರಗಳಲ್ಲಿ ರೈಲ್ ಮದದ್ ಸಹಾಯವಾಣಿಗೆ 139 1,40,000 ಪ್ರಶ್ನೆಗಳಿಗೆ ನೇರವಾಗಿ ಉತ್ತರಿಸಿದೆ ಮತ್ತು ಜೊತೆಗೆ ಅದರ ಐವಿಆರ್ ಎಸ್ ಸೌಲಭ್ಯದಿಂದ ಪ್ರಶ್ನೆಗಳಿಗೆ ಉತ್ತರಿಸಿದೆ. ಪ್ರಶ್ನೆಗಳು ಹೆಚ್ಚಾಗಿ ರೈಲು ಸೇವೆಗಳ ಪ್ರಾರಂಭ ಮತ್ತು ಸಡಿಲವಾದ ಮರುಪಾವತಿ ನಿಯಮಗಳು (ಸಾರ್ವಜನಿಕರಿಂದ ಬಂದ ಪ್ರತಿಕ್ರಿಯೆಯ ಆಧಾರದ ಮೇಲೆ ಇದನ್ನು ಮಾಡಲಾಗುತ್ತಿತ್ತು), ಸಾಮಾಜಿಕ ಮಾಧ್ಯಮಗಳಲ್ಲಿ ಈ ಬಿಕ್ಕಟ್ಟಿನ ಸಮಯದಲ್ಲಿ ರೈಲ್ವೆಯ ಕಾರ್ಯಗಳ ಬಗ್ಗೆ ಮೆಚ್ಚುಗೆಯ ಸಂದೇಶಗಳು ಹರಿಯುತ್ತಿವೆ. ಅಗತ್ಯ ವಸ್ತುಗಳನ್ನು ಸಾಗಿಸುವ ಸರಕು ಸಾಗಣೆ ರೈಲುಗಳನ್ನು ಓಡಿಸುವುದು, ವ್ಯಾಗನ್‌ಗಳನ್ನು ತಡವಾಗಿ ಬಿಡುಗಡೆ ಮಾಡಲು ದಂಡವನ್ನು ಮನ್ನಾ ಮಾಡುವುದು, ಬೋಗಿಗಳನ್ನು ಆಸ್ಪತ್ರೆ ವಾರ್ಡ್‌ಗಳಾಗಿ ಪರಿವರ್ತಿಸುವುದು, ಆಹಾರ ಪ್ಯಾಕೆಟ್‌ಗಳ ವಿತರಣೆ, ಪಿಪಿಇಗಳು, ಸ್ಯಾನಿಟೈಜರ್‌ಗಳು ಮತ್ತು ಇತರ ಉಪಕರಣಗಳನ್ನು ಕೋವಿಡ್ -19ರ ವಿರುದ್ಧದ ಹೋರಾಟದಲ್ಲಿ ತಯಾರಿಸುವುದು ಇತ್ಯಾದಿಗಳಿಗೆ ಶ್ಲಾಘಿಸಲಾಗಿದೆ.
ಸಹಾಯವಾಣಿ 138 ರಲ್ಲಿ ಸ್ವೀಕರಿಸಿದ ಕರೆಗಳು ಜಿಯೋ-ಫೆನ್ಸ್ಡ್ ನಿಂದ ಕೂಡಿವೆ, ಅಂದರೆ ಕರೆ ಮಾಡಿದವರ ಸ್ಥಳಕ್ಕೆ ಅನುಗುಣವಾಗಿ ಹತ್ತಿರದ ರೈಲ್ವೆ ವಿಭಾಗೀಯ ನಿಯಂತ್ರಣ ಕಚೇರಿಯಲ್ಲಿ (ರೈಲ್ವೆ ಸಿಬ್ಬಂದಿಗಳು ಸ್ಥಳೀಯ ಭಾಷೆಯನ್ನು ಚೆನ್ನಾಗಿ ತಿಳಿದಿದ್ದಾರೆ ಮತ್ತು ಸ್ಥಳೀಯ ಸಮಸ್ಯೆಗಳ ಬಗ್ಗೆ ಪರಿಚಿತರಾಗಿದ್ದಾರೆ) ಸಂಪರ್ಕವೇರ್ಪಡುತ್ತದೆ. ಕರೆ ಮಾಡುವವರು ತಾವು ಮಾತನಾಡುವ ಭಾಷೆಯಲ್ಲಿ ಮಾಹಿತಿ ಮತ್ತು ಮಾರ್ಗದರ್ಶನವನ್ನು ಪಡೆಯುವುದನ್ನು ಇದು ಖಾತ್ರಿಗೊಳಿಸುತ್ತದೆ. ಈ ಹೊಸ ವೈಶಿಷ್ಟ್ಯವು ಭಾಷೆಯ ತಡೆಗೋಡೆಗಳನ್ನು ನಿವಾರಿಸುತ್ತದೆ ಮತ್ತು ಸಂಬಂಧಿತ ಮಾಹಿತಿಯು ವಿಭಾಗದೊಂದಿಗೆ ಸುಲಭವಾಗಿ ಲಭ್ಯವಾಗುವುದರಿಂದ ರೈಲ್ವೆ ಗ್ರಾಹಕರಿಗೆ ಮತ್ತು ಇತರರಿಗೆ ಮಾಹಿತಿಯ ಹರಿವನ್ನು ವೇಗವಾಗಿ ಮಾಡುತ್ತದೆ.
ಪ್ರಯಾಣಿಕರ ಮತ್ತು ಎಲ್ಲಾ ವಾಣಿಜ್ಯ ಗ್ರಾಹಕರ ಹಿತಾಸಕ್ತಿಯನ್ನು ಖಚಿತಪಡಿಸಿಕೊಳ್ಳಲು ಭಾರತೀಯ ರೈಲ್ವೆ 360 ಡಿಗ್ರಿ ವಿಧದ ಪ್ರಯತ್ನವನ್ನು ತೆಗೆದುಕೊಂಡಿದೆ ಮತ್ತು ರಾಷ್ಟ್ರೀಯ ಪೂರೈಕೆ ಸರಪಳಿಗಳು ಸಾರ್ವಕಾಲಿಕವಾಗಿ ಚಾಲನೆಯಲ್ಲಿರುತ್ತವೆ ಎಂದು ಸೇರಿಸುವುದು ಸೂಕ್ತವಾಗಿದೆ.
***
(Release ID: 1613402)
Visitor Counter : 263