ಆಯುಷ್

ಕೋವಿಡ್ -19 ಸಂಕಷ್ಟದಲ್ಲಿ ಸ್ವರಕ್ಷಣೆಗಾಗಿ ರೋಗ ನಿರೋಧಕ ಶಕ್ತಿ ಹೆಚ್ಚಳವನ್ನು ಪುನರುಚ್ಚರಿಸಿದ ಆಯುಷ್

Posted On: 10 APR 2020 9:38PM by PIB Bengaluru

ಕೋವಿಡ್ -19 ಸಂಕಷ್ಟದಲ್ಲಿ ಸ್ವರಕ್ಷಣೆಗಾಗಿ ರೋಗ ನಿರೋಧಕ ಶಕ್ತಿ ಹೆಚ್ಚಳವನ್ನು ಪುನರುಚ್ಚರಿಸಿದ ಆಯುಷ್

 

ಆಯುಷ್ ಸಚಿವಾಲಯ ವಿವಿಧ ರೋಗ ನಿರೋಧಕ ಹೆಚ್ಚಳ ಕ್ರಮಗಳ ಬಗ್ಗೆ ಆಯುರ್ವೇದದಲ್ಲಿರುವ ಕಾಲ ಕಾಲಕ್ಕೆ ಪರೀಕ್ಷಿಸಲ್ಪಟ್ಟ ಧೋರಣೆಗಳು/ಕ್ರಮಗಳ ಬಗ್ಗೆ ಸಲಹೆಗಳನ್ನು ನೀಡುತ್ತಲೇ ಬಂದಿದೆ. ಸಲಹೆಗಳು ಸಂಕಷ್ಟದ ಪರೀಕ್ಷಾ ಸಮಯದಲ್ಲಿ ವ್ಯಕ್ತಿಯ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೈಗೊಳ್ಳುವ ಎಲ್ಲಾ ಕ್ರಮಗಳಿಗೆ ಪೂರಕವಾಗಿರುತ್ತವೆ ಎಂದು ಸಚಿವಾಲಯ ಪುನರುಚ್ಚರಿಸಿದೆ.

2020 ಮಾರ್ಚ್ 31 ರಂದು ಹೊರಡಿಸಲಾದ ಸಲಹಾ ಮಾರ್ಗದರ್ಶಿಗಳು, ಕೆಳಗಿನ ಐದು ಪ್ರಮುಖ ಕ್ಷೇತ್ರವನ್ನು ಒಳಗೊಂಡಿವೆ:

  1. ಸಲಹೆ ಹೊರಡಿಸಲು ಕಾರಣವಾಗಿರುವ ಹಿನ್ನೆಲೆ:

ಕೋವಿಡ್ -19 ಪಿಡುಗಿನ ಹಿನ್ನೆಲೆಯಲ್ಲಿ ಜಗತ್ತಿನಾದ್ಯಂತ ಇಡೀಯ ಮನುಕುಲವೇ ತೊಂದರೆಗೀಡಾಗಿದೆ. ದೇಹದ ನೈಸರ್ಗಿಕ ರಕ್ಷಣಾ ವ್ಯವಸ್ಥೆ (ರೋಗ ನಿರೋಧಕ ಶಕ್ತಿ) ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ರೋಗ ಬಾರದಂತೆ ತಡೆಯುವುದು ಅದನ್ನು ಗುಣಪಡಿಸುವುದಕ್ಕಿಂತ ಉತ್ತಮ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಕೋವಿಡ್ -19 ಕ್ಕೆ ಔಷಧಿ ಇಲ್ಲದಿರುವಾಗ , ಸಮಯದಲ್ಲಿ ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಕ್ರಮಗಳನ್ನು ಕೈಗೊಳ್ಳುವುದು ಉತ್ತಮ.

ಆಯುರ್ವೇದ ಜೀವನದ ವಿಜ್ಞಾನವಾಗಿ ಆರೋಗ್ಯವಂತರಾಗಿ ಮತ್ತು ಸಂತೋಷದಿಂದ ಬದುಕಲು ನಿಸರ್ಗ ಒದಗಿಸಿರುವ ಕೊಡುಗೆಗಳನ್ನು ಪ್ರಚುರಪಡಿಸುತ್ತದೆ. ರೋಗ ಬಾರದಂತೆ ತಡೆಯುವ ನಿಟ್ಟಿನಲ್ಲಿ ಆಯುರ್ವೇದದ ವಿಸ್ತಾರವಾದ ಜ್ಞಾನ, ಅರೋಗ್ಯಪೂರ್ಣ ಬದುಕಿಗಾಗಿ ದಿನನಿತ್ಯದ ಕಾರ್ಯಕ್ರಮಗಳನ್ನು ಒಳಗೊಂಡ ದಿನಚರ್ಯೆಮತ್ತು ಋತುಚರ್ಯೆ” –ಅಂದರೆ ಕಾಲಮಾನದ ದಿನಚರಿಯನ್ನು ಹೊಂದಿದೆ. ಇದು ಮುಖ್ಯವಾಗಿ ಸಸ್ಯಾಧಾರಿತ ವಿಜ್ಞಾನ. ಆಯುರ್ವೇದದ ಶಾಸ್ತ್ರೀಯ ಗ್ರಂಥಗಳು ವ್ಯಕ್ತಿತ್ವ ಮತ್ತು ಮತ್ತು ಸೌಹಾರ್ದತೆಯಿಂದಾಗಿ ಪ್ರತಿಯೊಬ್ಬರೂ ಅವರ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು ಎಂಬುದನ್ನು ಒತ್ತಿ ಹೇಳುತ್ತವೆ.

ಆಯುಷ್ ಸಚಿವಾಲಯವು ಕೆಲವು ಸ್ವ-ಶುಶ್ರೂಷೆಯ ಮಾರ್ಗದರ್ಶಿಗಳನ್ನು ಶಿಫಾರಸು (ಅವುಗಳನ್ನು ಕೆಳಗಿನ ವಿಭಾಗಗಳಲ್ಲಿ ನೀಡಲಾಗಿದೆ.) ಮಾಡುತ್ತದೆ. ರೋಗ ಬಾರದಂತೆ ತಡೆಯುವ ಆರೋಗ್ಯ ರಕ್ಷಣಾ ಕ್ರಮಗಳನ್ನು ಮತ್ತು ಶ್ವಾಸಕೋಶ ಸಂಬಂಧಿ ಆರೋಗ್ಯಕ್ಕಾಗಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಕ್ರಮಗಳು ಇದರಲ್ಲಿ ಸೇರಿವೆ. ಇವುಗಳಿಗೆ ಆಯುರ್ವೇದ ಸಾಹಿತ್ಯ ಮತ್ತು ವೈಜ್ಞಾನಿಕ ಪ್ರಕಟಣೆಗಳ ಸಾಕ್ಶ್ಯಾಧಾರವಿದೆ.

  1. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಾಮಾನ್ಯ ಕ್ರಮಗಳು;
  1. ದಿನ ಬಿಸಿ ನೀರು ಕುಡಿಯಿರಿ
  2. ಆಯುಷ್ ಸಚಿವಾಲಯ ಸಲಹೆ ಮಾಡಿರುವಂತೆ ಯೋಗಾಸನ, ಪ್ರಾಣಾಯಾಮ ಮತ್ತು ಧ್ಯಾನ ಇವುಗಳನ್ನು ದಿನ ನಿತ್ಯ 30 ನಿಮಿಷ ಕಾಲ ಆಯುಷ್ ಸಚಿವಾಲಯ ಸಲಹೆ ಮಾಡಿರುವಂತೆ ನಡೆಸಿ.
  3. ಸಾಂಬಾರು ಪದಾರ್ಥಗಳಾದ ಹಳದಿ, ಜೀರಿಗೆ, ಕೊತ್ತಂಬರಿ ಮತ್ತು ಬೆಳ್ಳುಳ್ಳಿಗಳನು ಅಡುಗೆಯಲ್ಲಿ ಬಳಸಿ
  1. ಆಯುರ್ವೇದದಲ್ಲಿ ರೋಗ ನಿರೋಧಕ ಶಕ್ತಿ ಉದ್ದೀಪನ ಕ್ರಮಗಳು:
  1. 10 ಗ್ರಾಂನಷ್ಟು (ಒಂದು ಚಮಚ) ಚ್ಯವನಪ್ರಾಶವನ್ನು ಬೆಳಗ್ಗಿನ ಹೊತ್ತು ಸೇವಿಸಿ. ಮಧುಮೇಹ (ಸಕ್ಕರೆ ಖಾಯಿಲೆ ) ಇರುವವರು ಸಕ್ಕರೆ ಅಂಶ ಇಲ್ಲದಿರುವ ಚ್ಯವನಪ್ರಾಶವನ್ನು ಬಳಸಬೇಕು.
  2. ಹರ್ಬಲ್ ಚಹಾ/ ತುಳಸಿ, ದಾಲ್ಚಿನಿ, ಕಾಳು ಮೆಣಸು, ಒಣ ಶುಂಠಿ ಮತ್ತು ಒಣದ್ರಾಕ್ಷಿ ಹಾಕಿ .ತಯಾರಿಸಿದ ಡಿಕಾಕ್ಷನ್ ದಿನಕ್ಕೆ ಒಂದು ಬಾರಿ ಅಥವಾ ಎರಡು ಬಾರಿ ಸೇವಿಸಿ. ಅವಶ್ಯವಿದ್ದರೆ ನಿಮ್ಮ ರುಚಿಗೆ ತಕ್ಕಷ್ಟು ಬೆಲ್ಲ ಮತ್ತು ತಾಜಾ ನಿಂಬೆ ರಸ ಸೇರಿಸಿ.
  3. ಚಿನ್ನದ ಹಾಲು-ಅರ್ಧ ಚಮಚ ಹಳದಿ ಹುಡಿಯನ್ನು 150 ಎಂ.ಎಲ್. ಬಿಸಿ ಹಾಲಿಗೆ ಹಾಕಿ ದಿನಕ್ಕೆ ಒಂದು ಬಾರಿ ಅಥವಾ ಎರಡು ಬಾರಿ ಸೇವಿಸಿ.

4.     ಸರಳ ಆಯುರ್ವೇದ ಪ್ರಕ್ರಿಯೆಗಳು

  1. ಮೂಗಿಗೆ ಹಾಕುವ ವಸ್ತುಗಳು: ಸಾಸಿವೆ ತೈಲ/ ತೆಂಗಿನೆಣ್ಣೆ ಅಥವಾ ತುಪ್ಪವನ್ನು ಮೂಗಿನ ಎರಡೂ ಹೊಳ್ಳೆಗಳಿಗೆ (ಪ್ರತಿಮಾರ್ಷನಾಸ್ಯ) ಬೆಳಿಗ್ಗೆ ಮತ್ತು ಸಂಜೆ ಲೇಪಿಸಿ.
  2. ಎಣ್ಣೆ ಮುಕ್ಕಳಿಸುವ ಚಿಕಿತ್ಸೆ: ಒಂಡು ಚಮಚದಷ್ಟು ಸಾಸಿವೆ ಎಣ್ಣೆ ಅಥವಾ ತೆಂಗಿನೆಣ್ಣೆಯನ್ನು ಬಾಯಿಗೆ ಹಾಕಿಕೊಳ್ಳಿ. ಅದನ್ನು ಕುಡಿಯಬೇಡಿ, ಬದಲು 2 ರಿಂದ 3 ನಿಮಿಷ ಮುಕ್ಕಳಿಸಿ ಮತ್ತು ಉಗುಳಿ, ನಂತರ ಬಿಸಿ ನೀರಿನಿಂದ ತೊಳೆಯಿರಿ. ಇದನ್ನು ದಿನಕ್ಕೊಂದು ಬಾರಿ ಅಥವಾ ಎರಡು ಬಾರಿ ಮಾಡಬಹುದು.
  1. ಒಣ ಕೆಮ್ಮು/ ಗಂಟಲಿನಲ್ಲಿ ನೋವು ಇದ್ದಾಗ ಮಾಡಬೇಕಾದ ಪ್ರಕ್ರಿಯೆಗಳು:
  1. ತಾಜಾ ಪುದಿನ (ಮೆಂತೆ) ಎಲೆಗಳನ್ನು ಹಾಕಿದ ಅಥವಾ ಸೋಂಪು ಬೀಜಗಳನ್ನು. ಬೆರೆಸಿದ ಹಬೆಯಲ್ಲಿ ಉಸಿರನ್ನು ಒಳಗೆಳೆದುಕೊಳ್ಳುವುದು, ಇದನ್ನು ದಿನಕ್ಕೊಂದು ಬಾರಿ ಮಾಡಬಹುದು.
  2. ಲವಂಗ ಹುಡಿಯನ್ನು ನೈಸರ್ಗಿಕ ಸಕ್ಕರೆ/ ಜೇನಿನೊಂದಿಗೆ ಮಿಶ್ರಣ ಮಾಡಿ ಕಫ ಇದ್ದರೆ ಮತ್ತು ಗಂಟಲಿನಲ್ಲಿ ಕಿರಿಕಿರಿ ಇದ್ದರೆ ದಿನಕ್ಕೆ 2-3 ಬಾರಿ ಸೇವಿಸಬಹುದು.
  3. ಕ್ರಮಗಳು ಸಾಮಾನ್ಯವಾಗಿ ಸಾಮಾನ್ಯ ಒಣ ಕೆಮ್ಮು ಮತ್ತು ಗಂಟಲು ನೋವನ್ನು ಉಪಶಮನ ಮಾಡುತ್ತವೆ. ಆದಾಗ್ಯೂ , ಲಕ್ಷಣಗಳು ಮುಂದುವರೆದರೆ ವೈದ್ಯರನ್ನು ಸಮಾಲೋಚಿಸುವುದು ಉತ್ತಮ.

ಆಯುಷ್ ಸಚಿವಾಲಯದ ಉಪಕ್ರಮವನ್ನು ಅನುಸರಿಸಿ ಹಲವು ರಾಜ್ಯ ಸರಕಾರಗಳು ಕೂಡಾ ಸಾಂಪ್ರದಾಯಿಕ ವೈದ್ಯಕೀಯ ಪರಿಹಾರಗಳನ್ನು ರೋಗ ನಿರೋಧಕ ಶಕ್ತಿ ಹೆಚ್ಚಳ ಮತ್ತು ರೋಗ ಬಾರದಂತೆ ತಡೆಯುವ ಕ್ರಮಗಳಾಗಿ ಆರೋಗ್ಯ ರಕ್ಷಣಾ ಸಲಹೆಗಳನು ಹೊರಡಿಸಿವೆ. ಇವು ನಿರ್ದಿಷ್ಟವಾಗಿ ಕೋವಿಡ್-19 ಜಾಗತಿಕ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಪ್ರಸ್ತುತವಾದಂತಹವಾಗಿವೆ.

ಸಲಹಾ ಮಾರ್ಗದರ್ಶಿಗಳಲ್ಲದೆ, ಇವುಗಳ ಜೊತೆಗೆ ಆಯುಷ್ ಸಚಿವಾಲಯವು ಕೋವಿಡ್ -19 ನಿಯಂತ್ರಣಕ್ಕೆ ದೇಶಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ಜಿಲ್ಲಾ ಮಟ್ಟದ ತುರ್ತು ಯೋಜನೆಗಳನ್ನು ರೂಪಿಸುವಾಗ ಆಯುಷ್ ಪರಿಹಾರಗಳನ್ನು ಸೇರಿಸಿಕೊಳ್ಳುವಂತೆ ಪ್ರಸ್ತಾವನೆಗಳನ್ನು ಮಾಡಿದೆ. ಸಚಿವಾಲಯವು ಕೋವಿಡ್ -19 ಹಿನ್ನೆಲೆಯಲ್ಲಿ ವಿವಿಧ ಆಯುಷ್ ಪದ್ದತಿಗಳನ್ನು ಅನುಸರಿಸುವ ವೈದ್ಯರಿಗೆ ಅನ್ವಯಿಸುವಂತೆ ಒಟ್ಟು ಸೇರಿಸಿದ ಕರಡು ಮಾರ್ಗದರ್ಶಿಗಳನ್ನು ರೂಪಿಸಿದ್ದು, ಅವುಗಳು ಸಾರ್ವಜನಿಕ ಆರೋಗ್ಯ ತಜ್ಞರ ಪರಿಶೀಲನೆ ಬಳಿಕ ಸದ್ಯದಲ್ಲಿಯೇ ಪ್ರಕಟಗೊಳ್ಳಲಿವೆ

***

 



(Release ID: 1613221) Visitor Counter : 733