ಗೃಹ ವ್ಯವಹಾರಗಳ ಸಚಿವಾಲಯ

ಭಾರತ - ಪಾಕಿಸ್ತಾನ ಮತ್ತು ಭಾರತ - ಬಾಂಗ್ಲಾದೇಶದ ಗಡಿಗಳಲ್ಲಿ ಬಿಎಸ್ಎಫ್ ಜೊತೆ ಗಡಿ ಕಾವಲು ವ್ಯವಸ್ಥೆಯನ್ನು ಪರಿಶೀಲಿಸಿದ ಕೇಂದ್ರ ಗೃಹ ಸಚಿವರು

Posted On: 10 APR 2020 5:54PM by PIB Bengaluru

ಭಾರತ - ಪಾಕಿಸ್ತಾನ ಮತ್ತು ಭಾರತ - ಬಾಂಗ್ಲಾದೇಶದ ಗಡಿಗಳಲ್ಲಿ ಬಿಎಸ್ಎಫ್ ಜೊತೆ ಗಡಿ ಕಾವಲು ವ್ಯವಸ್ಥೆಯನ್ನು ಪರಿಶೀಲಿಸಿದ ಕೇಂದ್ರ ಗೃಹ ಸಚಿವರು

ಕೋವಿಡ್-19 ಕುರಿತು ಜನರಿಗೆ ಶಿಕ್ಷಣ ನೀಡಿ ಮತ್ತು ಗಡಿಯಾಚೆಗಿನ ಯಾವುದೇ ಚಲನೆ ಇಲ್ಲದಿರುವುದನ್ನು ಖಾತ್ರಿಪಡಿಸಿಕೊಳ್ಳಿ:

ಬಿಎಸ್ಎಫ್ ಗೆ ಗೃಹ ಸಚಿವರ ಸೂಚನೆ

 

ಭಾರತ - ಪಾಕಿಸ್ತಾನ ಮತ್ತು ಭಾರತ - ಬಾಂಗ್ಲಾದೇಶದ ಗಡಿಗಳಲ್ಲಿ ಗಡಿ ಕಾವಲು ವ್ಯವಸ್ಥೆಗಳನ್ನು ಬಿಎಸ್ಎಫ್ ಕಮಾಂಡ್ ಮತ್ತು ಸೆಕ್ಟರ್ ಮುಖ್ಯ ಕಚೇರಿಗಳೊಂದಿಗೆ ನಿನ್ನೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಪರಿಶೀಲಿಸಿದರು.

ಗಡಿಯುದ್ದಕ್ಕೂ ಕಾವಲನ್ನು ತೀವ್ರಗೊಳಿಸುವಂತೆ, ವಿಶೇಷವಾಗಿ ಬೇಲಿಯಿಲ್ಲದ ಪ್ರದೇಶದ ಉದ್ದಕ್ಕೂ, ಯಾವುದೇ ಗಡಿ ಚಲನೆಗಳು ನಡೆಯದಂತೆ ನೋಡಿಕೊಳ್ಳುವಂತೆ ಅಮಿತ್ ಶಾ ನಿರ್ದೇಶಿಸಿದರು.

ಗಡಿ ಪ್ರದೇಶಗಳಲ್ಲಿನ ರೈತರಿಗೆ ಕೋವಿಡ್-19 ಬಗ್ಗೆ ಅರಿವು ಮೂಡಿಸಬೇಕು ಮತ್ತು ಪ್ರದೇಶಗಳಲ್ಲಿ ಸೋಂಕು ಹರಡದಂತೆ ತಡೆಗಟ್ಟುವ ಕ್ರಮಗಳನ್ನು ತೆಗೆದುಕೊಳ್ಳಬೇಕು. ಅಲ್ಲದೆ, ಜನರು ಅಜಾಗರೂಕತೆಯಿಂದ ಗಡಿ ಬೇಲಿಯನ್ನು ದಾಟದಂತೆ ಜಿಲ್ಲಾಡಳಿತದ ಸಮನ್ವಯದೊಂದಿಗೆ ನೋಡಿಕೊಳ್ಳಬೇಕು ಎಂದು ಗೃಹ ಸಚಿವರು ನಿರ್ದೇಶನ ನೀಡಿದರು.

ಕೋವಿಡ್-19 ಸಾಂಕ್ರಾಮಿಕದ  ಮಧ್ಯೆ ಬಿಎಸ್ಎಫ್ ರಚನೆಗಳು ಉತ್ತಮ ಕಾರ್ಯಗಳನ್ನು ಗೃಹ ಸಚಿವರು ಶ್ಲಾಘಿಸಿದರು. ಲಾಕ್ಡೌನ್ ಸಮಯದಲ್ಲಿ, ಆರೋಗ್ಯ ಸಚಿವಾಲಯದ ನೈರ್ಮಲ್ಯ ಮಾರ್ಗಸೂಚಿಗಳ ಪ್ರಕಾರ, ಬಿಎಸ್ಎಫ್ ತಂಡಗಳು ಹಳ್ಳಿಗಳಲ್ಲಿ ಸಾಧ್ಯವಾದಲ್ಲೆಲ್ಲಾ ಮುಖಗವಸುಗಳನ್ನು ಒದಗಿಸುವುದು, ಕೈ ತೊಳೆಯಲು ಸಾಬೂನುಗಳನ್ನು ಒದಗಿಸುವುದು, ಗಡಿ ಪ್ರದೇಶಗಳಲ್ಲಿ ದೂರದ ಹಳ್ಳಿಗಳು, ವಲಸೆ ಕಾರ್ಮಿಕರು, ದಿನಗೂಲಿ ಕಾರ್ಮಿಕರು ಮತ್ತು ಟ್ರಕ್ ಚಾಲಕರು ಸೇರಿದಂತೆ ಅಗತ್ಯವಿರುವವರಿಗೆ ಪಡಿತರ, ಕುಡಿಯುವ ನೀರು ಮತ್ತು ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವುದು ಮತ್ತು ಜಾಗೃತಿ ಅಭಿಯಾನದತ್ತ ತಮ್ಮ ಗಮನ ಕೇಂದ್ರೀಕರಿಸಿವೆ,

ಪರಿಶೀಲನಾ ಸಭೆಯಲ್ಲಿ ಗೃಹ ವ್ಯವಹಾರಗಳ ರಾಜ್ಯ ಸಚಿವರಾದ ಶ್ರೀ ಜಿ. ಕಿಶನ್ ರೆಡ್ಡಿ ಮತ್ತು ಶ್ರೀ ನಿತ್ಯಾನಂದ್ ರಾಯ್ ಅವರೊಂದಿಗೆ ಕೇಂದ್ರ ಗೃಹ ಕಾರ್ಯದರ್ಶಿ, ಕಾರ್ಯದರ್ಶಿ (ಗಡಿ ನಿರ್ವಹಣೆ) ಮತ್ತು ಬಿಎಸ್ಎಫ್ ಮಹಾನಿರ್ದೇಶಕರು ಭಾಗವಹಿಸಿದ್ದರು.

***



(Release ID: 1613095) Visitor Counter : 111