ರೈಲ್ವೇ ಸಚಿವಾಲಯ

ಎಲ್ಲಾ ಪ್ರಮುಖ ಕೇಂದ್ರಗಳನ್ನು ಸಂಪರ್ಕಿಸಲು ಭಾರತೀಯ ರೈಲ್ವೆಯು 58 ಮಾರ್ಗಗಳಲ್ಲಿ ವೇಳಾಪಟ್ಟಿಯೊಂದಿಗೆ 109 ಪಾರ್ಸೆಲ್ ರೈಲುಗಳನ್ನು ಓಡಿಸುತ್ತಿದೆ

Posted On: 08 APR 2020 6:37PM by PIB Bengaluru

ಎಲ್ಲಾ ಪ್ರಮುಖ ಕೇಂದ್ರಗಳನ್ನು ಸಂಪರ್ಕಿಸಲು ಭಾರತೀಯ ರೈಲ್ವೆಯು 58 ಮಾರ್ಗಗಳಲ್ಲಿ ವೇಳಾಪಟ್ಟಿಯೊಂದಿಗೆ 109 ಪಾರ್ಸೆಲ್ ರೈಲುಗಳನ್ನು ಓಡಿಸುತ್ತಿದೆ

ಇಷ್ಟೊಂದು ಸಂಖ್ಯೆಯ ಪಾರ್ಸೆಲ್ ರೈಲುಗಳಿಗೆ ಮೊದಲ ಬಾರಿಗೆ ಸಮಯ ನಿಗದಿಯ ವೇಳಾಪಟ್ಟಿ

ಸ್ಥಳೀಯ ಕೈಗಾರಿಕೆಗಳು, -ಕಾಮರ್ಸ್ ಕಂಪನಿಗಳು, ಆಸಕ್ತ ಗುಂಪುಗಳು, ವ್ಯಕ್ತಿಗಳು ಮತ್ತು ಇನ್ನಿತರ ನಿರೀಕ್ಷಿತ ಲೋಡರ್ಗಳು ಪಾರ್ಸೆಲ್ಗಳನ್ನು ಕಾಯ್ದಿರಿಸಬಹುದು

ಕುರಿತ ಮಾಹಿತಿ ಎನ್ಟಿಇಎಸ್ ವೆಬ್ಸೈಟ್ನಲ್ಲಿಯೂ ಲಭ್ಯವಿದೆ

 

ದೇಶಾದ್ಯಂತದ ಸರಬರಾಜು ಸರಪಳಿಗೆ ಪ್ರಮುಖ ಉತ್ತೇಜನ ನೀಡಲು, ಭಾರತೀಯ ರೈಲ್ವೆ ವೇಳಾಪಟ್ಟಿಯೊಂದಿಗೆ ಅಡೆತಡೆಯಿಲ್ಲದ ಪಾರ್ಸೆಲ್ ರೈಲುಗಳ ಸೇವೆಗಳನ್ನು ಪರಿಚಯಿಸಿದೆ. ಇದು ಜನಸಾಮಾನ್ಯರು, ಕೈಗಾರಿಕೆ ಮತ್ತು ಕೃಷಿಗೆ ಅಗತ್ಯವಾದ ಪ್ರಮುಖ ವಸ್ತುಗಳ ಲಭ್ಯತೆಯನ್ನು ಹೆಚ್ಚಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.

ಲಾಕ್-ಡೌನ್ ಪ್ರಾರಂಭವಾದಾಗಿನಿಂದ ಪಾರ್ಸೆಲ್ ವಿಶೇಷ ರೈಲುಗಳಿಗಾಗಿ ಸುಮಾರು 58 ಮಾರ್ಗಗಳನ್ನು (109 ರೈಲುಗಳು) ಓಡಿಸಲಾಗುತ್ತಿದೆ. 2020 ಏಪ್ರಿಲ್ 5 ರವರೆಗೆ 27 ಮಾರ್ಗಗಳನ್ನು ಕಾರ್ಯಗತಗೊಳಿಸಲಾಗಿದ್ದು, ಅವುಗಳಲ್ಲಿ 17 ಮಾರ್ಗಗಳು ನಿಯಮಿತ ನಿಗದಿತ ಸೇವೆಗಳಾಗಿದ್ದರೆ, ಉಳಿದವು ಒಮ್ಮುಖ ಪ್ರಯಾಣಕ್ಕೆ ಮಾತ್ರ. ಹಾಗೆಯೇ, 40 ಹೊಸ ಮಾರ್ಗಗಳನ್ನು ಗುರುತಿಸಿ ಕಾರ್ಯಗತಗೊಳಿಸಲಾಗಿದೆ (ಮತ್ತು ಹಿಂದಿನ ಕೆಲವು ಮಾರ್ಗಗಳ ಆವರ್ತನವನ್ನು ಹೆಚ್ಚಿಸಲಾಗಿದೆ). ಇದರೊಂದಿಗೆ ಭಾರತದ ಎಲ್ಲಾ ಪ್ರಮುಖ ನಗರಗಳು ಪ್ರಮುಖ ಸರಕುಗಳ ತ್ವರಿತ ಸಾಗಾಟದೊಂದಿಗೆ ಸಂಪರ್ಕ ಸಾಧಿಸಿದಂತಾಗುತ್ತದೆ. ಸೇವೆಗಳನ್ನು ಮತ್ತಷ್ಟು ಹೆಚ್ಚಿಸುವ ನಿರೀಕ್ಷೆಯಿದೆ.

ವೇಳಾಪಟ್ಟಿಯೊಂದಿಗಿನ ಪಾರ್ಸೆಲ್ ರೈಲುಗಳನ್ನು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಯೋಜಿಸಲಾಗಿದೆ. ಸಮಯ ನಿಗದಿಪಡಿಸಿದ ಪಾರ್ಸೆಲ್ ರೈಲುಗಳು ದೆಹಲಿ, ಮುಂಬೈ, ಕೋಲ್ಕತಾ, ಚೆನ್ನೈ, ಹೈದರಾಬಾದ್, ಮತ್ತು ಬೆಂಗಳೂರುಗಳಂತಹ ದೇಶದ ಪ್ರಮುಖ ಕಾರಿಡಾರ್ಗಳನ್ನು ಸಂಪರ್ಕಿಸುತ್ತವೆ. ಇದಲ್ಲದೆ, ದೇಶದ ಈಶಾನ್ಯ ಪ್ರದೇಶದಲ್ಲಿ ಸರಬರಾಜುಗಳನ್ನು ಖಚಿತಪಡಿಸಿಕೊಳ್ಳಲು ಗುವಾಹಟಿಗೆ ಸೂಕ್ತ ಸಂಪರ್ಕವನ್ನು ಖಾತ್ರಿಪಡಿಸಲಾಗಿದೆ.

ರೈಲುಗಳ ಮೂಲಕ ಸಂಪರ್ಕ ಹೊಂದಿದ ಇತರ ಪ್ರಮುಖ ನಗರಗಳೆಂದರೆ ಭೋಪಾಲ್, ಅಲಹಾಬಾದ್, ಡೆಹ್ರಾಡೂನ್, ವಾರಣಾಸಿ, ಅಹಮದಾಬಾದ್, ವಡೋದರಾ, ರಾಂಚಿ, ಗೋರಖ್ಪುರ, ತಿರುವನಂತಪುರಂ, ಸೇಲಂ, ವಾರಂಗಲ್, ವಿಜಯವಾಡ, ವಿಶಾಖಪಟ್ಟಣಂ, ರೂರ್ಕೆಲಾ, ಬಿಲಾಸ್ಪುರ್, ಭೂಸಾವಾಲ್, ಟಾಟಾನಗರ್, ಜೈಪುರ, ಝಾನ್ಸಿ, ಆಗ್ರಾ, ನಾಸಿಕ್, ನಾಗ್ಪುರ, ಅಕೋಲಾ, ಜಲ್ಗಾಂವ್, ಸೂರತ್, ಪುಣೆ, ರಾಯ್ಪುರ, ಪಾಟ್ನಾ, ಅಸನ್ಸೋಲ್, ಕಾನ್ಪುರ, ಬಿಕಾನೇರ್, ಅಜ್ಮೀರ್, ಗ್ವಾಲಿಯರ್, ಮಥುರಾ, ನೆಲ್ಲೂರು, ಜಬಲ್ಪುರ್  ಇತ್ಯಾದಿ.

ಅವಧಿಯಲ್ಲಿ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಭಾರತೀಯ ರೈಲ್ವೆ ಇತರ ಪಾರ್ಸೆಲ್ ರೈಲುಗಳನ್ನು ಸಹ ಓಡಿಸುತ್ತಿದೆ - ಅವುಗಳೆಂದರೆ:

)        ‘ಹಾಲು ವಿಶೇಷ’- ಪಾಲನ್ಪುರ (ಗುಜರಾತ್) ದಿಂದ ಪಾಲ್ವಾಲ್ (ದೆಹಲಿ ಹತ್ತಿರ), ಮತ್ತು ರೇಣಿಗುಂಟಾ (ಎಪಿ) ದಿಂದ ದೆಹಲಿಗೆ

ಬಿ)        ಹಾಲು ಉತ್ಪನ್ನಗಳು- ಕಂಕರಿಯಾ (ಗುಜರಾತ್) ದಿಂದ ಕಾನ್ಪುರ (ಯುಪಿ) ಮತ್ತು ಸಂಕ್ರೈಲ್ (ಕೋಲ್ಕತಾ ಬಳಿ) ಗೆ

ಸಿ)        ಆಹಾರ ಉತ್ಪನ್ನಗಳು - ಮೊಗಾ (ಪಂಜಾಬ್) ನಿಂದ ಚಾಂಗ್ಸಾರಿ (ಅಸ್ಸಾಂ) ವರೆಗೆ

ವೇಳಾಪಟ್ಟಿಯೊಂದಿಗಿನ ಪಾರ್ಸೆಲ್ ರೈಲುಗಳು ಬೇಡಿಕೆ ಕಡಿಮೆ ಇರುವ ಮಾರ್ಗಗಳಲ್ಲಿಯೂ ಸಹ ಓಡುತ್ತಿವೆ, ಇದರಿಂದಾಗಿ ದೇಶದ ಯಾವುದೇ ಭಾಗವು ಸಂಪರ್ಕರಹಿತವಾಗಿಲ್ಲ. ಕೆಲವು ರೈಲುಗಳನ್ನು ಕೇವಲ 2 ಪಾರ್ಸೆಲ್ ವ್ಯಾನ್ಗಳೊಂದಿಗೆ ಅಥವಾ 1 ಪಾರ್ಸೆಲ್ ವ್ಯಾನ್ ಮತ್ತು ಬ್ರೇಕ್ ವ್ಯಾನ್ನೊಂದಿಗೆ ಓಡಿಸಲಾಗುತ್ತಿದೆ.

ವಿವಿಧ ವಲಯಗಳಲ್ಲಿ COVID-19 ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಪರಿಚಯಿಸಲಾದ ಪಾರ್ಸೆಲ್ ರೈಲುಗಳು ಕೆಳಕಂಡಂತಿವೆ:

ಕ್ರ.ಸಂ.

ವಲಯ

ವಿಶೇಷ ಪಾರ್ಸೆಲ್ ಜೋಡಿ ರೈಲುಗಳು

1

ಪಶ್ಚಿಮ ರೈಲ್ವೆ

12 ಜೋಡಿ

2

ಮಧ್ಯ ರೈಲ್ವೆ

07 ಜೋಡಿ

3

ಪಶ್ಚಿಮ ಮಧ್ಯ ರೈಲ್ವೆ

05 ಜೋಡಿ

4

ಉತ್ತರ ರೈಲ್ವೆ

08 ಜೋಡಿ

5

ವಾಯವ್ಯ ರೈಲ್ವೆ

01 ಜೋಡಿ

6

ದಕ್ಷಿಣ/ನೈರುತ್ಯ ರೈಲ್ವ

10 ಜೋಡಿ

7

ದಕ್ಷಿಣ ಮಧ್ಯ ರೈಲ್ವೆ

05 ಜೋಡಿ

8

ಆಗ್ನೇಯ ರೈಲ್ವೆ

03 ಜೋಡಿ

9

ಆಗ್ನೇಯ ಮಧ್ಯ ರೈಲ್ವೆ

04 ಜೋಡಿ

10

ಉತ್ತರ ಮಧ್ಯ ರೈಲ್ವೆ

01 ಜೋಡಿ

11

ಇಸಿಒಆರ್

02 ಜೋಡಿ

12

ಈಶಾನ್ಯ ರೈಲ್ವೆ

01 ಜೋಡಿ

13

ಪೂರ್ವ ರೈಲ್ವೆ

07 ಜೋಡಿ

14

ಪೂರ್ವ ಮಧ್ಯ ರೈಲ್ವೆ

01 ಜೋಡಿ

( ಮಾಹಿತಿಯು ಏಪ್ರಿಲ್ 8 ಬೆಳಿಗ್ಗೆಯವರೆಗೆ ಮಾತ್ರ. ಇದನ್ನು ನಿಯಮಿತವಾಗಿ ಪರಿಷ್ಕರಿಸುವ ಸಾಧ್ಯತೆಯಿದೆ)

ಮಾರ್ಗಗಳ ಪಟ್ಟಿ

ಕ್ರ.ಸಂ.

ಇಂದ

ವರೆಗೆ

ಪಾರ್ಸೆಲ್ ರೈಲಿನ ಸಂಖ್ಯೆ

ಮಧ್ಯ ರೈಲ್ವೆ

1

ಛತ್ರಪತಿ ಶಿವಾಜಿ ಟರ್ಮಿನಸ್

ನಾಗಪುರ

00109

ನಾಗಪುರ

ಛತ್ರಪತಿ ಶಿವಾಜಿ ಟರ್ಮಿನಸ್

00110

2

ಛತ್ರಪತಿ ಶಿವಾಜಿ ಟರ್ಮಿನಸ್

ವಾಡಿ

00111

ವಾಡಿ

ಛತ್ರಪತಿ ಶಿವಾಜಿ ಟರ್ಮಿನಸ್

00112

3

ಛತ್ರಪತಿ ಶಿವಾಜಿ ಟರ್ಮಿನಸ್

ಶಾಲಿಮಾರ್

00113

ಶಾಲಿಮಾರ್

ಛತ್ರಪತಿ ಶಿವಾಜಿ ಟರ್ಮಿನಸ್

00114

4

ಛತ್ರಪತಿ ಶಿವಾಜಿ ಟರ್ಮಿನಸ್

ಮದ್ರಾಸ್

00115

ಮದ್ರಾಸ್

ಛತ್ರಪತಿ ಶಿವಾಜಿ ಟರ್ಮಿನಸ್

00116

5

ಚಂಗಸರಿ

ಕಲ್ಯಾಣ್

00104

ಪೂರ್ವ ರೈಲ್ವೆ

1

ಹೌರಾ

ನವದೆಹಲಿ

00309

ನವದೆಹಲಿ

ಹೌರಾ

00310

2

ಸೀಲ್ದಾ

ನವದೆಹಲಿ

00311

ನವದೆಹಲಿ

ಸೀಲ್ದಾ

00312

3

ಸೀಲ್ದಾ

ಗುವಾಹಟಿ

00313

ಗುವಾಹಟಿ

ಸೀಲ್ದಾ

00314

4

ಹೌರಾ

ಗುವಾಹಟಿ

00303

ಗುವಾಹಟಿ

ಹೌರಾ

00304

5

ಹೌರಾ

ಜಮಾಲ್ಪುರ

00305

ಜಮಾಲ್ಪುರ

ಹೌರಾ

00306

6

ಸೀಲ್ದಾ

ಮಾಲ್ಡಾ ಟೌನ್

00315

ಮಾಲ್ಡಾ ಟೌನ್

ಸೀಲ್ದಾ

00316

7

ಹೌರಾ

ಛತ್ರಪತಿ ಶಿವಾಜಿ ಟರ್ಮಿನಸ್

00307

ಛತ್ರಪತಿ ಶಿವಾಜಿ ಟರ್ಮಿನಸ್

ಹೌರಾ

00308

ಪೂರ್ವ ಮಧ್ಯ ರೈಲ್ವೆ

1

ದೀನ್ ದಯಾಳ್ ಉಪಾಧ್ಯಾಯ ಜಂಕ್ಷನ್

ಸಹರ್ಸ

00302

 

ಸಹರ್ಸ

ದೀನ್ ದಯಾಳ್ ಉಪಾಧ್ಯಾಯ ಜಂಕ್ಷನ್

00301

ಈಸ್ಟ್ ಕೋಸ್ಟ್ ರೈಲ್ವೆ

1

ವಿಶಾಖ ಪಟ್ಟಣಂ

ಕಟಕ್

00532

ಕಟಕ್

ವಿಶಾಖ ಪಟ್ಟಣಂ

00531

2

ವಿಶಾಖ ಪಟ್ಟಣಂ

ಸಂಬಾಲ್ಪುರ

00530

ಸಂಬಾಲ್ಪುರ

ವಿಶಾಖ ಪಟ್ಟಣಂ

00529

ಉತ್ತರ ರೈಲ್ವೆ

1

ನವದೆಹಲಿ

ಗುವಾಹಟಿ

00402

ಗುವಾಹಟಿ

ನವದೆಹಲಿ

00401

2

ಅಮೃತಸರ

ಹೌರಾ

00464

ಹೌರಾ

ಅಮೃತಸರ

00463

3

ದೆಹಲಿ

ಜಮ್ಮು ತಾವಿ

00403

ಜಮ್ಮು ತಾವಿ

ದೆಹಲಿ

00404

4

ಕಲ್ಕಾ

ಅಂಬಾಲಾ

00454

ಅಂಬಾಲಾ

ಕಲ್ಕಾ

00453

5

ಡೆಹ್ರಾಡೂನ್

ದೆಹಲಿ

00434

ದೆಹಲಿ

ಡೆಹ್ರಾಡೂನ್

00433

ಉತ್ತರ ಮಧ್ಯ ರೈಲ್ವೆ

1

ಪ್ರಯಾಗರಾಜ್

ಝಾನ್ಸಿ

00436

 

ಝಾನ್ಸಿ

ಪ್ರಯಾಗರಾಜ್

00435

ಈಶಾನ್ಯ ರೈಲ್ವೆ

1

ಮಂದೌದಿಹ್

ಕತ್ಕೋದಾಮ್

00501

ಕತ್ಕೋದಾಮ್

ಮಂದೌದಿಹ್

00502

ನಾರ್ತ್ ಈಸ್ಟ್ ಫ್ರಾಂಟಿಯರ್ ರೈಲ್ವೆ

1

ನ್ಯೂ ಗುವಾಹಟಿ

ಅಗರ್ತಲಾ

 

ವಾಯವ್ಯ ರೈಲ್ವೆ

1

ಜೈಪುರ-ರೆವಾರಿ-ಜೋಧಪುರ-ಅಹಮದಾಬಾದ್-ಜೈಪುರ

00951

2

ಜೈಪುರ- ಅಹಮದಾಬಾದ್- ಜೋಧಪುರ- ರೆವಾರಿ- ಜೈಪುರ

00952

ದಕ್ಷಿಣ ರೈಲ್ವೆ

1

ಮದ್ರಾಸ್

ನವದೆಹಲಿ

00646

ನವದೆಹಲಿ

ಮದ್ರಾಸ್

00647

2

ಮದ್ರಾಸ್

ಕೊಯಮತ್ತೂರು

00653

ಕೊಯಮತ್ತೂರು

ಮದ್ರಾಸ್

00654

3

ಚೆನ್ನೈ ಎಗ್ಮೋರ್

ನಾಗರಕೋಯಿಲ್

00657

ನಾಗರಕೋಯಿಲ್

ಚೆನ್ನೈ ಎಗ್ಮೋರ್

00658

4

ತಿರುವನಂತಪುರಂ

ಕೋಳಿಕ್ಕೋಡ್

00655

ಕೋಳಿಕ್ಕೋಡ್

ತಿರುವನಂತಪುರಂ

00656

ದಕ್ಷಿಣ ಮಧ್ಯ ರೈಲ್ವೆ

1

ಸಿಕಂದರಾಬಾದ್

ಹೌರಾ

 

ಹೌರಾ

ಸಿಕಂದರಾಬಾದ್

 

2

ರೇಣಿಗುಂಟಾ

ಸಿಕಂದರಾಬಾದ್

00769

ಸಿಕಂದರಾಬಾದ್

ರೇಣಿಗುಂಟಾ

00770

3

ರೇಣಿಗುಂಟಾ

ಸಿಕಂದರಾಬಾದ್

00767

ಸಿಕಂದರಾಬಾದ್

ರೇಣಿಗುಂಟಾ

00768

4

ಕಾಕಿನಾಡ

ಸಿಕಂದರಾಬಾದ್

00765

ಸಿಕಂದರಾಬಾದ್

ಕಾಕಿನಾಡ

00766

5

ರೇಣಿಗುಂಟಾ

ನಿಜಾಮುದ್ದೀನ್

00761(ಹಾಲು)

ಆಗ್ನೇಯ ರೈಲ್ವೆ

1

ಶಾಲಿಮಾರ್

 ರಾಂಚಿ

00801

ರಾಂಚಿ

ಶಾಲಿಮಾರ್

00802

2

ಶಾಲಿಮಾರ್

ಚಂಗಸರಿ

00803

ಚಂಗಸರಿ

ಶಾಲಿಮಾರ್

00804

ಆಗ್ನೇಯ ಮಧ್ಯ ರೈಲ್ವೆ

1

ದುರ್ಗ್

ಛಪ್ರಾ

00875

ಛಪ್ರಾ

ದುರ್ಗ್

00876

2

ದುರ್ಗ

ಅಂಬಿಕಾಪುರ

00873

ಅಂಬಿಕಾಪುರ

ದುರ್ಗ್

00874

3

ದುರ್ಗ್

ಕೊರ್ಬಾ

00871

ಕೊರ್ಬಾ

ದುರ್ಗ್

00872

4

ಇತ್ವಾರಿ

ಟಾಟಾ

00881

ಟಾಟಾ

ಇತ್ವಾರಿ

00882

ನೈರುತ್ಯ ರೈಲ್ವೆ

1

ಯಶವಂತಪುರ

ಗೋರಖ್ಪುರ

00607

ಗೋರಖ್ಪುರ

ಯಶವಂತಪುರ

00608

2

ಯಶವಂತಪುರ

ನಿಜಾಮುದ್ದೀನ್

00605

ನಿಜಾಮುದ್ದೀನ್

ಯಶವಂತಪುರ

00606

3

ಯಶವಂತಪುರ

ಹೌರಾ

00603

ಹೌರಾ

ಯಶವಂತಪುರ

00604

4

ಗುವಾಹಟಿ

ಯಶವಂತಪುರ

00610

ಪಶ್ಚಿಮ ರೈಲ್ವೆ

1

ಬಾಂದ್ರಾ ಟರ್ಮಿನಸ್

ಲೂಧಿಯಾನ

00901

ಲೂಧಿಯಾನ

ಬಾಂದ್ರಾ ಟರ್ಮಿನಸ್

00902

2

ಮದ್ರಾಸ್

ಕಂಕಾರಿಯಾ

00908

3

ಅಹಮದಾಬಾದ್

ಗುವಾಹಟಿ

00915

ಗುವಾಹಟಿ

ಅಹಮದಾಬಾದ್

00916

4

ಸೂರತ್

ಭಾಗಲ್ಪುರ

00917

ಭಾಗಲ್ಪುರ

ಸೂರತ್

00918

5

ಮುಂಬೈ ಸೆಂಟ್ರಲ್

ಫಿರೋಜ್ ಪುರ

00911

ಫಿರೋಜ್ ಪುರ

ಮುಂಬೈ ಸೆಂಟ್ರಲ್

00912

6

ಪೋರಬಂದರ್

ಶಾಲಿಮಾರ್

00913

ಶಾಲಿಮಾರ್

ಪೋರಬಂದರ್

00914

7

ಲಿಂಚ್

ಸಲ್ಚಪ್ರಾ

00909

ಸಲ್ಚಪ್ರಾ

ಲಿಂಚ್

00910

8

ಭುಜ್

ದಾದರ್

00924

ದಾದರ್

ಭುಜ್

00925

9

ಬಾಂದ್ರಾ ಟರ್ಮಿನಸ್

ಓಕ್ಹಾ

00921

ಓಕ್ಹಾ

ಬಾಂದ್ರಾ ಟರ್ಮಿನಸ್

00920

ಮಧ್ಯ ರೈಲ್ವೆ

1

ಭೋಪಾಲ್

ಗ್ವಾಲಿಯರ್

 

 

ಗ್ವಾಲಿಯರ್

ಭೋಪಾಲ್

 

2

ಇತಾರ್ಸಿ

ಬಿನಾ

 

ಬಿನಾ

ಇತಾರ್ಸಿ

 

3

ಭೋಪಾಲ್

ಖಾಂದ್ವಾ

 

ಖಾಂದ್ವಾ

ಭೋಪಾಲ್

 

4

ರೇವಾ

ಅನೂಪ್ಪೂರ್

 

ಅನೂಪ್ಪೂರ್

ರೇವಾ

 

5

ರೇವಾ

ಸಿಂಗ್ರೌಲಿ

 

ಸಿಂಗ್ರೌಲಿ

ರೇವಾ

 

ಒಟ್ಟು ಮಾರ್ಗಗಳು 58

ಇದುವರೆಗೆ, ಸುಮಾರು 32 ಜೋಡಿ ಪಾರ್ಸೆಲ್ ವಿಶೇಷವನ್ನು ಅಂತರ ರೈಲ್ವೆ (ದೀರ್ಘ ದೂರ) ಎಂದು ಸೂಚಿಸಲಾಗಿದೆ, ಉಳಿದವು ಒಳ-ರೈಲ್ವೆ (ಕಡಿಮೆ ದೂರ).

ಪಾರ್ಸೆಲ್ ವಿಶೇಷ ರೈಲುಗಳಿಗಾಗಿ ಕೆಲವು ದೀರ್ಘ ಮಾರ್ಗಗಳು ಹೀಗಿವೆ:

1)        ಕಲ್ಯಾಣ್ - ಸಂತ್ರಗಚಿ

2)       ಕಲ್ಯಾಣ್ - ಚಂಗ್ಸರಿ

3)       ನವದೆಹಲಿ - ಚೆನ್ನೈ

4)       ಸೇಲಂ - ಭಟಿಂಡಾ

5)       ಸೇಲಂ - ಹಿಸಾರ್

5)       ಯಶವಂತಪುರ - ಹಜರತ್ ನಿಜಾಮುದ್ದೀನ್

6)       ಯಶವಂತಪುರ - ಹೌರಾ

7)        ಯಶವಂತಪುರ - ಗೋರಖ್ಪುರ

8)       ಯಶವಂತಪುರ - ಗುವಾಹಟಿ

9)       ಅಹಮದಾಬಾದ್ - ಗುವಾಹಟಿ

10)      ಕರಂಬೇಲಿ - ಚಂಗ್ಸರಿ

11)       ಕಂಕರಿಯಾ ಸಂಕ್ರೈಲ್

ರೈಲುಗಳ ಮೂಲಕ ಪಾರ್ಸೆಲ್ಗಳನ್ನು ಸಾಗಿಸುವ ಸೌಲಭ್ಯವನ್ನು ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯು ಪಡೆಯಬಹುದು. ಕೆಳಗಿನ ಸರಕುಗಳನ್ನು ದೇಶದ ಉದ್ದಗಲಕ್ಕೂ ಸಾಗಿಸಲಾಗುತ್ತಿದೆ:

i.      ಬೇಗ ಹಾಳಾಗುವ ವಸ್ತುಗಳು (ಮೊಟ್ಟೆ, ಹಣ್ಣುಗಳು, ತರಕಾರಿಗಳು, ಮೀನು ಸೇರಿದಂತೆ)

ii.     ಔಷಧಿಗಳು, ವೈದ್ಯಕೀಯ ಉಪಕರಣಗಳು, ಮುಖಗವಸುಗಳು

iii.    ಹಾಲು ಮತ್ತು ಡೈರಿ ಉತ್ಪನ್ನಗಳು

iv.    ಬೀಜಗಳು (ಕೃಷಿ ಬಳಕೆಗಾಗಿ)

v.     -ಕಾಮರ್ಸ್ ಸರಕುಗಳು, ಪ್ಯಾಕೇಜ್ ಮಾಡಲಾದ ಆಹಾರ ವಸ್ತುಗಳು, ಪುಸ್ತಕಗಳು, ಸ್ಟೇಷನರಿ, ಪ್ಯಾಕಿಂಗ್ ವಸ್ತುಗಳು ಮುಂತಾದ ಇತರ ಸಾಮಾನ್ಯ ಸರಕುಗಳು

ಸಾಧ್ಯವಿರುವ ಸ್ಥಳಗಳಲ್ಲಿ ರೈಲುಗಳಿಗೆ ಮಾರ್ಗ-ನಿಲುಗಡೆಗಳನ್ನು ನೀಡಲಾಗಿದೆ, ಇದರಿಂದಾಗಿ ಪಾರ್ಸೆಲ್ಗಳನ್ನು ಗರಿಷ್ಠವಾಗಿ ತಲುಪಿಸಬಹುದು. ರೈಲುಗಳ ವೇಳಾಪಟ್ಟಿಯನ್ನು ವಲಯ ರೈಲ್ವೆಗಳು ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಿಸುತ್ತಿವೆ. ಇದಲ್ಲದೆ, ಸಾಮಾನ್ಯ ಗ್ರಾಹಕರು ಮತ್ತು ಸರ್ಕಾರಿ ಸಂಸ್ಥೆಗಳನ್ನು ಸಹ ಸಂಪರ್ಕಿಸಲಾಗುತ್ತಿದೆ.

***



(Release ID: 1612370) Visitor Counter : 170