ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
ಕೋವಿಡ್ -19 ಲಾಕ್ ಡೌನ್ ನಡುವೆಯೂ ಎಫ್.ಸಿ.ಐ. 662 ರೇಕ್ ಗಳ ಮೂಲಕ ಸುಮಾರು 18.54 ಲಕ್ಷ ಮೆಟ್ರಿಕ್ ಟನ್ ಆಹಾರ ಪದಾರ್ಥಗಳನ್ನು ಮಾರ್ಚ್ 24 ರಿಂದ 14 ದಿನಗಳ ಅವಧಿಯಲ್ಲಿ ದೇಶಾದ್ಯಂತ ಸಾಗಿಸಿದೆ
Posted On:
06 APR 2020 8:06PM by PIB Bengaluru
ಕೋವಿಡ್ -19 ಲಾಕ್ ಡೌನ್ ನಡುವೆಯೂ ಎಫ್.ಸಿ.ಐ. 662 ರೇಕ್ ಗಳ ಮೂಲಕ ಸುಮಾರು 18.54 ಲಕ್ಷ ಮೆಟ್ರಿಕ್ ಟನ್ ಆಹಾರ ಪದಾರ್ಥಗಳನ್ನು ಮಾರ್ಚ್ 24 ರಿಂದ 14 ದಿನಗಳ ಅವಧಿಯಲ್ಲಿ ದೇಶಾದ್ಯಂತ ಸಾಗಿಸಿದೆ
ಪ್ರಧಾನ ಮಂತ್ರಿ ಅವರ ಗರೀಬ್ ಕಲ್ಯಾಣ ಅನ್ನ ಯೋಜನಾ (ಪಿ.ಎಂ.ಜಿ.ಕೆ.ಎ.ವೈ.) ಅನುಷ್ಟಾನಕ್ಕಾಗಿ ಎಫ್.ಸಿ.ಐ. ದೇಶಾದ್ಯಂತ ರಾಜ್ಯಗಳಿಗೆ ಸಾಕಷ್ಟು ದಾಸ್ತಾನನ್ನು ಕಳುಹಿಸಿದೆ. ಇದರಲ್ಲಿ ಮುಂದಿನ ಮೂರು ತಿಂಗಳಿಗೆ ತಿಂಗಳೊಂದಕ್ಕೆ ಓರ್ವ ವ್ಯಕ್ತಿಗೆ 5 ಕಿಲೋ ಆಹಾರ ಧಾನ್ಯ ದೊರೆಯುತ್ತದೆ. ಇದನ್ನು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್.ಎಫ್.ಎಸ್.ಎ.) ಫಲಾನುಭವಿಗಳಿಗೆ ವಿತರಿಸಲಾಗುತ್ತದೆ.ಉತ್ತರ ಪ್ರದೇಶ, ಬಿಹಾರ, ತೆಲಂಗಾಣ, ಅಸ್ಸಾಂ, ಹಿಮಾಚಲ ಪ್ರದೇಶ, ಮೇಘಾಲಯ, ಸಿಕ್ಕಿಂ, ಉತ್ತರಾಖಂಡ, ಮಹಾರಾಷ್ಟ್ರ, ಗುಜರಾತ್, ಹರ್ಯಾಣಾ, ಕೇರಳ , ಮಿಜೋರಾಂಗಳು ಈಗಾಗಲೇ ಈ ಯೋಜನೆ ಅಡಿಯಲ್ಲಿ ಎಫ್.ಸಿ.ಐ.ಯಿಂದ ಆಹಾರ ಧಾನ್ಯಗಳನ್ನು ಪಡೆಯಲು ಆರಂಭ ಮಾಡಿವೆ. ಇನ್ನು ಕೆಲವು ದಿನಗಳಲ್ಲಿ ಇತರ ರಾಜ್ಯಗಳು ಕೂಡಾ ಪಿ.ಎಂ.ಜಿ.ಕೆ ಎ.ವೈ. ಅಡಿಯಲ್ಲಿ ವಿತರಣೆಗೆ ಆಹಾರಧಾನ್ಯಗಳನ್ನು ಎತ್ತುವಳಿ ಮಾಡಲಿವೆ. ಎಫ್.ಸಿ.ಐ.ಯು ವಿಶ್ರಾಂತಿ ರಹಿತವಾಗಿ ಕೆಲಸ ಮಾಡುತ್ತಿದ್ದು, ದೇಶಾದ್ಯಂತ ಲಾಕ್ ಡೌನ್ ಜಾರಿಯಲ್ಲಿರುವಾಗ ದೇಶದ ಎಲ್ಲಾ ಭಾಗಗಳಲ್ಲೂ ಸಾಕಷ್ಟು ಪ್ರಮಾಣದಲ್ಲಿ ಆಹಾರ ಧಾನ್ಯಗಳ ದಾಸ್ತಾನು ಲಭ್ಯ ಇರುವಂತೆ ನೋಡಿಕೊಳ್ಳುತ್ತಿದೆ. ಕೋವಿಡ್ -19 ಜಾಗತಿಕ ಸಾಂಕ್ರಾಮಿಕದ ವಿರುದ್ದ ಹೋರಾಟಕ್ಕಾಗಿ ಲಾಕ್ ಡೌನ್ 24.03.2020 ರಿಂದ ಆರಂಭಗೊಂಡಿದ್ದು, ಅಂದಿನಿಂದ ಕಳೆದ 13 ದಿನಗಳಲ್ಲಿ ಎಫ್.ಸಿ.ಐ.ಯು ದಿನವೊಂದಕ್ಕೆ ಸರಾಸರಿ 1.41 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯಗಳನ್ನು ಸಾಗಿಸಿದೆ. ಲಾಕ್ ಡೌನ್ ಆರಂಭಕ್ಕೆ ಮುನ್ನ ದಿನವೊಂದಕ್ಕೆ ಸರಾಸರಿ ಆಹಾರ ಧಾನ್ಯಗಳ ಸಾಗಾಟ 0.8 ಲಕ್ಷ ಮೆಟ್ರಿಕ್ ಟನ್ ಆಗಿತ್ತು. ೦5-೦4-202೦ರವರೆಗೆ ದೇಶಾದ್ಯಂತ ಒಟ್ಟು 603 ರೇಕ್ ಗಳಲ್ಲಿ 16.88 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯಗಳನ್ನು ಸಾಗಾಟ ಮಾಡಲಾಗಿದೆ. ಇನ್ನು 59 ರೇಕ್ ಗಳಲ್ಲಿ ಸುಮಾರು 1.65 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯಗಳನ್ನು ಇಂದು ಲೋಡ್ ಮಾಡಲಾಗುತ್ತಿದೆ.
ಇದರ ಜೊತೆಗೆ ಎನ್.ಎಫ್.ಎಸ್.ಎ.ಅಡಿಯಲ್ಲಿ ನಿಗದಿತ ಮತ್ತು ಪಿ.ಎಮ್.ಜಿ.ಕೆ.ಎ.ವೈ. ಅಡಿಯಲ್ಲಿ ಹೆಚ್ಚುವರಿ ಮಂಜೂರು ಮಾಡಲಾಗಿರುವ ಆಹಾರ ಧಾನ್ಯಗಳನ್ನು ಪೂರೈಸಲು ಎಫ್.ಸಿ.ಐ.ಯು ರಾಜ್ಯ ಸರಕಾರಗಳಿಗೆ ನೇರವಾಗಿ ಗೋಧಿ ಮತ್ತು ಅಕ್ಕಿಯನ್ನು ಇ-ಹರಾಜು ಮಾರ್ಗವನ್ನು ಅನುಸರಿಸದೆ ಮುಕ್ತ ಮಾರುಕಟ್ಟೆ ಮಾರಾಟ ದರದಲ್ಲಿ, ಆಹಾರ ಧಾನ್ಯಗಳ ನಿರಂತರ ಪೂರೈಕೆಯನ್ನು ಖಾತ್ರಿಪಡಿಸುವುದಕ್ಕಾಗಿ ಪೂರೈಕೆ ಮಾಡುತ್ತದೆ. ಆಯಾ ಜಿಲ್ಲಾ ಮ್ಯಾಜಿಸ್ಟ್ರೇಟರು ಆವಶ್ಯಕತೆಯ ಬಗ್ಗೆ ಮಾಡಿರುವ ಮೌಲ್ಯಮಾಪನವನ್ನು ಅನುಸರಿಸಿ ಗೋಧಿಯನ್ನು ಗೋಧಿ ಹಿಟ್ಟು ಮತ್ತು ಇತರ ಉತ್ಪನ್ನಗಳ ಉತ್ಪಾದಕರಿಗಾಗಿ ಕೊಡಮಾಡಲಾಗುತ್ತದೆ. ಇದುವರೆಗೆ ಎಫ್.ಸಿ.ಐ.ಯು ಈ ಮಾದರಿಯಲ್ಲಿ 13 ರಾಜ್ಯಗಳಿಗೆ 1.38 ಲಕ್ಷ ಮೆಟ್ರಿಕ್ ಟನ್ ಗೋಧಿಯನ್ನು ಬಿಡುಗಡೆ ಮಾಡಿದೆ ಮತ್ತು 8 ರಾಜ್ಯಗಳಿಗೆ 1.32 ಲಕ್ಷ ಮೆಟ್ರಿಕ್ ಟನ್ ಅಕ್ಕಿಯನ್ನು ಬಿಡುಗಡೆ ಮಾಡಿದೆ.
ಈ ಅವಧಿಯಲ್ಲಿ ಆಹಾರ ಧಾನ್ಯಗಳ ಲೋಡಿಂಗ್ ಮತ್ತು ಅನ್ ಲೋಡಿಂಗ್ ವಿವರಗಳಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿರಿ
ಲಾಕ್ ಡೌನ್ ಅವಧಿಯಲ್ಲಿ ಲೋಡ್ ಮಾಡಲಾದ ರೇಕ್ ಗಳ ರಾಜ್ಯವಾರು ವಿವರ
ಲಾಕ್ ಡೌನ್ ಅವಧಿಯಲ್ಲಿ ಅನ್ ಲೋಡ್ ಮಾಡಲಾದ ರೇಕ್ ಗಳ ರಾಜ್ಯವಾರು ವಿವರ
***
(Release ID: 1612052)
Visitor Counter : 261