ರಕ್ಷಣಾ ಸಚಿವಾಲಯ
ಕೋವಿಡ್ – 19 ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ‘ಎಕ್ಸರ್ಸೈಸ್ ಎನ್ ಸಿ ಸಿ ಯೋಗ್ದಾನ್’ ಅಡಿಯಲ್ಲಿ ಎನ್ ಸಿ ಸಿ ಕೆಡೆಟ್ ಗಳಿಂದ ಜನ ಸೇವೆ
Posted On:
06 APR 2020 3:58PM by PIB Bengaluru
ಕೋವಿಡ್ – 19 ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ‘ಎಕ್ಸರ್ಸೈಸ್ ಎನ್ ಸಿ ಸಿ ಯೋಗ್ದಾನ್’ ಅಡಿಯಲ್ಲಿ ಎನ್ ಸಿ ಸಿ ಕೆಡೆಟ್ ಗಳಿಂದ ಜನ ಸೇವೆ
ಕೊರೊನಾ ವೈರಾಣು ಸಾಂಕ್ರಾಮಿಕ ಹರಡುವಿಕೆ ವಿರುದ್ಧ ಹೋರಾಟದಲ್ಲಿ ನಾಗರಿಕ ಮತ್ತು ಪೋಲಿಸ್ ಆಡಳಿತ ಹಿರಿಯ ವಿಭಾಗದ ರಾಷ್ಟ್ರೀಯ ಕೆಡೆಟ್ ಕಾಪ್ಸ್ (ಎನ್ ಸಿಸಿ) ಕೆಡೆಟ್ ಗಳ ಸೇವೆಗಾಗಿ ಮನವಿ ಮಾಡಿದೆ. ಇಂದಿನಿಂದ ಕೆಲ ಕೆಡೆಟ್ ಗಳು ಸೇವೆಯನ್ನು ಸಲ್ಲಿಸಲಾರಂಭಿಸಿದ್ದಾರೆ. “ಎಕ್ಸರ್ಸೈಸ್ ಎನ್ ಸಿ ಸಿ ಯೋಗ್ದಾನ್” ಎಂಬ ಅಭ್ಯಾಸದಡಿ ಕಳೆದ ವಾರ ಎನ್ ಸಿಸಿ ಕೆಡೆಟ್ ಗಳ ತಾತ್ಕಾಲಿಕ ನೇಮಕಾತಿಗೆ ಗೃಹ ಸಚಿವಾಲಯ ಅನುಮತಿ ನೀಡಿದೆ ಮತ್ತು ಈ ಕುರಿತು ಮಾರ್ಗಸೂಚಿಗಳನ್ನು ನೀಡಿದೆ. ಪರಿಹಾರ ಪ್ರಯತ್ನಗಳನ್ನು ಸೂಕ್ತವಾಗಿ ನಿರ್ವಹಿಸುವಲ್ಲಿ ಈ ಕೆಡೆಟ್ ಗಳು ರಾಜ್ಯ ಮತ್ತು ಪೌರಾಡಳಿತ ಅಧಿಕಾರಿಗಳಿಗೆ ನೆರವು ನೀಡಲಿದ್ದಾರೆ.
ಸರಬರಾಜು ಸರಪಳಿ ನಿರ್ವಹಣೆಗಾಗಿ ಲಡಾಕ್ ಕೇಂದ್ರಾಡಳಿತ ಪ್ರದೇಶ 8 ಜನ ಕೆಡೆಟ್ ಗಳ ನೇಮಕಾತಿಗೆ ಮನವಿ ಮಾಡಿದೆ. ಸರಬರಾಜು ಸರಪಳಿ ಮತ್ತು ಸಂಚಾರ ನಿರ್ವಹಣೆಗಾಗಿ 245 ಕೆಡೆಟ್ ಗಳ ಸೇವೆಗೆ ಮಧ್ಯ ಪ್ರದೇಶ ಮತ್ತು ಛತ್ತೀಸ್ ಘಡ ನಿರ್ದೇಶನಾಲಕ್ಕೆ ನೀಮುಚ್ ಪೋಲಿಸ್ ವರಿಷ್ಠಾಧಿಕಾರಿಗಳು ಕೋರಿದ್ದಾರೆ. 6 ಮಹಿಳೆಯರೂ ಸೇರಿದಂತೆ 64 ಹಿರಿಯ ವಿಭಾಗದ ಕೆಡೆಟ್ ಗಳನ್ನು ಈಗಾಗಲೇ ನಿಯೋಜಿಸಲಾಗಿದೆ. ಕೋವಿಡ್ – 19 ನಿರೋಧಕ ಕ್ರಮಗಳ ತರಬೇತಿ ಪಡೆಯಲು ಎನ್ ಸಿಸಿ ಸ್ವಯಂ ಸೇವಕ ಕೆಡೆಟ್ ಗಳ ಸೇವೆಗಾಗಿ ಬಿಲಾಸ್ ಪುರ್ ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ. ಈ ಕೆಡೆಟ್ ಗಳಿಗೆ ಮುಂದಿನ ಕಾರ್ಯಕ್ಕಾಗಿ ಈಗಾಗಲೇ ತರಬೇತಿ ನೀಡಲಾಗುತ್ತಿದೆ.
ನಗರ ಪ್ರದೇಶಗಳಲ್ಲಿ ಸಾಮಾಜಿಕ ಅಂತರವನ್ನು ಖಚಿತ ಪಡಿಸುವುದಕ್ಕೆ ಪೋಲಿಸ್ ಸಿಬ್ಬಂದಿಗೆ ಸಹಾಯ ಮಾಡಲು ಏಪ್ರಿಲ್ 14 2020 ರವರೆಗೆ ಹಿಮಾಚಲ ಪ್ರದೇಶದ ಕಾರಂಗಾ ಜಿಲ್ಲೆಯ ಉಪ ಆಯುಕ್ತರಿಂದ ಪಂಜಾಬ್, ಹರಿಯಾಣ, ಹಿಮಾಚಲ ಪ್ರದೇಶ ಮತ್ತು ಛತ್ತೀಸ್ ಘಡ (ಪಿ ಹೆಚ್ ಹೆಚ್ ಪಿ ಸಿ) ನಿರ್ದೇಶನಾಲಯಗಳಿಗೆ 86 ಕೆಡೆಟ್ ಗಳ ಮನವಿ ಬಂದಿದೆ.
ಕೋವಿಡ್ – 19 ಹಿನ್ನೆಲೆ ಎನ್ ಸಿಸಿ ಕೆಡೆಟ್ ಗಳ ಸೇವೆಗಾಗಿ ತಮಿಳು ನಾಡಿನ ಕಾಂಚೀಪುರಂ ಜಿಲ್ಲಾ ಪೋಲಿಸ್ ಸಿಬ್ಬಂದಿ, ಜಿಲ್ಲಾ ನೋಡಲ್ ಅಧಿಕಾರಿಯನ್ನು ಸಂಪರ್ಕಿಸಿದ್ದಾರೆ. ಇಬ್ಬರು ಮಹಿಳೆಯರು ಸೇರಿದಂತೆ 57 ಕೆಡೆಟ್ ಗಳನ್ನು ಒಗ್ಗೂಡಿಸಲಾಗಿದ್ದು ಇದಕ್ಕಾಗಿ ನಿಯೋಜಿಸಲಾಗಿದೆ. ಒಟ್ಟಾರೆ ತಮಿಳು ನಾಡು, ಪುದುಚೆರಿ ಮತ್ತು ಅಂಡಮಾನ್ ನಿಕೋಬಾರ್ ನಿರ್ದೇಶನಾಲಯವು ತಮಿಳು ನಾಡಿಗೆ 75 ಕೆಡೆಟ್ ಗಳು ಮತ್ತು ಪುದುಚೆರಿಗೆ 57 ಕೆಡೆಟ್ ಗಳ ಸೇವೆಯನ್ನು ಒದಗಿಸಿದೆ.
ಗೋರಖ್ ಪುರ್ ನಲ್ಲಿರುವ ಎನ್ ಸಿಸಿ ತಂಡದ ಮುಖ್ಯ ಕಚೇರಿಯಿಂದ ಸ್ವಯಂ ಸೇವಕ ಕೆಡೆಟ್ ಗಳ ಸೇವೆ ಬೇಕೆಂದು ಉತ್ತರ ಪ್ರದೇಶದ ಬಲರಾಂಪುರ್ ಜಿಲ್ಲಾಡಳಿತವು ಮನವಿ ಸಲ್ಲಿಸಿದೆ. ಈ ಕಾರ್ಯಕ್ಕಾಗಿ ಕೆಲವು ಕೆಡೆಟ್ ಗಳನ್ನು ನಿಯೋಜಿಸಲಾಗಿದೆ.
2020 ಏಪ್ರಿಲ್ 6 ರಿಂದ 8 ರವರೆಗೆ ಮೇಘಾಲಯ ಪೋಲಿಸರು ಆಹಾರ ಧಾನ್ಯ ವಿತರಣೆ ಮತ್ತು ಶಾಂತಿಯನ್ನು ಕಾಪಾಡಲು ಪೂರ್ವ ಖಾಸಿ ಹಿಲ್ಸ್ ಜಿಲ್ಲೆಯಲ್ಲಿ 80 ಕೆಡೆಟ್ ಗಳು ಸಹಾಯ ಮಾಡುತ್ತಿದ್ದಾರೆ.
ಸಹಾಯ ವಾಣಿ/ ಕಾಲ್ ಸೆಂಟರ್ ಗಳ ನಿರ್ವಹಣೆ; ಪರಿಹಾರ ಸಾಮಗ್ರಿಗಳು, ಔಷಧಿಗಳು , ಆಹಾರ/ಅವಶ್ಯಕ ಸರಕುಗಳ ವಿತರಣೆ ; ಸಮುದಾಯ ನೆರವು; ದತ್ತಾಂಶ ನಿರ್ವಹಣೆ ಮತ್ತು ಸರದಿ ಮತ್ತು ಸಂಚಾರ ನಿರ್ವಹಣೆ ಹಾಗೂ ನಿಯಂತ್ರಣಾ ಕೊಠಡಿಗಳಲ್ಲಿನ ಸಿಸಿಟಿವಿ ನಿರ್ವಹಣೆ - ಕೆಡೆಟ್ ಗಳಿಗೆ ವಹಿಸಲಾದ ಜವಾಬ್ದಾರಿಗಳಾಗಿವೆ.
ಉದ್ಯೋಗ ಮಾರ್ಗ ಸೂಚಿಗಳ ಪ್ರಕಾರ ರಾಜ್ಯ ಎನ್ ಸಿಸಿ ನಿರ್ದೇಶನಾಲಯಗಳಿಂದ ಸ್ವಯಂ ಸೇವಕ ಕೆಡೆಟ್ ಗಳ ನೆರವು ಪಡೆಯಲು ರಾಜ್ಯ ಸರ್ಕಾರಗಳು/ಜಿಲ್ಲಾ ಆಡಳಿತ ಮನವಿ ಸಲ್ಲಿಸಬೇಕಿದೆ. ನಿರ್ದೇಶನಾಲಯ/ ಪ್ರದೇಶಿಕ ಮುಖ್ಯ ಕಛೇರಿಗಳು/ ಘಟಕ ಮಟ್ಟದಲ್ಲಿ ರಾಜ್ಯ ಸರ್ಕಾರದ/ ಸ್ಥಳೀಯ ನಗರ ಪ್ರಾಧಿಕಾರಗಳೊಂದಿಗೆ ವಿವರಗಳನ್ನು ಸಮನ್ವಯಗೊಳಿಸಲಾಗುವುದು. ಕೆಡೆಟ್ ಗಳನ್ನು ಕರ್ತವ್ಯಕ್ಕೆ ನಿಯೋಜಿಸುವ ಮೊದಲು ಮೂಲಭೂತ ಅವಶ್ಯಕತೆಗಳನ್ನು ಒದಗಿಸುವುದನ್ನು ಖಚಿತಪಡಿಸಬೇಕಿದೆ.
***
(Release ID: 1611753)
Visitor Counter : 242