ನೀತಿ ಆಯೋಗ

ಭಾರತ ಸರ್ಕಾರದಿಂದ ನೀತಿ ಆಯೋಗದ ಸಿಇಓ ಅಧ್ಯಕ್ಷತೆಯಲ್ಲಿ ಅಧಿಕಾರಯುತ ಗುಂಪಿನ ರಚನೆ

Posted On: 05 APR 2020 10:06AM by PIB Bengaluru

ಭಾರತ ಸರ್ಕಾರದಿಂದ ನೀತಿ ಆಯೋಗದ ಸಿಇಓ ಅಧ್ಯಕ್ಷತೆಯಲ್ಲಿ ಅಧಿಕಾರಯುತ ಗುಂಪಿನ ರಚನೆ

 

ಕೋವಿಡ್ -19 ಸಂಬಂಧಿತ ಸ್ಪಂದನಾ ಚಟುವಟಿಕೆಗಳಿಗಾಗಿ ಖಾಸಗಿ ವಲಯ, ಎನ್.ಜಿ.ಓ ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳೊಂದಿಗೆ ಅಧಿಕಾರಯುತ ಗುಂಪು #6 ಸಹಯೋಗ.

1. ಸಮಸ್ಯೆಗಳನ್ನು ಗುರುತಿಸುವುದು, ಪರಿಣಾಮಕಾರಿ ಪರಿಹಾರಗಳು ಮತ್ತು ಮೂರು ಗುಂಪುಗಳ ಬಾಧ್ಯಸ್ಥರೊಂದಿಗೆ ಯೋಜನೆಗಳನ್ನು ರೂಪಿಸಲು – ಮತ್ತು ಆ ಸಮಸ್ಯೆಗಳನ್ನು ಪರಿಹರಿಸಲು ಅಧಿಕಾರಯುತ ಸಮಿತಿ 6ನ್ನು ಓ.ಎಂ ನಂ. 40-3/2020/ಡಿಎಂ-I() ದಿನಾಂಕ 29/03/2020 ರೀತ್ಯ ರಚಿಸಲಾಗಿದೆ

  • i. ಏಜೆನ್ಸಿಗಳು, ವಿಶ್ವಬ್ಯಾಂಕ್, ಏಷ್ಯನ್ ಅಭಿವೃದ್ಧಿ ಬ್ಯಾಂಕ್
  1. ನಾಗರಿಕ ಸಮಾಜದ ಸಂಘಟನೆಗಳು ಮತ್ತು ಅಭಿವೃದ್ಧಿ ಪಾಲುದಾರರು
  2. ಕೈಗಾರಿಕಾ ಸಂಘಟನೆಗಳು –ಸಿಐಐ, ಎಫ್.ಐ.ಸಿಸಿಐ, ಅಸೋಚಮ್, ನಾಸ್ಕಾಂ

ನೀತಿ ಆಯೋಗದ ಸಿಇಓ ಶ್ರೀ ಅಮಿತಾಬ್ ಕಾಂತ್ ಅಧ್ಯಕ್ಷತೆಯ ಅಧಿಕಾರಯುತ ಸಮಿತಿಯ ಸದಸ್ಯರುಗಳಲ್ಲಿ ಡಾ. ವಿಜಯರಾಘವನ್, ಪಿಎಸ್.ಎ, ಕಮಲ್ ಕಿಶೋರ್ (ಎನ್.ಡಿ.ಎಂ.ಎ. ಸದಸ್ಯರು); ಸಂದೀಪ್ ಮೋಹನ್ ಭಟ್ನಾಗರ್ (ಸಿಬಿಐಸಿ ಸದಸ್ಯರು); ಅನಿಲ್ ಮಲಿಕ್ (ಎಎಸ್, ಎಂಎಚ್ಎ); ವಿಕ್ರಮ್ ದೊರೈಸ್ವಾಮಿ (ಎ.ಎಸ್. ಎಂ.ಇ.ಎ.); ಪಿ. ಹರೀಶ್ (ಎ.ಎಸ್. ಎಂ.ಇ.ಎ.); ಗೋಪಾಲ್ ಬಗ್ಲಿ (ಜೆಎಸ್ ಪಿಎಂಓ) ; ಐಶ್ವರ್ಯ ಸಿಂಗ್ (ಡಿ.ಎಸ್. ಪಿಎಂಓ) ; ಟೀನಾ ಸೋನಿ (ಡಿಎಸ್, ಸಂಪುಟ ಕಾರ್ಯದರ್ಶಿ) ಸೇರಿದ್ದಾರೆ. ಮತ್ತು ಅಧಿಕಾರಯುತ ಸಮಿತಿ 6ರ ಕಾರ್ಯಗಳನ್ನು ಸಂಯುಕ್ತ ಸಮದ್ದಾರ್ (ಸಲಹೆಗಾರರು, ಎಸ್.ಡಿ.ಜಿ. ನೀತಿ ಆಯೋಗ) ನಡೆಸುತ್ತಾರೆ.

2. ಕೈಗಾರಿಕಾ ಸಂಘಟನೆಗಳು, ಐಓಗಳು ಮತ್ತು ಸಿಎಸ್.ಓಗಳೊಂದಿಗೆ ಆರು ಸಭೆಗಳನ್ನು ಮಾರ್ಚ್ 30ರಿಂದ ಏಪ್ರಿಲ್ 3ರವರೆಗೆ ನಡೆಸಲಾಗಿದ್ದು, ಅವರ ಪ್ರತಿಕ್ರಿಯೆಗೆ ಅವರು ನೀಡಿದ ಕೊಡುಗೆ, ಮುಂಬರುವ ವಾರಗಳ ಯೋಜನೆಗಳು ಮತ್ತು ಅವರು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಸರ್ಕಾರದಿಂದ ಅವರ ನಿರೀಕ್ಷೆಗಳ ಬಗ್ಗೆ ಚರ್ಚಿಸಲಾಗಿದ್ದು. ಎಲ್ಲಾ 3 ಗುಂಪುಗಳು ಸರ್ಕಾರದ ಮುಂದುವರಿದ ಬೆಂಬಲದ ಅಗತ್ಯವಿರುವ ಪ್ರದೇಶಗಳನ್ನು ಪೂರ್ವಭಾವಿಯಾಗಿ ಸೂಚಿಸಿವೆ. ವೇಗವಾಗಿ ಮತ್ತು ಹೆಚ್ಚು ಪರಿಣಾಮಕಾರಿಯಾದ ಪ್ರತಿಕ್ರಿಯೆ ಮತ್ತು ಸಮನ್ವಯಕ್ಕಾಗಿ ಅವರನ್ನು ಇತರ ಇಜಿಗಳೊಂದಿಗೆ ಸಂಪರ್ಕದಲ್ಲಿರಿಸಲಾಗಿದೆ. ಇಜಿ 6ರ ಈ ಆರೂ ಸಭೆಗಳ ನಡಾವಳಿಗಳನ್ನು ನೀಡಲಾಗಿದೆ.

3. ಅಂತಾರಾಷ್ಟ್ರೀಯ ಸಂಘಟನೆಗಳು – ಇಜಿ 6 ಯುಎನ್ ನ ಭಾರತದ ನಿವಾಸಿ ಸಂಚಾಲಕರು, ಡಬ್ಲ್ಯುಎಚ್ಓ, ಯುನಿಸೆಫ್, ಯುಎನ್.ಎಫ್.ಪಿ.ಎ, ಯುಎನ್ಡಿಪಿ, ಐಎಲ್ಓ, ಯುಎನ್ ವಿಮೆನ್, ಯುಎನ್ ಜನ ವಸತಿ, ಎಫ್.ಎ.ಓ, ವಿಶ್ವ ಬ್ಯಾಂಕ್ ಮತ್ತು ಏಷ್ಯಾ ಅಭಿವೃದ್ಧಿ ಬ್ಯಾಂಕ್ ಗಳೊಂದಿಗೆ ಸವಿವರವಾದ ಸಭೆಯನ್ನು ನಡೆಸಿದೆ. ನಿಗಾ ಮತ್ತು ಉಸ್ತುವಾರಿ ವ್ಯವಸ್ಥೆಗೆ ತಾಂತ್ರಿಕ ಬೆಂಬಲ, ಆರೋಗ್ಯ ಮತ್ತು ಪೌಷ್ಟಿಕ ಸೇವೆಗಳ ಬಲವರ್ಧನೆ, ಸಾಮರ್ಥ್ಯ ವರ್ಧನೆ, ಆರ್ಥಿಕ ಸಂಪನ್ಮೂಲ ಮತ್ತು ಮಹತ್ವದ ಸಾಧನಗಳ ಬೆಂಬಳ ಇತ್ಯಾದಿ ಒದಗಿಸುವ ಐಓಗಳ ಕುರಿತಂತೆ ಚರ್ಚೆಯ ತರುವಾಯ, ಭಾರತದಲ್ಲಿನ ಯು.ಎನ್. ಜಂಟಿ ಕಾರ್ಯಕ್ರಮ ಸ್ಪಂದನಾ ಯೋಜನೆ ಅಭಿವೃದ್ಧಿಪಡಿಸಿದ್ದು, ನೀತಿ ಆಯೋಗಕ್ಕೆ ಸಲ್ಲಿಕೆ ಮಾಡಿದೆ, ಕೇಂದ್ರ ಮಂತ್ರಿಗಳು ಮತ್ತು ರಾಜ್ಯ ಸರ್ಕಾರಗಳೊಂದಿಗೆ ಪಾಲುದಾರಿಕೆ ಹೊಂದಿರುವ ವಿವಿಧ ವಲಯಗಳು ಮತ್ತು ರಾಜ್ಯಗಳಲ್ಲಿ ಅವರ ಸ್ಪಷ್ಟ ಚಟುವಟಿಕೆಗಳು ಮತ್ತು ವಿತರಣೆಗಳನ್ನು ವ್ಯಾಖ್ಯಾನಿಸಬೇಕು.

4. ನಾಗರಿಕ ಸಮಾಜದ ಸಂಘಟನೆಗಳು ಮತ್ತು ಅಭಿವೃದ್ಧಿ ಪಾಲುದಾರರು

ಇಜಿ 6 ದೇಶದ ವಿವಿಧ ಭಾಗಗಳಲ್ಲಿ ಮತ್ತು ವಿವಿಧ ಸಮುದಾಯಗಳೊಂದಿಗೆ ಕರ್ತವ್ಯ ನಿರ್ವಹಿಸುತ್ತಿರುವ 40ಕ್ಕೂ ಅಧಿಕ ಪ್ರಮುಖ ಸಿಎಸ್ಓಗಳು ಮತ್ತು ಎನ್.ಜಿ.ಓ.ಗಳೊಂದಿಗೆ ಸುದೀರ್ಘ ಚರ್ಚೆ ನಡೆಸಿದೆ. ಈ ಸಿಎಸ್ಓಗಳು ಪ್ರಸ್ತಾಪಿಸಿದ ವಿವಿಧ ಸವಾಲುಗಳನ್ನು ನಿವಾರಿಸಿರುವ ಇಜಿ6 ಈ ಬಿಕ್ಕಟ್ಟಿನ ಸಮಯದಲ್ಲಿ ಕ್ಷೇತ್ರದಲ್ಲಿ ಅವರ ಕಾರ್ಯಕ್ಕೆ ಅನುವು ಮಾಡಿಕೊಟ್ಟಿದೆ.

  • i. ಆಯೋಗದ ಸಿಇಓ ಅವರು ನೀತಿ ಆಯೋಗದ ದರ್ಪಣ್ ಪೋರ್ಟಲ್ ನಲ್ಲಿ ನೋಂದಾಯಿಸಿಕೊಂಡಿರುವ 92000ಕ್ಕೂ ಹೆಚ್ಚು ಎನ್.ಜಿಓಗಳು/ಸಿಎಸ್ಓಗಳಿಗೆ ಪತ್ರ ಬರೆದಿದ್ದು, ಹಾಟ್‌ಸ್ಪಾಟ್‌ಗಳನ್ನು ಗುರುತಿಸಲು ಮತ್ತು ವೃದ್ಧರು, ದಿವ್ಯಾಂಗ ವ್ಯಕ್ತಿಗಳು, ಮಕ್ಕಳು, ತೃತೀಯಲಿಂಗಿಗಳು ಮತ್ತು ಇತರ ದುರ್ಬಲ ಗುಂಪುಗಳಿಗೆ ಸೇವೆಗಳನ್ನು ತಲುಪಿಸಲು ಸ್ವಯಂಸೇವಕರು ಮತ್ತು ಆರೈಕೆ ನೀಡುವವರನ್ನು ನಿಯೋಜಿಸಲು; ಹಾಗೂ ಸೋಂಕು ತಡೆಗಟ್ಟುವಿಕೆ, ಸಾಮಾಜಿಕ ಅಂತರ, ಪ್ರತ್ಯೇಕೀಕರಣ ಕುರಿತಂತೆ ಜಾಗೃತಿ ಮೂಡಿಸಲು; ನಿರ್ವಸತಿಗರಿಗೆ, ದಿನಗೂಲಿ ಕಾರ್ಮಿಕರು ಮತ್ತು ನಗರ ಬಡ ಕುಟುಂಬಗಳಿಗೆ ಆಶ್ರಯ ನೀಡಲು; ವಲಸಿಗರಿಗಾಗಿ ಸಮುದಾಯ ಅಡಿಗೆಮನೆಗಳನ್ನು ಸ್ಥಾಪಿಸುವ ಸೇವೆಗಳನ್ನು ಪೂರೈಸಲು ಮನವಿ ಮಾಡಿಕೊಂಡಿದೆ..
  1. ಮುಖ್ಯಕಾರ್ಯದರ್ಶಿಗಳಿಗೆ ಪತ್ರ ಬರೆದಿರುವ ಸಿಇಓ ಜಿಲ್ಲಾಮಟ್ಟದಲ್ಲಿ ಲಭ್ಯವಿರುವ ಎನ್.ಜಿ.ಓ ಮತ್ತು ಸಿಎಸ್.ಓ.ಗಳ ಭೌತಿಕ ಮತ್ತು ಮಾನವ ಸೆಂಪನ್ಮೂಲದ ಬಳಕೆ ಮಾಡಿಕೊಳ್ಳುವಂತೆ ಸ್ಥಳೀಯ ಆಡಳಿತಕ್ಕೆ ಸೂಚಿಸುವಂತೆ ಮನವಿ ಮಾಡಿದ್ದಾರೆ.

5. ಕೈಗಾರಿಕಾ ಸಂಘಟನೆಗಳು – ಸಿಐಐ, ಎಫ್.ಐಸಿಸಿಐ, ಅಸೋಚಮ್, ನಾಸ್ಕಾಂ ಮತ್ತು ಕೈಗಾರಿಕೆಗಳ ಪ್ರತಿನಿಧಿಗಳು

  • i. ಸಮಿತಿಯು ಖಾಸಗಿ ವಲಯ ಮತ್ತು ನವೋದ್ಯಮದೊಳಗೆ ವಲಯೇತರ ಮಾತುಕತೆ ಆರಂಭಿಸಿದ್ದು ವೈದ್ಯಕೀಯ ಉಪಕರಣಗಳು ಮತ್ತು ಪಿಪಿಇಗಳನ್ನು ತಯಾರಿಸಲು ಅವರಲ್ಲಿ ಸಹಯೋಗವನ್ನು ಹೆಚ್ಚಿಸುತ್ತಿದೆ. ಸುಮಾರು 8 ನವೋದ್ಯಮಗಳು ನಾವಿನ್ಯಪೂರ್ಣ ಆರೋಗ್ಯ ಆರೈಕೆ ಪರಿಹಾರಗಳಲ್ಲಿ ತೊಡಗಿಸಿಕೊಂಡಿದ್ದರೆ, ಸಿಐಐನ 12 ಅಗ್ರ ಕೈಗಾರಿಕೆಗಳ ನಾಯಕರು, ಎಫ್.ಐ.ಸಿ.ಸಿ.ಐ. ಕೈಗಾರಿಕಾ ಪಾಲುದಾರಿಕೆಗಳ 6 ಸಿಇಓಗಳು, ನಾಸ್ಕಾಂನ ಉನ್ನತ ತಾಂತ್ರಿಕ ಆಧಾರಿತ ಕಂಪನಿಗಳ 14 ಸಿಇಓಗಳು ಇದರಲ್ಲಿ ಭಾಗಿಯಾಗಿ, ಪಿಪಿಇಗಳ ಅಂದಾಜು ಅಗತ್ಯದಿಂದ ಹಿಡಿದು ವೆಂಟಿಲೇಟರ್, ವೈದ್ಯಕೀಯ ಸಲಕರಣೆಗಳು, ದೇಶೀಯ ಉತ್ಪಾದನೆಯ ಬೇಡಿಕೆ ನಿಟ್ಟಿನಲ್ಲಿ ಮರುಹೊಂದಿಸುವಿಕೆ, ಪೂರೈಕೆ ಸರಪಳಿಯ ನಿರ್ವಹಣೆ ಸಮಸ್ಯೆಗಳು, ನಾವಿನ್ಯಪೂರ್ಣ ತಂತ್ರಜ್ಞಾನ ನೇತೃತ್ವದ ಪರಿಹಾರಗಳು, ಪ್ರಮಾಣೀಕರಣದ ಸಮಸ್ಯೆಗಳು, ಜಿ.ಎಸ್ಟಿ, ಬಿಡಿಭಾಗಗಳ ಮೇಲಿನ ಆಮದು ಸುಂಕ, ದಾಸ್ತಾನಿನ ಸಮಸ್ಯೆಗಳು, ತರಬೇತಿ, ಲಾಕ್ ಡೌನ್ ನಂತರದ ಕಾರ್ಯಚರಣೆ ವಿಧಾನಗಳು ಇನ್ನಿತರೆ ಕುರಿತಂತೆ ಸಮಾಲೋಚಿಸಿದರು.
  1. ನವೋದ್ಯಮಗಳು ಅಂದರೆ, ಆಗ್ವಾ, ಬಯೋಡಿಸೈನ್ ಇನ್ನೋವೇಶನ್ ಲ್ಯಾಬ್, ಕೈಯೆನಾಟ್, ಕ್ಯೂರ್ ಎಐಡ್ರೋನಾ ಮ್ಯಾಪ್ಸ್, ಎಮ್‌ಫೈನ್, ಮೈಕ್ರೊಗೊ, ಸ್ಟಾಕ್ಯೂಗಳು, ನವೀನ ವೆಂಟಿಲೇಟರ್ ಗಳ ವಿನ್ಯಾಸ, ಪರೀಕ್ಷಾ ಪರಿಕರಗಳು ಮತ್ತು ಶೋಧನೆಯ ಪರಿಹಾರ ಒದಗಿಸುವ ನಿಟ್ಟಿನಲ್ಲಿ ತೊಡಗಿಸಿಕೊಂಡಿದ್ದು, ಅವುಗಳ ಪ್ರಮಾಣ ಮತ್ತು ಸಂಭವನೀಯ ಕೊಡುಗೆಗಳನ್ನು ಅರಿಯಲು ಪ್ರತ್ಯೇಕವಾಗಿ ಸಂಪರ್ಕಿಸಲಾಗಿದೆ.
  2. ಸ್ಥಳೀಯ ಆಡಳಿತದ ಸಹಯೋಗದೊಂದಿಗೆ ಉಚಿತ ಆಹಾರ ತಯಾರಿಕೆ, ಉಚಿತ ಆಹಾರ ವಿತರಣೆಗಾಗಿ ಕಾರ್ಖಾನೆಯ ಅಡುಗೆ ಮನೆಗಳ ಕಾರ್ಯಾಚರಣೆ, ಕಾರ್ಖಾನೆಯ ಆಸ್ಪತ್ರೆಗಳು / ಆವರಣಗಳು / ಅತಿಥಿ ಗೃಹಗಳನ್ನು ಪ್ರತ್ಯೇಕೀಕರಣ ಸೌಲಭ್ಯಗಳಾಗಿ ಲಭ್ಯವಾಗುವಂತೆ ಮಾಡುವ ಮೂಲಕ ಸಾರ್ವಜನಿಕ ಹಿತಕ್ಕಾಗಿ, ಲೋಕೋಪಕಾರಕ್ಕಾಗಿ, ಸಿಎಸ್‌ಆರ್‌ನಲ್ಲಿ ಕೈಗೊಂಡ ಚಟುವಟಿಕೆಗಳನ್ನು ಕೈಗಾರಿಕಾ ಪ್ರತಿನಿಧಿಗಳು ವಿವರವಾಗಿ ಹಂಚಿಕೊಂಡರು.
  3. ಕೈಗಾರಿಕಾ ಪ್ರತಿನಿಧಿಗಳು ಮತ್ತು ಇಜಿ6, ಪರಿಹಾರ ಮತ್ತು ಪುನರ್ವಸತಿ ಹಾಗೂ ಮಾಹಿತಿಯ ಪ್ರಸರಣ ಹೆಚ್ಚಿಸುವ ಮಾರ್ಗೋಪಾಯಗಳ ಜೊತೆಗೆ ಮಹತ್ವದ ವಿಚಾರಗಳಾದ ಆರೋಗ್ಯ ಆರೈಕೆ ಉಪಕರಣಗಳ ಉತ್ಪಾದನೆಯ ಹೆಚ್ಚಳ ಮತ್ತು ವೆಂಟಿಲೇಟರುಗಳು, ಪಿಪಿಇಗಳು, ಪರೀಕ್ಷಾ ಕಿಟ್ ಗಳನ್ನು ಇತರ ಹಲವು ಇಜಿಗಳ ಸಹಯೋಗದಲ್ಲಿ ದಾಸ್ತಾನು ಮಾಡಿಕೊಳ್ಳುವುದು ಸೇರಿದಂತೆ ಹಲವು ವಿಚಾರಗಳ ಬಗ್ಗೆ ಸವಿರವಾಗಿ ಸಮಾಲೋಚಿಸಿ, ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡರು.
  4. ಸರ್ಕಾರದ ಸ್ಪಂದನೆ, ಈವರೆಗೆ ದಾಸ್ತಾನು ಮಾಡಲಾಗಿರುವ ಪಿಪಿಇಗಳು ಮತ್ತು ವೆಂಟಿಲೇಟರ್‌ಗಳು, ಎಂಇಎ ಪಾತ್ರ, ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಸಂವಹನ, 92,000 ಸಿಎಸ್‌ಒಗಳಿಗೆ ಪತ್ರ, ಮಧ್ಯಸ್ಥಗಾರರನ್ನು ಪರಸ್ಪರ ಸಂಪರ್ಕದಲ್ಲಿರಿಸಿಕೊಳ್ಳುವುದು, ಸ್ಪಂದನೆಯ ಸಹಯೋಗದಲ್ಲಿ ಖಾಸಗಿ ವಲಯ ಎದುರಿಸುತ್ತಿರುವ ಅಡಚಣೆಗಳ ಬಗ್ಗೆ ಇಜಿ 6 ಎಲ್ಲ ಬಾಧ್ಯಸ್ಥರುಗಳೊಂದಿಗೆ ಹಂಚಿಕೊಂಡಿದೆ. ಇದಲ್ಲದೆ, ಸಂಗ್ರಹಣೆ (ಇಜಿ 3), ಲಾಜಿಸ್ಟಿಕ್ಸ್ (ಇಜಿ 5) ಮತ್ತು ಹಲವಾರು ಇತರ ಇಜಿಗಳೊಂದಿಗೆ ವ್ಯವಹರಿಸುವಾಗ ಉದ್ಯಮವನ್ನು ಇತರ ಸಶಕ್ತ ಗುಂಪುಗಳೊಂದಿಗೆ ಸಂಪರ್ಕಿಸುವ ಮೂಲಕ ಉದ್ಭವಿಸಿರುವ ನಿರ್ದಿಷ್ಟ ಸಮಸ್ಯೆಗಳನ್ನು ಸಂಪರ್ಕಿಸುವ ಮೂಲಕ ಒಮ್ಮತ ರೂಪಿಸಲಾಗಿದೆ.

*****

 



(Release ID: 1611500) Visitor Counter : 353