ರಕ್ಷಣಾ ಸಚಿವಾಲಯ

ಕೋವಿಡ್-19 ವಿರುದ್ಧದ ಹೋರಾಟಕ್ಕೆ ರಕ್ಷಣಾ ಪಿ ಎಸ್ ಯು ಹಾಗು ಒ ಎಫ್ ಬಿ ಸಹಕಾರ

Posted On: 05 APR 2020 10:38AM by PIB Bengaluru

ಕೋವಿಡ್-19 ವಿರುದ್ಧದ ಹೋರಾಟಕ್ಕೆ ರಕ್ಷಣಾ ಪಿ ಎಸ್ ಯು ಹಾಗು ಒ ಎಫ್ ಬಿ ಸಹಕಾರ

 

ಕೋವಿಡ್-19 ವಿರುದ್ಧ ರಾಷ್ಟ್ರವ್ಯಾಪಿ ನಡೆಯುತ್ತಿರುವ ಹೋರಾಟಕ್ಕೆ ರಕ್ಷಣಾ ಸಚಿವಾಲಯ(ಎಂಒಡಿ)ದ ರಕ್ಷಣಾ ಸಾರ್ವಜನಿಕ ವಲಯದ ಉದ್ದಿಮೆಗಳು(ಡಿ ಪಿ ಎಸ್ ಯು)ಗಳು ಮತ್ತು ಸೈನಿಕ ಸಾಮಗ್ರಿ ಕಾರ್ಖಾನೆ ಮಂಡಳಿ(ಒ ಎಫ್  ಬಿ)ಗಳು ಸಹಕಾರ ನೀಡಿ, ಸಂಪೂರ್ಣ ಬೆಂಬಲ ವ್ಯಕ್ತಪಡಿಸಿವೆ.

ವೈದ್ಯಕೀಯ ಸೌಲಭ್ಯಗಳು

ಒ ಎಫ್ ಬಿ, ದೇಶವ್ಯಾಪಿ ಆರು ರಾಜ್ಯಗಳಲ್ಲಿ ಹರಡಿರುವ ಹತ್ತು ಆಸ್ಪತ್ರೆಗಳಲ್ಲಿ 280 ಐಸೋಲೇಶನ್ ಹಾಸಿಗೆಗಳನ್ನು ಸಜ್ಜುಗೊಳಿಸಲು ಯೋಜನೆ ರೂಪಿಸಿದೆ. ಅವುಗಳೆಂದರೆ ಜಬಲ್ ಪುರದ ಗಾಲಿ ಕಾರ್ಖಾನೆ, ಮೆಟಲ್ ಮತ್ತು ಸ್ಟೀಲ್ ಫ್ಯಾಕ್ಟರಿ, ಇಶಾಪೋರ್(ಪಶ್ಚಿಮ ಬಂಗಾಳ), ಗನ್ ಮತ್ತು ಶೆಲ್ ಫ್ಯಾಕ್ಟರಿ, ಕೋಸ್ಸಿಪೋರ್(ಪಶ್ಚಿಮ ಬಂಗಾಳ), ಸಶಸ್ತ್ರಗಳ ಫ್ಯಾಕ್ಟರಿ, ಖಾಡ್ಕಿ(ಮಹಾರಾಷ್ಟ್ರ) ಸೈನಿಕ ಸಾಮಗ್ರಿ ಕಾರ್ಖಾನೆ, ಕಾನ್ಪುರ(ಉತ್ತರ ಪ್ರದೇಶ), ಸೈನಿಕ ಸಾಮಗ್ರಿ ಕಾರ್ಖಾನೆ, ಖಮಾರಿಯ, ಭಾರೀ ವಾಹನ ಕಾರ್ಖಾನೆ, ಅವಡಿ(ತಮಿಳುನಾಡು) ಮತ್ತು ಸೈನಿಕ ಸಾಮಗ್ರಿ ಕಾರ್ಖಾನೆ, ಮೇಡಕ್(ತೆಲಂಗಾಣ)

ಬೆಂಗಳೂರಿನ ಹಿಂದೂಸ್ತಾನ್ ವೈಮಾನಿಕ ಸಂಸ್ಥೆ(ಎಚ್ ಎ ಎಲ್) ಮೂರು ಹಾಸಿಗೆಗಳ ಇಂಟೆನ್ಸಿವ್ ಕೇರ್ ಘಟಕ ಹಾಗೂ ಐಸೋಲೇಶನ್ ವಾರ್ಡ್ ಸೌಕರ್ಯವನ್ನು ಹೊಂದಿದೆ ಮತ್ತು 30 ಹಾಸಿಗೆಗಳ ವಾರ್ಡ್ ಹೊಂದಿದೆ. ಅಲ್ಲದೆ ಹೆಚ್ಚುವರಿಯಾಗಿ 30 ಕೋಣೆಗಳನ್ನು ಸನ್ನದ್ಧವಾಗಿ ಇಡಲಾಗಿದೆ. ಒಟ್ಟಾರೆ ಎಚ್ಎಎಲ್ ಸೌಕರ್ಯದಲ್ಲಿ 93 ಜನರಿಗೆ ಸ್ಥಳಾವಕಾಶ ಕಲ್ಪಿಸಬಹುದಾಗಿದೆ.

ಒ ಎಫ್ ಬಿ, ಕೋವಿಡ್ ರೋಗಿಗಳಿಗಾಗಿ ಅತ್ಯಲ್ಪ ಅವಧಿಯಲ್ಲಿ ಅರುಣಾಚಲಪ್ರದೇಶ ಸರ್ಕಾರಕ್ಕೆ 50 ವಿಶೇಷ ಟೆಂಟ್(ಬಿಡಾರ) ಗಳನ್ನು ನಿರ್ಮಿಸಿ, ರವಾನೆ ಮಾಡಿದೆ.

ಸ್ಯಾನಿಟೈಸರ್

ಒಎಫ್ ಬಿಯ ಕಾರ್ಖಾನೆಗಳಲ್ಲಿ ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯೂಎಚ್ಒ) ಮಾನದಂಡದಂತೆ ಹ್ಯಾಂಡ್ ಸ್ಯಾನಿಟೈಸರ್ ಉತ್ಪಾದನೆ ಮತ್ತು ಅಭಿವೃದ್ಧಿಯನ್ನು ಕೈಗೊಂಡಿದೆ. ಭಾರತ ಸರ್ಕಾರ ನೇಮಿಸಿರುವ ಕೇಂದ್ರೀಕೃತ ಖರೀದಿ ನೋಡಲ್ ಏಜೆನ್ಸಿ– ಎಚ್ಎಲ್ಎಲ್ ಲೈಫ್ ಕೇರ್ ಲಿಮಿಟೆಡ್(ಎಚ್ಎಲ್ಎಲ್)ನಿಂದ 13,000 ಲೀಟರ್ ಸ್ಯಾನಿಟೈಸರ್ ಗೆ ಬೇಡಿಕೆ ಸ್ವೀಕರಿಸಲಾಗಿದೆ. ಮೊದಲ ಕಂತಿನ 1,500 ಲೀಟರ್ ಸ್ಯಾನಿಟೈಸರ್ ಅನ್ನು 2020ರ ಮಾರ್ಚ್ 31ರಂದು ಕೋರಡೈಟ್ ಫ್ಯಾಕ್ಟರಿ ಅರುವಂಕಡು(ತಮಿಳುನಾಡು) ಇಲ್ಲಿಂದ ಪೂರೈಸಲಾಗಿದೆ. ಎರಡು ಕಾರ್ಖಾನೆಗಳು ಸೈನಿಕ ಸಾಮಗ್ರಿ ಕಾರ್ಖಾನೆ (ಒಎಫ್) ಇಟಾರ್ಸಿ(ಮಧ್ಯಪ್ರದೇಶ) ಮತ್ತು ಒಎಫ್ ಭಾಂದಾರಾ(ಮಹಾರಾಷ್ಟ್ರ) ಇವುಗಳು ಅಧಿಕ ಉತ್ಪಾದನೆಗೆ ಸಜ್ಜಾಗಿವೆ. ರಾಷ್ಟ್ರೀಯ ಅಗತ್ಯತೆಗಳನ್ನು ಪೂರೈಸಲು ಇವು ದಿನವೊಂದಕ್ಕೆ 3,000 ಲೀಟರ್ ಸ್ಯಾನಿಟೈಸರ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿವೆ.

ರಕ್ಷಣಾತ್ಮಕ ಉಪಕರಣ: ಸಂಪೂರ್ಣ ದೇಹ ಮುಚ್ಚುವ ಉಡುಪು ಮತ್ತು ಮಾಸ್ಕ್ ಗಳು

ಕಾನ್ಪುರ, ಶಹಜಹಾನ್ ಪುರ್, ಹಜರತ್ ಪುರ್(ಫಿರೋಜಾಬಾದ್) ಮತ್ತು ಚೆನ್ನೈಗಳಲ್ಲಿನ ಸೈನಿಕ ಸಾಮಗ್ರಿ ಕಾರ್ಖಾನೆಗಳು ಸಂಪೂರ್ಣ ದೇಹ ಮುಚ್ಚುವ ಉಡುಪು ಮತ್ತು ಮಾಸ್ಕ್ ಗಳ ತಯಾರಿಕೆಯಲ್ಲಿ ತೊಡಗಿವೆ. ಅತ್ಯಲ್ಪ ಅವಧಿಯಲ್ಲಿ ಬಟ್ಟೆಗಳಿಂದ ಮಾಸ್ಕ್ ಗಳನ್ನು ಉತ್ಪಾದಿಸಲು ವಿಶೇಷ ಬಿಸಿ ಮುದ್ರೆ ಒತ್ತುವ ಉಪಕರಣಗಳನ್ನು ವ್ಯವಸ್ಥೆ ಮಾಡಿವೆ.

ಕಾರ್ಖಾನೆಗಳ ಮಂಡಳಿ ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ, ಗ್ವಾಲಿಯರ್ ಅನ್ನು ಮನವಿ ಮಾಡಿದ್ದು, ಅದು ಪರೀಕ್ಷಿಸಿರುವ ಸಂಪೂರ್ಣ ರಕ್ಷಿಸುವ ಮಾಸ್ಕ್ ಗಳ ಮಾದರಿಗಳನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿವೆ. ಮಾಸ್ಕ್ ಗಳ ಪರೀಕ್ಷೆಯನ್ನು ಕೊಯಮತ್ತೂರಿನ ದಕ್ಷಿಣ ಭಾರತ ಜವಳಿ ಸಂಶೋಧನಾ ಒಕ್ಕೂಟ(ಎಸ್ಐಟಿಆರ್ ಎ) ಇಲ್ಲಿ ಮುಂದುವರಿದಿದೆ. ಒ ಎಫ್ ಬಿ ಸದ್ಯದಲ್ಲೇ ವಾರಕ್ಕೆ 5,000 ದಿಂದ 6,000 ಸಂಪೂರ್ಣ ದೇಹ ಮುಚ್ಚುವ ಉಡುಪು ಅಭಿವೃದ್ಧಿಪಡಿಸುವ ಭಾರೀ ಪ್ರಮಾಣದ ಉತ್ಪಾದನಾ ಕೆಲಸವನ್ನು ಕೈಗೆತ್ತಿಕೊಳ್ಳಲಿವೆ. ಅದಕ್ಕಾಗಿ ಸಂಪೂರ್ಣ ದೇಹ ಮುಚ್ಚುವ ಉಡುಪು ಹಾಗು ಮಾಸ್ಕ್ ಗಳನ್ನು ತಯಾರಿಸಲು ಎಸ್ಐಟಿಆರ್ ಎ, ಮೂರು ಯಂತ್ರಗಳಿಗೆ ಅನುಮೋದನೆ ನೀಡಿವೆ. ಉತ್ಪಾದನೆಯಲ್ಲಿ ಮಾನದಂಡಗಳನ್ನು ಕಾಯ್ದುಕೊಳ್ಳಲು ಅವುಗಳನ್ನು ಬಳಕೆ ಮಾಡಲಾಗುವುದು.

ವೆಂಟಿಲೇಟರ್ ಗಳು

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಮನವಿ ಮೇರೆಗೆ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್(ಬಿಇಎಲ್) ಮುಂದಿನ ಎರಡು ತಿಂಗಳಲ್ಲಿ ಐಸಿಯುಗಳಿಗೆ ಅಗತ್ಯವಾದ 30,000 ವೆಂಟಿಲೇಟರ್ ಗಳ ಉತ್ಪಾದನೆ ಮತ್ತು ಪೂರೈಕೆಗೆ ಮುಂದಾಗಿದೆ. ಈ ವೆಂಟಿಲೇಟರ್ ಗಳ ವಿನ್ಯಾಸವನ್ನು ಮೂಲತಃ ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ ಮಾಡಿದೆ. ಅದನ್ನು ಬಿಇಎಲ್ ಜೊತೆ ಸಹಭಾಗಿತ್ವ ಹೊಂದಿರುವ ಮೈಸೂರಿನ ಮೆಸರ್ಸ್ ಸ್ಕನ್ ರೆ ಅದನ್ನು ಇನ್ನಷ್ಟು ಸುಧಾರಿಸಿ ಅಭಿವೃದ್ಧಿಗೊಳಿಸಿದೆ. ಮೇಡಕ್ ನ ಸೈನಿಕ ಸಾಮಗ್ರಿ ಕಾರ್ಖಾನೆ, ಹೈದರಾಬಾದ್ ನ ನಾನಾ ಆಸ್ಪತ್ರೆಗಳ ವೆಂಟಿಲೇಟರ್ ಗಳ ದುರಸ್ಥಿ ಕಾರ್ಯವನ್ನು ಕೈಗೊಂಡಿದೆ.

 

***

 

 

 



(Release ID: 1611306) Visitor Counter : 220