ಹಣಕಾಸು ಸಚಿವಾಲಯ

ಟಿ.ಡಿ.ಎಸ್./ ಟಿ.ಸಿ.ಎಸ್. ಪ್ರಸ್ತಾವನೆಗಳ ಅನುಸರಣೆಯಿಂದ ತೆರಿಗೆ ಪಾವತಿದಾರರಿಗೆ ಉಂಟಾಗುವ ಸಂಕಷ್ಟದ ಸ್ಥಿತಿಯನ್ನು ನಿವಾರಣೆ ಮಾಡಲು ಸಿ.ಬಿ.ಡಿ.ಟಿ. ಯು ಆದಾಯ ತೆರಿಗೆ ಕಾಯ್ದೆ 1961 ರ ಸೆಕ್ಷನ್ 119 ರ ಅಡಿಯಲ್ಲಿ ಆದೇಶಗಳನ್ನು ಹೊರಡಿಸಿದೆ

Posted On: 04 APR 2020 4:38PM by PIB Bengaluru

ಟಿ.ಡಿ.ಎಸ್./ ಟಿ.ಸಿ.ಎಸ್. ಪ್ರಸ್ತಾವನೆಗಳ ಅನುಸರಣೆಯಿಂದ ತೆರಿಗೆ ಪಾವತಿದಾರರಿಗೆ ಉಂಟಾಗುವ ಸಂಕಷ್ಟದ ಸ್ಥಿತಿಯನ್ನು ನಿವಾರಣೆ ಮಾಡಲು ಸಿ.ಬಿ.ಡಿ.ಟಿ. ಯು ಆದಾಯ ತೆರಿಗೆ ಕಾಯ್ದೆ 1961 ರ ಸೆಕ್ಷನ್ 119 ರ ಅಡಿಯಲ್ಲಿ ಆದೇಶಗಳನ್ನು ಹೊರಡಿಸಿದೆ

 

ಕೋವಿಡ್ -19 ಜಾಗತಿಕ ಸಾಂಕ್ರಾಮಿಕ ಪಿಡುಗಿನ ಕಾರಣದಿಂದ ಎಲ್ಲಾ ರಂಗಗಳಲ್ಲಿ ಸಾಮಾನ್ಯ ಕೆಲಸ ಕಾರ್ಯಗಳು ಅಸ್ತವ್ಯಸ್ತಗೊಂಡಿವೆ. ಇಂತಹ ಸಂದರ್ಭದಲ್ಲಿ  ತೆರಿಗೆ ಪಾವತಿದಾರರ ಸಂಕಷ್ಟಗಳನ್ನು ನಿವಾರಿಸಲು ಸಿ.ಬಿ.ಡಿ.ಟಿ. ಯು ಆದಾಯ ತೆರಿಗೆ ಕಾಯ್ದೆ ,1961  (ಕಾಯ್ದೆ) ಸೆಕ್ಷನ್ 119 ಅಡಿಯಲ್ಲಿ ತನ್ನ ಅಧಿಕಾರವನ್ನು ಚಲಾಯಿಸಿ ಈ ಕೆಳಗಿನ ನಿರ್ದೇಶನಗಳನ್ನು / ಸ್ಪಷ್ಟನೆಗಳನ್ನು ನೀಡಿದೆ.

ಹಣಕಾಸು ವರ್ಷ 2020-21 ಕ್ಕಾಗಿ ಕಡಿಮೆ ಅಥವಾ ಶೂನ್ಯ ಟಿ.ಡಿ.ಎಸ್/ಟಿ.ಸಿ.ಎಸ್. ಕಡಿತಕ್ಕೆ ಅರ್ಜಿ ಸಲ್ಲಿಸಿರುವ ಅರ್ಜಿದಾರರು, ಮತ್ತು ಅವರ ಅರ್ಜಿಗಳು ನಿಗದಿತ ದಿನಾಂಕದಂದು ಇತ್ಯರ್ಥಕ್ಕೆ ಬಾಕಿ ಇದ್ದಲ್ಲಿ ಮತ್ತು ಅವರಿಗೆ ಇಂತಹ ಪ್ರಮಾಣಪತ್ರಗಳನ್ನು  ಹಣಕಾಸು ವರ್ಷ 2019-20 ರಲ್ಲಿ ನೀಡಿದ್ದಲ್ಲಿ, ಆಗ ಇಂತಹ ಪ್ರಮಾಣ ಪತ್ರಗಳು ಹಣಕಾಸು ವರ್ಷ 2020-21ರ  30-06-2020ರವರೆಗೆ ಅನ್ವಯಿಸುತ್ತವೆ. ಅಥವಾ ಅವರ ಅರ್ಜಿಗಳು ಮೌಲ್ಯಮಾಪನ ಅಧಿಕಾರಿಗಳಿಂದ ಇತ್ಯರ್ಥ ಮಾಡಲ್ಪಟ್ಟಿದ್ದಲ್ಲಿ  ಯಾವುದು ಮೊದಲೋ ಅದರನ್ವಯ ಹಣದ ವ್ಯವಹಾರಕ್ಕೆ ಸಂಬಂಧಿಸಿ ಕಡಿತ ಮಾಡಲ್ಪಟ್ಟವರು ಅಥವಾ ಸಂಗ್ರಾಹಕರು ಯಾರಿಗೇ ಆಗಿದ್ದರೂ ಹಣಕಾಸು ವರ್ಷ  2019-20 ಕ್ಕೆ ಅನ್ವಯಿಸಿ ಪ್ರಮಾಣ ಪತ್ರ ನೀಡಲಾಗಿದ್ದರೆ . ಒಂದು ವೇಳೆ ಮೌಲ್ಯಮಾಪನಕ್ಕೆ ಒಳಗಾಗಬೇಕಾದ ವ್ಯಕ್ತಿಯು ಕಡಿಮೆ ಅಥವಾ ಶೂನ್ಯ ಟಿ.ಡಿ.ಎಸ್./ಟಿ.ಸಿ.ಎಸ್. ಕಡಿತಕ್ಕಾಗಿ ಹಣಕಾಸು ವರ್ಷ 2020-21 ಕ್ಕಾಗಿ ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸದೇ ಇದ್ದಲ್ಲ್ಲಿ , ಆದರೆ 2019-20 ರ ಹಣಕಾಸು ವರ್ಷದಲ್ಲಿ ಆ ಪ್ರಮಾಣ ಪತ್ರವನ್ನು ಪಡೆದಿದ್ದಲ್ಲಿ , ಅಂತಹ ಪ್ರಮಾಣ ಪತ್ರಗಳು ಹಣಕಾಸು ವರ್ಷ 2020-21 ರಲ್ಲಿ 30-06-2020 ರ ವರೆಗೆ ಅನ್ವಯಿಸುತ್ತವೆ.

ಆದಾಗ್ಯೂ ಅವರು ಸಾಧ್ಯವಾದಷ್ಟು ಬೇಗ ಹಣದ ವ್ಯವಹಾರಕ್ಕೆ ಸಂಬಂಧಿಸಿದ ವಿವರಗಳನ್ನು ನೀಡಿ ಅರ್ಜಿ ಸಲ್ಲಿಸಬೇಕಾಗುತ್ತದೆ ಮತ್ತು ಟಿ.ಡಿ.ಎ./ಟಿ.ಸಿ.ಎಸ್. ಕಡಿತ ಯಾ ಸಂಗ್ರಹಕ್ಕೆ ಸಂಬಂಧಿಸಿದ ಮೌಲ್ಯಮಾಪನ ಅಧಿಕಾರಿಗಳಿಗೆ ನಿಗದಿತ ಪ್ರಕ್ರಿಯೆಯನ್ವಯ ಸಲ್ಲಿಸಬೇಕಾಗುತ್ತದೆ. ಇದಲ್ಲದೆ , ಜೊತೆಗೆ ಅನಿವಾಸಿಗಳಿಗೆ  (ವಿದೇಶಿ ಕಂಪೆನಿಗಳು ಸಹಿತ) ಭಾರತದಲ್ಲಿ ಖಾಯಂ ಸ್ಥಾವರಗಳನ್ನು, ಸಂಸ್ಥೆಗಳನ್ನು ಹೊಂದಿದ್ದಲ್ಲಿ , ಪಾವತಿಗೆ ಸಂಬಂಧಿಸಿ ,  ಮೇಲ್ಕಾಣಿಸಿದ ಅರ್ಜಿಗಳು ಇತ್ಯರ್ಥಕ್ಕೆ ಬಾಕಿ ಇದ್ದಲ್ಲಿ , ಮತ್ತು ಅಂತಹ ಪಾವತಿಗಳ ಮೇಲೆ ಹಣಕಾಸು ವರ್ಷ 2020-21 ರ 30-06-2020 ರ ವರೆಗೆ ಅಥವಾ ಅವರ  ಅರ್ಜಿ ಇತ್ಯರ್ಥವಾಗುವವರೆಗೆ , ಯಾವುದು ಮೊದಲೋ ಅದರನ್ವಯ  ಪಾವತಿ ಮೇಲೆ ಮಾಡಲಾದ ತೆರಿಗೆಯನ್ನು ಮೇಲ್ತೆರಿಗೆ ಮತ್ತು ಸೆಸ್ ಸಹಿತ 10 % ರಿಯಾಯತಿ ದರದಲ್ಲಿ ಕಡಿತ ಮಾಡಲಾಗುವುದು,(ಆದೇಶವನ್ನು 31-03-2020ರಂದು ಹೊರಡಿಸಲಾಗಿದೆ)

ಹಣಕಾಸು ವರ್ಷ 2019-20 ಕ್ಕೆ ಸಂಬಂಧಿಸಿ ಕಡಿಮೆ ಅಥವಾ ಶೂನ್ಯ ದರದ ಟಿ.ಡಿ.ಎಸ್./ಟಿ.ಸಿ.ಎಸ್. ಇರುವ ಬಾಕಿ ಇರುವ ಅರ್ಜಿಗಳ ಪ್ರಕರಣಗಳಿದ್ದಲ್ಲಿ ಉದಾರ ಪ್ರಕ್ರಿಯೆಯಲ್ಲಿ ಅವುಗಳನ್ನು 27.04.2020 ರೊಳಗೆ ಇತ್ಯರ್ಥ ಮಾಡುವಂತೆ ಮೌಲ್ಯಮಾಪನ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ., ಇದರಿಂದಾಗಿ ತೆರಿಗೆದಾರರು ಹೆಚ್ಚುವರಿ ತೆರಿಗೆ ಕಟ್ಟುವ ಪ್ರಮೇಯ ಉದ್ಭವಿಸುವುದಿಲ್ಲ. ಮತ್ತು ಅವರಿಗೆ ನಗದಿನ ಸಮಸ್ಯೆಯೂ ಕಾಡಲಾರದು (ಆದೇಶವನ್ನು 03.04.2020 ರಂದು ಹೊರಡಿಸಲಾಗಿದೆ)

ಸಣ್ಣ ತೆರಿಗೆದಾರರ ಸಂಕಷ್ಟಗಳನ್ನು ನಿವಾರಿಸಲು , ಸಂಬಂಧಿತ ವ್ಯಕ್ತಿಗಳು ಮಾನ್ಯತೆ ಪಡೆದ 15 ಜಿ ಮತ್ತು 15 ಎಚ್ ಅರ್ಜಿಗಳನ್ನು ಬ್ಯಾಂಕುಗಳಿಗೆ ಯಾ ಇತರ ಸಂಸ್ಥೆಗಳಿಗೆ ಹಣಕಾಸು ವರ್ಷ 2019-20 ಕ್ಕೆ ಅನ್ವಯಿಸಿದಂತೆ ಸಲ್ಲಿಸಿದ್ದರೆ ಆಗ ಈ ಅರ್ಜಿಗಳು 30-06-2020 ರವರೆಗೆ ಮಾನ್ಯತೆ ಪಡೆದಿರುತ್ತವೆ.ಇದರಿಂದ ಸಣ್ನ ಮಟ್ಟದ ತೆರಿಗೆದಾರರಿಗೆ ಅಲ್ಲಿ ತೆರಿಗೆ ಬಾಧ್ಯತೆ ಇಲ್ಲದಿದ್ದರೆ ಟಿ.ಡಿ.ಎಸ್. ಪಾವತಿಯಿಂದ ಅವರಿಗೆ ರಕ್ಷಣೆ ದೊರೆಯುತ್ತದೆ. (ಆದೇಶವನ್ನು 03.04.2020 ರಂದು ಹೊರಡಿಸಲಾಗಿದೆ)

ಕಾಯ್ದೆಯ u/s 119 ರಡಿಯ ಈ ಎಲ್ಲಾ ಆದೇಶಗಳು  www.incometaxindia.gov.in ರಲ್ಲಿ ಇತರ ಮಾಹಿತಿಗಳು ಶೀರ್ಷಿಕೆಯಡಿ  ಲಭ್ಯವಿವೆ.

***



(Release ID: 1611251) Visitor Counter : 198