ರೈಲ್ವೇ ಸಚಿವಾಲಯ

ಕೋವಿಡ್ 19 ಲಾಕ್ ಡೌನ್ ಅವಧಿಯಲ್ಲಿ ಇಂಧನ, ಸಾರಿಗೆ ಮತ್ತು ಪ್ರಮುಖ ಮೂಲಸೌಕರ್ಯ ವಲಯಗಳಿಗೆ ಪೂರೈಕೆ ಸರಪಣಿಯ ಸಂಪೂರ್ಣ ಕಾರ್ಯಾಚರಣೆಯ ಖಾತ್ರಿ ನೀಡಿದ ಭಾರತೀಯ ರೈಲ್ವೆ

Posted On: 04 APR 2020 4:47PM by PIB Bengaluru

ಕೋವಿಡ್ 19 ಲಾಕ್ ಡೌನ್ ಅವಧಿಯಲ್ಲಿ ಇಂಧನ, ಸಾರಿಗೆ ಮತ್ತು ಪ್ರಮುಖ ಮೂಲಸೌಕರ್ಯ ವಲಯಗಳಿಗೆ ಪೂರೈಕೆ ಸರಪಣಿಯ ಸಂಪೂರ್ಣ ಕಾರ್ಯಾಚರಣೆಯ ಖಾತ್ರಿ ನೀಡಿದ ಭಾರತೀಯ ರೈಲ್ವೆ

ಕೋವಿಡ್-19 ಲಾಕ್ಡೌನ್  ಅವಧಿಯಲ್ಲಿ  ಮಾರ್ಚ್ 23 ರಿಂದ ಏಪ್ರಿಲ್ 3, 2020 ರವರೆಗೆ ರೈಲ್ವೆಯು  2.5 ಲಕ್ಷ ಕ್ಕಿಂತಲೂ ಹೆಚ್ಚು ವ್ಯಾಗನ್ಗಳ ಕಲ್ಲಿದ್ದಲು ಮತ್ತು 17742 ವ್ಯಾಗನ್ ಗಳ ಪೆಟ್ರೋಲಿಯಂ ಉತ್ಪನ್ನಗಳನ್ನು ಸಾಗಿಸಿದೆ

ಕೋವಿಡ್-19 ಲಾಕ್ ಡೌನ್ ಇದ್ದರೂ ಕೂಡ ರೈಲ್ವೆಯ  ತಡೆರಹಿತ ಕಾರ್ಯಾಚರಣೆಗಳಿಂದಾಗಿ, ಎಲ್ಲಾ ವಿದ್ಯುತ್ ಘಟಕಗಳು ಮತ್ತು ಪೆಟ್ರೋಲಿಯಂ ಡಿಪೋಗಳು  ಸಾಕಷ್ಟು ದಾಸ್ತಾನನ್ನು ಹೊಂದಿವೆ

ಲಾಕ್ ಡೌನ್ ಸಂಬಂಧಿಸಿದ ಸವಾಲುಗಳಿದ್ದರೂ, ರೈಲ್ವೆ ಸಿಬ್ಬಂದಿಯವರ ಎಡೆಬಿಡದ ದುಡಿಮೆ ಫಲಿತಾಂಶ ನೀಡುತ್ತಲೇ ಇದೆ

 

ಭಾರತೀಯ ರೈಲ್ವೆಯು  ರಾಷ್ಟ್ರವ್ಯಾಪಿ ಕೋವಿಡ್-19 ಲಾಕ್ ಡೌನ್ ಅವಧಿಯಲ್ಲಿ ತನ್ನ ಸರಕು ಸಾಗಾಣಿಕೆ ಸೇವೆಗಳ ಮೂಲಕ ರಾಷ್ಟ್ರವ್ಯಾಪಿ ವಿದ್ಯುತ್ ಸಾರಿಗೆ ಮತ್ತು ಪ್ರಮುಖ ಮೂಲಸೌಕರ್ಯ ಕ್ಷೇತ್ರಗಳಿಗೆ  ಪ್ರಮುಖ  ಕಚ್ಚಾ ವಸ್ತು ಮತ್ತು ಇಂಧನ  ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವ  ತನ್ನ ಬದ್ಧತೆಯನ್ನು ತೋರಿಸಿತುಲಾಕ್ಡೌನ್ ಸಂದರ್ಭದಲ್ಲಿ, ಭಾರತೀಯ ರೈಲ್ವೆ ವಿವಿಧ ಗೂಡ್ ಶೆಡ್ಗಳಲ್ಲಿ, ನಿಲ್ದಾಣಗಳಲ್ಲಿ ಮತ್ತು ನಿಯಂತ್ರಣ ಕಚೇರಿಗಳಲ್ಲಿ ನಿಯೋಜಿಸಲಾದ ಸಿಬ್ಬಂದಿ ವರ್ಗದವರು ಮುಖ್ಯವಾದ ಕ್ಷೇತ್ರಗಳಿಗೆ ಅಗತ್ಯವಾದ ವಸ್ತುಗಳ ಪೂರೈಕೆಯು ಮೇಲೆ ಯಾವುದೇ ಪರಿಣಾಮ ಬೀರಬಾರದೆಂದು  ಅತಿ ಶ್ರದ್ಧೆಯಿಂದ ಕೆಲಸ ಮಾಡುವುದನ್ನು ಮುಂದುವರೆಸಿದರು

ಕೋವಿಡ್-19 ಲಾಕ್ ಡೌನ್ ಇದ್ದರೂ ಕೂಡ ರೈಲ್ವೆಯ  ತಡೆರಹಿತ ಕಾರ್ಯಾಚರಣೆಗಳಿಂದಾಗಿ, ಎಲ್ಲಾ ವಿದ್ಯುತ್ ಘಟಕಗಳು ಮತ್ತು ಪೆಟ್ರೋಲಿಯಂ ಡಿಪೋಗಳು  ಸಾಕಷ್ಟು ದಾಸ್ತಾನನ್ನು ಹೊಂದಿವೆ.

ಮಾರ್ಚ್ 23 ರಿಂದ 2020 ಏಪ್ರಿಲ್ 3 ರವರೆಗಿನ ಕಳೆದ  12 ದಿನಗಳಲ್ಲಿ ರೈಲ್ವೆಯು  250020 ವ್ಯಾಗನ್ ಕಲ್ಲಿದ್ದಲು, ಮತ್ತು 17742 ವ್ಯಾಗನ್ ಪೆಟ್ರೋಲಿಯಂ ಉತ್ಪನ್ನಗಳನ್ನು (ಒಂದು ವ್ಯಾಗನ್ 58 – 60 ಟನ್ ಸರಕನ್ನು ಹೊಂದಿರುತ್ತದೆ) ಸಾಗಿಸಿದೆ. ಅದರ  ವಿವರಗಳು ಹೀಗಿವೆ:

ಕ್ರಮ ಸಂಖ್ಯೆ

ದಿನಾಂಕ

ಕಲ್ಲಿದ್ದಲಿನ ವ್ಯಾಗನ್ಗಳ ಸಂಖ್ಯೆ

ಪೆಟ್ರೋಲಿಯಂ ಉತ್ಪನ್ನಗಳ ವ್ಯಾಗನ್ಗಳ ಸಂಖ್ಯೆ

1

23.03.2020

22473

2322

2

24.03.2020

24207

1774

3

25.03.2020

20418

1704

4

26.03.2020

20784

1724

5

27.03.2020

20488

1492

6

28.03.2020

20519

1270

7

29.03.2020

20904

1277

8

30.03.2020

21628

1414

9

31.03.2020

28861

1292

10

01.04.2020

14078

1132

11

02.04.2020

18186

1178

12

03.04.2020

17474

1163

 

ಒಟ್ಟು

250020

17742

 

ವಿದ್ಯುತ್, ಸಾರಿಗೆ ಮತ್ತು ಮೂಲಸೌಕರ್ಯ ಕ್ಷೇತ್ರಗಳು ಮತ್ತು ಇತರ ಅಗತ್ಯ ಸರಕುಗಳಿಗೆ ಇಂಧನ ನೀಡುವ ವಸ್ತುಗಳ ಭಾರತೀಯ ರೈಲ್ವೆಯ ಸಾಗಾಣಿಕೆಯ ನಿರಂತರ ಚಲನೆಯನ್ನು ಮೇಲ್ವಿಚಾರಣೆ ಮಾಡಲು ರೈಲ್ವೆ ಸಚಿವಾಲಯದಲ್ಲಿ ತುರ್ತು ಸರಕು ನಿಯಂತ್ರಣ ಕೇಂದ್ರವು ಕಾರ್ಯನಿರ್ವಹಿಸುತ್ತಿದೆಸರಕು ಸಾಗಣೆಯನ್ನು ಅತ್ಯಂತ ಹಿರಿಯ ಮಟ್ಟದಲ್ಲಿ ಅಧಿಕಾರಿಗಳು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ತುಂಬುವ ಮತ್ತು ಇಳಿಸುವಿಕೆಯ ಕಾರ್ಯಾಚರಣೆಗಳಲ್ಲಿ ರೈಲ್ವೆಯ ಅನೇಕ ಟರ್ಮಿನಲ್ ಹಂತಗಳಲ್ಲಿ ಹಿಂದೆ ಎದುರಿಸುತ್ತಿದ್ದ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಪರಿಹರಿಸಲಾಗುತ್ತಿದೆ. ಅಂತಹ ಯಾವುದೇ ಕಾರ್ಯಾಚರಣೆಯ ಸಮಸ್ಯೆಗಳು ಉದ್ಭವಿಸಿದರೆ ಅದನ್ನು ಬಗೆಹರಿಸಲು ಭಾರತೀಯ ರೈಲ್ವೆ ಮತ್ತು ಗೃಹ ವ್ಯವಹಾರಗಳ ಸಚಿವಾಲಯವು ರಾಜ್ಯ ಸರ್ಕಾರಗಳೊಂದಿಗೆ ಸಂಪರ್ಕದಲ್ಲಿದೆ.

***



(Release ID: 1611189) Visitor Counter : 157