ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ

ಕೋವಿಡ್ -19 ಮತ್ತು ಅದರ ಸಂಬಂಧಿ ಉಸಿರಾಟದ ಸೋಂಕುಗಳನ್ನು ನಿಯಂತ್ರಿಸಲು ಮೊದಲ ಹಂತದ ಅನುಮೋದಿತ ಯೋಜನೆಗಳನ್ನು ಪ್ರಕಟಿಸಿದ ಡಿ ಎಸ್ ಟಿ - ಎಸ್ ಇ ಆರ್ ಬಿ

Posted On: 02 APR 2020 6:21PM by PIB Bengaluru

ಕೋವಿಡ್ -19 ಮತ್ತು ಅದರ ಸಂಬಂಧಿ ಉಸಿರಾಟದ ಸೋಂಕುಗಳನ್ನು ನಿಯಂತ್ರಿಸಲು ಮೊದಲ ಹಂತದ ಅನುಮೋದಿತ ಯೋಜನೆಗಳನ್ನು ಪ್ರಕಟಿಸಿದ ಡಿ ಎಸ್ ಟಿ - ಎಸ್ ಇ ಆರ್ ಬಿ

 

ಕೋವಿಡ್-19 ಸೋಂಕು ವಿಶ್ವವ್ಯಾಪಿ ಕ್ಷಿಪ್ರವಾಗಿ ಹರಡುತ್ತಿದ್ದು, ವಿಶ್ವ ಆರೋಗ್ಯ ಸಂಸ್ಥೆ ಈ ಬಿಕ್ಕಟ್ಟನ್ನು ಸಾಂಕ್ರಾಮಿಕ ರೋಗ ಎಂದು ಘೋಷಿಸಿದೆ. ಈ ಸೋಂಕಿಗೆ ಸೂಕ್ತ ಕಿಮೊಥೆರಪೆಟಿಕ್ ಔಷಧಗಳ ಲಭ್ಯತೆ ಇಲ್ಲದಿರುವುದು ಮತ್ತು ಲಸಿಕೆ ಕೊರತೆಯಿಂದಾಗಿ ಜಾಗತಿಕ ಜನಸಂಖ್ಯೆಗೆ ಈ ಸೋಂಕಿನ ಪರಿಣಾಮ ಭಾರೀ ಪ್ರಮಾಣದಲ್ಲಿ ತಟ್ಟಿದೆ ಮತ್ತು ಪ್ರಸ್ತುತ ಕೊರೊನಾ ಸೋಂಕು ಭೀತಿ ವ್ಯಾಪಕವಾಗಿ ಹರಡಿದೆ. ಭಾರತದಲ್ಲೂ ಸಹ ಕೋವಿಡ್-19 ಸೋಂಕಿತ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ವಿಜ್ಞಾನ ಮತ್ತು ಇಂಜಿನಿಯರಿಂಗ್ ಮಂಡಳಿ (ಡಿಎಸ್ ಟಿ-ಎಸ್ ಇಆರ್ ಬಿ) ಈ ಸಾಂಕ್ರಾಮಿಕ ರೋಗದ ವಿರುದ್ಧ ರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಸಂಶೋಧನಾ ಮತ್ತು ಅಭಿವೃದ್ಧಿ ಪ್ರಯತ್ನಗಳ ಬಗ್ಗೆ ನಿಗಾವಹಿಸಲು ತುರ್ತಾಗಿ ಹಲವು ವಿಶೇಷ ಸಂಶೋಧನಾ ಯೋಜನೆಗಳನ್ನು ಕೈಗೆತ್ತಿಕೊಂಡಿದ್ದು, ಅವುಗಳನ್ನು ಪ್ರಕಟಿಸಿದೆ.

ಡಿಎಸ್ ಟಿ-ಎಸ್ ಇಆರ್ ಬಿ, ಮೊದಲ ಹಂತದ 5 ಯೋಜನೆಗಳನ್ನು ಆಯ್ಕೆ ಮಾಡಿಕೊಂಡಿದ್ದು, ಅವುಗಳು ಜಾರಿಗೊಳಿಸುವ ತಂತ್ರಜ್ಞಾನಗಳ ಅಭಿವೃದ್ಧಿಗೆ ಮತ್ತಷ್ಟು ನೆರವಾಗಲಿದೆ. ಅವುಗಳಲ್ಲಿ ಮೂರು ಯೋಜನೆಗಳು ಅತ್ಯಂತ ಪ್ರಾಮುಖ್ಯತೆ ಹೊಂದಿದ್ದು, ಅವುಗಳೆಂದರೆ ಆಂಟಿವೈರಲ್(ಸೋಂಕು ವಿರೋಧಿ) ವಿರುಸ್ಟಾಟಿಕ್ ಸರ್ಫೇಸ್ ಕೋಟಿಂಗ್ ಆಫ್ ಇನ್ಎನಿಮೇಟ್ ಸರ್ಫೇಸಸ್ ಅಂದರೆ ವೈಯಕ್ತಿಕ ರಕ್ಷಣಾ ಉಪಕರಣ(ಪಿಪಿಇ); ಮತ್ತೊಂದು ಯೋಜನೆ ಕೋವಿಡ್-19 ಸೋಂಕಿತ ರೋಗಿಗಳಲ್ಲಿ ಮೆಟಬೊಲೈಟ್ ಬಯೋಮಾರ್ಕರ್ಸ್ ಅನ್ನು ಗುರುತಿಸುವ ಮತ್ತು ನಿಗದಿತ ಥೆರಪಿಗಳ ಮೂಲಕ ಅವುಗಳನ್ನು ನಿಯಂತ್ರಿಸುವ ಉದ್ದೇಶ ಹೊಂದಿದೆ ಮತ್ತು ಕೊನೆಯದಾಗಿ ಕೊರೋನಾ ಸೋಂಕಿನ ಗ್ಲೈಕೊಪ್ರೋಟೀನ್ ಅನ್ನು ಬೇಧಿಸಲು ರಿಸೆಪ್ಟರ್-ಬೈಂಡಿಂಗ್ ಡೊಮೈನ್ ವಿರುದ್ಧ ಆಂಟಿಬಾಡೀಸ್ ಅಭಿವೃದ್ಧಿಪಡಿಸುವುದಾಗಿದೆ.

ಯೋಜನೆಗಳ ವಿವರ ಈ ಕೆಳಗಿನಂತಿದೆ.

ಕೋವಿಡ್-19 ಸೋಂಕಿತ ರೋಗಿಗೆ ನಿಗದಿತ ಚಿಕಿತ್ಸೆ ಮೂಲಕ ಗ್ಲೋಬಲ್ ಮೆಟಬೊಲೈಟ್ ಬಯೋಮಾರ್ಕರ್ಸ್ ಅನ್ನು ಗುರುತಿಸುವುದು

ಇದರಲ್ಲಿ ಕೋವಿಡ್-19 ಸೋಂಕಿತ ರೋಗಿಯಲ್ಲಿ ಗ್ಲೋಬಲ್ ಮೆಟಬೊಲೈಟ್ ಬಯೋಮಾರ್ಕರ್ಸ್ ಅನ್ನು ಗುರುತಿಸಬೇಕಾಗಿದೆ, ಇದು ಕೋವಿಡ್ ಸೋಂಕಿನ ವಿರುದ್ಧ ಸಂಭಾವ್ಯ ಬಯೋಮಾರ್ಕರ್ ಸಿಗ್ನೇಚರ್ ಸಂಶೋಧನೆ ಮಾಡಲು ಮತ್ತು ಸೋಂಕಿಗೆ ಹೊಸ ವಿಧಾನಗಳ ಮೂಲಕ ಚಿಕಿತ್ಸೆ ನೀಡುವುದನ್ನು ಗುರುತಿಸಬೇಕಾಗಿದೆ.

(ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ: ಡಾ. ಸಂಜೀವ ಶ್ರೀವಾತ್ಸವ, ಜೈವಿಕ ವಿಜ್ಞಾನಗಳು ಮತ್ತು ಜೈವಿಕ ಇಂಜಿನಿಯರಿಂಗ್ ವಿಭಾಗ, ಐಐಟಿ ಬಾಂಬೆ, ಮುಂಬೈ sanjeeva@iitb.ac.in)

ಕಡಿಮೆ ವೆಚ್ಚದ ಹಾಗೂ ಮುಂಜಾಗ್ರತೆ ವಹಿಸಬಹುದಾದ ಸೋಂಕು ವಿರೋಧಿ ಔಷಧಗಳು ಹಾಗೂ ರಿಪುರ್ಸಬಲ್ ಮಲ್ಟಿ ಟಾರ್ಗೆಟೆಡ್ ವಿರಿಸಿಡಾಲ್ ಗಳನ್ನು ಅಭಿವೃದ್ಧಿಗೊಳಿಸುವುದು

ನಾವೆಲ್ ಕೊರೋನಾ ಸೋಂಕು, ಸಾರ್ಸ್-ಸಿಒವಿ-2 ಸಂಬಂಧಿ ಗಂಭೀರ ಉಸಿರಾಟದ ಲಕ್ಷಣಗಳುಳ್ಳ ಹಾಗೂ ಭಾರೀ ಪ್ರಮಾಣದಲ್ಲಿ ಸೋಂಕು ಹರಡುವಂತಹ ಕಾಯಿಲೆಗಳನ್ನು ನಿಯಂತ್ರಿಸಲು ಅಗತ್ಯವಿರುವ ಸರ್ಜಿಕಲ್ ಮಾಸ್ಕ್, ಆರೋಗ್ಯ ರಕ್ಷಣಾ ವ್ಯವಸ್ಥೆ ಮತ್ತು ವೆರಿಸಿಡಲ್ ಕೋಟಿಂಗ್ಸ್ ಫಾರ್ ಇನಾನಿಮೇಟ್ ಸರ್ಫೇಸಸ್ ಅನ್ನು ಅಭಿವೃದ್ಧಿಪಡಿಸಲು ನೆರವು ನೀಡುವುದು.

(ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ: ಡಾ. ನಗ್ಮಾ ಪ್ರವೀಣ್, ರಾಸಾಯನಶಾಸ್ತ್ರ ವಿಭಾಗ, ಐಐಟಿ ಕಾನ್ಪುರ nagma@iitk.ac.in)

ವೈರಾಣುವಿನಿಂದ ಹರಡುವ ಸೋಂಕನ್ನು ನಿಯಂತ್ರಿಸಲು ಆಂಟಿವೈರಲ್ ಸರ್ಫೇಸ್ ಕೋಟಿಂಗ್ ಅಭಿವೃದ್ಧಿಪಡಿಸುವುದು

ವೈರಾಣುಗಳ ಜೋಡಣೆಯಿಂದ ಮಾರಕ ಸೋಂಕು ಭೂಮಿಯ ಮೇಲೆ ವ್ಯಾಪಕವಾಗಿ ಹರಡುತ್ತದೆ, ಹಾಗಾಗಿ ಸಣ್ಣ ಮಾಲಿಕ್ಯೂಲರ್ ಮತ್ತು ಪಾಲಿಮೆರಿಕ್ ಕಾಂಪೌಂಡ್ ಗಳನ್ನು ಅಭಿವೃದ್ಧಿಪಡಿಸುವ ಪ್ರಸ್ತಾವ ಈ ಉದ್ದೇಶದ ಹಿಂದಿದೆ. ಇವುಗಳನ್ನು ಬಳಸಿ, ಉಸಿರಾಟದ ಸೋಂಕು ಹರಡುವ ವೈರಾಣುಗಳನ್ನು ಸಂಪೂರ್ಣವಾಗಿ ಕೊಲ್ಲುವ ಉದ್ದೇಶವಿದೆ.

(ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ: ಡಾ. ಜಯಂತ ಹಲ್ದಾರ್, ಜೆಎನ್ ಸಿಎಎಸ್ಆರ್, ಬೆಂಗಳೂರು (jayanta@jncasr.ac.in))

ಇನಾನಿಮೇಟ್ ಸರ್ಫೇಸ್ ಗಳಲ್ಲಿ ವೈರಲ್ ಡಿಕಂಟಾಮಿನೇಶನ್ ಪರಿಹಾರಗಳನ್ನು ಅಭಿವೃದ್ಧಿಪಡಿಸುವುದು.

ಇದು ಸೋಂಕಿನ ವಿರುದ್ಧ ಬಳಕೆ ಮಾಡುವ ವಸ್ತುವಿನ ಉತ್ಪಾದನೆಗೆ ಸಹಕಾರಿಯಾಗಲಿದೆ ಮತ್ತು ಅದನ್ನು ಯಾವುದೇ ವೈರಾಣು ಅಥವಾ ಬ್ಯಾಕ್ಟೀರಿಯಾ ಅನ್ನು ಸೋಂಕಿತ ವ್ಯಕ್ತಿಯಿಂದ ತೆಗೆದುಹಾಕಲು ಬಳಕೆ ಮಾಡಬಹುದಾಗಿದೆ.

(ಡಾ. ಬಿ.ಎಸ್. ಬುತೋಲಾ, ಜವಳಿ ಮತ್ತು ಫೈಬರ್ ಇಂಜಿನಿಯರಿಂಗ್ ವಿಭಾಗ, ಐಐಟಿ ದೆಹಲಿ (bsbutola@iitd.ac.in))

ಕೋವಿಡ್-19 ಸೆರೆಹಿಡಿಯಲು ಪ್ರತಿಕಾಯ ಅಭಿವೃದ್ಧಿ ಮತ್ತು ಲಿಪಿಡ್ ಆಧರಿತ ಸಿತುಜೆಲ್ ಬಳಕೆ

ಈ ಯೋಜನೆ ಕೋವಿಡ್ ಸೋಂಕು ಹರಡಿರುವ ವ್ಯಕ್ತಿಯಲ್ಲಿ ಗ್ಲೈಕೊಪ್ರೋಟೀನ್ ಪತ್ತೆಹಚ್ಚಿ, ರಿಸೆಪ್ಟರ್-ಬೈಂಡಿಂಗ್ ವಿರುದ್ಧ ಹೋರಾಡಲು ಪ್ರತಿಕಾಯ ಅನ್ನು ಅಭಿವೃದ್ಧಿಪಡಿಸುವುದು. ಉದಾಹರಣೆಗೆ ಜಿಂಕ್ ಪೆಪ್ಟಿಡೇಸ್ ಅಗಿತೆನಸಿನ್-ಕನ್ವರ್ಟಿಂಗ್ ಎನ್ಜೈಮ್ 2. ಮತ್ತೊಂದು ಉದ್ದೇಶವೆಂದರೆ ವೈರಾಣು ಪ್ರವೇಶಿಸುವ ಸಂದರ್ಭದಲ್ಲಿಯೇ ಅದನ್ನು ಎದುರಿಸಲು ಇನ್ ಸಿತು ಜೆಲ್ ಗಳನ್ನು ಆಧರಿಸಿದ ಅನ್ ಸ್ಯಾಚುರೇಟೆಡ್ ಫ್ರಿ ಫ್ಯಾಟಿ ಆಸಿಡ್ ಆಧಾರಿತ ಎಮಲ್ಶನ್ ಅಭಿವೃದ್ಧಿಗೊಳಿಸುವುದು.

(ಡಾ. ಕಿರಣ್ ಕೊಂಡಬಾಗಿಲ್, ಜೈವಿಕ ವಿಜ್ಞಾನ ಮತ್ತು ಜೈವಿಕ ಇಂಜಿನಿಯರಿಂಗ್ ವಿಭಾಗ, ಐಐಟಿ ಬಾಂಬೆ, ಮುಂಬೈ (kirankondabagil@iitb.ac.in))

ಈ ಯೋಜನೆಗಳನ್ನು ಕೋವಿಡ್-19 ಕುರಿತ ವಿಶೇಷ ತಜ್ಞರ ಸಮಿತಿ ವಿವರವಾಗಿ ಪರಿಶೀಲಿಸಿ ಮೌಲ್ಯಮಾಪನ ಮಾಡಿದ ನಂತರ ಆಯ್ಕೆ ಮಾಡಲಾಗಿದೆ.

(ಕೋವಿಡ್-19 ಕುರಿತಂತೆ ಡಿಎಸ್ ಟಿ-ಎಸ್ಇಆರ್ ಬಿಯ ಪ್ರಯತ್ನಗಳ ಬಗ್ಗೆ ಈ ಕೆಳಗೆ ಸಹಿ ಮಾಡಿರುವ ಅಧಿಕಾರಿಯನ್ನು ಸಂಪರ್ಕಿಸಬಹುದು.

ಪ್ರೊಫೆಸರ್ ಸಂದೀಪ್ ವರ್ಮ, ಕಾರ್ಯದರ್ಶಿ, ವಿಜ್ಞಾನ ಮತ್ತು ಇಂಜಿನಿಯರಿಂಗ್ ಸಂಶೋಧನಾ ಮಂಡಳಿ

ಇ-ಮೇಲ್ secretary@serb.gov.in)

 

*****

 



(Release ID: 1611025) Visitor Counter : 146