ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
ಕೋವಿಡ್ 19 ಸಾಂಕ್ರಾಮಿಕ ರೋಗವನ್ನು ಮೆಟ್ಟಿ ನಿಲ್ಲಲು ಉಪಯುಕ್ತ ಪರಿಹಾರಗಳನ್ನು ಕಂಡುಹಿಡಿಯಲು ಆನ್ ಲೈನ್ ಹ್ಯಾಕಥಾನ್ – ಹ್ಯಾಕ್ ದಿ ಕ್ರೈಸಿಸ್ – ಇಂಡಿಯಾ ವನ್ನು ಶ್ರೀ ಸಂಜಯ್ ಧೊತ್ರೆ ಅವರು ಆರಂಭಿಸಿದ್ದಾರೆ
प्रविष्टि तिथि:
03 APR 2020 7:46PM by PIB Bengaluru
ಕೋವಿಡ್ 19 ಸಾಂಕ್ರಾಮಿಕ ರೋಗವನ್ನು ಮೆಟ್ಟಿ ನಿಲ್ಲಲು ಉಪಯುಕ್ತ ಪರಿಹಾರಗಳನ್ನು ಕಂಡುಹಿಡಿಯಲು ಆನ್ ಲೈನ್ ಹ್ಯಾಕಥಾನ್ – ಹ್ಯಾಕ್ ದಿ ಕ್ರೈಸಿಸ್ – ಇಂಡಿಯಾ ವನ್ನು ಶ್ರೀ ಸಂಜಯ್ ಧೊತ್ರೆ ಅವರು ಆರಂಭಿಸಿದ್ದಾರೆ
ಕೋವಿಡ್ 19 ವಿರುದ್ಧ ಹೋರಾಟಕ್ಕೆ ಬಲ ನೀಡುವುದು ಈ ಹ್ಯಾಕಥಾನ್ ಉದ್ದೇಶವಾಗಿದೆ
ಕೋವಿಡ್ 19 ವಿರುದ್ಧ ಹೋರಾಟಕ್ಕೆ ಉಪಯುಕ್ತವಾಗುವಂತಹ ಪರಿಹಾರಗಳನ್ನು ಕಂಡುಹಿಡಿಯಲು ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ, ಸಂಪರ್ಕ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ, ಖಾತೆ ರಾಜ್ಯ ಸಚಿವ ಶ್ರೀ ಸಂಜಯ್ ಧೋತ್ರೆ ಹ್ಯಾಕ್ ದಿ ಕ್ರೈಸಿಸ್ – ಇಂಡಿಯಾ ಎಂಬ ಆನ್ ಲೈನ್ ಹ್ಯಾಕಥಾನ್ ಗೆ ಇಂದು ಚಾಲನೆ ನೀಡಿದ್ದಾರೆ. ಈ ಹ್ಯಾಕಥಾನ್ ಜಾಗತಿಕ ಉಪಕ್ರಮದ ಒಂದು ಭಾಗವಾಗಿದ್ದು ‘ಹ್ಯಾಕ್ ಎ ಕಾಸ್ – ಇಂಡಿಯಾ’ ಮತ್ತು ‘ಫಿಕ್ಕಿ ಮಹಿಳಾ ಸಂಸ್ಥೆ ಪುಣೆ’ ಯಿಂದ ಆಯೋಜಿಸಲಾಗಿದೆ ಮತ್ತು ಎಲೆಕ್ಟ್ರಾನಿಕ್ ಮತ್ತು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ಸಚಿವಾಲಯ (ಎಂ ಇ ಐ ಟ ವೈ) ಬೆಂಬಲ ಸೂಚಿಸಿದೆ.
ಕೋವಿಡ್ 19 ವಿರುದ್ಧ ಹೋರಾಟಕ್ಕೆ ಬಲ ನೀಡುವುದು ಈ ಹ್ಯಾಕಥಾನ್ ಉದ್ದೇಶವಾಗಿದೆ. ಭಾಗವಹಿಸುವ ಕೆಲವು ಉನ್ನತಮಟ್ಟದ ತಂಡಗಳ ಯಶಸ್ವಿ ಉಪಾಯಗಳು ಕೊರೊನಾ ಬಿಕ್ಕಟ್ಟಿಗೆ ಅಳವಡಿಸಿಕೊಳ್ಳಬಹುದಾದ ಪರಿಹಾರವಾಗಬಲ್ಲವು ಮತ್ತು ಇದು ಭಾರತ ಮತ್ತು ಜಾಗತಿಕ ನಾಗರಿಕರಿಗೆ ಸಹಾಯಕರವಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಸಂಜಯ್ ಧೋತ್ರೆ ಅವರು ಕೋವಿಡ್ – 19 ಇಂದು ವಿಶ್ವಕ್ಕೆ ಮತ್ತು ಉದ್ಯಮಗಳಿಗೆ ದೊಡ್ಡ ಸವಾಲುಗಳನ್ನು ಒಡ್ಡಿದೆ. ವ್ಯಾಪಾರದ ಅಡತಡೆಗಳು ಮತ್ತು ಕೆಲಸದ ಸ್ಥಳದಿಂದ ದೂರವಿದ್ದು ಕಾರ್ಯನಿರ್ವಹಿಸುತ್ತಿರುವ ನಡುವೆಯೂ ಒಂದು ರಾಷ್ಟ್ರವಾಗಿ ನಾವು ಹೋರಾಡುತ್ತಿರುವಾಗ ಎಲ್ಲ ಸರ್ಕಾರಿ, ಉದ್ಯಮಗಳು ಮತ್ತು ವೈಯಕ್ತಿಕವಾಗಿ, ಈ ಪರಿಸ್ಥಿತಿಯಿಂದ ಹೊರಬರಲು ಸಾಧ್ಯವಾದಷ್ಟು ನೆರವು ನೀಡಿ ಮಾನವೀಯತೆ ಮೆರೆಯುವುದು ಅವಶ್ಯಕವಾಗಿದೆ ಎಂದು ಹೇಳಿದರು.
ಒಂದು ರಾಷ್ಟ್ರವಾಗಿ ನಾವು ಈ ಸವಾಲನ್ನು ಖಂಡಿತ ಎದುರಿಸಿ ಜಯಶೀಲರಾಗಲಿದ್ದೇವೆ ಎಂಬ ನಂಬಿಕೆಯಿದೆ ಮತ್ತು ದೊಡ್ಡ ಪ್ರಮಾಣದಲ್ಲಿ ಮಾನವೀಯತೆ ಗೆಲ್ಲುತ್ತದೆ ಎಂದು ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವರು ಹೇಳಿದರು. ಮಹಾನ್ ವಿಜ್ಞಾನಿ ಆಲ್ಬರ್ಟ್ ಐನ್ಸ್ಟಿನ್ ಅವರ ಅನಿಸಿಕೆಯಂತೆ, ಕಷ್ಟಗಳ ಮಧ್ಯೆಯೇ ಅವಕಾಶವಿರುತ್ತದೆ ಎಂದರು.
ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ, ಉತ್ಸುಕ ಸಂಘ ಸಂಸ್ಥೆಗಳ ಜೊತೆ ಭಾರತ ಸರ್ಕಾರ, ಸದ್ಯದ ಪರಿಸ್ಥಿತಿಯ ಸಂಕಷ್ಟವನ್ನು ತಗ್ಗಿಸಲು ಮತ್ತು ತ್ವರಿತ ಚೇತರಿಕೆಗೆ ಸಹಾಯ ಮಾಡುವ ಉಪಾಯಗಳು ಮತ್ತು ಪರಿಹಾರಗಳನ್ನು ಗುರುತಿಸುವ ಹಲವಾರು ಉಪಕ್ರಮಗಳನ್ನು ಆರಂಭಿಸಿದೆ ಎಂದೂ ಸಹ ಸಚಿವರಾದ ಶ್ರೀ ಸಂಜಯ್ ಧೋತ್ರೆ ಹೇಳಿದರು.
ಸಾಮಾಜಿಕ ಅಂತರ ಈ ಯುಗದ ಹೊಸ ಸಾಮಾನ್ಯ ರೂಢಿಯಾಗಿದ್ದು, ಡಿಜಿಟಲ್ ಪರಿಹಾರಗಳು ಮತ್ತು ಉತ್ಪನ್ನಗಳು ಮಾನವ ಜನಾಂಗವನ್ನು ಮತ್ತೆ ಸಂಪರ್ಕಕ್ಕೆ ತರುತ್ತವೆ ಹಾಗೂ ಆರ್ಥಿಕತೆ ಸುಧಾರಣೆಗೆ ಮತ್ತಷ್ಟು ಸಮರ್ಥವಾಗಿ ಕೊಡುಗೆಯನ್ನು ನೀಡಬಲ್ಲವು ಎಂದು ತಮಗೆ ಧೃಡವಾದ ನಂಬಿಕೆಯಿದೆ ಎಂದು ಸಚಿವರು ತಿಳಿಸಿದರು.
ಕೋವಿಡ್ 19 ವಿರುದ್ಧ ಹೋರಾಟಕ್ಕೆ ಉಪಯುಕ್ತವಾಗುವಂತಹ ಪರಿಹಾರಗಳನ್ನು ಕಂಡುಹಿಡಿಯಲು ಆನ್ ಲೈನ್ ಹ್ಯಾಕಥಾನ್ ‘ಹ್ಯಾಕ್ ದಿ ಕ್ರೈಸಿಸ್ – ಇಂಡಿಯಾ’ ಪ್ರಾರಂಭಿಸುವುದು ತಮ್ಮ ಸೌಭಾಗ್ಯ ಮತ್ತು ಗೌರವವಾಗಿದೆ ಎಂದು ಒತ್ತಿ ಹೇಳಿದ ಶ್ರೀ ಸಂಜಯ್ ಧೋತ್ರೆ ಅವರು, ಈ ಹ್ಯಾಕಥಾನ್ ಜಾಗತಿಕ ಉಪಕ್ರಮದ ಒಂದು ಭಾಗವಾಗಿದ್ದು ‘ಹ್ಯಾಕ್ ಎ ಕಾಸ್ – ಇಂಡಿಯಾ ಮತ್ತು ಫಿಕ್ಕಿ ಮಹಿಳಾ ಸಂಸ್ಥೆ ಪುಣೆ’ ಯಿಂದ ಆಯೋಜಿಸಲಾಗಿದ್ದು, ವಿದ್ಯುನ್ಮಾನ ಮತ್ತು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ಸಚಿವಾಲಯ (ಎಂ ಇ ಐ ಟ ವಾಯ್) ಬೆಂಬಲ ಸೂಚಿಸಿದೆ ಎಂದರು.
ಕೋವಿಡ್ 19 ವಿರುದ್ಧ ಹೋರಾಟಕ್ಕೆ ಬಲ ನೀಡುವುದು ಈ ಹ್ಯಾಕಥಾನ್ ಉದ್ದೇಶವಾಗಿದೆ. ಉನ್ನತಮಟ್ಟದ ತಂಡಗಳ ಯಶಸ್ವಿ ಉಪಾಯಗಳು ಕೊರೊನಾ ಬಿಕ್ಕಟ್ಟಿಗೆ ಅಳವಡಿಸಿಕೊಳ್ಳಬಹುದಾದ ಪರಿಹಾರವಾಗಬಲ್ಲವು ಮತ್ತು ಇದು ಭಾರತ ಮತ್ತು ಜಾಗತಿಕ ನಾಗರಿಕರಿಗೆ ಸಹಾಯಕರವಾಗಲಿದೆ ಎಂದು ನಿರೀಕ್ಷಿಸಲಾಗಿದೆ ಎಂದು ಸಚಿವರು ವಿವರಿಸಿದರು.
ಭಾರತ, ಎಸ್ಟೋನಿಯಾ ಮತ್ತು ಫಿನ್ಲ್ಯಾಂಡ್ ನ ಪರಿಣಿತರ ಮಾರ್ಗದರ್ಶನದೊಂದಿಗೆ 48 ಗಂಟೆಗಳ ಹ್ಯಾಕಥಾನ್ ನಲ್ಲಿ 2000 ಕ್ಕೂ ಹೆಚ್ಚು ತಂಡಗಳು ಮತ್ತು 15000 ಕ್ಕೂ ಹೆಚ್ಚು ಜನ ಪಾಲ್ಗೊಂಡು ತಮ್ಮ ಕಾರ್ಯವೈಖರಿಯ ಮೂಲ ಮಾದರಿಗಳನ್ನು ಪ್ರದರ್ಶಿಸಲಿದ್ದಾರೆ ಎಂದು ಶ್ರೀ ಸಂಜಯ್ ಧೋತ್ರೆ ತಿಳಿಸಿದರು. ಮುಂಬರುವ ವಾರಗಳಲ್ಲಿ ‘ಹ್ಯಾಕ್ ದಿ ಕ್ರೈಸಿಸ್ – ವರ್ಲ್ಡ್’ ಜಾಗತಿಕ ಹ್ಯಾಕಥಾನ್ ನಲ್ಲಿ ಭಾರತದ ಉನ್ನತ ತಂಡಗಳು ಭಾಗವಹಿಸಲಿವೆ.
ಮಾನವ ಕುಲ ಈ ಹಿಂದೆ ಬಹಳಷ್ಟು ತೊಂದರೆ ಎದುರಿಸಿದೆ, ಈ ಬಾರಿಯ ಸಂಕಷ್ಟವನ್ನು ಅವಕಾಶವಾಗಿ ಪರಿವರ್ತಿಸಿಕೊಳ್ಳುವ ಮೂಲಕ ನಾವೆಲ್ಲ ಒಗ್ಗೂಡಿ ಕೋವಿಡ್ ಭೀತಿಯಿಂದ ಹೊರಬರಲಿದ್ದೇವೆ ಎಂಬ ವಿಶ್ವಾಸವಿದೆ ಎಂದು ವಿದ್ಯನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವರು ಭರವಸೆ ನೀಡಿದರು. ಎಲ್ಲ ತಂಡಗಳಿಗೆ ಶ್ರೀ ಸಂಜಯ್ ಧೊತ್ರೆ ಶುಭ ಹಾರೈಸಿದರು ಮತ್ತು ಪ್ರಸ್ತುತ ಪರಿಸ್ಥಿತಿಯಲ್ಲಿ ನವೀನ ತಂತ್ರಜ್ಞಾನ ಪರಿಹಾರಗಳನ್ನು ನಿರೀಕ್ಷಿಸುವುದಾಗಿ ತಿಳಿಸಿದರು.
ಎಲೆಕ್ಟ್ರಾನಿಕ್ ಮತ್ತು ಮಾಹಿತಿ ತಂತ್ರಜ್ಞಾನ, ಸಂಪರ್ಕ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ, ಖಾತೆ ರಾಜ್ಯ ಸಚಿವ ಶ್ರೀ ಸಂಜಯ್ ಧೋತ್ರೆ ಎಲ್ಲರಿಗೂ ಶುಭ ಹಾರೈಸಿದರು ಮತ್ತು ಸುರಕ್ಷಿತವಾಗಿರಲು ಕೋರಿದರು.
********
(रिलीज़ आईडी: 1611012)
आगंतुक पटल : 289