ಗೃಹ ವ್ಯವಹಾರಗಳ ಸಚಿವಾಲಯ

ಕೃಷಿ ಯಂತ್ರೋಪಕರಣಗಳು, ಬಿಡಿಭಾಗಗಳು ಮತ್ತು ದುರಸ್ತಿ ಅಂಗಡಿಗಳು, ಟ್ರಕ್ ರಿಪೇರಿ ಅಂಗಡಿಗಳು ಮತ್ತು ಚಹಾ ಉದ್ಯಮಕ್ಕೆ ಲಾಕ್‌ಡೌನ್ ನಿರ್ಬಂಧಗಳಿಂದ ವಿನಾಯಿತಿ

Posted On: 03 APR 2020 10:15PM by PIB Bengaluru

ಕೃಷಿ ಯಂತ್ರೋಪಕರಣಗಳು, ಬಿಡಿಭಾಗಗಳು ಮತ್ತು ದುರಸ್ತಿ ಅಂಗಡಿಗಳು

ಟ್ರಕ್ ರಿಪೇರಿ ಅಂಗಡಿಗಳು ಮತ್ತು ಚಹಾ ಉದ್ಯಮಕ್ಕೆ ಲಾಕ್ಡೌನ್ ನಿರ್ಬಂಧಗಳಿಂದ ವಿನಾಯಿತಿ

 

COVID-19 ಹಿನ್ನೆಲೆಯಲ್ಲಿ ದೇಶಾದ್ಯಂತ ಇರುವ ಲಾಕ್ಡೌನ್ ಗೆ ಸಂಬಂಧಿಸಿದಂತೆ ಗೃಹ ಸಚಿವಾಲಯವು ಎಲ್ಲಾ ಸಚಿವಾಲಯಗಳು / ಇಲಾಖೆಗಳಿಗೆ (https://pib.gov.in/PressReleseDetail.aspx?PRID=1607997) ಮಾರ್ಗಸೂಚಿಗಳಿಗೆ ಮತ್ತು ನಂತರದ ಅನುಬಂಧಗಳಿಗೆ ಒಂದು ಅನುಬಂಧವನ್ನು ಬಿಡುಗಡೆ ಮಾಡಿದೆ.

ಕೃಷಿ ಯಂತ್ರೋಪಕರಣಗಳ ಅಂಗಡಿಗಳು, ಅದರ ಬಿಡಿಭಾಗಗಳು ಮತ್ತು ದುರಸ್ತಿ, ಹೆದ್ದಾರಿಗಳಲ್ಲಿ ಟ್ರಕ್ ರಿಪೇರಿ ಅಂಗಡಿಗಳು, ಮುಖ್ಯವಾಗಿ ಇಂಧನ ಪಂಪ್ಗಳಲ್ಲಿ ಮತ್ತು ಗರಿಷ್ಠ ಶೇ.50 ಕಾರ್ಮಿಕರನ್ನು ಹೊಂದಿರುವ ಚಹಾ ತೋಟಗಳಿಗೆ ಲಾಕ್ಡೌನ್ ನಿರ್ಬಂಧಗಳಿಂದ ಅನುಬಂಧವು ವಿನಾಯಿತಿ ನೀಡಿದೆ.(Release ID: 1610988) Visitor Counter : 252