ಗೃಹ ವ್ಯವಹಾರಗಳ ಸಚಿವಾಲಯ

COVID-19 ವಿರುದ್ಧ ಹೋರಾಟದ ರಾಷ್ಟ್ರೀಯ ಲಾಕ್‌ಡೌನ್ ಸಮಯದಲ್ಲಿ ಅಗತ್ಯ ವಸ್ತುಗಳ ಪೂರೈಕೆಯನ್ನು ಖಾತ್ರಿಪಡಿಸುವಲ್ಲಿ ರಾಜ್ಯಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಗೃಹ ಸಚಿವಾಲಯದ ಸ್ಪಷ್ಟನೆMinistry of Home Affairs

Posted On: 03 APR 2020 10:57PM by PIB Bengaluru

COVID-19 ವಿರುದ್ಧ ಹೋರಾಟದ ರಾಷ್ಟ್ರೀಯ ಲಾಕ್ಡೌನ್ ಸಮಯದಲ್ಲಿ ಅಗತ್ಯ ವಸ್ತುಗಳ ಪೂರೈಕೆಯನ್ನು ಖಾತ್ರಿಪಡಿಸುವಲ್ಲಿ ರಾಜ್ಯಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಗೃಹ ಸಚಿವಾಲಯದ ಸ್ಪಷ್ಟನೆ

ತಳಮಟ್ಟದಲ್ಲಿ ಯಾವುದೇ ಅಸ್ಪಷ್ಟತೆಯನ್ನು ತಪ್ಪಿಸಲು ಸ್ಪಷ್ಟೀಕರಣಗಳ ಬಗ್ಗೆ ಜಿಲ್ಲಾಡಳಿತ ಮತ್ತು ಕ್ಷೇತ್ರ ಸಂಸ್ಥೆಗಳಿಗೆ ತಿಳಿಸುವಂತೆ ರಾಜ್ಯಗಳಿಗೆ ಸಲಹೆ

 

ದೇಶದಲ್ಲಿ COVID-19 ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಕೇಂದ್ರ ಸರ್ಕಾರದ ಇಲಾಖೆಗಳು, ರಾಜ್ಯ / ಕೇಂದ್ರಾಡಳಿರ ಪ್ರದೇಶ ಸರ್ಕಾರಗಳು ಮತ್ತು ರಾಜ್ಯ / ಕೇಂದ್ರಾಡಳಿರ ಪ್ರದೇಶದ ಆಡಳಿತಗಳು ಕೈಗೊಳ್ಳಬೇಕಾದ ಲಾಕ್ಡೌನ್ ಕ್ರಮಗಳ ಕುರಿತು ಕೇಂದ್ರ ಗೃಹ ಸಚಿವಾಲಯವು 24.03.2020 ರಂದು ಮಾರ್ಗಸೂಚಿಗಳನ್ನು ನೀಡಿತ್ತು. ಇದನ್ನು 25.03.2020, 26.03.2020 ಮತ್ತು 02.04.2020 ರಂದು ಮತ್ತಷ್ಟು ಮಾರ್ಪಡಿಸಲಾಗಿದೆ.

ತಳಮಟ್ಟದಲ್ಲಿ ವಿನಾಯಿತಿ ನೀಡಲಾಗಿರುವ ವಸ್ತುಗಳ ಮೇಲೆ ಹಲವಾರು ವ್ಯಾಖ್ಯಾನಗಳನ್ನು ಮಾಡಲಾಗುತ್ತಿದ್ದು, ಇದರಿಂದ ಅಗತ್ಯ ವಸ್ತುಗಳ ಪೂರೈಕೆ ಸರಪಳಿಯ ಸುಗಮ ಹರಿವಿಗೆ ತಡೆಯಾಗಿದೆ. ಮಾರ್ಗಸೂಚಿಗಳಿಗೆ ಸಂಬಂಧಿಸಿದಂತೆ ಕೆಲವು ಭಾಗಗಳಿಂದ ಸಲಹೆಗಳನ್ನು ಸಹ ಸ್ವೀಕರಿಸಲಾಗಿದೆ. ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು, ಕೇಂದ್ರ ಗೃಹ ಕಾರ್ಯದರ್ಶಿ ಶ್ರೀ ಅಜಯ್ ಕುಮಾರ್ ಭಲ್ಲಾ ಅವರು ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ. ಲಾಕ್ಡೌನ್ ನಿರ್ಬಂಧಗಳಿಂದ ವಿನಾಯಿತಿ ಪಡೆದ ವಿವಿಧ ಅಗತ್ಯ ವಸ್ತುಗಳ ಬಗ್ಗೆ ಇದರಲ್ಲಿ ವಿವರವಾಗಿ ಹೇಳಲಾಗಿದೆ.

ಪ್ರಯೋಗಾಲಯಗಳವಿಷಯಕ್ಕೆ ಬಂದರೆ, ಲಾಕ್ಡೌನ್ ನಿಂದ ಇವುಗಳಿಗೆ ವಿನಾಯಿತಿ ನೀಡಲಾಗಿದೆ ಎಂದು ಸ್ಪಷ್ಟಪಡಿಸಲಾಗಿದೆ. ಕೋವಿಡ್ -19 ಮಾದರಿಗಳ ಪರೀಕ್ಷೆಗಾಗಿರುವ ಖಾಸಗಿ ವಲಯದ ಪರೀಕ್ಷಾ ಪ್ರಯೋಗಾಲಯಗಳನ್ನು ಇದು ಒಳಗೊಂಡಿದೆ. ಮಾದರಿಗಳನ್ನು ವಿವಿಧ ಸಂಗ್ರಹ ಕೇಂದ್ರಗಳ ಮೂಲಕ ಸಂಗ್ರಹಿಸಲಾಗುತ್ತದೆ ಮತ್ತು ನಂತರ ಅದನ್ನು ಮೇಲಿನ ಪ್ರಯೋಗಾಲಯಗಳಿಗೆ ಸಾಗಿಸಲಾಗುತ್ತದೆ. ತಾತ್ಕಾಲಿಕ ಸಂಗ್ರಹ ಕೇಂದ್ರಗಳನ್ನು ತೆರೆಯುವುದು, ಲ್ಯಾಬ್ ತಂತ್ರಜ್ಞರ ಸಂಚಾರ ಮತ್ತು ಸಂಗ್ರಹ ಕೇಂದ್ರಗಳಿಂದ ಪ್ರಯೋಗಾಲಯಗಳಿಗೆ ಮಾದರಿಗಳನ್ನು ಸಾಗಿಸಲು ಅನುಮತಿ ನೀಡಬೇಕು ಮತ್ತು ಸಂಚಾರಕ್ಕೆ ಲಾಕ್ಡೌನ್ ನಿರ್ಬಂಧಗಳಿಂದ ವಿನಾಯಿತಿ ನೀಡಬೇಕು ಎಂದು ಪುನರುಚ್ಚರಿಸಲಾಗಿದೆ.

ದೈನಂದಿನ ಅಗತ್ಯಗಳಿಗೆ ಬಂದರೆ, (-ಕಾಮರ್ಸ್ ಮೂಲಕ ಸೇರಿದಂತೆ), ಆಹಾರ, ದಿನಸಿ, ಹಣ್ಣು ಮತ್ತು ತರಕಾರಿ, ಡೈರಿ ಮತ್ತು ಹಾಲಿನ ಉತ್ಪನ್ನಗಳು, ಮಾಂಸ ಮತ್ತು ಮೀನು, ಪ್ರಾಣಿಗಳ ಮೇವು, ಬೀಜ, ರಸಗೊಬ್ಬರ ಮತ್ತು ಕೀಟನಾಶಕ, ಕೃಷಿ ಉತ್ಪನ್ನ, ಔಷಧಗ, ವೈದ್ಯಕೀಯ ಸಾಧನಗಳು, ಅವುಗಳ ಕಚ್ಚಾ ವಸ್ತುಗಳಂತಹ ಅಗತ್ಯ ವಸ್ತುಗಳ ಉತ್ಪಾದನೆ, ಸಂಗ್ರಹ ಮತ್ತು ಸಾಗಣೆಗೆ ವಿನಾಯಿತಿ ನೀಡಲಾಗಿದೆ ಎಂದು ಮಾರ್ಗಸೂಚಿಗಳಲ್ಲಿ ನಿರ್ದಿಷ್ಟವಾಗಿ ಉಲ್ಲೇಖಿಸಲಾಗಿದೆ. 2020 ಮಾರ್ಚ್ 29 ರಂದು ತಿಳಿಸಿರುವ ಮಾರ್ಗಸೂಚಿಗಳಲ್ಲಿ ಕೈ ತೊಳೆಯುವ ಸಾಮಗ್ರಿಗಳಾದ, ಸಾಬೂನು, ಸೋಂಕುನಿವಾರಕಗಳು, ಬಾಡಿ ವಾಶ್, ಶ್ಯಾಂಪೂಗಳುಡಿಟರ್ಜೆಂಟ್ಗಳು ಮತ್ತು ಟಿಶ್ಯೂ ಪೇಪರ್ಗಳು, ಟೂತ್ಪೇಸ್ಟ್ / ದಂತ ಆರೈಕೆ, ಸ್ಯಾನಿಟರಿ ಪ್ಯಾಡ್ಗಳು ಮತ್ತು ಡೈಪರ್ ಗಳು, ಚಾರ್ಜರ್ ಮತ್ತು ಬ್ಯಾಟರಿಗಳನ್ನು ದಿನಸಿಗಳ ಪಟ್ಟಿಯಲ್ಲಿ ಸೇರಿಸಲಾಗಿದೆ.

ಅಗತ್ಯ ವಸ್ತುಗಳ ಸರಬರಾಜನ್ನು ಮತ್ತಷ್ಟು ಸುವ್ಯವಸ್ಥಿತಗೊಳಿಸಲು, ಕೆಳಗಿನ ಸ್ಪಷ್ಟೀಕರಣಗಳನ್ನು ನೀಡಲಾಗಿದೆ:

  1. ಆಹಾರ ಮತ್ತು ದಿನಸಿಯಲ್ಲಿ ಯಾವುದೆಲ್ಲಾ ಇರುತ್ತವೆ ಎಂಬ ಪ್ರಶ್ನೆ ಎದುರಾಗುತ್ತದೆ. ಮಾರ್ಗಸೂಚಿಗಳಲ್ಲಿ ಆಹಾರ ಮತ್ತು ದಿನಸಿ ವಸ್ತುಗಳ ಪ್ರತಿಯೊಂದು ವಸ್ತುವನ್ನು ಉಲ್ಲೇಖಿಸುವುದು ಸಾಧ್ಯವಿಲ್ಲ ಅಥವಾ ಅಪೇಕ್ಷಣೀಯವೂ ಅಲ್ಲವಾದ್ದರಿಂದ, ಸಾಮಾನ್ಯವಾಗಿ ಜನರು ದಿನ ನಿತ್ಯ ಸೇವಿಸುವ ಎಲ್ಲಾ ಆಹಾರ ಮತ್ತು ದಿನಸಿ ವಸ್ತುಗಳೆಂದು ಅರ್ಥೈಸಲು ರಾಜ್ಯ / ಕೇಂದ್ರಾಡಳಿ ಸರ್ಕಾರಗಳಿಗೆ ಸೂಚಿಸಲಾಗಿದೆ.
  2. ಅಗತ್ಯ ವಸ್ತುಗಳ ಉತ್ಪಾದನೆ, ಸಂಗ್ರಹಣೆ ಮತ್ತು ಸಾಗಣೆಯನ್ನು ವಿನಾಯಿತಿಗಳ ಅಡಿಯಲ್ಲಿ ಸೇರಿಸಲಾಗಿದೆ ಮತ್ತು ವಿನಾಯಿತಿ ಪಡೆದ ವರ್ಗದಲ್ಲಿ ಬರುವ ವ್ಯವಹಾರಗಳಿಗೆ ಜಿಲ್ಲಾಡಳಿತವು ವೈಯಕ್ತಿಕ ಪಾಸ್ಗಳನ್ನು ನೀಡುತ್ತಿದೆ. ಆದಾಗ್ಯೂ, ಪಾಸ್ಗಳನ್ನು ಪಡೆಯುವಲ್ಲಿನ ತೊಂದರೆಗಳು ದೇಶಾದ್ಯಂತ ಅಗತ್ಯ ವಸ್ತುಗಳ ಪೂರೈಕೆ ಸರಪಳಿಗೆ ಅಡ್ಡಿಯಾಗುತ್ತಿದೆ. ಈ ಸಮಸ್ಯೆಯನ್ನು ಪರಿಹರಿಸಲು, ಅಗತ್ಯ ಸರಕುಗಳ ರಾಷ್ಟ್ರವ್ಯಾಪಿ ಪೂರೈಕೆ ಸರಪಳಿಗಳನ್ನು ಹೊಂದಿರುವ ಕಂಪನಿಗಳು / ಸಂಸ್ಥೆಗಳಿಗೆ ಅಧಿಕೃತ ಪತ್ರಗಳನ್ನು ನೀಡುವಂತೆ ರಾಜ್ಯ / ಕೇಂದ್ರಾಡಳಿತ ಸರ್ಕಾರಗಳಿಗೆ ಸೂಚಿಸಲಾಗಿದೆ, ಇದು ನಿರ್ಣಾಯಕ ಸಿಬ್ಬಂದಿ ಮತ್ತು ಕಾರ್ಮಿಕರ ಸುಲಭ ಸಂಚಾರಕ್ಕೆ ಪ್ರಾದೇಶಿಕ ಪಾಸ್ಗಳನ್ನು ನೀಡಲು ಅವರಿಗೆ ಅವಕಾಶ ಮಾಡಿಕೊಡುತ್ತದೆ. ಅಂತಹ ದೃಢೀಕರಣಗಳ ಸಂಖ್ಯೆಯನ್ನು ಆದಷಟು ಕಡಿಮೆಯಿರುವಂತೆ ನೋಡಿಕೊಳ್ಳಲು ಸೂಚಿಸಲಾಗಿದೆ.
  3. ಸರಕು ಸಾಗಣೆ, ಪರಿಹಾರ ಮತ್ತು ಸ್ಥಳಾಂತರಿಸುವಿಕೆಗಳಿಗೆ ರೈಲು, ವಿಮಾನ ನಿಲ್ದಾಣಗಳು ಮತ್ತು ಬಂದರುಗಳ ಕಾರ್ಯಾಚರಣೆಯನ್ನು ಮಾರ್ಗಸೂಚಿಗಳ ಅಡಿಯಲ್ಲಿ ಅನುಮತಿಸಲಾಗಿದೆ. ಆದರೂ ಕೆಲವು ಸಂದರ್ಭಗಳಲ್ಲಿ ಜಿಲ್ಲಾ ಅಧಿಕಾರಿಗಳಿಂದ ಪಾಸ್ ಪಡೆಯುವಲ್ಲಿ ತೊಂದರೆಗಳು ಎದುರಾಗುತ್ತಿವೆ. ಇದನ್ನು ಪರಿಹರಿಸಲು ಮತ್ತು ದೇಶಾದ್ಯಂತ ಸರಕುಗಳ ಇಳಿಸುವಿಕೆ ಮತ್ತು ಸಂಚಾರವನ್ನು ವೇಗಗೊಳಿಸಲು ರೈಲು, ಬಂದರುಗಳು ಮತ್ತು ವಿಮಾನ ನಿಲ್ದಾಣಗಳ ಅಡಿಯಲ್ಲಿ ಬರುವ ನಿರ್ದಿಷ್ಟ ಅಧಿಕಾರಿಗಳಿಗೆ ನಿರ್ಣಾಯಕವಾದ ಸಾಮೂಹಿಕ ಸಿಬ್ಬಂದಿ ಮತ್ತು ಗುತ್ತಿಗೆ ಕಾರ್ಮಿಕರಿಗೆ ಪಾಸ್ ನೀಡಲು ಅನುಮತಿ ನೀಡಲಾಗಿದೆ ಎಂದು ಸ್ಪಷ್ಟಪಡಿಸಲಾಗಿದೆ.
  4. ಅರ್ಹ ಚಾಲನಾ ಪರವಾನಗಿಯನ್ನು ಹೊಂದಿರುವ ಚಾಲಕನೊಂದಿಗೆ ಇನ್ನೊಬ್ಬ ವ್ಯಕ್ತಿಯೊಂದಿಗೆ ಎಲ್ಲ ಟ್ರಕ್ಗಳು ಮತ್ತು ಇತರ ಸರಕು / ವಾಹಕ ವಾಹನಗಳ ಅಂತರ-ರಾಜ್ಯ ಮತ್ತು ಅಂತರ್-ರಾಜ್ಯ ಸಂಚಾರವನ್ನು ಅನುಮತಿ ನೀಡಲಾಗಿದೆ. ಟ್ರಕ್ / ವಾಹನವು ಖಾಲಿಯಾಗಿ ಸಂಚರಿಸುತ್ತಿದ್ದರೆ, ಸರಕುಗಳನ್ನು ತಲುಪಿಸಲು ಅಥವಾ ತೆಗೆದುಕೊಳ್ಳಲು ಸರಕುಪಟ್ಟಿ, ವೇ-ಬಿಲ್ ಇತ್ಯಾದಿಗಳನ್ನು ಚಾಲಕರು ಹೊಂದಿರಬೇಕು. ಚಾಲಕ ಮತ್ತು ಒಬ್ಬ ವ್ಯಕ್ತಿಯು ಅವರ ವಾಸಸ್ಥಳದಿಂದ ಟ್ರಕ್ವರೆಗೆ ಬರಲು ಸ್ಥಳೀಯ ಅಧಿಕಾರಿಗಳು ಸಹಕರಿಸಬೇಕು.
  5. COVID19 ಹಿನ್ನೆಲೆಯಲ್ಲಿ ಪಾಸ್ ಹೊಂದಿರುವ ವ್ಯಕ್ತಿಗಳ ಎಲ್ಲಾ ಚಲನೆಯು ನೈರ್ಮಲ್ಯ ಮತ್ತು ಸಾಮಾಜಿಕ ಅಂತರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.

 

ತಳಮಟ್ಟದಲ್ಲಿ ಯಾವುದೇ ಅಸ್ಪಷ್ಟತೆಯನ್ನು ತಪ್ಪಿಸಲು ಜಿಲ್ಲಾ ಅಧಿಕಾರಿಗಳು ಮತ್ತು ಕ್ಷೇತ್ರ ಏಜೆನ್ಸಿಗಳಿಗೆ ಮಾರ್ಗಸೂಚಿಯ ಬಗ್ಗೆ ತಿಳಿಸಬೇಕು ಎಂದು ಒತ್ತಿಹೇಳಲಾಗಿದೆ.



(Release ID: 1610985) Visitor Counter : 136