ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ

ಎಐಸಿಟಿಇ ಅಭಿವೃದ್ಧಿಪಡಿಸಿದ ಎಂಎಚ್‌ಆರ್‌ಡಿ ಎಐಸಿಟಿಇ ಕೋವಿಡ್ -19 ವಿದ್ಯಾರ್ಥಿ ಸಹಾಯವಾಣಿ ಪೋರ್ಟಲ್ ಗೆ ನವದೆಹಲಿಯಲ್ಲಿ ಕೇಂದ್ರ ಮಾನವ ಸಂಪನ್ಮೂಲ ಸಚಿವರಿಂದ ಚಾಲನೆ

Posted On: 03 APR 2020 7:45PM by PIB Bengaluru

ಎಐಸಿಟಿಇ ಅಭಿವೃದ್ಧಿಪಡಿಸಿದ ಎಂಎಚ್ಆರ್ಡಿ ಎಐಸಿಟಿಇ ಕೋವಿಡ್ -19 ವಿದ್ಯಾರ್ಥಿ ಸಹಾಯವಾಣಿ ಪೋರ್ಟಲ್ ಗೆ ನವದೆಹಲಿಯಲ್ಲಿ ಕೇಂದ್ರ ಮಾನವ ಸಂಪನ್ಮೂಲ ಸಚಿವರಿಂದ ಚಾಲನೆ

 

COVID-19 ಸಾಂಕ್ರಾಮಿಕ ರೋಗ ಮತ್ತು ಮಾರ್ಚ್ 25 ರಿಂದ ದೇಶಾದ್ಯಂತ ಲಾಕ್‌ಡೌನ್ ನಿಂದಾಗಿ ಕಾಲೇಜುಗಳು ಮತ್ತು ಹಾಸ್ಟೆಲ್‌ಗಳನ್ನು ಮುಚ್ಚಿರುವುದರಿಂದ ಕೆಲವು ವಿದ್ಯಾರ್ಥಿಗಳು ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಅಂತಹ ವಿದ್ಯಾರ್ಥಿಗಳಿಗೆ ಸಹಾಯ ಮತ್ತು ಬೆಂಬಲವನ್ನು ನೀಡುವ ಸಲುವಾಗಿ, ಎಐಸಿಟಿಇ (ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ) ವಿಶಿಷ್ಟ ಎಂಎಚ್‌ಆರ್‌ಡಿ ಎಐಸಿಟಿಇ ಕೋವಿಡ್ -19 ವಿದ್ಯಾರ್ಥಿ ಸಹಾಯವಾಣಿ ಪೋರ್ಟಲ್ ಅನ್ನು ಪ್ರಾರಂಭಿಸಿದೆ.

Https://helpline.aicte-india.org ಎಂಬ URL ಹೊಂದಿರುವ ವೆಬ್ಸೈಟ್ ಗೆ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಶ್ರೀ ರಮೇಶ್ ಪೋಖ್ರಿಯಲ್ನಿಶಾಂಕ್ಅವರು ಇಂದು ಚಾಲನೆ ನೀಡಿದರು. ಎಐಸಿಟಿಇ ಅಧ್ಯಕ್ಷ ಪ್ರೊ.ಅನಿಲ್ ಸಹಸ್ರಬುದ್ಧೆ ಅವರ ಉಪಸ್ಥಿತಿಯಲ್ಲಿ ಎಐಸಿಟಿಇ ಉಪಾಧ್ಯಕ್ಷ ಶ್ರೀ ಎಂ ಪಿ ಪೂನಿಯಾ, ಎಐಸಿಟಿಇ ಮುಖ್ಯ ಸಮನ್ವಯ ಅಧಿಕಾರಿ ಶ್ರೀ ಬುದ್ಧ ಚಂದ್ರಶೇಖರ್ ಹಾಜರಿದ್ದರು. ವಿದ್ಯಾರ್ಥಿ ಇಂಟರ್ನಿಗಳಾದ ಶಿವಾಂಶು ಮತ್ತು ಗ್ರಾಫಿಕ್ ಎರಾ ವಿಶ್ವವಿದ್ಯಾಲಯದ ಆಕಾಶ್ ಪೋರ್ಟಲ್ ಅನ್ನು ದಾಖಲೆಯ ಒಂದೇ ದಿನದಲ್ಲಿ ಅಭಿವೃದ್ಧಿಪಡಿಸಿದ್ದಾರೆ.

https://ci3.googleusercontent.com/proxy/mlEIDqq9HkE4sIqC23sPPlJAGyP5uBKNzMya2Be2HaiGrcwcZ3-g56VQfWWe_ck_w1aib-gGb9hAubizwGd7dcp_RYAtthn6A5DN5HQocoKe9EFbwxKi=s0-d-e1-ft#https://static.pib.gov.in/WriteReadData/userfiles/image/image001QE5A.jpg

ಸಂದರ್ಭದಲ್ಲಿ ಮಾತನಾಡಿದ ಸಚಿವರು, ಪೋರ್ಟಲ್ ಮುಖ್ಯವಾಗಿ ನೆರವಿನ ಅಗತ್ಯವಿರುವವರಿಗೆ ಸಹಾಯ ನೀಡಲು ಸಿದ್ಧರಿರುವವರನ್ನು ಸಂಪರ್ಕಿಸುವುದಾಗಿದೆ. ಬೆಂಬಲದ ಸ್ವರೂಪವು ವಸತಿ, ಆಹಾರ, ಆನ್ ಲೈನ್ ತರಗತಿಗಳು, ಹಾಜರಾತಿ, ಪರೀಕ್ಷೆಗಳು, ವಿದ್ಯಾರ್ಥಿವೇತನಗಳು, ಆರೋಗ್ಯ, ಸಾರಿಗೆ, ಕಿರುಕುಳ ಇತ್ಯಾದಿಗಳನ್ನು ಒಳಗೊಂಡಿದೆ ಎಂದರು.

ಇಂತಹ ನಿರ್ಣಾಯಕ ಘಟ್ಟದಲ್ಲಿ 6500 ಕ್ಕೂ ಹೆಚ್ಚು ಕಾಲೇಜುಗಳು ಈಗಾಗಲೇ ಬೆಂಬಲ ನೀಡಲು ಮುಂದೆ ಬಂದಿವೆ ಎಂದು ಸಚಿವರು ಮಾಹಿತಿ ನೀಡಿದರು. ಕಷ್ಟದಲ್ಲಿರುವ ವಿದ್ಯಾರ್ಥಿಗಳಿಗೆ ಪೋರ್ಟಲ್ ಮೂಲಕ ನೇರವಾಗಿ ಅವರೊಂದಿಗೆ ಸಂಪರ್ಕ ಸಾಧಿಸಲು ಪ್ರೋತ್ಸಾಹಿಸಲಾಗುತ್ತದೆ ಎಂದರು. ಈ ವಿಶಿಷ್ಟ ವೇದಿಕೆಯನ್ನು ರೂಪಿಸಿದ ವಿದ್ಯಾರ್ಥಿಗಳ ಶ್ರಮವನ್ನು ಶ್ರೀ ನಿಶಾಂಕ್ ಶ್ಲಾಘಿಸಿದರು.

ಅನೇಕ ಉನ್ನತ ಶಿಕ್ಷಣ ಸಂಸ್ಥೆಗಳು ತಮ್ಮ ಸಂಶೋಧನೆಯ ಮೂಲಕ ಆರೋಗ್ಯ ಸೇವೆಗಳನ್ನು ಸಶಕ್ತಗೊಳಿಸಿ ಸರ್ಕಾರಕ್ಕೆ ಬೆಂಬಲವಾಗಿ ನಿಲ್ಲಲು ಮುಂದೆ ಬರುತ್ತಿವೆ ಎಂಬುದನ್ನು ತಿಳಿದು ಅವರು ಸಂತೋಷಪಟ್ಟರು. ಸ್ವಯಂಸೇವಾ ಸಂಸ್ಥೆಗಳು, ಎನ್‌ಜಿಒಗಳು, ಸಾಮಾಜಿಕ ಸಂಸ್ಥೆಗಳು ಮತ್ತು ದಾನಿಗಳು 6500 ಕಾಲೇಜುಗಳಂತೆಯೇ ಮುಂದೆ ಬಂದು ತಮ್ಮ ಬೆಂಬಲವನ್ನು ನೀಡಬೇಕು ಎಂದು ಎಐಸಿಟಿಇ ಅಧ್ಯಕ್ಷ ಪ್ರೊ.ಅನಿಲ್ ಸಹಸ್ರಬುದ್ಧೆ ಮನವಿ ಮಾಡಿದರು.

ಆಸಕ್ತ ಸಾಮಾಜಿಕ ಸಂಸ್ಥೆಗಳು, ಎನ್‌ಜಿಒಗಳು, ದಾನಿಗಳು ಎಐಸಿಟಿಇಯನ್ನು ಇಲ್ಲಿ ಸಂಪರ್ಕಿಸಬಹುದು. cconeat@aicte-india.org

 

 



(Release ID: 1610978) Visitor Counter : 151