ಪ್ರವಾಸೋದ್ಯಮ ಸಚಿವಾಲಯ
ದೇಶದ ನಾನಾ ಭಾಗಗಳಲ್ಲಿ ಸಂಕಷ್ಟಕ್ಕೆ ಸಿಲುಕಿರುವ ವಿದೇಶಿ ಪ್ರವಾಸಿಗರಿಗೆ ನೆರವಾಗುತ್ತಿರುವ ಸ್ಟ್ರಾಂಡೆಡ್ ಇನ್ ಇಂಡಿಯಾ ಪೋರ್ಟಲ್
Posted On:
03 APR 2020 12:50PM by PIB Bengaluru
ದೇಶದ ನಾನಾ ಭಾಗಗಳಲ್ಲಿ ಸಂಕಷ್ಟಕ್ಕೆ ಸಿಲುಕಿರುವ ವಿದೇಶಿ ಪ್ರವಾಸಿಗರಿಗೆ ನೆರವಾಗುತ್ತಿರುವ ಸ್ಟ್ರಾಂಡೆಡ್ ಇನ್ ಇಂಡಿಯಾ ಪೋರ್ಟಲ್
ಸರ್ಕಾರ ಬಿಡುಗಡೆ ಮಾಡುವ ಎಲ್ಲಾ ಆರೋಗ್ಯ ಸಂಬಂಧಿ ಮತ್ತು ಇತರೆ ಸಲಹೆಗಳು ಹಾಗೂ ಮಾರ್ಗಸೂಚಿಗಳನ್ನು ಪ್ರವಾಸಿಗರು ಮತ್ತು ಪ್ರವಾಸೋದ್ಯಮ ವಲಯಕ್ಕೆ ನಿರಂತರವಾಗಿ ತಲುಪಿಸುತ್ತಿರುವ ಪ್ರವಾಸೋದ್ಯಮ ಸಚಿವಾಲಯ
ಪ್ರವಾಸೋದ್ಯಮ ಸಚಿವಾಲಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಪ್ರವಾಸಿಗರು, ಹೊಟೇಲ್ ಗಳು ಮತ್ತು ಇತರೆ ಸಂಬಂಧಿಸಿದವರ ಸುರಕ್ಷತೆಗಾಗಿ ಕೈಗೊಂಡಿರುವ ಹಲವು ಕ್ರಮಗಳು, ಸಲಹೆಗಳು ಮತ್ತು ಮಾರ್ಗಸೂಚಿಗಳನ್ನು ಎಲ್ಲ ಪ್ರವಾಸಿಗರಿಗೆ ಮತ್ತು ಉದ್ಯಮದ ಒಕ್ಕೂಟದ ಸಿಬ್ಬಂದಿಗೆ ಮತ್ತು ಹೊಟೇಲ್ ಗಳು ಮತ್ತು ಇನ್ನಿತರರಿಗೆ ವ್ಯಾಪಕ ಪ್ರಚಾರದ ಮೂಲಕ ತಲುಪಿಸುತ್ತಿದೆ.
ಅಲ್ಲದೆ ಹಲವು ಸಲಹೆಗಳು ಮತ್ತು ಮಾರ್ಗಸೂಚಿಗಳನ್ನು ನಾನಾ ಭಾರತೀಯ ಪ್ರವಾಸೋದ್ಯಮ ಕಚೇರಿಗಳ ಸಮನ್ವಯದಿಂದ ಹಾಗೂ ಕ್ರಿಯಾಶೀಲ ನಿಗಾವ್ಯವಸ್ಥೆಯಿಂದಾಗಿ ಆಯಾ ಪ್ರದೇಶಗಳಿಗೆ ತಲುಪಿಸುತ್ತಿದೆ. ಕೋವಿಡ್-19 ಹಾಟ್ ಸ್ಪಾಟ್ ಗಳೆಂದು ಗುರುತಿಸಲ್ಪಟ್ಟಿರುವ ದೇಶಗಳ ವಿವರಗಳನ್ನು ಪ್ರಾದೇಶಿಕ ಕಚೇರಿಗಳ ಮೂಲಕ ವಿದೇಶಿ ಪ್ರಯಾಣಿಕರಿಗೆ ಒದಗಿಸಲಾಗುತ್ತಿದೆ. ಅವರಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣದ ಸೂಚನೆಯಂತೆ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳು ಮತ್ತು ತಮ್ಮ ಚಲನವಲನದ ಮೇಲೆ ನಿಗಾಇಡಲು ಸೂಚಿಸಲಾಗಿದೆ ಹಾಗೂ ಕೋವಿಡ್-19 ಹರಡುತ್ತಿರುವ ಹಿನ್ನೆಲೆಯಲ್ಲಿ ಶಂಕಿತ ವ್ಯಕ್ತಿಗಳ ಕ್ವಾರಂಟೈನ್ ಗೂ ಸಲಹೆ ಮಾಡಲಾಗುತ್ತಿದೆ. ಪ್ರವಾಸೋದ್ಯಮ ಸಚಿವಾಲಯ ಈ ವಿಷಯದಲ್ಲಿ ರಾಜ್ಯಗಳ ಪ್ರವಾಸೋದ್ಯಮ ಇಲಾಖೆಗಳು ಮತ್ತು ರಾಜ್ಯಾಡಳಿತಗಳೊಂದಿಗೆ ಕ್ರಿಯಾಶೀಲ ಸಹಭಾಗಿತ್ವವನ್ನು ಹೊಂದಿದೆ.
ಈ ಮಧ್ಯೆ, ಸ್ಟ್ರಾಂಡೆಡ್ ಇನ್ ಇಂಡಿಯಾ ಪೋರ್ಟಲ್ ಪ್ರವಾಸಿಗರು ತಮ್ಮ ದೇಶಕ್ಕೆ ಸುರಕ್ಷಿತವಾಗಿ ವಾಪಸ್ ಆಗಲು ಯಶಸ್ವಿಯಾಗಿ ನೆರವು ನೀಡುತ್ತಿದೆ. ಕೆಲವು ಉದಾಹರಣೆಗಳು ಈ ಬಹು ಸಂಸ್ಥೆಗಳ ಸಮನ್ವಯದ ವೇದಿಗೆ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ತೋರಿಸಿಕೊಟ್ಟಿದೆ. ಗುಜರಾತ್ ಸರ್ಕಾರ, ಗುಜರಾತ್ ನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಅಮೆರಿಕದ ಪ್ರಜೆಗಳಿಗೆ ವಾಹನ ಪಾಸ್ ಗಳನ್ನು ವಿತರಣೆ ಮಾಡಿದೆ. ಗುಜರಾತ್ ಪ್ರವಾಸೋದ್ಯಮ ಮತ್ತು ಪ್ರವಾಸೋದ್ಯಮ ಸಚಿವಾಲಯದ ಪಶ್ಚಿಮ ಪ್ರಾದೇಶಿಕ ಕಚೇರಿ, ಅಮೆರಿಕದ ರಾಯಭಾರ ಕಚೇರಿಯ ಜೊತೆ ಸಮಾಲೋಚನೆ ನಡೆಸಿ, ಆಂತರಿಕ ಪ್ರಯಾಣ ಮತ್ತು ಅವರು ಸುರಕ್ಷಿತವಾಗಿ ವಿಮಾನದ ಮೂಲಕ ಸ್ವದೇಶಕ್ಕೆ ಹಿಂತಿರುಗಲು ನೆರವಾಗುತ್ತಿದೆ.
ಬಿಹಾರದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಅಮೆರಿಕದ ಪ್ರಜೆಗೆ ದೆಹಲಿಗೆ ಪ್ರಯಾಣ ಬೆಳೆಸಿ, ಅಲ್ಲಿ ಆಕೆ ಪ್ರಯಾಣಿಸಬೇಕಿದ್ದ ವಿಮಾನ ಏರಲು ನೆರವಾಗುವಂತೆ ಪ್ರಯಾಣ ಪರ್ಮಿಟ್ ಅನ್ನು ವಿತರಿಸಲಾಗಿದೆ.
ಆಸ್ಟ್ರೇಲಿಯಾದ ಮೂರು ಗುಂಪುಗಳು ಸಿಲಿಗುರಿ ಮತ್ತು ಕೋಲ್ಕತ್ತಾದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದವು. ಅವುಗಳನ್ನು ಸ್ಟ್ರಾಂಡೆಡ್ ಇನ್ ಇಂಡಿಯಾ ಪೋರ್ಟಲ್ ಮೂಲಕ ಸುರಕ್ಷಿತವಾಗಿ ರಕ್ಷಿಸಲಾಗಿದೆ. ಭಾರತೀಯ ಪ್ರವಾಸೋದ್ಯಮ ಇಲಾಖೆಯ ಕೋಲ್ಕತ್ತಾ ಕಚೇರಿ ಕ್ಷಿಪ್ರವಾಗಿ ಈ ಕಾರ್ಯ ಕೈಗೆತ್ತಿಕೊಂಡು, ದೆಹಲಿಯ ಹೈಕಮಿಷನ್ ನಡುವೆ ಸಂಪರ್ಕ ಸಾಧಿಸಿ, ಅವರು ಸುರಕ್ಷಿತವಾಗಿ ತವರು ಸೇರಲು ನೆರವಿನ ಕ್ರಮಗಳನ್ನು ಆರಂಭಿಸಿದೆ.
*******
(Release ID: 1610835)
Visitor Counter : 196
Read this release in:
Telugu
,
Marathi
,
English
,
Urdu
,
Hindi
,
Bengali
,
Assamese
,
Punjabi
,
Gujarati
,
Odia
,
Tamil