ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ

ಕೋವಿಡ್ -19 ಮಾನಸಿಕ- ಸಾಮಾಜಿಕ ಪರಿಣಾಮಗಳ ಕುರಿತಂತೆ ಸಮುದಾಯದ ಸಿದ್ಧತೆಗಳನ್ನು ಅರಿಯಲು ಆನ್ –ಲೈನ್ ಪ್ರಶ್ನಾವಳಿ ಬಿಡುಗಡೆ ಮಾಡಿದ ಎಂ.ಎಚ್.ಆರ್.ಡಿ.ಯ ನ್ಯಾಷನಲ್ ಬುಕ್ ಟ್ರಸ್ಟ್ ಆಫ್ ಇಂಡಿಯಾ

Posted On: 02 APR 2020 4:30PM by PIB Bengaluru

ಕೋವಿಡ್ -19 ಮಾನಸಿಕ- ಸಾಮಾಜಿಕ ಪರಿಣಾಮಗಳ ಕುರಿತಂತೆ ಸಮುದಾಯದ ಸಿದ್ಧತೆಗಳನ್ನು ಅರಿಯಲು ಆನ್ –ಲೈನ್ ಪ್ರಶ್ನಾವಳಿ ಬಿಡುಗಡೆ ಮಾಡಿದ ಎಂ.ಎಚ್.ಆರ್.ಡಿ.ಯ ನ್ಯಾಷನಲ್ ಬುಕ್ ಟ್ರಸ್ಟ್ ಆಫ್ ಇಂಡಿಯಾ

 

ಕೋವಿಡ್ -19ಕ್ಕೆ ಸಂಬಂಧಿಸಿದ ಬಿಕ್ಕಟ್ಟು ಎದುರಿಸಲು ಭಾರತ ಸರ್ಕಾರದ ಬಹು ಆಯಾಮದ ದೃಷ್ಟಿಕೋನದ ಮುಂದುವರಿಕೆಯಾಗಿ ಮತ್ತು ನಂತರದ ಲಾಕ್ ಡೌನ್ ಹಿನ್ನೆಲೆಯಲ್ಲಿ ಎಚ್.ಆರ್.ಡಿ. ಸಚಿವಾಲಯದಡಿಯ ಪುಸ್ತಕ ಪ್ರಕಟಣೆ ಮತ್ತು ಪುಸ್ತಕ ಉತ್ತೇಜನದ ರಾಷ್ಟ್ರೀಯ ಸಂಸ್ಥೆ ನ್ಯಾಷನಲ್ ಬುಕ್ ಟ್ರಸ್ಟ್, ಈ ಸಾಂಕ್ರಾಮಿಕ ರೋಗದ ಮಾನಸಿಕ-ಸಾಮಾಜಿಕ ಪ್ರಭಾವದ ಬಗ್ಗೆ ಸಮುದಾಯದ ಗ್ರಹಿಕೆಗಳನ್ನು ನಿರ್ಣಯಿಸಲು ಮಾನಸಿಕ-ಸಾಮಾಜಿಕ ಪರಿಣಾಮ ಕುರಿತ ಏಳು ಕಿರುಹೊತ್ತಗೆ ಸಿದ್ಧಪಡಿಸಲು ಮತ್ತು ಇಗಷ್ಟೇ ಬಿಡುಗಡೆ ಮಾಡಲಾಗಿರುವ ಕರೋನಾ ಅಧ್ಯಯನ ಸರಣಿಯ ಅಡಿಯಲ್ಲಿ ಮನಃಶಾಸ್ತ್ರಜ್ಞರು ಮತ್ತು ಸಮಾಲೋಚನಾಕಾರರ ಅಧ್ಯಯನ ಗುಂಪಿನೊಂದಿಗೆ ಹೇಗೆ ಸಹಕರಿಸಬೇಕು ಎಂಬ ಕುರಿತ ಪ್ರಕ್ರಿಯೆಯಲ್ಲಿದೆ.

ಈಗ ಎನ್.ಬಿ.ಟಿ. ಅಧ್ಯಯನ ಗುಂಪು (ಹೆಸರಾಂತ ಮನಃಶಾಸ್ತ್ರಜ್ಞರು ಮತ್ತು ಸಮಾಲೋಚಕರ ಗುಂಪು) ಹಿಂದಿ ಮತ್ತು ಇಂಗ್ಲಿಷ್ ನಲ್ಲಿ ಏಳು ವಿಭಾಗಗಳಲ್ಲಿ ಕೋವಿಡ್ -19 ಮತ್ತು ಲಾಕ್ ಡೌನ್ ಹಾಗೂ ಅದರೊಂದಿಗೆ ಹೇಗೆ ಸಹಕರಿಸಬೇಕು ಎಂಬುದರ ಕುರಿತ ಮಾನಸಿಕ -ಸಾಮಾಜಿಕ ಪರಿಣಾಮದ ನಿರ್ಧರಣೆಗಾಗಿ ಪ್ರಶ್ನಾವಳಿಯನ್ನು ಬಿಡುಗಡೆ ಮಾಡಿದೆ.

ಈ ಏಳು ವಿಭಾಗಗಳು: 1. ಪಾಲಕರು, ತಾಯಂದಿರು ಮತ್ತು ಮಹಿಳೆಯರು; 2. ಮಕ್ಕಳು, ಹದಿಹರೆಯದವರು ಮತ್ತು ಯುವಜನರು; 3. ನೌಕರರು, ವೃತ್ತಿಪರರು, ಸ್ವಯಂ ಉದ್ಯೋಗಿಗಳು ಮತ್ತು ಕೆಲಸಗಾರರು; 4. ದಿವ್ಯಾಂಗರು; 5. ಕೋವಿಡ್-19 ಬಾಧಿತ ಕುಟುಂಬಗಳು; 6. ವೈದ್ಯಕೀಯ ಮತ್ತು ಅಗತ್ಯ ಸೇವಾ ಪೂರೈಕೆದಾರರು; .7. ಹಿರಿಯರು (60 ವರ್ಷ ಮೇಲ್ಪಟ್ಟವರು). ಪ್ರಶ್ನಾವಳಿಯ ಸಾರ್ವಜನಿಕ ಪ್ರಸರಣವು ಲಾಕ್ ಡೌನ್ ಅವಧಿಯಲ್ಲಿ ಸಮುದಾಯದ ಭಾಗವಹಿಸುವಿಕೆ ಮತ್ತು ಭಾವನೆಗಳನ್ನು ಹಂಚಿಕೊಳ್ಳಲು ಅನುಕೂಲಕರ ವಾತಾವರಣವನ್ನು ಸೃಷ್ಟಿಸುವ ಉದ್ದೇಶ ಹೊಂದಿದೆ.

ಓದುಗರು ಮತ್ತು ಸಾರ್ವಜನಿಕರಿಗೆ ಆನ್ ಲೈನ್ ಪ್ರಶ್ನಾವಳಿಯಲ್ಲಿ ಪಾಲ್ಗೊಳ್ಳಲು ಮತ್ತು ತಮ್ಮ ಭಾವನೆ ಹಂಚಿಕೊಳ್ಳಲು ಹಾಗೂ ಎಲ್ಲರಿಗೂ ಈ ಅಧ್ಯಯನ ಉಪಯುಕ್ತವಾಗುವಂತೆ ಮಾಡಲು ಉತ್ತೇಜಿಸಲಾಗುತ್ತಿದೆ. ಕೊರೋನಾ ಬಾಧಿತ ಕುಟುಂಬಗಳಿಗೆ ಇದರಲ್ಲಿ ಭಾಗಿಯಾಗಿ ತಮ್ಮ ಪ್ರತಿಕ್ರಿಯೆ ಕಳುಹಿಸುವಂತೆ ಉತ್ತೇಜಿಸಲಾಗುತ್ತದೆ. ಪ್ರಶ್ನಾವಳಿಗಳು ಈ ಲಿಂಕ್  https://nbtindia.gov.in/home__92__on-line-questionnaire-for-nbt-study.nbt. ನಲ್ಲಿ ಲಭ್ಯ.

ಎನ್.ಬಿ.ಟಿ.ಅಧ್ಯಯನ ಗುಂಪಿನಲ್ಲಿ ಡಾ. ಜಿತೇಂದ್ರ ನಾಗ್ಪಾಲ್, ಡಾ. ಹರ್ಷಿತಾ, ನಿವೃತ್ತ ಸ್ಕ್ವಾ.ಲೀ. ಮೀನಾ ಅರೋರಾ, ಲೆಫ್ಟಿನೆಂಟ್ ಕರ್ನಲ್ ತರುಣ್ ಉಪ್ಪಲ್, ಶ್ರೀಮತಿ ರೇಖಾ ಚೌಹಾಣ್, ಶ್ರೀಮತಿ ಸೋನಿಯೇ ಸಿದು ಮತ್ತು ಕುಮಾರಿ ಅಪ್ರಜಿತ ದೀಕ್ಷಿತ್ ಇದ್ದಾರೆ. ಅವರು ಹೊರಡಿಸಿರುವ ಹೇಳಿಕೆ "ಈ ಅಧ್ಯಯನ ಸಮೂಹವು ಕೋವಿಡ್-19 ಸಾಂಕ್ರಾಮಿಕದ ಜಾಗತಿಕ ಬಿಕ್ಕಟ್ಟಿನ ಸಂಕಷ್ಟದ ಕಾಲದಲ್ಲಿ ನಿಯೋಜಿಸಲಾದ ಸವಾಲಿನ ಕಾರ್ಯವನ್ನು ಆಳವಾಗಿ ಅರಿತುಕೊಂಡಿದೆ ಎಂದು ತಿಳಿಸಿದೆ. ಈ ಗುಂಪು ಎದುರಾಗಿರುವ ಸಂದರ್ಭ ಎದುರಿಸುವ ವಿಧಾನಗಳು ಮತ್ತು ಪ್ರಾಯೋಗಿಕ ಸುಳಿವುಗಳನ್ನು ಅಭಿವೃದ್ಧಿಪಡಿಸುತ್ತದೆ, ವಿವಿಧ ವಿಭಾಗಗಳಲ್ಲಿ ಸಂಶೋಧನೆ, ವಸ್ತುಶಃ ಸಂದರ್ಶನಗಳು ಮತ್ತು ಪ್ರಕರಣಗಳ ಅಧ್ಯಯನದ ಮೂಲಕ ಓದುವ ಸಾಮಗ್ರಿಗಳನ್ನು ಸಹಾಯದಿಂದ ಸುಲಭವಾಗಿ ಮಾಡುತ್ತದೆ. ಇದು ಲಾಕ್ ಡೌನ್ ಎದುರಿಸಲು ಜಾಗೃತಿ ಮತ್ತು ಒಟ್ಟಾರೆ ಸಬಲೀಕರಣಕ್ಕೆ ನೆರವಾಗುತ್ತದೆ ಮತ್ತು ಭಾವನಾತ್ಮಕ ಬಲ ಮತ್ತು ಧೈರ್ಯ ನೀಡುತ್ತದೆ.."

*****



(Release ID: 1610537) Visitor Counter : 197