ಗೃಹ ವ್ಯವಹಾರಗಳ ಸಚಿವಾಲಯ

ಕೋವಿಡ್ -19 ವಿರುದ್ಧದ ಹೋರಾಟದ 21 ದಿನಗಳ ಲಾಕ್ ಡೌನ್ ವೇಳೆ ಪಿ.ಎಂ. –ಜಿಕೆವೈ ಫಲಾನುಭವಿಗಳಿಗೆ ಸುಗಮವಾಗಿ ಹಣ ವಿತರಣೆಯ ಖಾತ್ರಿ ಪಡಿಸಿಕೊಳ್ಳುವಂತೆ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಎಂ.ಎಚ್.ಎ. ಪತ್ರ

Posted On: 02 APR 2020 5:02PM by PIB Bengaluru

ಕೋವಿಡ್ -19 ವಿರುದ್ಧದ ಹೋರಾಟದ 21 ದಿನಗಳ ಲಾಕ್ ಡೌನ್ ವೇಳೆ ಪಿ.ಎಂ. –ಜಿಕೆವೈ ಫಲಾನುಭವಿಗಳಿಗೆ ಸುಗಮವಾಗಿ ಹಣ ವಿತರಣೆಯ ಖಾತ್ರಿ ಪಡಿಸಿಕೊಳ್ಳುವಂತೆ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಎಂ.ಎಚ್.ಎ. ಪತ್ರ

 

ಹಣಕಾಸು ಸಚಿವಾಲಯದ ಹಣಕಾಸು ಸೇವೆಗಳ ಇಲಾಖೆ ಕೋವಿಡ್ -19 ವಿರುದ್ಧ ಹೋರಾಟದ 21 ದಿನಗಳ ಲಾಡ್ ಡೌನ್ ವೇಳೆ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆ (ಪಿ.ಎಂ. –ಜಿಕೆವೈ) ಫಲಾನುಭವಿಗಳಿಗೆ ಬ್ಯಾಂಕ್ ಗಳ ಮೂಲಕ ಹಣ ವಿತರಿಸಲು ಸವಿವರವಾದ ಮಾರ್ಗಸೂಚಿಯನ್ನು ನೀಡಿದೆ.

ಈ ಮಾರ್ಗಸೂಚಿಗಳ ಅನುಸಾರವಾಗಿಕೇಂದ್ರ ಗೃಹ ಸಚಿವಾಲಯ (ಎಂಎಚ್‌.ಎ) ಕಾರ್ಯದರ್ಶಿ ಶ್ರೀ ಅಜಯ್ ಕುಮಾರ್ ಭಲ್ಲಾ ಅವರು ಎಲ್ಲಾ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದು, ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆ (ಪಿ.ಎಂ. –ಜಿಕೆವೈ) ಫಲಾನುಭವಿಗಳಿಗೆ ಸುಗಮವಾಗಿ  ಹಣ ವಿತರಣೆಯನ್ನು ಖಾತ್ರಿ ಪಡಿಸಿಕೊಳ್ಳಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಯಮಗಳನ್ವಯ ಎಲ್ಲ ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ರಾಜ್ಯ ಸರ್ಕಾರ/ಕೇಂದ್ರಾಡಳಿತ ಪ್ರದೇಶಗಳ ಸಂಬಂಧಿತ ಇಲಾಖೆಗಳು, ಜಿಲ್ಲಾ ಪ್ರಾಧಿಕಾರಗಳು ಮತ್ತು ಕ್ಷೇತ್ರೀಯ ಸಂಸ್ಥೆಗಳಿಗೆ ಮೇಲೆ ತಿಳಿಸಲಾಗಿರುವ ಮಾರ್ಗಸೂಚಿಗಳನ್ನು ನಿಶ್ಚಿತವಾಗಿ ಅನುಸರಿಸುವಂತೆ ಸಂವಹನ ತಿಳಿಸಿದೆ.

ರಾಜ್ಯಗಳ ಸಂವಹನವನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

 

*****



(Release ID: 1610535) Visitor Counter : 100