ರಾಷ್ಟ್ರಪತಿಗಳ ಕಾರ್ಯಾಲಯ

ಕೋವಿಡ್ – 19 ಕುರಿತಾದ ಪ್ರತಿಕ್ರಿಯೆ ಬಗ್ಗೆ ರಾಜ್ಯಪಾಲರು, ಲೆಫ್ಟಿನೆಂಟ್ ಗವರ್ನರ್ ಗಳು ಮತ್ತು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಆಡಳಿತ ವರ್ಗದೊಂದಿಗೆ ರಾಷ್ಟ್ರಪತಿಗಳ ಚರ್ಚೆ 

Posted On: 02 APR 2020 2:38PM by PIB Bengaluru

ಕೋವಿಡ್ – 19 ಕುರಿತಾದ ಪ್ರತಿಕ್ರಿಯೆ ಬಗ್ಗೆ ರಾಜ್ಯಪಾಲರು, ಲೆಫ್ಟಿನೆಂಟ್ ಗವರ್ನರ್ ಗಳು ಮತ್ತು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಆಡಳಿತ ವರ್ಗದೊಂದಿಗೆ ರಾಷ್ಟ್ರಪತಿಗಳ ಚರ್ಚೆ 

 

ಕೋವಿಡ್ – 19 ಸ್ಫೋಟದ ಹಿನ್ನೆಲೆಯಲ್ಲಿ ಹೆಚ್ಚುತ್ತಿರುವ ಬಿಕ್ಕಟ್ಟನ್ನು ನಿಯಂತ್ರಿಸಲು ರಾಜ್ಯಪಾಲರು, ಲೆಫ್ಟಿನೆಂಟ್ ಗವರ್ನರ್ ಗಳು ಮತ್ತು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಆಡಳಿತಾಧಿಕಾರಿಗಳೊಂದಿಗೆ, ಅವರು ಮಾಡುತ್ತಿರುವ ಪ್ರಯತ್ನಗಳ ಕುರಿತು ಚರ್ಚಿಸಲು ಭಾರತದ ರಾಷ್ಟ್ರಪತಿ ಶ್ರೀ ರಾಮ್ ನಾಥ್ ಕೋವಿದ್ ಅವರು ಉಪರಾಷ್ಟ್ರಪತಿ ಶ್ರೀ ಎಂ ವೆಂಕಯ್ಯ ನಾಯ್ಡು ಅವರ ಜೊತೆಗೂಡಿ ನಾಳೆ (3 ಏಪ್ರಿಲ್ 2020) ರಂದು ವಿಡಿಯೋ ಕಾನ್ಫೆರೆನ್ಸ್ ಮೂಲಕ ಸಭೆ ನಡೆಸಲಿದ್ದಾರೆ.

ರಾಜ್ಯಪಾಲರು, ಲೆಫ್ಟಿನೆಂಟ್ ಗವರ್ನರ್ ಗಳು ಮತ್ತು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಆಡಳಿತಾಧಿಕಾರಿಗಳೊಂದಿಗೆ, ನಡೆಸುವ ಇಂಥ ಎರಡನೇಯ ವಿಡಿಯೋ ಕಾನ್ಫೆರೆನ್ಸ್ ಇದಾಗಿದೆ. 27 ಮಾರ್ಚ್ 2020 ರಂದು ನಡೆದ ಮೊದಲ ವಿಡಿಯೋ ಕಾನ್ಫೆರೆನ್ಸ್ ನಲ್ಲಿ 14 ರಾಜ್ಯಪಾಲರು ಮತ್ತು ದೆಹಲಿಯ ಲೆಫ್ಟಿನೆಂಟ್ ಗವರ್ನರ್ ತಮ್ಮ ಪ್ರಾಂತ್ಯದ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಉಳಿದ ಗವರ್ನರ್ ಗಳು/ಎಲ್ ಜಿ ಗಳು ಆಡಳಿತಾಧಿಕಾರಿಗಳು ತಮ್ಮ ಅನುಭವಗಳನ್ನು ನಾಳೆ ಹಂಚಿಕೊಳ್ಳದ್ದಾರೆ.

ರಾಜ್ಯಗಳಲ್ಲಿ ಕೋವಿಡ್ – 19 ಸ್ಥಿತಿ, ದುರ್ಬಲ ವರ್ಗಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ರೆಡ್ ಕ್ರಾಸ್ ಪಾತ್ರ, ನೋವಲ್ ಕೊರೊನಾ ವೈರಾಣು ಹರಡುವಿಕೆ ತಡೆಗಟ್ಟಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರಯತ್ನಗಳಿಗೆ ಸಹಕರಿಸಲು ನಾಗರಿಕ ಸಮಾಜ/ಸ್ವಯಂ ಸೇವಾ ಸಂಸ್ಥೆಗಳು/ಖಾಸಗಿ ವಲಯದ ಪಾತ್ರದ ಕುರಿತು ಚರ್ಚಿಸುವುದು ನಾಳಿನ ಸಭೆಯ ಕಾರ್ಯಸೂಚಿಯಾಗಿದೆ.           

***



(Release ID: 1610392) Visitor Counter : 156