ರೈಲ್ವೇ ಸಚಿವಾಲಯ

ಕೋವಿಡ್-19 ಲಾಕ್ ಡೌನ್ ಸಮಯದಲ್ಲಿ ಅಗತ್ಯ ವಸ್ತುಗಳು ಮತ್ತು ಇತರ ಸರಕುಗಳ ಸಾಗಣೆಗೆ ಪಾರ್ಸೆಲ್ ರೈಲುಗಳಿಂದ ಹೆಚ್ಚಿನ ಅನುಕೂಲ

Posted On: 02 APR 2020 12:56PM by PIB Bengaluru

 ಕೋವಿಡ್-19 ಲಾಕ್ ಡೌನ್ ಸಮಯದಲ್ಲಿ ಅಗತ್ಯ ವಸ್ತುಗಳು ಮತ್ತು ಇತರ ಸರಕುಗಳ ಸಾಗಣೆಗೆ ಪಾರ್ಸೆಲ್ ರೈಲುಗಳಿಂದ ಹೆಚ್ಚಿನ ಅನುಕೂಲ

ವೇಳಾಪಟ್ಟಿಯನ್ನು ನಿಗದಿಪಡಿಸಿರುವ ಪಾರ್ಸೆಲ್ ರೈಲುಗಳಿಗೆ 10 ಮಾರ್ಗಗಳನ್ನು ಯೋಜಿಸಲಾಗಿದೆ ಮತ್ತು ತಾತ್ಕಾಲಿಕ 18 ಹೊಸ ಮಾರ್ಗಗಳನ್ನು ವಿಶೇಷ ಪಾರ್ಸೆಲ್ ರೈಲುಗಳ ನಿರಂತರ ಸರಬರಾಜಿಗಾಗಿ  ಯೋಜಿಸಲಾಗಿದೆ

ಭಾರತೀಯ ರೈಲ್ವೆ 30 ವಿಶೇಷ ಪಾರ್ಸೆಲ್ ರೈಲುಗಳನ್ನು ದೇಶಾದ್ಯಂತ ವಿವಿಧ ಸ್ಥಳಗಳಿಗೆ ಕಳುಹಿಸಿದೆ

ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹಾಲು ಮತ್ತು ಆಹಾರ ಉತ್ಪನ್ನಗಳ ಸರಬರಾಜಿಗಾಗಿ ಭಾರತೀಯ ರೈಲ್ವೆಯು ಪಾರ್ಸೆಲ್ ರೈಲುಗಳನ್ನು ಓಡಿಸುತ್ತಿದೆ

ರಾಜ್ಯ ಸರ್ಕಾರಗಳ ಆಂತರಿಕ ಮಾರ್ಗಗಳಿಗೆ ಅಗತ್ಯವಾದ ಪಾರ್ಸೆಲ್ ರೈಲುಗಳ ಬೇಡಿಕೆಗಳನ್ನು ರೈಲ್ವೆ ಈಡೇರಿಸಲು ಸಜ್ಜಾಗಿದೆ

ನಾಗರಿಕರಿಗೆ ಅಗತ್ಯ ವಸ್ತುಗಳ ಕೊರತೆಯುಂಟಾಗಬಾರದೆಂದು ರೈಲ್ವೆ ಸಿಬ್ಬಂದಿಯು ಕೋವಿಡ್ 19 ಲಾಕ್ ಡೌನ್ ಸಮಯದಲ್ಲಿ ಎಲ್ಲಾ ಸವಾಲುಗಳನ್ನು ಎದುರಿಸಿ ಕಾರ್ಯಾಚರಣೆಗಳನ್ನು ನಿರ್ವಹಿಸುತ್ತಿದ್ದಾರೆ

 

ಕೋವಿಡ್-19ನಿಂದಾದ ಲಾಕ್ಡೌನ್ ಸಮಯದಲ್ಲಿ, ದೇಶದ ನಾಗರಿಕರ ಅಗತ್ಯತೆಗಳನ್ನು ಪೂರೈಸಲು ಅಗತ್ಯವಾದ ಸರಕುಗಳು ಮತ್ತು ಇತರ ಸರಕುಗಳನ್ನು ರಾಷ್ಟ್ರವ್ಯಾಪಿ ಸಾಗಿಸಲು ಭಾರತೀಯ ರೈಲ್ವೆ ತನ್ನ ಅಡೆತಡೆಯಿಲ್ಲದ ಪಾರ್ಸೆಲ್ ರೈಲುಗಳನ್ನು ಒದಗಿಸುತ್ತಿದೆ.  ಭಾರತೀಯ ರೈಲ್ವೆಯು ಈಗಾಗಲೇ ಸರಕು ಸಾಗಣೆ ರೈಲುಗಳ ಮೂಲಕ ದೇಶದ ವಿವಿಧ ಭಾಗಗಳಿಗೆ ಅಗತ್ಯ ವಸ್ತುಗಳನ್ನು ಸಾಗಿಸುತ್ತಿದೆ. ರೈಲ್ವೆಯ ಸರಕು ಸಾಗಣೆ ಕಾರ್ಯಾಚರಣೆಗಳು ಆಹಾರ ಧಾನ್ಯಗಳು, ಖಾದ್ಯ ತೈಲ, ಉಪ್ಪು, ಸಕ್ಕರೆ, ಕಲ್ಲಿದ್ದಲು, ಸಿಮೆಂಟ್, ಹಾಲು, ತರಕಾರಿಗಳು ಮತ್ತು ಹಣ್ಣುಗಳು ಮುಂತಾದ ಅಗತ್ಯ ವಸ್ತುಗಳ ಬೃಹತ್ ಸಾರಿಗೆಯ ಅಗತ್ಯಗಳನ್ನು ಪೂರೈಸುತ್ತಿದ್ದರೆ, ಪಾರ್ಸೆಲ್ ರೈಲುಗಳು ತುಲನಾತ್ಮಕವಾಗಿ ಸಣ್ಣ ಪ್ರಮಾಣದಲ್ಲಿ ತಲುಪಿಸಬೇಕಾದ ವಿವಿಧ ವಸ್ತುಗಳನ್ನು ಸಾಗಿಸುತ್ತಿವೆ.

ಇಲ್ಲಿಯವರೆಗೆ, ಭಾರತೀಯ ರೈಲ್ವೆ 30 ವಿಶೇಷ ಪಾರ್ಸೆಲ್ ರೈಲುಗಳನ್ನು ದೇಶಾದ್ಯಂತ ವಿವಿಧ ಸ್ಥಳಗಳಿಗೆ ಕಳುಹಿಸಿದೆ. ಅದರ ವಿವರಗಳು:

ಕ್ರಮ ಸಂಖ್ಯೆ

ಹೊರಡುವ ಸ್ಥಳ

ತಲುಪುವ ಸ್ಥಳ

ಸರಕು

1

ಪಾಲನ್ಪುರ್ (ಗುಜರಾತ್)

 ಪಾಲ್ವಾಲ್ (ದೆಹಲಿ ಪ್ರದೇಶ)

ಹಾಲು

2

ಜಲಗಾವ್

 ಹೊಸ ಗುವಾಹಟಿ

ವಿವಿಧ ಸರಕುಗಳು  

3

 ಹೊಸ ಟಿನ್ಸುಕಿಯಾ

ಗೋಧಾನಿ (ನಾಗ್ಪುರ)

ವಿವಿಧ ಸರಕುಗಳು  

4

ಕರಂಬೆಲಿ (ಗುಜರಾತ್)

ಹೊಸ ಗುವಾಹಟಿ

ಸಾಮಾನ್ಯ ಸರಕುಗಳು  

5

ದಹನು ರಸ್ತೆ (ಪಾಲ್ಘರ್)

ಬರಿಬ್ರಹ್ಮನ್ (ಜಮ್ಮು)

ಒಣ ಹುಲ್ಲು

6

 ಕಂಕರಿಯಾ (ಅಹಮದಾಬಾದ್)

ಭೀಮ್ ಸೇನ್ (ಕಾನ್ಪುರ)

ಹಾಲು ಉತ್ಪನ್ನಗಳು  

7

 ಪಾಲನ್ಪುರ (ಗುಜರಾತ್)

ಪಾಲ್ವಾಲ್ (ದೆಹಲಿ ಪ್ರದೇಶ)

ಹಾಲು

8

ಹೊಸ ಗುವಾಹಟಿ

ಕರಂಬೆಲಿ (ಗುಜರಾತ್)

ವಿವಿಧ ಸರಕುಗಳು  

9

ಪಾಲನ್ಪುರ (ಗುಜರಾತ್)

ಪಾಲ್ವಾಲ್ (ದೆಹಲಿ ಪ್ರದೇಶ)

ಹಾಲು

10

ರೆಣಿಗುಂಟ

 ನಿಜಾಮುದ್ದೀನ್

ಹಾಲು

11

ಪಾಲನ್ಪುರ (ಗುಜರಾತ್)

ಪಾಲ್ವಾಲ್ (ದೆಹಲಿ ಪ್ರದೇಶ)

 ಹಾಲು

12

ಪಾಲನ್ಪುರ (ಗುಜರಾತ್)

ಪಾಲ್ವಾಲ್ (ದೆಹಲಿ ಪ್ರದೇಶ)

 ಹಾಲು

13

ಸೇಲಂ

 ಬಟಿಂಡಾ

ಕೃಷಿ ಬೀಜಗಳು  

14

 ಮೊಗಾ

ಚಾಂಗ್ಸರಿ (ಗುವಾಹಟಿ)

ಹಾಲು ಉತ್ಪನ್ನಗಳು  

15

ಕಂಕರಿಯಾ (ಅಹಮದಾಬಾದ್)

 ಸಂಕ್ರೈಲ್ (ಹೌರಾ)

ಹಾಲಿನ ಪುಡಿ  

16

 ದಹನು ರಸ್ತೆ (ಪಾಲ್ಘರ್)

ಬರಿಬ್ರಹ್ಮನ್ (ಜಮ್ಮು)

 ಒಣ ಹುಲ್ಲು

17

 ಭೋಪಾಲ್

ಗ್ವಾಲಿಯರ್

ಹಣ್ಣುಗಳು

18

 ಗೋಧಾನಿ (ನಾಗ್ ಪುರ)

ಹೊಸ ಟಿನ್ಸುಕಿಯಾ

 ವಿವಿಧ ಸರಕುಗಳು

19

 ನಂಗಲ್ ಅಣೆಕಟ್ಟು

ಚಾಂಗ್ಸರಿ (ಗುವಾಹಟಿ)

ಎಫ್ಎಂಸಿಜಿ ಉತ್ಪನ್ನಗಳು  

20

 ಚೆನ್ನೈ

ನವ ದೆಹಲಿ

 ವಿವಿಧ ಸರಕುಗಳು

21

ಯಶವಂತಪುರ

ಹೌರಾ

ವಿವಿಧ ಸರಕುಗಳು

22

 ಬಾಂದ್ರಾ ಟರ್ಮಿನಸ್

ಲೂಧಿಯಾನ

ವೈದ್ಯಕೀಯ ಸರಕುಗಳು / ಮುಖಗವಸುಗಳು

23

ರೇವಾ

ಅನುಪುರ್

ವಿವಿಧ ಸರಕುಗಳು

24

ಭೋಪಾಲ್

ಖಾಂಡ್ವಾ

ವಿವಿಧ ಸರಕುಗಳು

25

ಇಟಾರ್ಸಿ

ಬಿನಾ

ವಿವಿಧ ಸರಕುಗಳು

26

ಚೆನ್ನೈ / ಎಗ್ಮೋರ್

 ನಾಗರ್‌ಕೋಯಿಲ್

ಔಷಧಿ ಮತ್ತು ಪುಸ್ತಕಗಳು

27

ಸೇಲಂ

ಹಿಸಾರ್

ಕೃಷಿ ಬೀಜಗಳು

28

ನವ ದೆಹಲಿ

ಹೌರಾ

ವಿವಿಧ ಸರಕುಗಳು

29

ಕರಂಬೆಲಿ (ಗುಜರಾತ್)

ಚಾಂಗ್ಸರಿ (ಗುವಾಹಟಿ)

ವಿವಿಧ ಸರಕುಗಳು

30

 ಪಾಲನ್‌ಪುರ್ (ಗುಜರಾತ್)

 ಪಲ್ವಾರ್ (ದೆಹಲಿ ಪ್ರದೇಶ)

ಹಾಲು

 

ನಾಗರಿಕರಿಗೆ ಅಗತ್ಯ ವಸ್ತುಗಳ ಕೊರತೆಯುಂಟಾಗಬಾರದೆಂದು ರೈಲ್ವೆ ಸಿಬ್ಬಂದಿಯು ಕೋವಿಡ್ 19 ಲಾಕ್ ಡೌನ್ ಸಮಯದಲ್ಲಿ ಎಲ್ಲಾ ಸವಾಲುಗಳನ್ನು ಎದುರಿಸಿ ಕಾರ್ಯಾಚರಣೆಗಳನ್ನು ನಿರ್ವಹಿಸುತ್ತಿದ್ದಾರೆ

ತನ್ನ ಸಿಬ್ಬಂದಿವರ್ಗದ ಅತ್ಯುತ್ತಮ ಕಾರ್ಯಕ್ಷಮತೆಯಿಂದ  ಉತ್ತೇಜನಗೊಂಡು  ವಲಯ ರೈಲ್ವೆಗಳು ಈಗ ಮಾರ್ಚ್ 31, 2020 ರಿಂದ  ವೇಳಾಪಟ್ಟಿಯನ್ನು ನಿಗದಿಪಡಿಸಿರುವ ಪಾರ್ಸೆಲ್ ರೈಲುಗಳನ್ನು ಓಡಿಸಲು ಪ್ರಾರಂಭಿಸಿದೆ. ವೇಳಾಪಟ್ಟಿಯನ್ನು ನಿಗದಿಪಡಿಸಿರುವ   ರೈಲು ಮಾರ್ಗಗಳ ವಿವರ ಕೆಳಗಿನಂತಿವೆ :

ಕ್ರಮ ಸಂಖ್ಯೆ

ಹೊರಡುವ ಸ್ಥಳ

ತಲುಪುವ ಸ್ಥಳ

ಆವರ್ತನ / ಮಾರ್ಗ

1

 ಬಾಂದ್ರಾ ಟರ್ಮಿನಸ್

ಲೂಧಿಯಾನ್

ವಾರಕ್ಕೆ ಮೂರು ಬಾರಿ (ಅಹಮದಾಬಾದ್, ಜೈಪುರ, ದೆಹಲಿ ಮೂಲಕ)

2

ದೆಹಲಿ

ಹೌರಾ

 ವಾರಕ್ಕೆ ಎರಡು ಬಾರಿ

3

ಯಶವಂತಪುರ

ಹೌರಾ

 ವಾರಕ್ಕೆ ಎರಡು ಬಾರಿ (ಚೆನ್ನೈ ಮೂಲಕ)

4

ಸಿಕಂದರಾಬಾದ್

 ಹೌರಾ

ವಾರಕ್ಕೊಮ್ಮೆ

5

 ಸಂಕ್ರೈಲ್ (ಹೌರಾ)

ಗುವಾಹಟಿ

ವಾರಕ್ಕೊಮ್ಮೆ

6

ಚೆನ್ನೈ

ದೆಹಲಿ

ವಾರಕ್ಕೊಮ್ಮೆ

7

ಕಂಕರಿಯಾ (ಅಹಮದಾಬಾದ್)

 ಸಂಕ್ರೈಲ್ (ಹೌರಾ)

 ವಾರಕ್ಕೊಮ್ಮೆ

8

ಕಲ್ಯಾಣ್

ಸಂಕ್ರೈಲ್ (ಹೌರಾ)

ವಾರಕ್ಕೊಮ್ಮೆ (ನಾಸಿಕ್, ನಾಗ್ ಪುರ್, ಬಿಲಾಸ್ ಪುರ್ ಮೂಲಕ)

9

ಕಲ್ಯಾಣ್

 ಚಾಂಗ್ಸರಿ

ವಾರಕ್ಕೊಮ್ಮೆ (ನಾಸಿಕ್, ನಾಗ್ ಪುರ್, ಬಿಲಾಸ್ ಪುರ್ ಮೂಲಕ)

10

ಕರಂಬೆಲಿ

ಚಾಂಗ್ಸರಿ 

ವಾರಕ್ಕೊಮ್ಮೆ

 

ಕೋವಿಡ್  - 19 ವಿರುದ್ಧ ಹೋರಾಡಲು ಲಾಕ್ಡೌನ್ ಸಮಯದಲ್ಲಿ ದೇಶಾದ್ಯಂತ ಪ್ರಮುಖ ಸರಕು ಮತ್ತು ಇತರ ಸರಕುಗಳ ತ್ವರಿತ ವಿತರಣೆ ಮತ್ತು ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಭಾರತೀಯ ರೈಲ್ವೆಯು ಇತರ ಪ್ರದೇಶಗಳ ಮಾರ್ಗಗಳನ್ನೂ ಗುರುತಿಸುತ್ತಿದೆ. ವಿಶೇಷ ಪಾರ್ಸೆಲ್ ರೈಲುಗಳನ್ನು ಸಹ ಬೇಡಿಕೆಗೆ ಅನುಗುಣವಾಗಿ ಯೋಜಿಸಬಹುದು. ಪ್ರಮುಖ ಮಾರ್ಗಗಳನ್ನು ಸಂಪರ್ಕಿಸಲು ವಿಶೇಷ ಪಾರ್ಸೆಲ್ ರೈಲುಗಳನ್ನು ವಲಯ ರೈಲ್ವೆಗಳು ಕೆಳಗಿನಂತೆ ಗುರುತಿಸಿವೆ:

1. ನವದೆಹಲಿ – ಗುವಾಹಟಿ

2. ನವದೆಹಲಿ- ಮುಂಬೈ ಸೆಂಟ್ರಲ್

3. ನವದೆಹಲಿ-ಕಲ್ಯಾಣ್

4. ಚಂಡೀಗಢ್ - ಜೈಪುರ

5. ಮೊಗಾ - ಚಾಂಗ್ಸರಿ

6. ಕಲ್ಯಾಣ್ - ನವದೆಹಲಿ

7. ನಾಸಿಕ್ - ನವದೆಹಲಿ

8. ಕಲ್ಯಾಣ್ – ಸಂತ್ರಘಾಚಿ

9. ಕಲ್ಯಾಣ್ - ಚಾಂಗ್ಸರಿ

10. ಕೊಯಮತ್ತೂರು - ಪಟೇಲ್ ನಗರ (ದೆಹಲಿ ಪ್ರದೇಶ)

11. ಪಟೇಲ್ ನಗರ (ದೆಹಲಿ ಪ್ರದೇಶ) – ಕೊಯಂಬತ್ತೂರು

12. ಕೊಯಂಬತ್ತೂರು - ರಾಜ್‌ ಕೋಟ್

13. ರಾಜ್ಕೋಟ್-  ಕೊಯಂಬತ್ತೂರು

14. ಕೊಯಂಬತ್ತೂರು - ಜೈಪುರ

15. ಜೈಪುರ - ಕೊಯಂಬತ್ತೂರು

16. ಸೇಲಂ - ಬಟಿಂಡಾ

17. ಕಂಕರಿ - ಲೂಧಿಯಾನ

18. ಸಂಕ್ರೈಲ್ - ಬೆಂಗಳೂರು

19. ಬೇಡಿಕೆಯ ಪ್ರಕಾರ ಬೇರೆ ಯಾವುದೇ ಮಾರ್ಗ.

ಅವಧಿಯಲ್ಲಿ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಭಾರತೀಯ ರೈಲ್ವೆಯು ಇತರ ಪಾರ್ಸೆಲ್ ರೈಲುಗಳನ್ನು ಸಹ ಓಡಿಸುತ್ತಿದೆ - ಅವುಗಳೆಂದರೆ:

ಎ) ಪಾಲನ್ ಪುರ್ (ಗುಜರಾತ್) ನಿಂದ ಪಾಲ್ವಾಲ್ (ದೆಹಲಿ ಹತ್ತಿರ), ಮತ್ತು ರೆಣಿಗುಂಟಾ (ಆಂಧ್ರಪ್ರದೇಶ) ದಿಂದ ದೆಹಲಿಗೆಹಾಲು ವಿಶೇಷ

ಬಿ) ಕಂಕರಿಯಾ (ಗುಜರಾತ್) ನಿಂದ ಕಾನ್ ಪುರ (ಉತ್ತರಪ್ರದೇಶ) ಮತ್ತು ಸಂಕ್ರೈಲ್ (ಕೋಲ್ಕತಾ ಬಳಿ) ಗೆ ಹಾಲು ಉತ್ಪನ್ನಗಳು

ಸಿ) ಮೊಗಾ (ಪಂಜಾಬ್) ನಿಂದ ಚಾಂಗ್ಸಾರಿ (ಅಸ್ಸಾಂ) ವರೆಗೆ ಆಹಾರ ಉತ್ಪನ್ನಗಳು

ವಲಯದ ರೈಲ್ವೆಗಳು ರಾಜ್ಯದೊಳಗಿನ ಅಲ್ಪ ಅಂತರದ ಸಾರಿಗೆ ಅಗತ್ಯವನ್ನು ಗುರುತಿಸಲು ರಾಜ್ಯ ಸರ್ಕಾರಗಳೊಂದಿಗೆ ಕೈಜೋಡಿಸುತ್ತಿವೆ. ಮಧ್ಯಪ್ರದೇಶ ರಾಜ್ಯ ಸರ್ಕಾರದ ಕೋರಿಕೆಯ ಮೇರೆಗೆ ಪಶ್ಚಿಮ ಮಧ್ಯ ರೈಲ್ವೆಯು ಮಧ್ಯಪ್ರದೇಶದೊಳಗೆ 5 ಪಾರ್ಸೆಲ್ ವಿಶೇಷಗಳನ್ನು ಕೆಳಗಿನ ಮಾರ್ಗಗಳಲ್ಲಿ ನಡೆಸುವ ಪ್ರಯತ್ನವನ್ನು ಕೈಗೊಂಡಿದೆ:

  • ಭೋಪಾಲ್- ಗ್ವಾಲಿಯರ್
  • ಇಟಾರ್ಸಿ- ಬಿನಾ
  • ಭೋಪಾಲ್- ಖಾಂಡ್ವಾ
  • ರೇವಾ- ಅನೂಪುರ
  • ರೇವಾ- ಸಿಂಗ್ರೌಲಿ

ಭಾರತೀಯ ರೈಲ್ವೆಯ ವಿಶೇಷ ಪಾರ್ಸೆಲ್ ಸೇವೆಗಳು ವೇಳಾಪಟ್ಟಿಯ ಪ್ರಕಾರ ಚಾಲನೆಯಲ್ಲಿವೆ ಎನ್ನುವುದನ್ನು ಗಮನಿಸಬಹುದು.

ವೇಳಾಪಟ್ಟಿಯ ರೈಲುಗಳು ಪೂರ್ವ ನಿರ್ಧಾರಿತ ನಿಗದಿತ ನಿಲುಗಡೆಗಳನ್ನು ಹೊಂದಿವೆ.  ಯಾವುದೇ ಸರಕುಗಳನ್ನು ಯಾವುದೇ ನಿಲ್ದಾಣಗಳಿಂದ ಯಾವುದೇ ಪ್ರಮಾಣದಲ್ಲಿ ಕಾಯ್ದಿರಿಸಬಹುದು.  ಸಮಯಕ್ಕೆ ಸರಿಯಾಗಿ ದಾಸ್ತಾನು ವಿತರಣೆಗಾಗಿ ಸರಕುಗಳನ್ನು ಸಮರ್ಥವಾಗಿ ಸಾಗಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತದೆ.

ಸ್ಥಳೀಯ ಕೈಗಾರಿಕೆಗಳು,  -ಕಾಮರ್ಸ್ ಕಂಪನಿಗಳು, ಯಾವುದೇ ಆಸಕ್ತ ಸಂಘಗಳು, ಸಂಸ್ಥೆಗಳು, ವ್ಯಕ್ತಿಗಳು ಮತ್ತು ನಿರೀಕ್ಷಿತ ಲೋಡರ್ಗಳು ಸಹ ವಲಯ ಮಟ್ಟದಲ್ಲಿ ರೈಲ್ವೆ ಅಧಿಕಾರಿಗಳನ್ನು ಸಂಪರ್ಕಿಸಬಹುದು, ವಿವಿಧ ನಿಲ್ದಾಣಗಳಲ್ಲಿನ ರೈಲ್ವೆ ಅಧಿಕಾರಿಗಳ ಸಂಪರ್ಕ ವಿವರಗಳನ್ನು ಸಹ ವಿತರಿಸಲಾಗಿದೆ ಮತ್ತು ಲಭ್ಯವಾಗುವಂತೆ ಮಾಡಲಾಗಿದೆ ಇದರಿಂದಾಗಿ ಪಾರ್ಸೆಲ್ ಲೋಡ್ ಮಾಡಲು ಯಾರು ಬೇಕಾದರೂ ಸಂಪರ್ಕಿಸಬಹುದು. ವಲಯ ರೈಲ್ವೆಯು ಜಾಹೀರಾತುಗಳು ಸೇರಿದಂತೆ ವಿವಿಧ ಸಂವಹನ ವಿಧಾನಗಳ ಮೂಲಕ ನಿರೀಕ್ಷಿತ ಗ್ರಾಹಕರನ್ನು ತಲುಪುತ್ತಿದೆ. 

 



(Release ID: 1610371) Visitor Counter : 158