ರೈಲ್ವೇ ಸಚಿವಾಲಯ

ಕೋವಿಡ್‌–19 ದೇಶದಲ್ಲಿ ಲಾಕ್‌ಡೌನ್‌ ಘೋಷಿಸಿರುವುದರಿಂದ ಸಂಕಷ್ಟದಲ್ಲಿರುವ ಜನರಿಗೆ ಭಾರತೀಯ ರೈಲ್ವೆ ಆಹಾರ ಪೂರೈಕೆ

Posted On: 01 APR 2020 6:00PM by PIB Bengaluru

ಕೋವಿಡ್‌–19 ದೇಶದಲ್ಲಿ ಲಾಕ್ಡೌನ್ಘೋಷಿಸಿರುವುದರಿಂದ ಸಂಕಷ್ಟದಲ್ಲಿರುವ ಜನರಿಗೆ ಭಾರತೀಯ ರೈಲ್ವೆ ಆಹಾರ ಪೂರೈಕೆ

ಮಾರ್ಚ್‌ 28 ರಿಂದ 1.4 ಲಕ್ಷ ಮಂದಿಗೆ ಊಟ ವಿತರಣೆ

ಐಆರ್ಸಿಟಿಸಿ ಕಿಚನ್ನಿಂದ 1 ಲಕ್ಷ ಮಂದಿಗೆ ಆಹಾರ

ಆರ್ಪಿಎಫ್ಸಹ ಕಾರ್ಯದಲ್ಲಿ ಸಹಭಾಗಿತ್ವ ಹೊಂದಿದ್ದು ಆಹಾರ ವಿತರಣೆಯಲ್ಲಿ ಪ್ರಮುಖ ಪಾತ್ರ ವಹಿಸುವುದರ ಜತೆಗೆ ಆರ್ಪಿಎಫ್ತನ್ನ ಸಂಪನ್ಮೂಲಗಳಿಂದ 38600 ಮಂದಿಗೆ ಆಹಾರವನ್ನು ಒದಗಿಸಿದೆ

 

ಭಾರತೀಯ ರೈಲ್ವೆ ತಯಾರಿಸಿದ ಆಹಾರವನ್ನು ಪೇಪರ್ಪ್ಲೇಟ್ಗಳ ಜತೆಗೆ ಮಧ್ಯಾಹ್ನದ ವೇಳೆ ನಿರಂತರವಾಗಿ ಒದಗಿಸಿತು. ಐಆರ್ಸಿಟಿಸಿ ಕಿಚನ್ಗಳಲ್ಲಿ ತಯಾರಿಸಿ, ಸಿದ್ಧಪಡಿಸಿದ ಆಹಾರ ಪೊಟ್ಟಣಗಳ ಮೂಲಕ ಸಂಕಷ್ಟದಲ್ಲಿರುವ ಜನರಿಗೆ ರಾತ್ರಿ ವೇಳೆ ವಿತರಿಸಲಾಯಿತು. ಆರ್ಪಿಎಫ್‌, ಜಿಆರ್ಪಿ, ವಲಯದ ವಾಣಿಜ್ಯ ವಿಭಾಗ, ರಾಜ್ಯ ಸರ್ಕಾರಗಳು ಮತ್ತು ಸರ್ಕಾರೇತರ ಸಂಸ್ಥೆಗಳು ಕಾರ್ಯದಲ್ಲಿ ನೆರವು ನೀಡಿದವು.

ಐಆರ್ಸಿಟಿಸಿ ಜತೆಗೆ ಆರ್ಪಿಎಫ್ಮತ್ತು ರೈಲ್ವೆ ಇಲಾಖೆಯ ವಿವಿಧ ವಲಯಗಳ ವಿಭಾಗಗಳು ಸಹ ಆಹಾರವನ್ನು ಪೇಪರ್ಪ್ಲೇಟ್ಗಳೊಂದಿಗೆ ವಿತರಿಸುತ್ತಿವೆ. ಆಹಾರವನ್ನು ಅಗತ್ಯವಿರುವ ಜನರಿಗೆ ಪೂರೈಸುವಾಗ ಸಾಮಾಜಿಕ ಅಂತರ ಮತ್ತು ಸ್ವಚ್ಛತೆಯನ್ನು ಕಾಪಾಡಿಕೊಳ್ಳಲಾಗುತ್ತಿದೆ. ರೈಲ್ವೆ ವಲಯಗಳ ಮಹಾ ಪ್ರಬಂಧಕರು ಮತ್ತು ಉಪ ರೈಲ್ವೆ ಮಹಾಪ್ರಬಂಧಕರು ಸಹ ಐಆರ್ಸಿಟಿಸಿ ಅಧಿಕಾರಿಗಳ ಜತೆ ಸಂಪರ್ಕದಲ್ಲಿದ್ದು, ರೈಲ್ವೆ ನಿಲ್ದಾಣಗಳ ಸುತ್ತಮುತ್ತ ಇರುವ ಜನರಿಗೆ ಜಿಲ್ಲಾಡಳಿತ ಮತ್ತು ಸರ್ಕಾರೇತರ ಸಂಸ್ಥೆಗಳ ನೆರವಿನೊಂದಿಗೆ ಪೂರೈಸಲು ಕ್ರಮಕೈಗೊಳ್ಳಲಾಗುತ್ತಿದ್ದಾರೆ.

ಉತ್ತರ, ಪಶ್ಚಿಮ, ಪೂರ್ವ, ದಕ್ಷಿಣ ಮತ್ತು ದಕ್ಷಿಣ ಕೇಂದ್ರೀಯ ವಲಯಗಳಾದ ನವದೆಹಲಿ, ಬೆಂಗಳೂರು, ಹುಬ್ಬಳ್ಳಿ, ಮುಂಬೈ ಸೆಂಟ್ರಲ್, ಅಹಮದಾಬಾದ್‌, ಭುಸವಾಲ್‌, ಹೌರಾ, ಪಟ್ನಾ, ಗಯಾ, ರಾಂಚಿ, ಕಟಿಹಾರ್‌, ದೀನ್ದಯಾಲ್ಉಪಾಧ್ಯಾಯ ನಗರ, ಬಾಲಸೋರ್‌, ವಿಜಯವಾಡಾ, ಖುರ್ದಾ, ಕಾಡ್ಪಾಲಿ, ತಿರುಚಿನಾಪಳ್ಳಿ, ಧನಬಾದ್‌, ಗುವಾಹಟಿ ಮತ್ತು ಸಮಸ್ತಿಪುರದ ಅಡುಗೆ ಮನೆಗಳಲ್ಲಿ ತಯಾರಿಸಿದ ಆಹಾರವನ್ನು ಐಆರ್ಸಿಟಿಸಿ ಇದುವರೆಗೆ 102,937 ಊಟವನ್ನು ಬಡವರಿಗೆ ಮತ್ತು ಅಗತ್ಯವಿರುವ ಜನರಿಗೆ 2020 ಮಾರ್ಚ್‌ 28ರಿಂದ ವಿತರಿಸುತ್ತಿದೆ. ಆರ್ಪಿಎಫ್ಮತ್ತು ಸರ್ಕಾರದ ವಿವಿಧ ಇಲಾಖೆಗಳು ಹಾಗೂ ಸರ್ಕಾರೇತರ ಸಂಸ್ಥೆಗಳು ಕಾರ್ಯದಲ್ಲಿ ನೆರವು ನೀಡಿವೆ.

ಮಾರ್ಚ್‌ 28ರಂದು 2700 ಮಂದಿಗೆ ಊಟ ವಿತರಿಸುವ ಮೂಲಕ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಐಆರ್ಸಿಟಿಸಿ ಮಾರ್ಚ್‌ 29ರಂದು 11530 ಮಂದಿಗೆ ಊಟ, 30ರಂದು 20487 ಮಂದಿಗೆ, 31ರಂದು 30850 ಹಾಗೂ ಏಪ್ರಿಲ್‌ 1ರಂದು 37370 ಮಂದಿಗೆ 23 ಸ್ಥಳಗಳಲ್ಲಿ ಊಟ ಪೂರೈಸಲಾಯಿತು.

ಅಗತ್ಯವಿರುವ ಜನರಿಗೆ ಆಹಾರ ವಿತರಿಸುವ ಕಾರ್ಯಕ್ಕೆ ರೈಲ್ವೆ ರಕ್ಷಣಾ ಪಡೆಯನ್ನು (ಆರ್ಪಿಎಫ್‌) ಭಾರತ ರೈಲ್ವೆ ಸಕ್ರಿಯವಾಗಿ ನಿಯೋಜಿಸಲಾಗಿತ್ತು.

5419 ಅಗತ್ಯವಿರುವ ಜನರಿಗೆ ಆರ್ಪಿಎಫ್‌ 74 ಸ್ಥಳಗಳಲ್ಲಿ ಆಹಾರವನ್ನು 2020 ಮಾರ್ಚ್‌ 28ರಂದು ವಿತರಿಸಿತು. ಜತೆಗೆ, ಹೆಚ್ಚುವರಿಯಾಗಿ ಐಆರ್ಸಿಟಿಸಿ ಕಿಚನ್ಗಳಲ್ಲಿ ತಯಾರಿಸಿದ ಆಹಾರದ ಜತೆಗೆ ಆರ್ಪಿಎಫ್ನಿಂದಲೂ ಆಹಾರವನ್ನು ತಯಾರಿಸಿ 2719 ಮಂದಿಗೆ ವಿತರಿಸಲಾಯಿತು.

ಅಗತ್ಯವಿರುವ 21568 ಮಂದಿಗೆ 146 ಸ್ಥಳಗಳಲ್ಲಿ 2020 ಮಾರ್ಚ್‌ 29ರಂದು ಆರ್ಪಿಎಫ್ಆಹಾರವನ್ನು ವಿತರಿಸಿತು. ಐಆರ್ಸಿಟಿಸಿ ಕಿಚನ್ಗಳಲ್ಲಿ ತಯಾರಿಸಿದ ಆಹಾರದ ಜತೆಗೆ ಆರ್ಪಿಎಫ್ತನ್ನದೇ ಆದ ಸಂಪನ್ಮೂಲಗಳಿಂದ ಆಹಾರ ತಯಾರಿಸಿ 4150 ಮಂದಿಗೆ ಸರ್ಕಾರೇತರ ಸಂಸ್ಥೆಗಳ ಸಹಭಾಗಿತ್ವದಲ್ಲಿ ವಿತರಿಸಲಾಯಿತು.

2020 ಮಾರ್ಚ್‌ 30ರಂದು 186 ಸ್ಥಳಗಳಲ್ಲಿ 30741 ಮಂದಿಗೆ ಆಹಾರವನ್ನು ಆರ್ಪಿಎಫ್ಒದಗಿಸಿತು. ಜತೆಗೆ, ಹೆಚ್ಚುವರಿಯಾಗಿ ಐಆರ್ಸಿಟಿಸಿ ಕಿಚನ್ಗಳಲ್ಲಿ ತಯಾರಿಸಿದ ಆಹಾರವನ್ನು 12453 ಮಂದಿಗೆ ಆಹಾರವನ್ನು ಆರ್‌‍ಪಿಎಫ್ತಯಾರಿಸಿ ಪೂರೈಸಿತು. 3746 ಮಂದಿಗೆ ಸರ್ಕಾರೇತರ ಸಂಸ್ಥೆಗಳ ನೆರವಿನೊಂದಿಗೆ ಆಹಾರ ಪೂರೈಸಲಾಯಿತು.

2020 ಮಾರ್ಚ್‌ 31ರಂದು 196 ಸ್ಥಳಗಳಲ್ಲಿ 38045 ಮಂದಿಗೆ ಆರ್‌‍ಪಿಎಫ್ಆಹಾರ ಪೂರೈಸಿತು. ಐಆರ್ಸಿಟಿಸಿ ಕಿಚನ್ಗಳಲ್ಲಿ ತಯಾರಿಸಿದ ಆಹಾರ ಜತೆಗೆ 14,633 ಮಂದಿಗೆ ಆಹಾರವನ್ನು ಆರ್ಪಿಎಫ್ತನ್ನ ಸಂಪನ್ಮೂಲಗಳಿಂದ ತಯಾರಿಸಿ ಒದಗಿಸಿತು. ಜತೆಗೆ 4072 ಮಂದಿಗೆ ಸರ್ಕಾರೇತರ ಸಂಸ್ಥೆಗಳ ಸಹಯೋಗದೊಂದಿಗೆ ಆಹಾರ ವಿತರಿಸಲಾಯಿತು.

ಸಂಕಷ್ಟದಲ್ಲಿರುವ ಜನರಿಗೆ ಆಹಾರ ಮತ್ತು ಇತರ ವಸ್ತುಗಳನ್ನು ಪೂರೈಸುವಂತೆ ರೈಲ್ವೆ ಹಾಗೂ ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಪಿಯೂಷ್ಗೋಯಲ್ ಅವರು ಭಾರತೀಯ ರೈಲ್ವೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ರೈಲ್ವೆ ಇಲಾಖೆಯು ಕಾರ್ಯವನ್ನು ರೈಲ್ವೆ ನಿಲ್ದಾಣಗಳ ಆಚೆಯೂ ಕೈಗೊಳ್ಳಬೇಕು. ಇದಕ್ಕಾಗಿ ಆಯಾ ಜಿಲ್ಲೆಯ ಅಧಿಕಾರಿಗಳು ಮತ್ತು ಸರ್ಕಾರೇತರ ಸಂಸ್ಥೆಗಳ ನೆರವು ಪಡೆಯಬೇಕು ಎಂದು ಸೂಚಿಸಿದರು.

ಲಾಕ್ಡೌನ್ಸಂದರ್ಭದಲ್ಲಿ ಆಹಾರ ಪೂರೈಸುವಂತೆ ಸಂಕಷ್ಟಕ್ಕೆ ಸಿಲುಕಿರುವ ಜನರಿಂದ ಇನ್ನೂ ಹೆಚ್ಚಿನ ಬೇಡಿಕೆ ಭಾರತೀಯ ರೈಲ್ವೆಗೆ ಬರುತ್ತಿದೆ. ಭಾರತೀಯ ರೈಲ್ವೆ ಕಾರ್ಯ ಕೈಗೊಳ್ಳಲು ಸಿದ್ಧವಾಗಿದೆ. ಇದಕ್ಕಾಗಿ ಸಾಕಷ್ಟು ಆಹಾರ ಧಾನ್ಯಗಳು ಮತ್ತು ಇತರ ವಸ್ತುಗಳನ್ನು ಸಂಗ್ರಹಿಸಿಟ್ಟುಕೊಂಡಿದೆ.

****


(Release ID: 1610266) Visitor Counter : 184