ನಾಗರೀಕ ವಿಮಾನಯಾನ ಸಚಿವಾಲಯ

ಜೀವನ ರೇಖೆ ಉಡಾನ್ ಅಡಿಯಲ್ಲಿ ಇದುವರೆಗೆ 74 ವಿಮಾನಗಳ ಕಾರ್ಯಾಚರಣೆ; ಒಂದೇ ದಿನದಲ್ಲಿ 22 ಟನ್ ಸರಕು ಸಾಗಣೆ

Posted On: 01 APR 2020 3:57PM by PIB Bengaluru

ಜೀವನ ರೇಖೆ ಉಡಾನ್ ಅಡಿಯಲ್ಲಿ ಇದುವರೆಗೆ 74 ವಿಮಾನಗಳ ಕಾರ್ಯಾಚರಣೆ; ಒಂದೇ ದಿನದಲ್ಲಿ 22 ಟನ್ ಸರಕು ಸಾಗಣೆ
 

ನಾಗರಿಕ ವಿಮಾನ ಯಾನ ಸಚಿವಾಲಯದ ಜೀವನರೇಖೆ  ಉಡಾನ್ ಅಡಿಯಲ್ಲಿ ಇಂದಿನವರೆಗೆ ದೇಶಾದ್ಯಂತ ವೈದ್ಯಕೀಯ ಸರಕು ಸಾಗಾಣಿಕೆಗೆ 74 ವಿಮಾನಗಳು ಹಾರಾಟ ನಡೆಸಿವೆ. ಒಟ್ಟು 37.63 ಟನ್ ಸರಕನ್ನು ಇಂದಿನವರೆಗೆ ಸಾಗಾಟ ಮಾಡಲಾಗಿದ್ದು, ಇದರಲ್ಲಿ 22 ಟನ್ನಿಗೂ ಅಧಿಕ ಸರಕನ್ನು 2020ರ ಮಾರ್ಚ್ 31 ರಂದೇ ಸಾಗಾಟ ಮಾಡಲಾಗಿದೆ.

ಮಾರ್ಚ್ 31 ರಂದು ಈ ಕೆಳಗಿನ ವಿಮಾನಗಳು ಕಾರ್ಯಾಚರಿಸಿವೆ:

ಜೀವನರೇಖೆ 1: ಏರಿಂಡಿಯಾ ವಿಮಾನಗಳು: ಮುಂಬಯಿಯಿಂದ ಹೊಸದಿಲ್ಲಿಗೆ ಅಲ್ಲಿಂದ ಗುವಾಹಟಿಗೆ ಮತ್ತು ಮುಂಬಯಿಗೆ, ಇದರಲ್ಲಿ ಮೇಘಾಲಯ, ಅಸ್ಸಾಂ, ಐ.ಸಿ.ಎಂ.ಆರ್. , ನಾಗಾಲ್ಯಾಂಡ್, ಅರುಣಾಚಲಪ್ರದೇಶ ಮತ್ತು ಪುಣೆಗಳಿಗೆ ಸರಕು ಸಾಗಾಣಿಕೆ ಮಾಡಲಾಗಿದೆ.

ಜೀವನರೇಖೆ 2: ಏರಿಂಡಿಯಾ ವಿಮಾನಗಳು: ಹೊಸದಿಲ್ಲಿಯಿಂದ ಹೈದರಾಬಾದಿಗೆ ಅಲ್ಲಿಂದ ತಿರುವನಂತಪುರಂ ಅಲ್ಲಿಂದ ಗೋವಾ ಮತ್ತು ದಿಲ್ಲಿ. ಇದರಲ್ಲಿ ಆಂಧ್ರಪ್ರದೇಶ, ಕೇರಳ, ಐ.ಸಿ.ಎಂ.ಆರ್, ಗೋವಾಗಳಿಗೆ ಸರಕು ಸಾಗಾಟ ಮಾಡಲಾಗಿದೆ.

ಜೀವನರೇಖೆ 3: ಅಲಯೆನ್ಸ್ ಏರ್ ವಿಮಾನ: ಹೈದರಾಬಾದ್ ನಿಂದ ಬೆಂಗಳೂರು ಅಲ್ಲಿಂದ ಹೈದರಾಬಾದ್ ಗೆ ಜವಳಿ ಸಚಿವಾಲಯದ ಸರಕುಗಳನ್ನು ಸಾಗಾಟ ಮಾಡಲಾಗಿದೆ.

ಜೀವನರೇಖೆ 4: ಏರಿಂಡಿಯಾ ವಿಮಾನ: ಚೆನ್ನೈಯಿಂದ ಪೋರ್ಟ್ ಬ್ಲೇರ್ ಗೆ ಅಲ್ಲಿಂದ ಚೆನ್ನೈಗೆ.

ಜೀವನರೇಖೆ 5: ಭಾರತೀಯ ವಾಯು ಪಡೆ ವಿಮಾನ : ಹಿಂಡಾನ್ (ದಿಲ್ಲಿ) ಯಿಂದ ಪೋರ್ಟ್ ಬ್ಲೇರ್ ಗೆ ಸೂಲೂರು ಮೂಲಕ.

ಕೋವಿಡ್-19 ರ ವಿರುದ್ದ ಭಾರತ ಸಾರಿರುವ ಯುದ್ದದ ಅಂಗವಾಗಿ ಭಾರತ ಸರಕಾರದ ನಾಗರಿಕ ವಾಯುಯಾನ ಸಚಿವಾಲಯ “ಜೀವನರೇಖೆ ಉಡಾನ್” ವಿಮಾನಗಳನ್ನು ದೇಶಾದ್ಯಂತ ಮತ್ತು ಅದರಿಂದಾಚೆಗೆ ವೈದ್ಯಕೀಯ ಮತ್ತು ಜೀವನಾವಶ್ಯಕ ಪೂರೈಕೆಗಾಗಿ ಆರಂಭಿಸಿದೆ.

ವಿಮಾನಗಳ ವಿವರಗಳು ಈ ಕೆಳಗಿನಂತಿವೆ:

 

ಕ್ರಮ ಸಂಖ್ಯೆ

ದಿನಾಂಕ

ಏರಿಂಡಿಯ

ಅಲಯೆನ್ಸ್

ಐ.ಎ.ಎಫ್.

ಇಂಡಿಗೋ

ಸ್ಪೈಸ್ ಜೆಟ್

ಒಟ್ಟು ಹಾರಾಟಗಳು

1

26.3.2020

02

-

-

-

02

04

2

27.3.2020

04

09

-

-

-

13

3

28.3.2020

04

08

-

06

-

18

4

29.3.2020

04 

10 

06 

--

-

20

5

30.3.2020

04

-

03

--

-

07

6

31.3.2020

09

02

01

 

 

12

 

ಒಟ್ಟು ವಿಮಾನಗಳು

27

29

10

06

02

74

* ಲಡಾಖ್, ದಿಮಾಪುರ, ಇಂಫಾಲ, ಗುವಾಹಟಿ,ಮತ್ತು ಪೋರ್ಟ್ ಬ್ಲೇರ್ ಗಳಿಗೆ ಏರಿಂಡಿಯಾ ಮತು ಐ.ಎ.ಎಫ್. ಗಳ ಸಹಯೋಗ ಪಡೆಯಲಾಗಿದೆ.

·         ವೈದ್ಯಕೀಯ ವಾಯು ಸರಕುಗಳಿಗಾಗಿ ಜಾಲತಾಣವನ್ನು ಆರಂಭಿಸಲಾಗಿದೆ ಮತ್ತು ಅದು ಇಂದಿನಿಂದಲೇ ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಿಸುತ್ತಿದೆ. ಎಂ.ಒ.ಸಿ.ಎ. ಜಾಲತಾಣದಲ್ಲಿ ಅದರ ಸಂಪರ್ಕ ಕೊಂಡಿ ಲಭ್ಯವಿದೆ. (www.civilaviation.gov.in).

·         ದೇಶದೊಳಗೆ ಸರಕು ಸಾಗಾಣಿಕೆದಾರರು; ಬ್ಲ್ಯು ಡಾರ್ಟ್ ಮತ್ತು ಸ್ಪೈಸ್ ಜೆಟ್ ಗಳು ಸರಕು ವಿಮನಗಳಾಗಿ ವಾಣಿಜ್ಯಿಕ ಆಧಾರದಲ್ಲಿ ಕಾರ್ಯಾಚರಣೆ ನಡೆಸುತ್ತಿವೆ.

 


(Release ID: 1610177) Visitor Counter : 224