ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
ಕೊವಿಡ್-19 ಸ್ಫೋಟಿಸಿದ ಹಿನ್ನೆಲೆಯಲ್ಲಿ ಉಂಟಾದ ಲಾಕ್ ಡೌನ್ ಸಂದರ್ಭದಲ್ಲಿ ದೇಶಾದ್ಯಂತ ಆಹಾರ ಧಾನ್ಯಗಳ ಸುಬರಾಜನ್ನು ಹೆಚ್ಚಿಸಿದ ಎಫ್ ಸಿ ಐ
Posted On:
01 APR 2020 9:16PM by PIB Bengaluru
ಕೊವಿಡ್-19 ಸ್ಫೋಟಿಸಿದ ಹಿನ್ನೆಲೆಯಲ್ಲಿ ಉಂಟಾದ ಲಾಕ್ ಡೌನ್ ಸಂದರ್ಭದಲ್ಲಿ ದೇಶಾದ್ಯಂತ ಆಹಾರ ಧಾನ್ಯಗಳ ಸುಬರಾಜನ್ನು ಹೆಚ್ಚಿಸಿದ ಎಫ್ ಸಿ ಐ
ಮಾರ್ಚ್ 24 ರಂದು ಲಾಕ್ ಡೌನ್ ಆರಂಭವಾದಾಗಿನಿಂದಲೂ 9.86 ಎಲ್ ಎಮ್ ಟಿ ಯಷ್ಟು ಆಹಾರ ಧಾನ್ಯಗಳನ್ನು ಒಟ್ಟು 352 ರೇಕ್ ಗಳಲ್ಲಿ ಸಾಗಿಸಲಾಗಿದೆ, 53 ರೈಲು ರೇಕುಗಳಷ್ಟು ಇಂದು ತುಂಬಿಸಲಾಗಿದೆ
ಲಾಕ್ ಡೌನ್ ಸಮಯದಲ್ಲಿ ದೇಶಾದ್ಯಂತ ಗೋಧಿ ಮತ್ತು ಅಕ್ಕಿಯ ನಿರಂತರ ಸರಬರಾಜನ್ನು ಭಾರತದ ಆಹಾರ ನಿಗಮ (ಎಫ್ ಸಿ ಐ) ಖಚಿತಪಡಿಸುತ್ತಿದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್ ಎಫ್ ಎಸ್ ಎ) ಅಡಿ ಪ್ರತಿ ಫಲಾನುಭವಿಗೆ / ತಿಂಗಳಿಗೆ / 5 ಕೆ ಜಿ ಯಂತೆ ಆಹಾರ ಧಾನ್ಯದ ಅಗತ್ಯವನ್ನು ಪೂರೈಸಲು ಎಫ್ ಸಿ ಐ ಸಿದ್ಧವಾಗಿದೆ. ಇದಲ್ಲದೇ, ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯ ಅಡಿಯಲ್ಲಿ 81.35 ಕೋಟಿ ಜನರಿಗೆ ಮುಂದಿನ 3 ತಿಂಗಳ ವರೆಗೆ ಪ್ರತಿ ವ್ಯಕ್ತಿಗೆ 5 ಕೆ ಜಿ ಯಂತೆ ಆಹಾರ ಧಾನ್ಯದ ಅಗತ್ಯವನ್ನು ಸರಬರಾಜು ಸೇರಿದಂತೆ ಯಾವುದೇ ಹೆಚ್ಚುವರಿ ಬೇಡಿಕೆಯನ್ನು ಪೂರೈಸಲು ಸಿದ್ಧತೆ ಮಾಡಿಕೊಂಡಿದೆ. 31.03.2020 ರಂತೆ ಎಫ್ ಸಿ ಐ 56.75 ಮಿಲಿಯನ್ ಆಹಾರ ಧಾನ್ಯ (MMT) (30.7 MMT ಅಕ್ಕಿ ಮತ್ತು 26.06 MMT ಗೋಧಿ) ಹೊಂದಿದೆ.
ಈ ಸವಾಲಿನಂಥ ಕಾರ್ಯಾಚರಣೆ ವಾತಾವರಣದಲ್ಲೂ, ರೈಲಿನ ಮೂಲಕ ದೇಶಾದ್ಯಂತ ಗೋಧಿ ಮತ್ತು ಅಕ್ಕಿಯ ನಿರಂತರ ಸರಬರಾಜಿನಿಂದ ಹೆಚ್ಚುತ್ತಿರುವ ಆಹಾರ ಧಾನ್ಯಗಳ ಬೇಡಿಕೆಯನ್ನು ಭಾರತದ ಆಹಾರ ನಿಗಮ (ಎಫ್ ಸಿ ಐ) ವೇಗವಾಗಿ ಪೂರೈಸುತ್ತಿದೆ. ಇಂದು, ಅಂದರೆ 01.04.2020 ರಂದು, ಸುಮಾರು 1.48 ಲಕ್ಷ ಮೆಟ್ರಿಕ್ ಟನ್ ಗಳಷ್ಟು (LMT) ಆಹಾರ ಧಾನ್ಯಗಳ ದಾಸ್ತಾನನ್ನು ಒಟ್ಟು 53 ರೇಕುಗಳಲ್ಲಿ ತುಂಬಿಸಲಾಗಿದೆ. ಮಾರ್ಚ್ 24 ರಂದು ಲಾಕ್ ಡೌನ್ ಆರಂಭವಾದಾಗಿನಿಂದಲೂ ಎಫ್ ಸಿ ಐ ಸುಮಾರು 9.86 ಎಲ್ ಎಮ್ ಟಿ ಯಷ್ಟು ಆಹಾರ ಧಾನ್ಯಗಳನ್ನು ಒಟ್ಟು 352 ರೇಕ್ ಗಳಲ್ಲಿ ಸಾಗಿಸಲಾಗಿದೆ.
ಮಾರುಕಟ್ಟೆಯಲ್ಲಿ ಸರಬರಾಜಿನ ನಿರ್ಬಂಧವನ್ನು ಸಡಿಗೊಳಿಸಲು ರಾಜ್ಯ ಸರ್ಕಾರ ನೋಂದಾಯಿತ ಹಿಟ್ಟಿನ ಗಿರಣಿಗಳಿಗೆ ಗೋಧಿಯನ್ನು ಒದಗಿಸಲು ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ (ಒ ಎಮ್ ಎಸ್ ಎಸ್) ಅಡಿ ಎಫ್ ಸಿ ಐ
ಇ-ಹರಾಜು ನಡೆಸುತ್ತಿದೆ. 31-03-2020 ರಂದು ನಡೆದ ಇ-ಹರಾಜಿನಲ್ಲಿ 1.44 ಎಲ್ ಎಮ್ ಟಿ ಗೋಧೀಗೆ ಕೂಗು ಬೆಲೆಯನ್ನು ಪಡೆದಿತ್ತು.
ಹಿಟ್ಟಿನ ಗಿರಣಿಗಳು ಮತ್ತು ಇತರ ಗೋಧಿ ಉತ್ಪಾದಕರ ಅವಶ್ಯಕತೆಗಳನ್ನು ಪೂರೈಸಲು ಕೊವಿಡ್-19 ಸ್ಫೋಟಿಸಿದ ಹಿನ್ನೆಲೆಯಲ್ಲಿ ನಿಯಮಿತ ಇ-ಹರಾಜಿನ ಹೊರತಾಗಿ, ಜಿಲ್ಲಾ ಮ್ಯಾಜಿಸ್ಟ್ರೇಟ್ ಗಳು / ಕಲೆಕ್ಟರ್ ಗಳಿಗೆ ಒ ಎಮ್ ಎಸ್ ಎಸ್ ನಿಗದಿತ ಬೆಲೆಯಲ್ಲಿ ಎಫ್ ಸಿ ಐ ಸಂಗ್ರಹದಿಂದ ನೇರವಾಗಿ ದಾಸ್ತಾನು ಪಡೆಯಲು ಅನುಮತಿ ನೀಡಲಾಗಿದೆ. ಇಲ್ಲಿಯವರೆಗೆ, ಈ ಮಾರ್ಗದ ಮೂಲಕ ಈ ಕೆಳಕಂಡ ರಾಜ್ಯಗಳಿಗೆ 79027 MT ಗೋಧಿಯನ್ನು ಹಂಚಿಕೆ ಮಾಡಲಾಗಿದೆ:
ಕ್ರಮ ಸಂಖ್ಯೆ.
|
ರಾಜ್ಯ
|
ಪ್ರಮಾಣ (ಎಂ ಟಿ ಯತಲ್ಲಿ )
|
i
|
ಉತ್ತರ ಪ್ರದೇಶ
|
35675
|
ii
|
ಬಿಹಾರ
|
22870
|
iii
|
ಹಿಮಾಚಲ ಪ್ರದೇಶ
|
11500
|
iv
|
ಹರಿಯಾಣಾ
|
4190
|
v
|
ಪಂಜಾಬ್
|
2975
|
vi
|
ಗೋವಾ
|
1100
|
vii
|
ಉತ್ತರಾಖಂಡ್
|
375
|
viii
|
ರಾಜಸ್ಥಾನ
|
342
|
ಅಕ್ಕಿಯ ಮುಂದಿನ ಇ-ಹರಾಜನ್ನೂ ಕೂಡಾ ನಡೆಸಲಾಗಿದೆ. ತೆಲಂಗಾಣ, ತಮಿಳುನಾಡು, ಜಮ್ಮು ಮತ್ತು ಕಾಶ್ಮೀರ ಮುಂತಾದ ರಾಜ್ಯಗಳಿಂದ, 31-03-2020 ರಂದು ನಡೆದ ಕಳೆದ ಬಾರಿಯ ಇ-ಹರಾಜಿನಲ್ಲಿ 77000 ಎಮ್ ಟಿ ಅಕ್ಕಿಗಾಗಿ ಕೂಗು ಬೆಲೆಯನ್ನು ಸ್ವೀಕರಿಸಲಾಗಿದೆ.
ಇದರ ಜೊತೆಗೆ ತುರ್ತು ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯ ಅಡಿಯ ಹೆಚ್ಚುವರು ಹಂಚಿಕೆ ಮತ್ತು ಎನ್ ಎಫ್ ಎಸ್ ಎ ಹಂಚಿಕೆಯ ಹೊರತಾಗಿ ಯಾವುದೇ ಅವಶ್ಯಕತೆಯನ್ನು ಪೂರೈಸಲು ಈ ಹರಾಜಿನಲ್ಲಿ ಪಾಲ್ಗೊಳ್ಳದೇ ಒ ಎಮ್ ಎಸ್ ಎಸ್ ಅಡಿ ರೂ. 22.50 / ಕೆ ಜಿ ದರ ದಂತೆ ಅಕ್ಕಿಯನ್ನು ಪಡೆಯಲು ರಾಜ್ಯಗಳಿಗೆ ಅನುಮತಿಸಲಾಗಿದೆ. ಇಲ್ಲಿಯವರೆಗೆ ಕೆಳಕಂಡ 6 ರಾಜ್ಯಗಳಿಗೆ ಅವರ ಮನವಿ ಮೇರೆಗೆ 93387 ಮೆಟ್ರಿಕ್ ಟನ್ (ಎಮ್ ಟಿ) ಅಕ್ಕಿಯನ್ನು ಹಂಚಿಕೆ ಮಾಡಲಾಗಿದೆ:
ಕ್ರಮ ಸಂಖ್ಯೆ.
|
ರಾಜ್ಯ
|
ಪ್ರಮಾಣ (ಎಂ ಟಿ ಯತಲ್ಲಿ )
|
i
|
ತೆಲಂಗಾಣ
|
50000
|
ii
|
ಅಸ್ಸಾಂ
|
16160
|
Iii
|
ಮೇಘಾಲಯ
|
11727
|
Iv
|
ಮಣಿಪುರ
|
10000
|
V
|
ಗೋವಾ
|
4500
|
Vi
|
ಅರುಣಾಚಲ ಪ್ರದೇಶ
|
1000
|
*****
(Release ID: 1610172)