ನಾಗರೀಕ ವಿಮಾನಯಾನ ಸಚಿವಾಲಯ

70 ಸಾವಿರ ಕಿಲೋ ಮೀಟರ್ ವೈಮಾನಿಕ ದೂರ ಕ್ರಮಿಸಿದ ಜೀವನಾಡಿ ಉಡಾನ್ ವಿಮಾನಗಳು

Posted On: 01 APR 2020 8:48PM by PIB Bengaluru

70 ಸಾವಿರ ಕಿಲೋ ಮೀಟರ್ ವೈಮಾನಿಕ ದೂರ ಕ್ರಮಿಸಿದ ಜೀವನಾಡಿ ಉಡಾನ್ ವಿಮಾನಗಳು
ದೇಶದ ಗುಡ್ಡಗಾಡು ಪ್ರದೇಶಗಳಿಗೆ ವೈದ್ಯಕೀಯ ಸಲಕರಣೆ ಸಾಗಿಸಲು ಸರಕು ವಿಮಾನಗಳ ಹಾರಾಟ

 

ಏರ್ ಇಂಡಿಯಾ ಬಳಗ ಕಾರ್ಯಾಚರಣೆ ಮಾಡುತ್ತಿರುವ ಜೀವನಾಡಿ ಉಡಾನ್ ಸರಕು ಸಾಗಣೆ ವಿಮಾನಗಳು ಈವರೆಗೆ 74 ವಿಮಾನಗಳ ಪೈಕಿ 56 ಕಾರ್ಯನಿರ್ವಹಿಸುತ್ತಿವೆ. ಆರು ದಿನಗಳ ಅವಧಿಯಲ್ಲಿ(2020ರ ಮಾರ್ಚ್ 26 ರಿಂದ 31ರ ಅವಧಿಯಲ್ಲಿ) ಏರ್ ಇಂಡಿಯಾ, ಅಲಯನ್ಸ್ ಏರ್, ಐಎಎಫ್, ಪವನ್ ಹನ್ಸ್ ಮತ್ತು ಖಾಸಗಿ ವಿಮಾನಗಳು ಸಂಚರಿಸಿವೆ. ಒಟ್ಟಾರೆ ಈ ದಿನದವರೆಗೆ ಜೀವನಾಡಿ ಉಡಾನ್ ವಿಮಾನಗಳು ಸುಮಾರು 70,000 ಕಿಲೋ ಮೀಟರ್ ವೈಮಾನಿಕ ದೂರವನ್ನು ಕ್ರಮಿಸಿವೆ ಮತ್ತು ಸರಕು ಸಾಗಣೆ ವಿಮಾನಗಳಲ್ಲಿ ಸುಮಾರು 38 ಟನ್ ಸಾಗಿಸಲಾಗಿದೆ. ರಸ್ತೆ ಮಾರ್ಗದಲ್ಲಿ ಸರಕು ಸಾಗಾಣೆಗೆ ಸಾಕಷ್ಟು ಸವಾಲುಗಳು ಎದುರಾಗಿರುವ ಮಧ್ಯೆಯೇ ಜೀವನಾಡಿ ಉಡಾನ್ ವಿಮಾನಗಳು ಸರಕು ಸಾಗಾಣೆಯಲ್ಲಿ ತೊಡಗಿದ್ದು, ವಿಮಾನ ನಿಲ್ದಾಣಗಳಿಂದ ಸರಕು ಜೊತೆಗೆ ವೈಮಾನಿಕ ಸಿಬ್ಬಂದಿಯ ಸಂಚಾರಕ್ಕೂ ನೆರವಾಗಿದೆ.

ಬಹುತೇಕ ಸರಕು ಸಾಗಾಣೆಯಲ್ಲಿ ಕಡಿಮೆ ತೂಕದ ಹೆಚ್ಚಿನ ಪ್ರಮಾಣದ ಮಾಸ್ಕ್, ಗ್ಲೌಸ್ ಮತ್ತು ಅಗತ್ಯ ವಸ್ತುಗಳನ್ನು ಸಾಗಿಸಲಾಗಿದೆ. ಸಾಕಷ್ಟು ಮುಂಜಾಗ್ರತೆ ಹಾಗೂ ಭದ್ರತೆಯೊಂದಿಗೆ ಸರಕು ವಿಮಾನಗಳಲ್ಲಿ ಕೆಲವು ಪ್ರಯಾಣಿಕರನ್ನೂ ಸಹ ಕರೆದೊಯ್ಯಲು ವಿಶೇಷ ಅನುಮತಿಯನ್ನು ನೀಡಲಾಗಿತ್ತು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಂಒಸಿಎ, ಏರ್ ಇಂಡಿಯಾ ಜೊತೆ ಸೇರಿ ಚೈನಾದ ಅಧಿಕಾರಿಗಳೊಂದಿಗೆ ಭಾರತ ಮತ್ತು ಚೀನಾ ನಡುವೆ, 2020ರ ಏಪ್ರಿಲ್ 3ರ ನಂತರ ಗಂಭೀರ ವೈದ್ಯಕೀಯ ಸಾಮಗ್ರಿಗಳ ಪೂರೈಕೆಗಾಗಿ ಸರಕು ವಿಮಾನ ಸಂಪರ್ಕ ಸ್ಥಾಪನೆಗೆ ಕಾರ್ಯೋನ್ಮುಖವಾಗಿವೆ. ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ವೈಮಾನಿಕ ಉದ್ಯಮ, ಕೋವಿಡ್-19 ವಿರುದ್ಧ ಭಾರತ ನಡೆಸುತ್ತಿರುವ ಸಮರಕ್ಕೆ ಸಂಪೂರ್ಣ ಬದ್ಧತೆ ತೋರಿವೆ. ಅವು ಭಾರತದ ಅತ್ಯಂತ ದೂರದ ಗುಡ್ಡಗಾಡು ಪ್ರದೇಶಗಳಿಗೆ ಅತ್ಯಂತ ಪರಿಣಾಮಕಾರಿಯಾಗಿ ಕಡಿಮೆ ವೆಚ್ಚದಲ್ಲಿ ವೈದ್ಯಕೀಯ ಸಾಮಗ್ರಿಗಳನ್ನು ಸರಕು ವಿಮಾನಗಳ ಮೂಲಕ ಸಾಗಿಸುತ್ತಿವೆ.

 

ಜೀವನಾಡಿ ಉಡಾನ್ ವಿಮಾನಗಳು ಹಾರಾಟ ನಡೆಸಿದ ದಿನಾಂಕವಾರು ವಿವರ ಈ ಕೆಳಗಿನಂತಿದೆ

ಕ್ರ.ಸಂ.

ದಿನಾಂಕ

ಏರ್ ಇಂಡಿಯಾ

ಅಲಯನ್ಸ್

ಐಎಎಫ್

ಇಂಡಿಗೋ

ಸ್ಪೈಸ್ ಜೆಟ್

ಒಟ್ಟು ಕಾರ್ಯ ನಿರ್ವಹಿಸಿದ ವಿಮಾನಗಳು

1

26.3.2020

02

-

-

-

02

04

2

27.3.2020

04

09

-

-

-

13

3

28.3.2020

04

08

-

06

-

18

4

29.3.2020

04

10

06

--

-

20

5

30.3.2020

04

-

03

--

-

07

6

31.3.2020

09

02

01

 

 

12

 

ಒಟ್ಟು ವಿಮಾನಗಳು

27

29

10

06

02

74

 

ಏರ್ ಇಂಡಿಯಾ ಮತ್ತು ಐಎಎಫ್ ವಿಮಾನಗಳು ಒಟ್ಟಾಗಿ ಲಡಾಖ್, ದಿಮಾಪುರ್, ಇಂಪಾಲ, ಗುವಾಹತಿ ಮತ್ತು ಪೋರ್ಟ್ ಬ್ಲೇರ್

****

 



(Release ID: 1610127) Visitor Counter : 104