ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ

ರಸಗೊಬ್ಬರ ಇಲಾಖೆಯ ಪಿ ಎಸ್ ಯು ಗಳಿಂದ PM CARES ನಿಧಿಗೆ 27 ಕೋಟಿ ರೂ ದೇಣಿಗೆ

Posted On: 01 APR 2020 12:57PM by PIB Bengaluru

ರಸಗೊಬ್ಬರ ಇಲಾಖೆಯ ಪಿ ಎಸ್ ಯು ಗಳಿಂದ PM CARES ನಿಧಿಗೆ 27 ಕೋಟಿ ರೂ ದೇಣಿಗೆ

 

ರಸಗೊಬ್ಬರ ಇಲಾಖೆಯಡಿ ಪಿ ಎಸ್ ಯು ಗಳು, ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ ಕೋವಿಡ್ – 19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ತುರ್ತು ಪರಿಸ್ಥಿತಿಯಲ್ಲಿ ಪ್ರಧಾನ ಮಂತ್ರಿ ನಾಗರಿಕ ನೆರವು ಮತ್ತು ಪರಿಹಾರ ನಿಧಿಗೆ 27 ಕೋಟಿ ರೂಪಾಯಿಗೂ ಹೆಚ್ಚು ನಿಧಿಯನ್ನು ದೇಣಿಗೆ ನೀಡಿವೆ.

ಕೋವಿಡ್ – 19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಸರ್ಕಾರದ ಪ್ರಯತ್ನಗಳಿಗೆ ಕೈಜೋಡಿಸುವಂತೆ ಮಾಡಿದ ತಮ್ಮ ಮನವಿಗೆ ಸ್ಪಂದಿಸಿದ್ದಕ್ಕಾಗಿ ಈ ಕಂಪನಿಗಳ ಎಲ್ಲ ಸಿ ಎಂ ಡಿ ಗಳಿಗೆ ನಾನು ಧನ್ಯವಾದ ಸಲ್ಲಿಸುತ್ತೇನೆಎಂದು ತಮ್ಮ ಹಲವಾರು ಟ್ವೀಟ್ ಸಂದೇಶಗಳಲ್ಲಿ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಕೇಂದ್ರ ಸಚಿವ ಶ್ರೀ ಡಿ ವಿ ಸದಾನಂದಗೌಡ ಬರೆದಿದ್ದಾರೆ.

ಇಫ್ಕೊ ಕಂಪನಿ ಪಿ ಎಂ ಕೇರ್ಸ್ ಗೆ 25 ಕೋಟಿ ರೂಪಾಯಿಗಳ ನೆರವು ನೀಡಿದೆ. ಇಫ್ಕೊ ನೀಡಿದ ನೆರವಿಗೆ ನಾನು ಧನ್ಯವಾದ ತಿಳಿಸಲು ಬಯಸುತ್ತೇನೆ ಎಂದು ಶ್ರೀ ಗೌಡ ಹೇಳಿದರು. ಕೊರೊನಾ ವೈರಸ್ ವಿರುದ್ಧ ಹೋರಾಡಲು ಮತ್ತು ಸ್ಪೋಟದ ಪರಿಣಾಮಗಳನ್ನು ನಿಯಂತ್ರಿಸಲು ಸರ್ಕಾರಕ್ಕೆ ದೀರ್ಘಕಾಲದವರೆಗೆ ಇದು ಸಹಾಯ ಮಾಡಲಿದೆ.   

ಕ್ರಿಬ್ಕೊ ತನ್ನ ಸಿ ಎಸ್ ಆರ್ ನಿಧಿಯಿಂದ ಪಿ ಎಂ ಕೇರ್ಸ್ ಗೆ 2 ಕೋಟಿ ರೂಪಾಯಿಗಳ ನೆರವು ನೀಡಿರುವುದನ್ನು ಕೇಂದ್ರ ಸಚಿವರು ಶ್ಲಾಘಿಸಿದ್ದಾರೆ. ಕೋವಿಡ್ – 19 ಸ್ಫೋಟದ ಸಂದರ್ಭದಲ್ಲಿ ಸರ್ಕಾರ ಕೈಗೊಳ್ಳುತ್ತಿರುವ ಪರಿಹಾರ ಕಾರ್ಯಗಳಿಗೆ ಇದು ಸಹಾಯಕರವಾಗಿದೆ ಎಂದು ಅವರು ಹೇಳಿದರು.   

ಎನ್ಎಫ್ಎಲ್-ಕಿಸಾನ್ ನೀಡಿದ ಕೊಡುಗೆಯನ್ನು ಪ್ರಸ್ತಾಪಿಸಿದ ಅವರು, ನನ್ನ ಸಚಿವಾಲಯದ ಅಧೀನದಲ್ಲಿರುವ ಪಿ ಎಸ್ ಯು ತನ್ನ ಸಿಎಸ್ಆರ್ ನಿಧಿಯಿಂದ 63.94 ಲಕ್ಷ ರೂಪಾಯಿಗಳನ್ನು ಪಿಎಂ ಕೇರ್ಗೆ ನೀಡಿದೆ ಎಂದು ಘೋಷಿಸಲು ನನಗೆ ಸಂತೋಷವಾಗಿದೆ ಎಂದು ಹೇಳಿದರು. ಎನ್ಎಫ್ಎಲ್ ನ ಸಿ ಎಂ ಡಿ ಮನೋಜ್ ಮಿಶ್ರಾ ಅವರ ಧನ್ಯವಾದ.

ತನ್ನ ಸಚಿವಾಲಯದಡಿ ಬರುವ ಎಲ್ಲ ಲಾಭದಲ್ಲಿರುವ ಪಿ ಎಸ್ ಯು ಗಳಿಗೆ ತಮ್ಮ ಸಿಎಸ್ಆರ್ ನಿಧಿಯಿಂದ ಪಿಎಂ ಕೇರ್ಗೆ ದೇಣಿಗೆ ನೀಡುವಂತೆ ಶ್ರೀ ಗೌಡ ಆಗ್ರಹಿಸಿದ್ದಾರೆ. ಎಲ್ಲ  ಪಿ ಎಸ್ ಯು ಗಳ ಸಿ ಎಂ ಡಿ ಗಳಿಗೆ ಕಳುಹಿಸಿದ ಪತ್ರದಲ್ಲಿ “ ಕೋವಿಡ್ – 19 ಸ್ಫೋಟ ತಡೆಗೆ ಭಾರತ ಸರ್ಕಾರ ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತಿದೆ ಆದರೂ ಈ ಪ್ರಮಾಣದ ಸಾರ್ವಜನಿಕ ಆರೋಗ್ಯ ಸ್ಥಿತಿಯನ್ನು ನಿಯಂತ್ರಿಸಲು ಸಮಾಜದ ಎಲ್ಲ ವರ್ಗದವರೂ ಒಗ್ಗೂಡಿ ಪ್ರಯತ್ನಿಸಬೇಕಾಗುತ್ತದೆ, ಆದ್ದರಿಂದ ನೀವೆಲ್ಲರೂ ನಿಮ್ಮ ಸಿಎಸ್ಆರ್ ನಿಧಿಯಿಂದ ಸಾಧ್ಯವಾದಷ್ಟು ಹೆಚ್ಚು ಮೊತ್ತವನ್ನು ಪಿಎಂ ಕೇರ್ನಿಧಿಗೆ ದೇಣಿಗೆ ನೀಡುವಂತೆ ನಿಮ್ಮೆಲ್ಲರನ್ನೂ ವಿನಂತಿಸುತ್ತೇನೆ ಎಂದು ಬರೆದಿದ್ದಾರೆ.   

ಭಾರತ ಸರ್ಕಾರವು ಪಿಎಂ ಕೇರ್ನಿಧಿಯನ್ನು ಕೋವಿಡ್ – 19 ಸಾಂಕ್ರಾಮಿಕ ರೋಗದಿಂದ ಉದ್ಭವಿಸಬಹುದಾದಂತಹ ತುರ್ತು ಅಥವಾ ಸಂಕಷ್ಟ ಸ್ಥಿತಿಯನ್ನು ಎದುರಿಸುವ ಪ್ರಮುಖ ಉದ್ದೇಶದಿಂದ ಸ್ಥಾಪಿಸಲಾಗಿದೆ. ಈ ನಿಧಿಗೆ ನೀಡಿರುವ ದೇಣಿಗೆ ಅಥವಾ ಕೊಡುಗೆ ಕಂಪನಿ ಕಾಯ್ದೆ 2013 ರಡಿ ಸಿಎಸ್ಆರ್ ಖರ್ಚಿಗೆ ಅರ್ಹವಾಗಿರುತ್ತದೆ ಎಂದು ಅವರು ಹೇಳಿದ್ದಾರೆ.  

 


(Release ID: 1610051) Visitor Counter : 182