ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ

ಕೋವಿಡ್-19 ಸೋಂಕು ಎದುರಿಸಲು ಔಷಧಗಳ ಕೊರತೆ ಇಲ್ಲ

Posted On: 31 MAR 2020 5:10PM by PIB Bengaluru

ಕೋವಿಡ್-19 ಸೋಂಕು ಎದುರಿಸಲು ಔಷಧಗಳ ಕೊರತೆ ಇಲ್ಲ


 
ಫಾರ್ಮಸಿಟಿಕಲ್ಸ್ ಇಲಾಖೆ, ನಿರಂತರಾಗಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಹಾಗೂ ಇತರೆ ಇಲಾಖೆಗಳ ಸಹಾಯದಿಂದ ಔಷಧಗಳ ಲಭ್ಯತೆ, ಪೂರೈಕೆ ಮತ್ತು ಸ್ಥಳೀಯ ಸಮಸ್ಯೆಗಳನ್ನು ಬಗೆಹರಿಸುತ್ತಾ ವಿತರಣೆಯ ಬಗ್ಗೆ ನಿರಂತರ ನಿಗಾವಹಿಸುತ್ತಿದೆ.
 
1.     ಭಾರತ ಸರ್ಕಾರದ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದಡಿ ಬರುವ ಫಾರ್ಮಸಿಟಿಕಲ್ಸ್ ಇಲಾಖೆ, ಇತರೆ ಇಲಾಖೆಗಳು ಮತ್ತು ರಾಜ್ಯ ಸರ್ಕಾರಗಳು/ಕೇಂದ್ರಾಡಳಿತ ಪ್ರದೇಶಗಳ ಸಹಾಯದಿಂದ ಔಷಧಗಳ ಪೂರೈಕೆ ಮತ್ತು ಸ್ಥಳೀಯ ಸಮಸ್ಯೆಗಳನ್ನು ಬಗೆಹರಿಸುತ್ತಾ ಔಷಧಗಳ ಲಭ್ಯತೆ ಮತ್ತು ವಿತರಣೆ ಮೇಲೆ ನಿರಂತರವಾಗಿ ನಿಗಾವಹಿಸುತ್ತಿದೆ. ಇಲಾಖೆ ಕೇಂದ್ರ ನಿಯಂತ್ರಣ ಕೊಠಡಿಯನ್ನು[011-23389840]ಅನ್ನು ತೆರೆದಿದ್ದು, ಅದು ಬೆಳಗ್ಗೆ 8 ರಿಂದ ಸಂಜೆ 6 ಗಂಟೆಯವರೆಗೆ ಕಾರ್ಯನಿರ್ವಹಿಸುತ್ತದೆ. ರಾಷ್ಟ್ರೀಯ ಫಾರ್ಮಸಿಟಿಕಲ್ ದರ ಪ್ರಾಧಿಕಾರ (ಎನ್ ಪಿಪಿಎ) ಕೂಡ ಮತ್ತೊಂದು ಕಂಟ್ರೋಲ್ ರೂಮ್ ಅನ್ನು(ಸಹಾಯವಾಣಿ ಸಂಖ್ಯೆ 1800111255) ಸ್ಥಾಪಿಸಿದೆ. ಇದು ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುತ್ತದೆ. ಈ ಕಂಟ್ರೋಲ್ ರೂಮ್ ಗಳು ಕೋವಿಡ್ ಸೋಂಕು ಸಂಬಂಧಿ ಸಂದೇಶಗಳು, ವಿಚಾರಣೆ/ದೂರುಗಳನ್ನು ಆಲಿಸಲಿವೆ ಮತ್ತು ಔಷಧ ಹಾಗೂ ವೈದ್ಯಕೀಯ ಸಲಕರಣೆಗಳ ಸಾಗಾಣೆ ಸೇವೆಗೆ ಸಂಬಂಧಿಸಿದಂತೆ ಸಮನ್ವಯ ಕಾಯ್ದುಕೊಳ್ಳುತ್ತದೆ.
2.     ಫಾರ್ಮಸಿಟಿಕಲ್ಸ್ ಇಲಾಖೆ ಇತರೆ ಇಲಾಖೆಗಳಾದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಸೀಮಾ ಸುಂಕ ಅಧಿಕಾರಿಗಳು, ಕೇಂದ್ರ ಮತ್ತು ರಾಜ್ಯ ಔಷಧ ನಿಯಂತ್ರಕರು, ರಾಜ್ಯ ಸರ್ಕಾರಗಳು/ಕೇಂದ್ರಾಡಳಿತ ಪ್ರದೇಶಗಳು ಮತ್ತು ನಾನಾ ಔಷಧ ಮತ್ತು ವೈದ್ಯಕೀಯ ಉಪಕರಣಗಳ ಒಕ್ಕೂಟಗಳ ಜೊತೆ ನಿರಂತರವಾಗಿ ಸಮನ್ವಯ ಕಾಯ್ದುಕೊಳ್ಳುವ ಕೆಲಸ ಮಾಡುತ್ತಿದೆ.
3.     ಚೀನಾದಲ್ಲಿ ಕೊರೋನಾ ಸೋಂಕು ಹರಡುತ್ತಿದ್ದಂತೆಯೇ, ಫಾರ್ಮಸಿಟಿಕಲ್ಸ್ ಇಲಾಖೆ ನಿರಂತರವಾಗಿ ಔಷಧಗಳ ಉತ್ಪಾದನೆ ಮೇಲೆ ನಿಗಾವಹಿಸುತ್ತಿದೆ. ಲಾಕ್ ಡೌನ್ ನಂತರ ಇಲಾಖೆ ಉದ್ಯಮದ ಜೊತೆ ಕಾಲ ಕಾಲಕ್ಕೆ ಎದುರಾಗುವ ಸಮಸ್ಯೆಗಳನ್ನು ಬಗೆಹರಿಸುವ ಕೆಲಸ ಮಾಡುತ್ತಿದೆ. ಅಲ್ಲದೆ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳು ಸೇರಿದಂತೆ ಇತರ ಇಲಾಖೆಗಳ ಜೊತೆ ಸಮನ್ವಯ ಸಾಧಿಸಲು ಅಗ್ರ ಆದ್ಯತೆ ನೀಡಿ, ಸಮಸ್ಯೆಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ತ್ವರಿತವಾಗಿ ಬಗೆಹರಿಸುತ್ತಿದೆ. ಇತರೆ ಇಲಾಖೆಗಳು/ಸಚಿವಾಲಯಗಳಿಗೆ ಸಂಬಂಧಿಸಿದ ಸಮಸ್ಯೆಗಳು ಉದ್ಭವವಾದರೆ ಅಥವಾ ಪಾರ್ಮಸಿಟಿಕಲ್ಸ್ ಇಲಾಖೆಯ ಗಮನಕ್ಕೆ ತಂದರೆ ಅದನ್ನು ಅಂತರ ಇಲಾಖಾ ಸಮನ್ವಯದ ಭಾಗವಾಗಿ ಇತರೆ ಉನ್ನತಾಧಿಕಾರ ಸಮಿತಿಗಳ ಗಮನಕ್ಕೆ ತಂದು, ಕೂಡಲೇ ಅದನ್ನು ಬಗೆಹರಿಸಲಾಗುತ್ತಿದೆ. ಯಾವುದೇ ಸಂದರ್ಭದಲ್ಲೂ ಅಗತ್ಯ ಔಷಧಗಳ ಕೊರತೆ ಆಗದಂತೆ ಸಮರ್ಪಕ ದಾಸ್ತಾನು ಕಾಯ್ದುಕೊಳ್ಳುವಂತೆ ಹಾಗೂ ಔಷಧ ಉತ್ಪಾದನೆ ಮುಂದುವರಿಸುವಂತೆ ಎನ್ ಪಿಪಿಎ ಎಲ್ಲ ಔಷಧ ಉತ್ಪಾದಕರಿಗೆ ನಿರ್ದೇಶನ ನೀಡಿದೆ. ಲಾಕ್ ಡೌನ್ ಅವಧಿಯಲ್ಲಿ ಅಗತ್ಯ ಔಷಧಿಗಳು ಮತ್ತು ವೈದ್ಯಕೀಯ ಸಲಕರಣೆಗಳ ಉತ್ಪಾದನೆಯನ್ನು ಖಾತ್ರಿಪಡಿಸಲು ಸರ್ವ ಪ್ರಯತ್ನಗಳನ್ನು ನಡೆಸಲಾಗುತ್ತಿದೆ.
4.     ಅಲ್ಲದೆ, ಇಲಾಖೆ ವಾಟ್ಸ್ ಅಪ್ ಗ್ರೂಪ್/ಇ-ಮೇಲ್ ವ್ಯವಸ್ಥೆ, ವಿಡಿಯೋ ಕಾನ್ಫರೆನ್ಸಿಂಗ್ ಸೌಲಭ್ಯಗಳನ್ನು ಬಳಸಿ, ನಾನಾ ಹಂತಗಳಲ್ಲಿ ಅಗತ್ಯ ಮತ್ತು ವ್ಯಾಪಕ ಕ್ರಮಗಳನ್ನು ಕೈಗೊಳ್ಳುತ್ತಿದೆ.


 
*****



(Release ID: 1609743) Visitor Counter : 111