ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ

COVID-19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ತಮ್ಮ ಕಾರ್ಪೋರೇಟ್ ಸಾಮಾಜಿಕ ಜವಾಬ್ದಾರಿ (ಸಿಎಸ್ಆರ್) ಹಣವನ್ನು ಬಿಡುಗಡೆ ಮಾಡುವಂತೆ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಶ್ರೀ ಸದಾನಂದ ಗೌಡ ತಮ್ಮ ಸಚಿವಾಲಯದ ಅಧೀನದಲ್ಲಿರುವ ಸಾರ್ವಜನಿಕ ಉದ್ದಿಮೆಗಳಿಗೆ ಒತ್ತಾಯಿಸಿದ್ದಾರೆ

Posted On: 31 MAR 2020 11:41AM by PIB Bengaluru

COVID-19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ತಮ್ಮ ಕಾರ್ಪೋರೇಟ್ ಸಾಮಾಜಿಕ ಜವಾಬ್ದಾರಿ (ಸಿಎಸ್ಆರ್) ಹಣವನ್ನು ಬಿಡುಗಡೆ ಮಾಡುವಂತೆ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಶ್ರೀ ಸದಾನಂದ ಗೌಡ ತಮ್ಮ ಸಚಿವಾಲಯದ ಅಧೀನದಲ್ಲಿರುವ ಸಾರ್ವಜನಿಕ ಉದ್ದಿಮೆಗಳಿಗೆ ಒತ್ತಾಯಿಸಿದ್ದಾರೆ

 

ಕನಿಷ್ಠ ಒಂದು ದಿನದ ವೇತನವನ್ನು ಸಹ ನೀಡುವಂತೆ ಸಚಿವರು ನೌಕರರಿಗೆ ಮನವಿ ಮಾಡಿದ್ದಾರೆ.

COVID-19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವ ತುರ್ತು ಅಗತ್ಯವನ್ನು ಗಮನದಲ್ಲಿಟ್ಟುಕೊಂಡು, ತಮ್ಮ ಸಚಿವಾಲಯದ ಅಧೀನದಲ್ಲಿ ಲಾಭದಲ್ಲಿರುವ ಎಲ್ಲ ಸಾರ್ವಜನಿಕ ಉದ್ದಿಮೆಗಳು ಪ್ರಧಾನಮಂತ್ರಿಯವರ ನಾಗರಿಕ ನೆರವು ಹಾಗೂ ಪರಿಹಾರಗಳ ತುರ್ತು ಪರಿಸ್ಥಿತಿಗಳ ನಿಧಿ (PM CARES) ಗೆ ತಮ್ಮ ಸಿಎಸ್ಆರ್ ಹಣವನ್ನು ದೇಣಿಗೆಯಾಗಿ ನೀಡುವಂತೆ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರಗಳ ಸಚಿವ ಶ್ರೀ ಡಿ. ವಿ. ಸದಾನಂದ ಗೌಡ ಮನವಿ ಮಾಡಿದ್ದಾರೆ.
ಸೋಂಕು ಹರಡುವುದನ್ನು ತಡೆಯಲು ಭಾರತ ಸರ್ಕಾರ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ, ಆದರೆ ಈ ಪ್ರಮಾಣದ ಸಾರ್ವಜನಿಕ ಆರೋಗ್ಯ ಪರಿಸ್ಥಿತಿಗೆ ಸಮಾಜದ ಎಲ್ಲಾ ವರ್ಗದವರು ಒಟ್ಟಾಗಿ ಪ್ರಯತ್ನಿಸುವ ಅಗತ್ಯವಿದೆ. ನಿಮ್ಮ ಸಿಎಸ್ಆರ್ ಬಜೆಟ್ ನ ಗರಿಷ್ಠ ಮೊತ್ತವನ್ನು PM CARES ಗೆ ಕೊಡುಗೆ ನೀಡುವಂತೆ ನಾನು ನಿಮ್ಮೆಲ್ಲರನ್ನೂ ವಿನಂತಿಸುತ್ತೇನೆ ಎಂದು ಎಲ್ಲಾ ಸಾರ್ವಜನಿಕ ಉದ್ದಿಮೆಗಳ ಸಿಎಮ್‌ಡಿಗಳಿಗೆ ಬರೆದಿರುವ ಪತ್ರದಲ್ಲಿ ಶ್ರೀ ಸದಾನಂದ ಗೌಡ ಮನವಿ ಮಾಡಿದ್ದಾರೆ.
COVID-19 ಸಾಂಕ್ರಾಮಿಕ ರೋಗದಂತಹ ಯಾವುದೇ ರೀತಿಯ ತುರ್ತು ಅಥವಾ ತೊಂದರೆಯ ಪರಿಸ್ಥಿತಿಗಳನ್ನು ಎದುರಿಸುವ ಪ್ರಾಥಮಿಕ ಉದ್ದೇಶದಿಂದ ಭಾರತ ಸರ್ಕಾರವು PM CARES ನಿಧಿಯನ್ನು ಸ್ಥಾಪಿಸಿದೆ ಎಂದು ಅವರು ಹೇಳಿದ್ದಾರೆ.
ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯವು ಈ ನಿಧಿಗೆ ನೀಡಿದ ಯಾವುದೇ ಕೊಡುಗೆಯು ಕಂಪೆನಿಗಳ ಕಾಯ್ದೆ 2013 ರ ಅಡಿಯಲ್ಲಿ ಸಿಎಸ್ಆರ್ ವೆಚ್ಚವಾಗಿ ಅರ್ಹತೆ ಪಡೆಯುತ್ತದೆ ಎಂದು ಈಗಾಗಲೇ ಸ್ಪಷ್ಟಪಡಿಸಿದೆ ಎಂದೂ ಅವರು ಹೇಳಿದ್ದಾರೆ.
ಮೇಲಿನ ನಿಧಿಗೆ ತಕ್ಷಣ ಕೊಡುಗೆ ನೀಡುವ ಮೂಲಕ ಪಿಎಸ್‌ಯುಗಳು ತಮ್ಮ ಖರ್ಚು ಮಾಡದ ಸಿಎಸ್‌ಆರ್ ಹಣವನ್ನು 2019-20ರ ಆರ್ಥಿಕ ವರ್ಷಕ್ಕೆ ಬಳಸಿಕೊಳ್ಳಲು ಇದು ಉತ್ತಮ ಅವಕಾಶವಾಗಿದೆ. ಹಾಗೆಯೇ ಕಂಪನಿಗಳು 2020-21ನೇ ಸಾಲಿನ  ಸಿಎಸ್ಆರ್ ಹಣವನ್ನು ಏಪ್ರಿಲ್ 2020 ರಿಂದ ಈ ನಿಧಿಗೆ ನೀಡಬಹುದು ಎಂದು ಅವರು ತಿಳಿಸಿದ್ದಾರೆ.
ತಮ್ಮ ಕಂಪನಿಯ ನೌಕರರು ತಮ್ಮ ಮಾಸಿಕ ವೇತನದ ಕನಿಷ್ಠ ಒಂದು ದಿನದ ವೇತನವನ್ನು PM CARES ನಿಧಿಗೆ ಸ್ವಯಂಪ್ರೇರಣೆಯಿಂದ ಕೊಡುಗೆ ನೀಡುವಂತೆ ಅವರನ್ನು ಪ್ರೇರೇಪಿಸುವಂತೆ ಎಲ್ಲಾ ಪಿಎಸ್‌ಯುಗಳ ಸಿಎಮ್‌ಡಿಗಳನ್ನು ಕೋರಲಾಗಿದೆ ಎಂದೂ ಕೇಂದ್ರ ಸಚಿವರು ಹೇಳಿದ್ದಾರೆ.

ಶ್ರೀ ಸದಾನಂದ ಗೌಡರು ತಮ್ಮ ಒಂದು ತಿಂಗಳ ಸಂಬಳ ಮತ್ತು ಒಂದು ಸಂಸದರ ಕ್ಷೇತ್ರಾಭಿವೃದ್ಧಿ ನಿಧಿಯಿಂದ ಒಂದು ಕೋಟಿ ರೂಪಾಯಿಗಳನ್ನು PM CARES ನಿಧಿಗೆ ನೀಡಿದ್ದಾರೆ.

 



(Release ID: 1609565) Visitor Counter : 130