ಹಣಕಾಸು ಸಚಿವಾಲಯ

ಹಣಕಾಸು ವರ್ಷದ ವಿಸ್ತರಣೆ ಇಲ್ಲ

Posted On: 30 MAR 2020 10:48PM by PIB Bengaluru

ಹಣಕಾಸು ವರ್ಷದ ವಿಸ್ತರಣೆ ಇಲ್ಲ


ಮಾಧ್ಯಮದ ಕೆಲವು ವಲಯಗಳಲ್ಲಿ ಹಣಕಾಸು ವರ್ಷವನ್ನು ವಿಸ್ತರಿಸಲಾಗಿದೆ ಎಂಬುದಾಗಿ ಬಂದಿರುವ ಸುದ್ದಿಗಳು ಸುಳ್ಳು ಎಂಬುದಾಗಿ ಸರಕಾರ ಹೇಳಿದೆ. 2020 ರ ಮಾರ್ಚ್ 30 ರಂದು ಸರಕಾರ ಹೊರಡಿಸಿರುವ ಅಧಿಸೂಚನೆಯಲ್ಲಿ ಭಾರತೀಯ ಸ್ಟ್ಯಾಂಪ್ ಕಾಯ್ದೆಗೆ ಮಾಡಿರುವ ಕೆಲವು ತಿದ್ದುಪಡಿಗಳನ್ನು ತಪ್ಪಾಗಿ ಉಲ್ಲೇಖಿಸಲಾಗಿದೆ ಎಂದು ಹೇಳಲಾಗಿದೆ. ಹಣಕಾಸು ವರ್ಷದ ವಿಸ್ತರಣೆ ಇಲ್ಲ ಎಂದೂ ಸ್ಪಷ್ಟಪಡಿಸಲಾಗಿದೆ.
ಹಣಕಾಸು ಸಚಿವಾಲಯದ ಕಂದಾಯ ಇಲಾಖೆ 30, ಮಾರ್ಚ್ 2020 ರಂದು ಹೊರಡಿಸಿರುವ ಅಧಿಸೂಚನೆಯಲ್ಲಿ ಹಣಕಾಸು ಇಲಾಖೆಯು ಭಾರತೀಯ ಸ್ಟ್ಯಾಂಪ್ ಕಾಯ್ದೆಗೆ ಕೆಲವು ನಿರ್ದಿಷ್ಟ ತಿದ್ದುಪಡಿಗಳನ್ನು ತರುವುದಕ್ಕೆ ಸಂಬಂಧಿಸಿದ ವಿಷಯ ಅದಾಗಿದೆ. ಸ್ಟಾಕ್ ಎಕ್ಸ್ಚೇಂಜ್ ಗಳ ಮೂಲಕ ಸೆಕ್ಯುರಿಟಿ ಮಾರುಕಟ್ಟೆ  ವ್ಯವಹಾರಗಳಿಗೆ ಅಥವಾ ಸ್ಟಾಕ್ ಎಕ್ಸ್ಚೇಂಜ್ ಗಳ ಡೇಪೋಸಿಟರಿಗಳ ಮೂಲಕ ಅಧಿಕೃತವಾಗಿ ಮಾನ್ಯ ಮಾಡಲ್ಪಟ್ಟ ಕ್ಲಿಯರಿಂಗ್  ಕಾರ್ಪೋರೇಶನ್ ಗಳ ಸ್ಟ್ಯಾಂಪ್ ಶುಲ್ಕ ಸಂಗ್ರಹವನ್ನು ದಕ್ಷತೆಯಿಂದ ಸಂಗ್ರಹಿಸುವುದಕ್ಕಾಗಿ ಕೈಗೊಳ್ಳಲಾದ ವ್ಯವಸ್ಥಾಕ್ರಮ ಇದಾಗಿದೆ ಎಂದು ಸ್ಪಷ್ಟಪಡಿಸಿದೆ. . ಈ ಬದಲಾವಣೆಯನ್ನು ಈ ಮೊದಲು 2020 ರ ಏಪ್ರಿಲ್ 1 ರಿಂದ ಜಾರಿಗೆ ತರಲು ಅಧಿಸೂಚಿಸಲಾಗಿತ್ತು. ಆದರೆ ಈಗಿರುವ ಪರಿಸ್ಥಿತಿಯಲ್ಲಿ ಅನುಷ್ಟಾನ ದಿನಾಂಕವನ್ನು 2020 ರ ಜುಲೈ 1 ನೇ ತಾರೀಖಿಗೆ ಮುಂದೂಡಲಾಗಿದೆ.



(Release ID: 1609549) Visitor Counter : 150