ಪ್ರಧಾನ ಮಂತ್ರಿಯವರ ಕಛೇರಿ

‘ಪ್ರಧಾನ ಮಂತ್ರಿಯವರ ನಾಗರಿಕ ನೆರವು ಮತ್ತು ತುರ್ತು ಪರಿಸ್ಥಿತಿ ಪರಿಹಾರ ನಿಧಿಗೆ (ಪಿಎಂ ಸಿ.ಎ.ಆರ್.ಇ.ಎಸ್. ಫಂಡ್)’ ಗೆ ಉದಾರವಾಗಿ ದೇಣಿಗೆ ನೀಡಲು ಮನವಿ

Posted On: 28 MAR 2020 4:36PM by PIB Bengaluru

‘ಪ್ರಧಾನ ಮಂತ್ರಿಯವರ ನಾಗರಿಕ ನೆರವು ಮತ್ತು ತುರ್ತು ಪರಿಸ್ಥಿತಿ  ಪರಿಹಾರ ನಿಧಿಗೆ (ಪಿಎಂ ಸಿ.ಎ.ಆರ್.ಇ.ಎಸ್. ಫಂಡ್)’ ಗೆ ಉದಾರವಾಗಿ ದೇಣಿಗೆ ನೀಡಲು ಮನವಿ

 

ಕೋವಿಡ್ -19 ಮಹಾಮಾರಿ ಇಡೀ ವಿಶ್ವವನ್ನು ಆವರಿಸಿದ್ದು, ವಿಶ್ವಾದ್ಯಂತ ಲಕ್ಷಾಂತರ ಜನರ ಆರೋಗ್ಯ ಮತ್ತು ಆರ್ಥಿಕ ಭದ್ರತೆಗೆ ಗಂಭೀರ ಸವಾಲು ಒಡ್ಡಿದೆ. ಭಾರತದಲ್ಲಿ ಕೂಡ ಕೊರೋನಾ ವೈರಸ್ ಹರಡುವಿಕೆ ಎಚ್ಚರಿಕೆಯ ಗಂಟೆ ಬಾರಿಸುತ್ತಿದ್ದು, ನಮ್ಮ ದೇಶದ ಆರೋಗ್ಯ ಮತ್ತು ಆರ್ಥಿಕತೆಗೆ ಸಂಕಷ್ಟ ತಂದೊಡ್ಡಿದೆ. ಈ ತುರ್ತು ಪರಿಸ್ಥಿತಿಯ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಬೆಂಬಲ ನೀಡಲು ಉದಾರ ದೇಣಿಗೆ ನೀಡಲು ಪ್ರಧಾನ ಮಂತ್ರಿಗಳ ಕಾರ್ಯಾಲಯಕ್ಕೆ ಸ್ವಯಂಪ್ರೇರಿತವಾಗಿ ಅಸಂಖ್ಯಾತ ಮನವಿಗಳು ಬರುತ್ತಿವೆ.

ವಿಪತ್ತಿನ ಸನ್ನಿವೇಶದಲ್ಲಿ, ಅದು ಸ್ವಾಭಾವಿಕವಾಗಿರಲಿ ಅಥವಾ ಇನ್ನಾವುದೇ ರೀತಿಯದಾಗಿರಲಿ, ಬಾಧಿತರ ದುಃಖವನ್ನು ನಿವಾರಿಸಲು ತ್ವರಿತ ಮತ್ತು ಸಾಮೂಹಿಕ ಕ್ರಮಗಳು ಅಗತ್ಯವಾಗುತ್ತದೆ, ಅದು ಮೂಲಸೌಕರ್ಯ ಮತ್ತು ಸಾಮರ್ಥ್ಯಕ್ಕೆ ಬೀಳುವ ಪೆಟ್ಟು ತಗ್ಗಿಸುವುದು / ನಿಯಂತ್ರಿಸುವುದು ಇತ್ಯಾದಿ. ಆಗಿರುತ್ತದೆ. ಆದ್ದರಿಂದ ತ್ವರಿತ ತುರ್ತು ಸ್ಪಂದನೆ ಮತ್ತು ಪರಿಣಾಮಕಾರಿ ಸಾಮುದಾಯಿಕ ಪರಿಹಾರಕ್ಕಾಗಿ ಸಾಮರ್ಥ್ಯವರ್ಧನೆಯನ್ನು  ಮೂಲಸೌಕರ್ಯ ಮತ್ತು ಸಾಂಸ್ಥಿಕ ಸಾಮರ್ಥ್ಯ ಪುನರ್ನಿರ್ಮಾಣ / ವರ್ಧನೆಯೊಂದಿಗೆ ಮಾಡಬೇಕಾಗಿದೆ. ಹೊಸ ತಂತ್ರಜ್ಞಾನದ ಬಳಕೆ ಮತ್ತು ಮುಂದುವರಿದ ಸಂಶೋಧನೆಯ ಫಲ ಸಹ ಅಂತಹ ಸಂಘಟಿತ ಕ್ರಮದ ಬೇರ್ಪಡಿಸಲಾಗದ ಅಂಶವಾಗಿದೆ.

ಕೋವಿಡ್-19 ಮಹಾಮಾರಿ ಒಡ್ಡಿರುವ ಯಾವುದೇ ರೀತಿಯ ತುರ್ತು ಅಥವಾ ಸಂಕಷ್ಟ ಪರಿಸ್ಥಿತಿಯನ್ನು ಎದುರಿಸುವ ಪ್ರಾಥಮಿಕ ಉದ್ದೇಶದೊಂದಿಗೆ ಮೀಸಲಾದ ರಾಷ್ಟ್ರೀಯ ನಿಧಿಯನ್ನು ಹೊಂದುವ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು, ಮತ್ತು ಬಾಧಿತರಿಗೆ ಪರಿಹಾರ ಒದಗಿಸಲು ಸಾರ್ವಜನಿಕ ದತ್ತಿ ನ್ಯಾಸ (ಚಾರಿಟಬಲ್ ಟ್ರಸ್ಟ್)ವನ್ನು ‘ಪ್ರಧಾನಮಂತ್ರಿಯವರ ನಾಗರಿಕ ನೆರವು ಮತ್ತು ತುರ್ತು ಸನ್ನಿವೇಶದ ಪರಿಹಾರ ನಿಧಿ’ (ಪಿ.ಎಂ. ಸಿ.ಎ.ಆರ್. ಇ.ಎಸ್. ಫಂಡ್) ಹೆಸರಲ್ಲಿ ಸ್ಥಾಪಿಸಲಾಗಿದೆ. ಪ್ರಧಾನಮಂತ್ರಿಯವರು ಈ ಟ್ರಸ್ಟ್ ಅಧ್ಯಕ್ಷರಾಗಿದ್ದು, ರಕ್ಷಣಾ ಸಚಿವರು, ಗೃಹ ಸಚಿವರು ಮತ್ತು ಹಣಕಾಸು ಸಚಿವರು ಇದರ ಸದಸ್ಯರಾಗಿರುತ್ತಾರೆ.

ಯಾವುದೇ ಸಮಸ್ಯೆಯನ್ನು ನಿಭಾಯಿಸಲು ಸಾರ್ವಜನಿಕರ ಪಾಲ್ಗೊಳ್ಳುವಿಕೆಯು ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಯಾವಾಗಲೂ ನಂಬಿದ್ದಾರೆ ಮತ್ತು ಕೃತಿಯಲ್ಲಿ ತೋರಿಸಿದ್ದಾರೆ ಮತ್ತು ಇದು ಅದಕ್ಕೆ ಮತ್ತೊಂದು ಉದಾಹರಣೆಯಾಗಿದೆ.  ಈ ನಿಧಿಯು ಸಣ್ಣ ದೇಣಿಗೆಗಳಿಗೂ ಅವಕಾಶ ನೀಡಲಿದ್ದು, ಇದರ ಪರಿಣಾಮವಾಗಿ ದೊಡ್ಡ ಸಂಖ್ಯೆಯ ಜನರು ಸಹ ಸಣ್ಣ ಪ್ರಮಾಣದಲ್ಲೂ ದೇಣಿಗೆ ನೀಡಲು ಅವಕಾಶವಿದೆ.

ನಾಗರಿಕರು ಮತ್ತು ಸಂಘಟನೆಗಳು pmindia.gov.in ಅಂತರ್ಜಾಲ ತಾಣಕ್ಕೆ ಭೇಟಿ ನೀಡಿ, ಈ ಕೆಳಗಿನ ವಿವರಗಳನ್ನು ಬಳಸಿಕೊಂಡು ಪಿಎಂ ಸಿಎಆರ್.ಇ.ಎಸ್. ಗೆ ದೇಣಿಗೆ ನೀಡಬಹುದು.:

ಖಾತೆಯ ಹೆಸರು                 : PM CARES     

ಖಾತೆಯ ಸಂಖ್ಯೆ                : 2121PM20202                                            ಐ.ಎಫ್.ಎಸ್.ಸಿ. ಕೋಡ್      : SBIN0000691

ಎಸ್.ಡಬ್ಲ್ಯು.ಐ.ಎಫ್.ಟಿ.ಕೋಡ್: SBININBB104                                    ಬ್ಯಾಂಕ್ ನ ಹೆಸರು ಮತ್ತು ಶಾಖೆ: ಭಾರತೀಯ ಸ್ಟೇಟ್ ಬ್ಯಾಂಕ್, ನವದೆಹಲಿ ಪ್ರಧಾನ ಶಾಖೆ.

ಯುಪಿಐ ಐಡಿ                      : pmcares@sbi

pmindia.gov.in – ಅಂತರ್ಜಾಲ ತಾಣದಲ್ಲಿ ಈ ಕೆಳಗಿನ ಪಾವತಿಯ ವಿಧಾನಗಳು ಲಭ್ಯವಿವೆ.

ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ಗಳು

ಇಂಟರ್ ನೆಟ್ ಬ್ಯಾಂಕಿಗ್

ಯುಪಿಐ (ಭೀಮ್, ಫೋನ್ ಪೇ, ಅಮೇಜಾನ್ ಪೇ, ಗೂಗಲ್ ಪೇ, ಪೇ ಟಿಎಂ, ಮೋಬಿಕ್ ವಿಕ್ ಇತ್ಯಾದಿ.)

ಆರ್.ಟಿ.ಜಿ.ಎಸ್/ನೆಫ್ಟ್

ಈ ನಿಧಿಗೆ ನೀಡುವ ದೇಣಿಗೆಗೆ ಸೆಕ್ಷನ್ 80(G) ಅಡಿಯಲ್ಲಿ ಆದಾಯ ತೆರಿಗೆ ವಿನಾಯಿತಿ ಇರುತ್ತದೆ.

 

******(Release ID: 1608903) Visitor Counter : 162