ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ವಿಡಿಯೋ ಕಾನ್ಫೆರೆನ್ಸ್ ಮೂಲಕ ಡಾ. ಹರ್ಷವರ್ಧನ್ ಅವರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೋವಿಡ್ – 19 ಪ್ರಸ್ತುತ ಸ್ಥಿತಿ ಮತ್ತು ಅದರ ವಿರುದ್ಧ ಹೋರಾಡಲು ಕೈಗೊಂಡ ಕ್ರಮಗಳ ಸಮೀಕ್ಷೆ ನಡೆಸಿದರು

Posted On: 26 MAR 2020 7:59PM by PIB Bengaluru

ವಿಡಿಯೋ ಕಾನ್ಫೆರೆನ್ಸ್ ಮೂಲಕ ಡಾ. ಹರ್ಷವರ್ಧನ್ ಅವರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೋವಿಡ್ – 19 ಪ್ರಸ್ತುತ ಸ್ಥಿತಿ ಮತ್ತು ಅದರ ವಿರುದ್ಧ ಹೋರಾಡಲು ಕೈಗೊಂಡ ಕ್ರಮಗಳ ಸಮೀಕ್ಷೆ ನಡೆಸಿದರು

 

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖತೆ ಸಚಿವ ಡಾ. ಹರ್ಷವರ್ಧನ್ ಕೋವಿಡ್ – 19 ವಿರುದ್ಧ ಹೋರಾಡಲು ಕೈಗೊಂಡ ಕ್ರಮಗಳು ಮತ್ತು ಸಿದ್ಧತೆಗಳನ್ನು ಅವಲೋಕಿಸಲು ವಿಡಿಯೋ ಕಾನ್ಫೆರೆನ್ಸ್ ಮೂಲಕ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆರೋಗ್ಯ ಸಚಿವರು, ಮುಖ್ಯ ಕಾರ್ಯದರ್ಶಿಗಳೊಂದಿಗೆ ಮತ್ತು ಇತರ ಆರೋಗ್ಯ ಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಇಂದು ಸಭೆ ನಡೆಸಿದರು.    
ವಿಡಿಯೋ ಕಾನ್ಫೆರೆನ್ಸ್ ನಲ್ಲಿ ಮಹಾರಾಷ್ಟ್ರ, ರಾಜಸ್ಥಾನ, ತೆಲಂಗಾಣ, ಗುಜರಾತ್, ಜಾರ್ಖಂಡ್, ಬಿಹಾರ, ಉತ್ತರ ಪ್ರದೇಶ, ಪಂಜಾಬ, ತಮಿಳು ನಾಡು, ದೆಹಲಿ, ಮಧ್ಯ ಪ್ರದೇಶ, ಆಂಧ್ರ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಉತ್ತರಾಖಂಡ್, ಒಡಿಶಾ, ಹರಿಯಾನಾ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ಮೇಘಾಲಯ, ದಾದ್ರಾ ಮತ್ತು ನಗರ ಹವೇಲಿ, ಲದಾಖ್, ಮಿಝೊರಾಂ, ಅಂಡಮಾನ್ ಮತ್ತು ನಿಕೋಬಾರ್, ಹಿಮಾಚಲ ಪ್ರದೇಶ, ಚಂದೀಘಡ, ಗೋವಾ, ಛತ್ತೀಸಘಡ, ಮುಂತಾದ ರಾಜ್ಯಗಳು ಭಾಗವಹಿಸಿದ್ದವು. ಸಚಿವಾಲಯದ ಹಿರಿಯ ಅಧಿಕಾರಿಗಳು ಎನ್ ಸಿ ಡಿ ಸಿ ಮತ್ತು ಐಸಿಎಂಆರ್ ಗಳು ಸಹ  ವಿಡಿಯೋ ಕಾನ್ಫೆರೆನ್ಸ್ ಸಮಯದಲ್ಲಿ ಹಾಜರಿದ್ದರು. ವಿಡಿಯೋ ಕಾನ್ಫೆರೆನ್ಸ್ ಗೆ ಹಾಜರಾಗಲು ಸಾಧ್ಯವಾಗದೇ ಇರುವ ಕೇರಳದ ಆರೋಗ್ಯ ಸಚಿವೆ ಕೆ ಕೆ ಶೈಲಜಾ ಅವರೊಂದಿಗೆ ದೂರವಾಣಿ ಮೂಲಕ ಡಾ. ಹರ್ಷವರ್ಧನ್ ಮಾತನಾಡಿದರು ಮತ್ತು ರಾಜ್ಯದಲ್ಲಿ ಕೋವಿಡ್ – 19  ಸ್ಥಿತಿ ಬಗ್ಗೆ ಚರ್ಚಿಸಿದರು. 
ಪಾಲ್ಗೊಂಡವರನ್ನೆಲ್ಲ ಉದ್ದೇಶಿಸಿ ಮಾತನಾಡಿದ ಡಾ. ಹರ್ಷವರ್ಧನ್ ರೋಗವನ್ನು ಪರಿಣಾಮಕಾರಿಯಾಗಿ ಹತ್ತಿಕ್ಕಲು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದರ ಮಹತ್ವದ ಕುರಿತು ಒತ್ತಿ ಹೇಳಿದರು. ಎಲ್ಲ ರಾಜ್ಯಗಳು ಹೆಚ್ಚು ಎಚ್ಚರಿಕೆಯಿಂದ ಇರುವಂತೆ ಮತ್ತು ಭಾರತದಲ್ಲಿ ರೋಗ ಹರಡುವಿಕೆಯ ಸರಪಳಿಯನ್ನು ಕಡಿದುಹಾಕಲು ಸಾಧ್ಯವಿರುವ ಎಲ್ಲ ಹತೋಟಿ ಕ್ರಮಗಳನ್ನು ಅಳವಡಿಸಿಕೊಳ್ಳುವಂತೆ ಹೇಳಿದರು. ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಟ್ಟು ನಿಟ್ಟಿನ ಲಾಕ್ ಡೌನ್ ಅಳವಡಿಸುವಂತೆ ಮತ್ತು ಅವಶ್ಯಕ ಸೇವೆಗಳು ಮತ್ತು ಸಾಮಗ್ರಿಗಳ ಲಭ್ಯತೆಯನ್ನು ಖಚಿತಪಡಿಸುವಂತೆ ಅವರು ಒತ್ತಾಯಿಸಿದರು. ರಾಜ್ಯದಲ್ಲಿ ಕೋವಿಡ್ – 19 ಕ್ಕಾಗಿಯೇ ಮೀಸಲಾಗಿರುವ ಆಸ್ಪತ್ರೆಗಳನ್ನು ಸಿದ್ಧಪಡಿಸಿಕೊಳ್ಳುವ ಮಹತ್ವದ ಬಗ್ಗೆಯೂ ಅವರು ಒತ್ತಿ ಹೇಳಿದರು. ಶಿಷ್ಟಾಚಾರದಂತೆ ಖಚಿತವಾದ ಪ್ರಕರಣಗಳ ಚಿಕಿತ್ಸೆ ಬಗ್ಗೆ, ಎಲ್ಲ ಪ್ರಕರಣಗಳಲ್ಲಿ ಸಂಪರ್ಕವನ್ನು ಪತ್ತೆ ಹಚ್ಚಲು ಮತ್ತು ಅವುಗಳ ಬಗ್ಗೆ ನಿಗಾವಹಿಸುವುದನ್ನು ಖಚಿತಪಡಿಸಿಕೊಳ್ಳಲು ಡಾ. ಹರ್ಷವರ್ಧನ್ ಅವರು ಒತ್ತಿ ಹೇಳಿದರು. ಕಳೆದ ಒಂದು ತಿಂಗಳಿನಿಂದ ಭಾರತಕ್ಕೆ ಆಗಮಿಸಿದ ವಿದೇಶಿ ಪ್ರಯಾಣಿಕರ ಮೇಲೆ ಸಮುದಾಯ ಕಣ್ಗಾವಲು ಇರಿಸುವಂತೆ ಮತ್ತು ವಿಶೇಷ ಗಮನಹರಿಸುವಂತೆ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಲಹೆ ನೀಡಿದರು. ಜೊತೆಗೆ ಯಾದೃಚ್ಛಿಕವಾಗಿ ಗೃಹಬಂಧನದಲ್ಲಿರುವವರನ್ನು ಪರಿಶೀಲಿಸಲು ಮತ್ತು ಇದನ್ನು ಪಾಲಿಸದವರ ವಿರುದ್ಧ ಕ್ರಮ ಕೈಗೊಳ್ಳುವಂತೆಯೂ ಸಲಹೆ ನೀಡಿದರು.      
ವಿಡಿಯೋ ಕಾನ್ಫೆರೆನ್ಸ್ ಮೂಲಕ ನಡೆದ ಸಂವಾದದಲ್ಲಿ ಡಾ ಹರ್ಷವರ್ಧನ್ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿರುವ ನಿವೃತ್ತ ವೈದ್ಯರನ್ನು ಪತ್ತೆ ಹಚ್ಚಲು ಮತ್ತು ಈ ಕೋವಿಡ್ – 19 ಕಾರ್ಯಕ್ಕೆ ಸ್ವಯಂ ಪ್ರೇರಿತರಾಗಿ ಮುಂದೆ ಬರಲು ವಿನಂತಿಸಿಕೊಂಳ್ಳುವಂತೆ ಸಲಹೆ ನೀಡಿದರು. ಜೊತೆಗೆ ಆಂಬುಲೆನ್ಸ್ ವಾಹನ ಚಾಲಕರು, ಕಾಲ್ ಸೆಂಟರ್ ಸಿಬ್ಬಂದಿ ಮತ್ತು ಇ ಎಂ ಆರ್ ತಂಡದ ಸದಸ್ಯರಿಗೆ ತರಬೇತಿ ನೀಡುವುದನ್ನು ಹಾಗೂ ಜಿಲ್ಲಾವಾರು ಆಂಬುಲೆನ್ಸ್ ವಿವರಗಳನ್ನು ಕೋವಿಡ್ – 19 ಪೋರ್ಟಲ್ ನಲ್ಲಿ ಅಪ್ ಡೇಟ್ ಮಾಡುವಂತೆ ರಾಜ್ಯಗಳಿಗೆ ಸೂಚಿಸಿದರು.   
ವೈದ್ಯಕೀಯ ಸೇವೆಗಳಲ್ಲಿ ವೈದ್ಯರು, ಸುಶ್ರೂಕರು ಮತ್ತು ಇತರ ಆರೋಗ್ಯ ಸಿಬ್ಬಂದಿಯ ಕೊರತೆ ಇಲ್ಲದಂತೆ ನೋಡಿಕೊಳ್ಳಲು ಮತ್ತು ಎಲ್ಲ ಆರೋಗ್ಯ ಸಿಬ್ಬಂದಿಗೆ ಆದ್ಯತೆ ಮೇರೆಗೆ ಸಾರಿಗೆಯನ್ನು ಒದಗಿಸಲು ಡಾ ಹರ್ಷವರ್ಧನ್ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮನವಿ ಮಾಡಿದರು. ವೈದ್ಯರು, ಸುಶ್ರೂಕರು ಮತ್ತು ಇತರ ಆರೋಗ್ಯ ಸಿಬ್ಬಂದಿಗೆ ಸಾಮಾನ್ಯ ಸಾರಿಗೆ ವ್ಯವಸ್ಥೆಯನ್ನು ಒದಗಿಸಲು ಸಲಹೆ ನೀಡಿದರು. ಜೊತೆಗೆ ಕೋವಿಡ್ – 19 ರೋಗಿಗಳ ಸೇವೆಗಾಗಿ AIIMS ಪೋರ್ಟಲ್ ನೊಂದಿಗೆ ಪರಿಣಾಮಕಾರಿ ಸಮನ್ವಯದ ವಿಷಯವನ್ನು ಅವರು ಪ್ರಸ್ತಾಪಿಸಿದರು ಮತ್ತು  IMA ಮತ್ತು ಪ್ಯಾರಾಮೆಡಿಕ್ಸ್ ಮತ್ತು ಸುಶ್ರೂಷಕರ ಇತರ ಸಂಸ್ಥೆಗಳ ಸಕ್ರೀಯ ಸಮನ್ವಯತೆಗೂ ಅವರು ಪ್ರಸ್ತಾಪಿಸಿದರು.  
ಕೋವಿಡ್ – 19  ವಿರುದ್ಧ ಹೋರಾಡಲು ದೇಶ ಸೇವೆ ಮಾಡುತ್ತಿರುವ ವೈದ್ಯರು / ಪ್ಯಾರಾಮೆಡಿಕ್ಸ್ ರನ್ನು ಕೆಲ ಭೂ ಮಾಲೀಕರು ಮತ್ತು ಮನೆ ಮಾಲೀಕರು ಹೊರಹಾಕುತ್ತಿರುವ ಕುರಿತ ಕೆಲ ಇತ್ತೀಚಿನ ವರದಿಗಳ ಬಗ್ಗೆ ಪ್ರಸ್ತಾಪಿಸಿದ ಅವರು ವೈದ್ಯರು, ಸುಶ್ರೂಷಕರು ಮತ್ತು ಇತರ ಆರೋಗ್ಯ ಸಿಬ್ಬಂದಿಯನ್ನು ಹೊರಹಾಕದಂತೆ ಭೂ ಮಾಲೀಕರಿಗೆ ನಿರ್ದೇಶನಗಳನ್ನು ನೀಡುವಂತೆ ರಾಜ್ಯಗಳಿಗೆ ಕಟ್ಟುನಿಟ್ಟಿನ ಸಲಹೆ ನೀಡಿದ್ದಾರೆ.       
ಇಂದು ಕೊರೊನಾ ವೈರಸ್ ಸ್ಫೋಟದ ವಿರುದ್ಧ ಹೋರಾಡುತ್ತಿರುವ ವೈದ್ಯರು, ಪ್ಯಾರಾಮೆಡಿಕ್ ಸಿಬ್ಬಂದಿ, ಆರೋಗ್ಯ ರಕ್ಷಣಾ ಸಿಬ್ಬಂದಿಗೆ ಸರ್ಕಾರ 50 ಲಕ್ಷ ವಿಮೆಯನ್ನು ಘೋಷಿಸಿದೆ ಎಂದೂ ಆರೋಗ್ಯ ಸಚಿವರು ತಿಳಿಸಿದರು. ಕೋವಿಡ್ – 19 ಸಂಬಂಧಿತ ವಸ್ತುಗಳನ್ನು ಖರೀದಿಸಲು ವೈದ್ಯಕೀಯ ಕಾಲೇಜುಗಳಿಗೆ NHM ಅಡಿ ಹಣ ಒದಗಿಸುವಂತೆ ರಾಜ್ಯಗಳಿಗೆ ಸಲಹೆ ನೀಡಿದರು. 
 21 ದಿನಗಳ ಲಾಕ್ ಡೌನ್ ಸಮಯದಲ್ಲಿ ಅವಶ್ಯಕ ವಸ್ತುಗಳು, ಔಷಧಿ ಮತ್ತು ಸಾಮಗ್ರಿಗಳ ಸರಬರಾಜಿಗೆ ಗೃಹ ಸಚಿವಾಲಯ ಇತರ ಇಲಾಖೆಗಳೊಡಗೂಡಿ ಪೂರಕ ಮತ್ತು ನಿರ್ಣಾಯಕ ಪಾತ್ರ ವಹಿಸುತ್ತಿವೆ ಎಂದು ಅವರು ಹೇಳಿದರು. ಎಲ್ಲ ಅವಶ್ಯಕ ಸೇವೆಗಳ ಲಭ್ಯತೆಯನ್ನು ಖಚಿತಪಡಿಸಲು ಸೂಕ್ತ ನಿರ್ದೇಶನಗಳನ್ನು ನೀಡಲಾಗಿದೆ ಎಂದು ಅವರು ಹೇಳಿದರು. ಅದರೊಂದಿಗೆ ಔಷಧಿ ಅಂಗಡಿಗಳು ಮನೆ ಬಾಗಿಲಿಗೆ ಔಷಧಿ ತಲುಪಿಸುವುದನ್ನು ಖಚಿತಪಡಿಸುವಂತೆ ರಾಜ್ಯಗಳಿಗೆ ಅವರು ಸಲಹೆ ನೀಡಿದರು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದಿಂದ ಒಂದು ಅಧಿಸೂಚನೆಯನ್ನೂ ಹೊರಡಿಸಲಾಗಿದೆ ಎಂದು ಅವರು ತಿಳಿಸಿದರು. ಗೃಹ ಬಂಧನದಲ್ಲಿರುವವರ ಮಾನಸಿಕ ಆರೋಗ್ಯವನ್ನು ಖಚಿತಪಡಿಸುವುದರ ಮೇಲೆ ಹೆಚ್ಚು ಒತ್ತು ನೀಡಿದ ಡಾ. ಹರ್ಷವರ್ಧನ್ ಅವರು ಈಗಾಗಲೇ ಗೃಹ ಬಂಧನದಲ್ಲಿರುವವರಿಗಾಗಿ ಒಂದು ಸಹಾಯವಾಣಿ (ಮನೋರೋಗ ತಜ್ಷರು) ಆರಂಭಿಸುವಂತೆ ರಾಜ್ಯಗಳಿಗೆ ಸಲಹೆ ನೀಡಿದರು. ಟೆಲಿಮೆಡಿಸಿನ್ ಮಾರ್ಗಸೂಚಿಗಳನ್ನು ಹೊರಡಿಸಲಾಗಿದ್ದು ಆಪ್ ಕೂಡಾ ಪ್ರಾರಂಭಿಸಲಾಗುತ್ತಿದೆ ಎಂದು ತಿಳಿಸಿದ ಅವರು ಮನೆಯಲ್ಲಿರುವ ಜನರಿಗೆ ಈ ಆಪ್ ಬಳಸುವ ಮೂಲಕ ಸಲಹೆ ನೀಡುವಂತಹ ವೈದ್ಯರ ಸಮೂಹವನ್ನು ಗುರುತಿಸುವಂತೆ ರಾಜ್ಯಗಳನ್ನು ಕೇಳಿದರು.

   

****

 


(Release ID: 1608451) Visitor Counter : 234